Ramya Balakrishna: ಕೋಳಿ ರಮ್ಯಾ ಈಗ ಏನು ಮಾಡ್ತಿದ್ದಾರೆ; ಮಿಥುನ ರಾಶಿ ಧಾರಾವಾಹಿ ನಟಿ ಪತಿಯಿಂದ ದೂರಾಗಿದ್ದೇಕೆ, ಮತ್ತೆ ಮದುವೆ ಆಯ್ತಾ?
- ಕಿರುತೆರೆ ನಟಿ, ನಿರೂಪಕಿ ರಮ್ಯಾ ಬಾಲಕೃಷ್ಣ ವೀಕ್ಷಕರಿಗೆ ಬಹಳ ಪರಿಚಯ. ಇವರು ಕೋಳಿ ರಮ್ಯಾ ಎಂದೇ ಫೇಮಸ್. ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಬಂದರೂ ಇವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ.
- ಕಿರುತೆರೆ ನಟಿ, ನಿರೂಪಕಿ ರಮ್ಯಾ ಬಾಲಕೃಷ್ಣ ವೀಕ್ಷಕರಿಗೆ ಬಹಳ ಪರಿಚಯ. ಇವರು ಕೋಳಿ ರಮ್ಯಾ ಎಂದೇ ಫೇಮಸ್. ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಬಂದರೂ ಇವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ.
(1 / 13)
ತೆರೆ ಮೇಲೆ ವೀಕ್ಷಕರನ್ನು ರಂಜಿಸುವ ಕೋಳಿ ರಮ್ಯಾ, ವೈಯಕ್ತಿಕ ಜೀವನದಲ್ಲಿ ಬಹಳ ನೋವು ಕಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿ ವಹಿಸಿಕೊಂಡ ರಮ್ಯಾ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. (PC: Ramya Instagram)
(2 / 13)
ರಮ್ಯಾ ಮೂಲತ: ಶಿವಮೊಗ್ಗದ ಭದ್ರಾವತಿಯವರು. ತಮ್ಮ ಊರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ರಮ್ಯಾ 14ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು.
(3 / 13)
ಬಾಲ್ಯದಿಂದಲೂ ರಮ್ಯಾಗೆ ನಟನೆಯಲ್ಲಿ ಆಸಕ್ತಿ. ತಂದೆ ನಿಧನರಾದ ನಂತರ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದ್ದರಿಂದ ರಮ್ಯಾ ಕೆಲಕ್ಕಾಗಿ ಬೆಂಗಳೂರಿಗೆ ಬಂದರು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತನನಂ ತನನಂ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುವ ಅವಕಾಶ ಪಡೆದರು.
(4 / 13)
ಪಟ ಪಟ ಮಾತುಗಳು, ಆಕರ್ಷಕ ಸೌಂದರ್ಯದಿಂದಲೇ ರಮ್ಯಾ ಕಿರುತೆರೆ ವೀಕ್ಷಕರ ಗಮನ ಸೆಳೆದರು. ನಿರೂಪಕಿಯಾಗಿದ್ದ ರಮ್ಯಾಗೆ ಧಾರಾವಾಹಿಗಳಲ್ಲಿ ಕೂಡಾ ಅವಕಾಶ ದೊರೆಯಿತು. ಸೊಸೆ ತಂದ ಸೌಭಾಗ್ಯ ಧಾರಾವಾಹಿ ಮೂಲಕ ರಮ್ಯಾ ನಟನೆಗೆ ಬಂದರು.
(5 / 13)
ಕಿರುತೆರೆಯಲ್ಲಿ ಒಂದರ ಹಿಂದೊಂದರಂತೆ ಅವಕಾಶ ಕಳಿಸಿದ ರಮ್ಯಾ ತಮಿಳು, ತೆಲುಗು ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ಧಾರೆ. ತಮಿಳಿನ ಸತ್ಯ ಧಾರಾವಾಹಿಯಲ್ಲಿ ನಾಯಕಿಯ ಅಕ್ಕನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಮಿಥುನ ರಾಶಿ ಧಾರಾವಾಹಿಯಲ್ಲಿ ರಮ್ಯಾ ವಿಲನ್ ಪಾತ್ರದಲ್ಲಿ ಮಿಂಚಿದ್ದರು.
(6 / 13)
ಈ ನಡುವೆ ರಮ್ಯಾ ಸುವರ್ಣ ವಾಹಿನಿಯ ಖ್ಯಾತ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಅಲ್ಲಿವರೆಗೆ ರಮ್ಯಾ ಬಾಲಕೃಷ್ಣ ಆಗಿದ್ದವರು ಆ ಕಾರ್ಯಕ್ರಮದ ಮೂಲಕ ಕೋಳಿ ರಮ್ಯಾ ಅಂತಾನೆ ಫೇಮಸ್ ಆದ್ರು. ಟಾಸ್ಕ್ ಒಂದರಲ್ಲಿ ಅತಿ ಕಡಿಮೆ ಸಮಯದಲ್ಲಿ ಕೋಳಿ ಹಿಡಿದ ಕಾರಣ ಆಕೆಗೆ ಈ ಹೆಸರು ತಳುಕುಹಾಕಿಕೊಂಡಿತು.
(7 / 13)
ಕಿರುತೆರೆಯಲ್ಲಿ ಇಷ್ಟೆಲ್ಲಾ ಹೆಸರು ಮಾಡಿದ ಕೋಳಿ ರಮ್ಯಾ ವೈವಾಹಿಕ ಜೀವನದಲ್ಲಿ ಸೋತರು. ಪ್ರೀತಿಸಿ ಮದುವೆ ಆದ ಪತಿಯಿಂದ ದೂರಾಗಿ , ಪ್ರತ್ಯೇಕ ಜೀವನ ನಡೆಸುತ್ತಿದ್ದಾರೆ.
(8 / 13)
ರಮ್ಯಾ ಪತಿ ಶಿಶಿರ್ ಶಾಸ್ತ್ರಿ ಕೂಡಾ ಖ್ಯಾತ ನಟ. ಕುಲವಧು ಧಾರಾವಾಹಿಯಲ್ಲಿ ವೇದ್ ಪಾತ್ರಧಾರಿಯಾಗಿ ನಟಿಸುತ್ತಿದ್ದ ಇವರು ಕೂಡಾ ಕಿರುತೆರೆ ವೀಕ್ಷಕರಿಗೆ ಬಹಳ ಪರಿಚಯ.
(9 / 13)
ಒಬ್ಬರಿಗೊಬ್ಬರು ಇಷ್ಟ ಪಟ್ಟು ಮದುವೆಯಾದ ಈ ಜೋಡಿ ಕೆಲವೇ ದಿನಗಳಲ್ಲಿ ದೂರಾದರು. ಮದುವೆ ಆದರೆ ಇವರನ್ನೇ ಎಂದು ರಮ್ಯಾ ಹಠ ಮಾಡಿ ಮದುವೆ ಆದರು. ಆದರೆ ಮದುವೆ ನಂತರ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಈ ಕಾರಣಕ್ಕೆಇಬ್ಬರೂ ದೂರಾದರು.
(10 / 13)
ಮೊದಲ ಮದುವೆಯಿಂದ ನೊಂದು ಹೊರ ಬಂದ ಕೋಳಿ ರಮ್ಯಾ ಈಗ ಮತ್ತೊಂದು ಮದುವೆ ಆಗಲು ಸಿದ್ಧರಾಗಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
(11 / 13)
ಡ್ಯಾನ್ಸ್ ಕೊರಿಯೋಗ್ರಾಫರ್ ವರದ ಎಂಬುವರನ್ನು ರಮ್ಯಾ ಪ್ರೀತಿಸುತ್ತಿದ್ದು ಆತನನ್ನು ಎರಡನೇ ಮದುವೆ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
(12 / 13)
ವರದ ಮಾಸ್ಟರ್ ಜೊತೆಗಿನ ಅನೇಕ ಫೋಟೋಗಳನ್ನು ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ನೋಡಬಹುದು. ವರದ, ಬೆಂಗಳೂರಿನಲ್ಲಿ ತಮ್ಮದೇ ಹೆಸರಿನಲ್ಲಿ ಡ್ಯಾನ್ಸ್ ಸ್ಕೂಲ್ ನಡೆಸುತ್ತಿದ್ದಾರೆ.
ಇತರ ಗ್ಯಾಲರಿಗಳು