Majaa Bharatha:ಮಜಾ ಭಾರತದ ಈ ಒಯ್ಯಾರಿಗೆ ಬ್ಲೌಸ್ ಹೊಲಿಯುವುದು ಅಮ್ಮನೇ ಅಂತೆ; ರಾಗಿಣಿ ಬಗ್ಗೆ ರಾಘವೇಂದ್ರ ಹೇಳೋದೇನು ಇಲ್ಲಿದೆ ಫೋಟೋ ಸ್ಟೋರಿ
ಕಲರ್ಸ್ ಕನ್ನಡದ ಮಜಾಭಾರತ ಕಾರ್ಯಕ್ರಮ ಎಂದರೆ ತಕ್ಷಣ ನಮಗೆ ನೆನಪಾಗುವುದು ಹೆಣ್ಣಿನ ಕಾಸ್ಟ್ಯೂಮ್ ಧರಿಸುವ ರಾಘವೇಂದ್ರ. ಹೆಣ್ಣಿನ ವೇಷ ಧರಿಸುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ವಯ್ಯಾರ, ನಡಿಗೆ, ಮಾತಿನಿಂದ ಕೂಡಾ ರಾಘವೇಂದ್ರ ಎಲ್ಲರನ್ನೂ ಬಹಳ ಇಂಪ್ರೆಸ್ ಮಾಡಿದ್ದಾರೆ.
(1 / 14)
ರಾಘವೇಂದ್ರ ಹೆಣ್ಣಿನ ವೇಷದಲ್ಲಿ ಎಷ್ಟು ಫೇಮಸ್ ಎಂದರೆ ಅವರು ನಾರ್ಮಲ್ ಗೆಟಪ್‌ನಲ್ಲಿದ್ದಾಗ ಇವರು ಅವರಲ್ಲ ಎಂದು ಜನರು ಕನ್ಫ್ಯೂಸ್ ಆಗುತ್ತಾರಂತೆ. ರಾಘವೇಂದ್ರನಿಗಿಂತ ರಾಗಿಣಿಯೇ ಚೆಂದ ಎನ್ನುತ್ತಾರೆ. (PC: Raghavendra RK Instagram)
(3 / 14)
ರಾಘವೇಂದ್ರ ಶಿವಮೊಗ್ಗಕ್ಕೆ ಶೇರಿದ ಹುಡುಗ, ಚಿಕ್ಕಂದಿನಿಂದ ನಟನೆಯಲ್ಲಿ ಒಲವಿದ್ದ ಇವರು ಬೆಂಗಳೂರಿಗೆ ಬಂದು ಮಜಾಭಾರತ ಆಡಿಷನ್‌ನಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಮನೆಯವರು ಇದಕ್ಕೆ ವಿರೋಧಿಸಿದರೂ, ಮಗನ ಆಸೆಗೆ ತಣ್ಣೀರು ಎರಚುವುದು ಬೇಡ ಎಂದು ನಂತರ ಒಪ್ಪಿಗೆ ಸೂಚಿಸುತ್ತಾರೆ.
(4 / 14)
ರಾಘವೇಂದ್ರ ತಂದೆ ಹೆಸರು ರಾಮಕೃಷ್ಣ , ತಾಯಿ ಕವಿತಾ. ಈ ಅದ್ಭುತ ಕಲಾವಿದ ಮಜಾಭಾರತಕ್ಕೆ ಆಯ್ಕೆ ಆದಾಗ ಇವರು ವಯಸ್ಸು 17. ಅಲ್ಲಿವರೆಗೂ ಒಮ್ಮೆಯೂ ತಂದೆ ತಾಯಿಯನ್ನು ಬಿಟ್ಟಿರದ ರಾಘವೇಂದ್ರ ಬಿಟ್ಟ ಅವಕಾಶವನ್ನು ಬಿಡಬಾರದು ಎಂಬ ಕಾರಣಕ್ಕೆ ಬೆಂಗಳೂರಿಗೆ ಬರುತ್ತಾರೆ.
(5 / 14)
ಬೆಂಗಳೂರಿಗೆ ಬಂದ ರಾಘವೇಂದ್ರಗೆ ಮೊದಲ ಸ್ಕಿಟ್‌ನಲ್ಲೇ ಹುಡುಗಿಯ ಪಾತ್ರ ದೊರೆಯಿತು. ಪಕ್ಕದ ಮನೆ ಪ್ರಸಾದ ಆ ಸ್ಕಿಟ್ ಹೆಸರು.
(6 / 14)
ಎರಡನೇ ವಾರ, ಮೂರನೇ ವಾರ ಹೀಗೆ ಸತತವಾಗಿ ರಾಘವೇಂದ್ರ ಅವರಿಗೆ ಹುಡುಗಿ ಪಾತ್ರವೇ ಸಿಗುತ್ತಿತ್ತು. ಇದು ಅವರಿಗೆ ಮುಜುಗರ ಉಂಟು ಮಾಡಿತ್ತು. ನನಗೆ ಹುಡುಗಿ ವೇಷವೇ ಏಕೆ ಎಂದು ನಿರ್ದೇಶಕರನ್ನು ಕೇಳಿದಾಗ ನಿನಗೆ ಆ ಪಾತ್ರ ಚೆನ್ನಾಗಿ ಕಾಣುತ್ತದೆ. ಆದ್ದರಿಂದ ಅದೇ ಪಾತ್ರ ನೀಡುತ್ತಿದ್ದೇವೆ ಎಂಬ ಉತ್ತರ ಬಂತು.
(7 / 14)
ರಾಘವೇಂದ್ರ ಹೆಣ್ಣಿನ ಪಾತ್ರ ನೋಡಿ ಕೆಲವರು ಹೊಗಳಿದರೆ ಇನ್ನೂ ಕೆಲವರು ನೆಗೆಟಿವ್ ಆಗಿ ಮಾತನಾಡಿದ್ದರಂತೆ. ಇದೇ ಬೇಸರಕ್ಕೆ ಅವರು ಮಜಾಭಾರತ ತೊರೆದು ಮತ್ತೆ ಶಿವಮೊಗ್ಗ ವಾಪಸ್ ಹೋಗಲು ನಿರ್ಧರಿಸಿದ್ದಾರೆ.
(8 / 14)
ಆದರೆ ಹಿರಿಯ ನಟರೊಬ್ಬರು ರಾಘವೇಂದ್ರ ಅವರ ಬಳಿ, ಪಾತ್ರ ಯಾವುದೇ ಆಗಲೀ ಜನರು ಕಲೆ ಮುಖ್ಯ, ಜನರು ನಮ್ಮ ಬಗ್ಗೆ ಮಾತನಾಡುವುದು ಮುಖ್ಯ ಎಂದು ಹೇಳಿದಾಗ ರಾಘವೇಂದ್ರ ಮನಸ್ಸು ಬದಲಿಸಿದ್ದಾರೆ.
(9 / 14)
ಈಗ ರಾಘವೇಂದ್ರ ಅವರಿಗೆ , ತಾವು ಹೆಣ್ಣಿನ ಪಾತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಮುಜುಗರ ಇಲ್ಲವಂತೆ. ಎಷ್ಟು ದಿನಗಳು ಸಾಧ್ಯವೋ ಅಲ್ಲಿವರೆಗೂ ನಾನು ಹೆಣ್ಣಿನ ಪಾತ್ರದಲ್ಲಿ ನಟಿಸಲು ರೆಡಿ ಎನ್ನುತ್ತಾರೆ.
(10 / 14)
ತಂದೆ ತಾಯಿ ಕೂಡಾ ಈ ವಿಚಾರದಲ್ಲಿ ಮಗನಿಗೆ ಸಪೋರ್ಟ್ ಮಾಡುತ್ತಾರಂತೆ. ಅದರಲ್ಲೂ ತಾಯಿ ಟೈಲರ್ ಕೆಲಸ ಮಾಡುತ್ತಿದ್ದು ಮಗನ ಸ್ಕಿಟ್‌ಗಳಿಗೆ ತಾವೇ ಕೈಯ್ಯಾರೆ ಬ್ಲೌಸ್ ಸ್ಟಿಚ್ ಮಾಡಿ ಕೊಡುತ್ತಾರಂತೆ.
(12 / 14)
ಹೆಣ್ಣಿನ ಕಾಸ್ಟ್ಯೂಮ್ ಧರಿಸಿದ ನಂತರ ರಾಘವೇಂದ್ರ ಅವರಿಗೆ ಮಹಿಳೆಯರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆಯಂತೆ.
(13 / 14)
ಸದ್ಯಕ್ಕೆ ರಾಘವೇಂದ್ರ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.
ಇತರ ಗ್ಯಾಲರಿಗಳು