Kolar News: ಕೋಲಾರದ ಆದಿಮ ಸಂಸ್ಥೆಯಲ್ಲಿ ಹುಣ್ಣಿಮೆ ಬೆಳಕಿನ ನಡುವೆ ನೆಲದ ಸಂಸ್ಕೃತಿ ಅನಾವರಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kolar News: ಕೋಲಾರದ ಆದಿಮ ಸಂಸ್ಥೆಯಲ್ಲಿ ಹುಣ್ಣಿಮೆ ಬೆಳಕಿನ ನಡುವೆ ನೆಲದ ಸಂಸ್ಕೃತಿ ಅನಾವರಣ

Kolar News: ಕೋಲಾರದ ಆದಿಮ ಸಂಸ್ಥೆಯಲ್ಲಿ ಹುಣ್ಣಿಮೆ ಬೆಳಕಿನ ನಡುವೆ ನೆಲದ ಸಂಸ್ಕೃತಿ ಅನಾವರಣ

  • ಕೋಲಾರ ಸಮೀಪದ ಬೆಟ್ಟಗಳ ನಡುವೆಯೇ ಸ್ಥಾಪಿಸಿದ ಆದಿಮ ಕೇಂದ್ರದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ. ಸಾಂಸ್ಕೃತಿಕ ಕೇಂದ್ರದ ಹುಣ್ಣಿಮೆ ಹಾಡು-200 ರ ಉತ್ಸವ ಎರಡು ದಿನ ದಕ್ಷಿಣ ಭಾರತದ ಕಲೆಗಳ ಅನಾವರಣ, ಕಲಾವಿದರ ಕಲರವಕ್ಕೆ ವೇದಿಕೆಯಾಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು. ಹೀಗಿತ್ತು ಸಮಾರೋಪ ಕಾರ್ಯಕ್ರಮಗಳ ನೋಟ.

ಕೋಲಾರ ನಗರಕ್ಕೆ ಹೊಂದಿಕೊಂಡ ಶತಶೃಂಗ ಶ್ರೇಣಿಯ ತೇರಹಳ್ಳಿ ಬೆಟ್ಟದ ಮೇಲಿನ ಶಿವಗಂಗೆ ಗ್ರಾಮದಲ್ಲಿ ಒಂದೂವರೆ ದಶಕದ ಹಿಂದೆ ಆರಂಭವಾದ ’ಆದಿಮ ಸಾಂಸ್ಕೃತಿಕ ಕೇಂದ್ರ. ಆದಿಮ ಬಿತ್ತಿದ ’ಹುಣ್ಣಿಮೆ ಹಾಡು’ ಎಂಬ ಸಾಂಸ್ಕೃತಿಕ ಬೀಜಕ್ಕೆ ಈಗ ಇನ್ನೂರರ ಸಂಭ್ರಮ. 
icon

(1 / 7)

ಕೋಲಾರದಿಂದ ನಿಂತು ನೋಡಿದರೆ ಅದು ತೇರಹಳ್ಳಿಯ ಶಿವಗಂಗೆ ಬೆಟ್ಟ. ಆದರೆ ಆ ಬೆಟ್ಟಕ್ಕೆ ಸಾಂಸ್ಕೃತಿಕ ಮಹತ್ವವನ್ನು ಸಾಮಾಜಿಕ ಹಿನ್ನೆಲೆಯೊಂದಿಗೆ ತಂದುಕೊಟ್ಟಿದ್ದು ಆದಿಮ ಸಂಸ್ಥೆ. ಹುಣ್ಣಿಮೆಯಂದು ಆಯೋಜಿಸುವ ಕಾರ್ಯಕ್ರಮಗಳು,. ಆದಿಮದ ಹತ್ತಾರು ಚಟುವಟಿಕೆಗಳು ಸಾಂಸ್ಕೃತಿಕ ಮನಸುಗಳನ್ನು ಬೆಸೆಯುತ್ತಿವೆ. ಈ ಬೆಟ್ಟದಲ್ಲಿ ಹುಣ್ಣಿಮೆ ಹಾಡು-200 ಸಮಾರೋಪದ ವೇದಿಕೆ ಹೀಗಿತ್ತು. ಎರಡು ದಿನದ ವಿಭಿನ್ನ ದೇಸಿ ಹಾಡು, ನೃತ್ಯ, ಕಲಾಪ್ರದರ್ಶನದ ವೇದಿಕೆಯೂ ಇದಾಗಿತ್ತು.
icon

(2 / 7)

ದಲಿತ ಚಳವಳಿಗಳ ನೆಲ ಕೋಲಾರ. ಸಾಂಸ್ಕೃತಿಕವಾಗಿಯೂ ವೈಶಿಷ್ಟ್ಯಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಚಳವಳಿಯ ಸಂಗಾತಿಗಳು ಹುಟ್ಟಿ ಹಾಕಿದ್ದೇ ’ಆದಿಮ’. ಎಪ್ಪತ್ತು ಎಂಬತ್ತರ ದಶಕದಲ್ಲಿ ಚಳವಳಿಯ ಮುಂಚೂಣಿಯಲ್ಲಿದ್ದ ಕೋಟಿಗಾನಹಳ್ಳಿ ರಾಮಯ್ಯ, ಎನ್.ವೆಂಕಟೇಶ್, ಎನ್.ಮುನಿಸ್ವಾಮಿ, ಸಿ.ಮುನಿಯಪ್ಪ ಮೊದಲಾದವರ ಮುಂದಾಲೋಚನೆಗಳ ಫಲವಾಗಿ ಮೂಡಿದ್ದೇ ಆದಿಮ.ಇದರ ಭಾಗವಾಗಿಯೇ ಹುಣ್ಣಿಮೆ ಹಾಡು ಸಾಂಸ್ಕೃತಿಕ ಮಹತ್ವ ಪಡೆದಿದೆ.
icon

(3 / 7)

2005ರಂದು ಆರಂಭವಾದ ಮೊದಲ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದ್ದರು. ರಾಮಯ್ಯನವರ ಗುರು ಹಾಗೂ ಶಿಕ್ಷಣತಜ್ಞ ಶ್ರೀರಾಮ ರೆಡ್ಡಿಯವರು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು. ಹೀಗೆ ಹುಣ್ಣಿಮೆ ಹಾಡು ಅಂದಿನಿಂದ ಇಂದಿನವರೆಗೆ ಬೆಳೆಯುತ್ತಾ ಬಂದಿತು. ಈಗ ಹುಣ್ಣಿಗೆ ಹಾಡಿಗೆ -200 ರ ಹಾದಿ.
icon

(4 / 7)

ಪ್ರತಿತಿಂಗಳ ಹುಣ್ಣಿಮೆಯ ರಾತ್ರಿಯಲ್ಲಿ ನಡೆಯುವ ’ಹುಣ್ಣಿಮೆ ಹಾಡು’ ನಾಡಿನಾದ್ಯಂತ ಹೆಸರಾಗಿದೆ. ನೆಲಸಂಸ್ಕೃತಿಯ ಅಗಾಧತೆಯನ್ನು ಮತ್ತು ಪ್ರಾಮುಖ್ಯತೆಯನ್ನು ಬಿತ್ತುವಂತಹ ನಾಟಕ, ಜನಪದ ಕಲಾ ಪ್ರದರ್ಶನ, ಹಾಡುಗಾರಿಕೆ, ತತ್ವಪದ ಗಾಯನ, ದೇಸೀಕಲೆಗಳು ಇವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ನಮ್ಮ ನಡುವಿನ ಸಾಧಕರಿಗೆ ’ಗದ್ದುಗೆ ಗೌರವ’ ನೀಡುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬರಲಾಗಿದೆ. 
icon

(5 / 7)

ಈವರೆಗೆ ನಡೆದಿರುವ 199 ಹುಣ್ಣಿಮೆ ಹಾಡು ಕಾರ್ಯಕ್ರಮಗಳಲ್ಲಿ ನಾಡಿನ ಹಲವಾರು ಕಲಾವಿದರು ಭಾಗಿಯಾಗಿದ್ದಾರೆ. ಉಮಾಶ್ರೀ, ಬಿ.ಜಯಶ್ರೀ, ಕರಿಬಸವಯ್ಯ, ರಮೇಶ್ ಅರವಿಂದ್, ಮೈಸೂರ್ ಲೋಕೇಶ್, ಮಂಡ್ಯ ರಮೇಶ್, ದುನಿಯಾ ವಿಜಯ್, ಹಂಸಲೇಖ, ವಿ.ಮನೋಹರ್, ಮೈಸೂರು ರಂಗಾಯಣದ ಜನಾರ್ದನ್, ಬಿ.ಬಸವಲಿಂಗಯ್ಯ, ಕಾರ್ಯಕ್ರಮ ನೀಡಿದ್ದು ಹುಣ್ಣಿಮೆಯ ಎರಡು ದಿನದ 200 ಕಾರ್ಯಕ್ರಮ ಮಂಗಳವಾರ ಹಾಗೂ ಬುಧವಾರ ನಡೆಯಿತು.
icon

(6 / 7)

ಮಕ್ಕಳಲ್ಲಿನ ಬಹು ವಿವಿಧ ಬುದ್ಧಿವಂತಿಕೆ, ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಚುಕ್ಕಿ ಮೇಳ ಶುರು ಮಾಡಲಾಯಿತು. ಸಾಮಾನ್ಯವಾಗಿ ಬಸವ ಜಯಂತಿಗೆ ಆರಂಭಿಸಿ, ಬುದ್ಧ ಪೂರ್ಣಿಮೆಗೆ ಮುಕ್ತಾಯವಾಗುವ ಈ ಶಿಬಿರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳನ್ನು ಪೋಷಕರು ಕರೆತರುತ್ತಾರೆ. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳುತ್ತಾ ಪೀಳಿಗೆಗಳಿಗೆ ಸಂಸ್ಕೃತಿ ಬಿತ್ತುವ ಕೆಲಸ ಆಗುತ್ತದೆ. ಈ ಬಾರಿಯೂ ಎರಡು ದಿನ ಆಂಧ್ರಪ್ರದೇಶ, ಕರ್ನಾಟಕದ ನೂರಾರು ಕಲಾವಿದರು ಪ್ರತಿಭೆ ಅನಾವರಣಗೊಳಿಸಿದರು.
icon

(7 / 7)

ಇತರ ಗ್ಯಾಲರಿಗಳು