ದಾಖಲೆಯ ವೀಕ್ಷಕರನ್ನು ಸೆಳೆದ ಪ್ರೊ ಕಬಡ್ಡಿ ಲೀಗ್ ಸೀಸನ್ 10; ಮೊದಲ 90 ಪಂದ್ಯಗಳಲ್ಲಿ 226 ಮಿಲಿಯನ್ ವೀಕ್ಷಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಾಖಲೆಯ ವೀಕ್ಷಕರನ್ನು ಸೆಳೆದ ಪ್ರೊ ಕಬಡ್ಡಿ ಲೀಗ್ ಸೀಸನ್ 10; ಮೊದಲ 90 ಪಂದ್ಯಗಳಲ್ಲಿ 226 ಮಿಲಿಯನ್ ವೀಕ್ಷಣೆ

ದಾಖಲೆಯ ವೀಕ್ಷಕರನ್ನು ಸೆಳೆದ ಪ್ರೊ ಕಬಡ್ಡಿ ಲೀಗ್ ಸೀಸನ್ 10; ಮೊದಲ 90 ಪಂದ್ಯಗಳಲ್ಲಿ 226 ಮಿಲಿಯನ್ ವೀಕ್ಷಣೆ

  • PKL Season 10: ಭಾರತದಲ್ಲಿ ಕಬಡ್ಡಿಯು ಜನಪ್ರಿಯ ಕ್ರೀಡೆಯಾಗಿದೆ. ಅದರಲ್ಲೂ ಪ್ರೊ ಕಬಡ್ಡಿ ಲೀಗ್‌(PKL) ಆರಂಭವಾದಾಗಿಂದ ವರ್ಷದಿಂದ ವರ್ಷಕ್ಕೆ ಪಿಕೆಎಲ್‌ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಲೀಗ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಈ ಬಾರಿಯ ವೀಕ್ಷಕರ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದೆ.

ಪ್ರೊ ಕಬಡ್ಡಿ ಲೀಗ್‌ನ 10 ಸೀಸನ್, ಹೊಸ ದಾಖಲೆ ನಿರ್ಮಿಸಿದೆ. ಟೂರ್ನಿ ಆರಂಭವಾದ ಮೊದಲ  90 ಪಂದ್ಯಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಭಿಮಾನಿಗಳು ಕಬಡ್ಡಿ ವೀಕ್ಷಿಸಿದ್ದಾರೆ. ಬರೋಬ್ಬರಿ 226 ಮಿಲಿಯನ್ ವೀಕ್ಷಕರನ್ನು ಪಿಕೆಎಲ್‌ ಆಕರ್ಷಿಸಿದೆ.
icon

(1 / 6)

ಪ್ರೊ ಕಬಡ್ಡಿ ಲೀಗ್‌ನ 10 ಸೀಸನ್, ಹೊಸ ದಾಖಲೆ ನಿರ್ಮಿಸಿದೆ. ಟೂರ್ನಿ ಆರಂಭವಾದ ಮೊದಲ  90 ಪಂದ್ಯಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಭಿಮಾನಿಗಳು ಕಬಡ್ಡಿ ವೀಕ್ಷಿಸಿದ್ದಾರೆ. ಬರೋಬ್ಬರಿ 226 ಮಿಲಿಯನ್ ವೀಕ್ಷಕರನ್ನು ಪಿಕೆಎಲ್‌ ಆಕರ್ಷಿಸಿದೆ.(PTI)

ಪಿಕೆಎಲ್‌ ಸೀಸನ್ 9ಕ್ಕೆ ಹೋಲಿಸಿದರೆ, ಈ ಬಾರಿಯ ವೀಕ್ಷಕರ ಪ್ರಮಾಣದಲ್ಲಿ 17 ಪ್ರತಿಶತ ಹೆಚ್ಚಳ ಕಂಡಿದೆ.
icon

(2 / 6)

ಪಿಕೆಎಲ್‌ ಸೀಸನ್ 9ಕ್ಕೆ ಹೋಲಿಸಿದರೆ, ಈ ಬಾರಿಯ ವೀಕ್ಷಕರ ಪ್ರಮಾಣದಲ್ಲಿ 17 ಪ್ರತಿಶತ ಹೆಚ್ಚಳ ಕಂಡಿದೆ.(PTI)

ಇದೆ ವೇಳೆ ಕ್ರಿಕೆಟ್ ಹೊರತುಪಡಿಸಿ 200 ಮಿಲಿಯನ್ ವೀಕ್ಷಕರ ಸಂಖ್ಯೆಯನ್ನು ದಾಟಿದ ಏಕೈಕ ಕ್ರೀಡೆ ಎಂಬ ದಾಖಲೆಯನ್ನು ಪ್ರೊ ಕಬಡ್ಡಿ ನಿರ್ಮಿಸಿದೆ.
icon

(3 / 6)

ಇದೆ ವೇಳೆ ಕ್ರಿಕೆಟ್ ಹೊರತುಪಡಿಸಿ 200 ಮಿಲಿಯನ್ ವೀಕ್ಷಕರ ಸಂಖ್ಯೆಯನ್ನು ದಾಟಿದ ಏಕೈಕ ಕ್ರೀಡೆ ಎಂಬ ದಾಖಲೆಯನ್ನು ಪ್ರೊ ಕಬಡ್ಡಿ ನಿರ್ಮಿಸಿದೆ.(PTI)

ಸ್ಟಾರ್‌ ಸ್ಪೋರ್ಟ್ಸ್‌ ಬ್ರಾಡ್‌ಕಾಸ್ಟರ್ ಮೂಲಕ 38 ಶತಕೋಟಿ ನಿಮಿಷಗಳ ಕಾಲ ವೀಕ್ಷಕರು ಕಬಡ್ಡಿ ವೀಕ್ಷಿಸಿದ್ದಾರೆ. ಇದು ಸೀಸನ್ 9ಕ್ಕಿಂತ 15 ಪ್ರತಿಶತ ಹೆಚ್ಚು. 
icon

(4 / 6)

ಸ್ಟಾರ್‌ ಸ್ಪೋರ್ಟ್ಸ್‌ ಬ್ರಾಡ್‌ಕಾಸ್ಟರ್ ಮೂಲಕ 38 ಶತಕೋಟಿ ನಿಮಿಷಗಳ ಕಾಲ ವೀಕ್ಷಕರು ಕಬಡ್ಡಿ ವೀಕ್ಷಿಸಿದ್ದಾರೆ. ಇದು ಸೀಸನ್ 9ಕ್ಕಿಂತ 15 ಪ್ರತಿಶತ ಹೆಚ್ಚು. (PTI)

ಪಿಕೆಎಲ್ ಸೀಸನ್ 10 ಈಗಾಗಲೇ ಕಳೆದ ವರ್ಷದ ವೀಕ್ಷಕರ ಅಂಕಿ-ಅಂಶಗಳನ್ನು ಮೀರಿಸಿದೆ. ಲೀಗ್‌ ಹಂತದ ಕೊನೆಯ ಕೆಲ ಪಂದ್ಯಗಳು ಸೇರಿದಂತೆ, ಪ್ಲೇಆಫ್‌ಗಳು ಮತ್ತು ಫೈನಲ್‌ ಪಂದ್ಯಗಳು ಇನ್ನಷ್ಟೇ ನಡೆಯಬೇಕಾಗಿದೆ. 
icon

(5 / 6)

ಪಿಕೆಎಲ್ ಸೀಸನ್ 10 ಈಗಾಗಲೇ ಕಳೆದ ವರ್ಷದ ವೀಕ್ಷಕರ ಅಂಕಿ-ಅಂಶಗಳನ್ನು ಮೀರಿಸಿದೆ. ಲೀಗ್‌ ಹಂತದ ಕೊನೆಯ ಕೆಲ ಪಂದ್ಯಗಳು ಸೇರಿದಂತೆ, ಪ್ಲೇಆಫ್‌ಗಳು ಮತ್ತು ಫೈನಲ್‌ ಪಂದ್ಯಗಳು ಇನ್ನಷ್ಟೇ ನಡೆಯಬೇಕಾಗಿದೆ. (PTI)

2024ರ ಫೆಬ್ರವರಿ 26ರಿಂದ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ಲೇಆಫ್‌ ಪಂದ್ಯಗಳು ನಡೆಯಲಿವೆ. ಮಾರ್ಚ್ 1ರಂದು ಫೈನಲ್‌ ನಡೆಯಲಿದೆ.
icon

(6 / 6)

2024ರ ಫೆಬ್ರವರಿ 26ರಿಂದ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ಲೇಆಫ್‌ ಪಂದ್ಯಗಳು ನಡೆಯಲಿವೆ. ಮಾರ್ಚ್ 1ರಂದು ಫೈನಲ್‌ ನಡೆಯಲಿದೆ.(PTI)


ಇತರ ಗ್ಯಾಲರಿಗಳು