Prabhudeva: ಹಿರಿಯ ಮಗನನ್ನು ಕಳೆದುಕೊಂಡಿದ್ದ ನಟ ಪ್ರಭುದೇವ ಬಾಳಲ್ಲಿ ಲಕ್ಷ್ಮಿಯ ಆಗಮನ; ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿಮಾನಿ ಸಿಂಗ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Prabhudeva: ಹಿರಿಯ ಮಗನನ್ನು ಕಳೆದುಕೊಂಡಿದ್ದ ನಟ ಪ್ರಭುದೇವ ಬಾಳಲ್ಲಿ ಲಕ್ಷ್ಮಿಯ ಆಗಮನ; ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿಮಾನಿ ಸಿಂಗ್‌

Prabhudeva: ಹಿರಿಯ ಮಗನನ್ನು ಕಳೆದುಕೊಂಡಿದ್ದ ನಟ ಪ್ರಭುದೇವ ಬಾಳಲ್ಲಿ ಲಕ್ಷ್ಮಿಯ ಆಗಮನ; ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿಮಾನಿ ಸಿಂಗ್‌

ಪ್ರಭುದೇವ ಚಿತ್ರರಂಗದಲ್ಲಿ ನಟ, ಡ್ಯಾನ್ಸರ್‌, ನಿರ್ದೇಶಕ, ನಿರ್ಮಾಪಕ, ಕೊರಿಯೋಗ್ರಾಫರ್‌ ಆಗಿ ಗುರುತಿಸಿಕೊಂಡಿದ್ದಾರೆ. ಈ ಬಹುಮುಖ ಪ್ರತಿಭೆ ಈಗ ಹೆಣ್ಣು ಮಗುವಿನ ತಂದೆ ಆಗಿದ್ದಾರೆ. 

ಪ್ರಭುದೇವ ಎರಡನೇ ಪತ್ನಿ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಡ್ಯಾನ್ಸಿಂಗ್‌ ಸ್ಟಾರ್‌ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. (ಸಾಂದರ್ಭಿಕ ಚಿತ್ರ)
icon

(1 / 13)

ಪ್ರಭುದೇವ ಎರಡನೇ ಪತ್ನಿ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಡ್ಯಾನ್ಸಿಂಗ್‌ ಸ್ಟಾರ್‌ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. (ಸಾಂದರ್ಭಿಕ ಚಿತ್ರ)(Facebook, Zee Kannada, Twitter, Freepik)

ಪ್ರಭುದೇವ ಮೊದಲ ಪತ್ನಿ ಹೆಸರು ರಮ್ಲತ್‌. ಇವರು ಮೂಲತ: ಮುಸ್ಲಿಂ ಆಗಿದ್ದು ಮದುವೆ ನಂತರ ಹಿಂದೂ ಧರ್ಮಕ್ಕೆ ಮತಾಂತರವಾದರು. ನಂತರ ರಮ್ಲತಾ ಎಂದು ಹೆಸರು ಬದಲಿಸಿಕೊಂಡು.  ಇಬ್ಬರೂ ಕೆಲವು ವರ್ಷಗಳ ಕಾಲ ಪ್ರೀತಿಸಿ 1995 ರಲ್ಲಿ ಮದುವೆ ಆದರು. ಈ ದಂಪತಿಗೆ ಮೂವರು ಗಂಡು ಮಕ್ಕಳು. 
icon

(2 / 13)

2008 ರಲ್ಲಿ ಪ್ರಭುದೇವ ಮೊದಲ ಮಗ  ಕ್ಯಾನ್ಸರ್‌ ಕಾರಣದಿಂದ ನಿಧನರಾದರು. ಈ ವಿಚಾರವನ್ನು ಇತ್ತೀಚೆಗೆ ಪ್ರಭುದೇವ ಜೀ ಕನ್ನಡ ವಾಹಿನಿಯ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. 
icon

(3 / 13)

ಪ್ರಭುದೇವ, ತಮಿಳು ನಟಿ ನಯನತಾರಾ ಜೊತೆ ರಿಲೇಶನ್‌ನಲ್ಲಿದ್ದಾರೆ ಎಂದು ಆರೋಪಿಸಿ ರಮಲತಾ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದರು. 2011ರಲ್ಲಿ ಪ್ರಭುದೇವ ಮೊದಲ ಪತ್ನಿಗೆ ಡಿವೋರ್ಸ್‌ ನೀಡಿದ್ದರು. ಇದರ ಬೆನ್ನ ಹಿಂದೆಯೇ ನಯನತಾರಾ ಜೊತೆಗಿನ ಸಂಬಂಧ ಕೂಡಾ ಮುರಿದುಬಿತ್ತು. 
icon

(4 / 13)

ಮೊದಲ ಪತ್ನಿಯಿಂದ ದೂರಾದ ನಂತರ ಒಬ್ಬಂಟಿಯಾಗೇ ಇದ್ದ ಪ್ರಭುದೇವ ಕೊರೋನಾ ಸಮಯದಲ್ಲಿ ಎರಡನೇ ಮದುವೆ ಆದರು. ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದ ಪ್ರಭುದೇವ ಅದೇ ಡಾಕ್ಟರನ್ನು ಪ್ರೀತಿಸಿ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆದರು. 
icon

(5 / 13)

ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇಲ್ಲ. ಸಾರ್ವಜನಿಕವಾಗಿ ಕೂಡಾ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಈ ಜೋಡಿ ತಿರುಪತಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಕ್ಯಾಮರಾ ಕಣ್ಣಿಗೆ ಸೆರೆ ಆಗಿದ್ದರು. 
icon

(6 / 13)

ಕೆಲವು ದಿನಗಳ ಹಿಂದಷ್ಟೇ ಪ್ರಭುದೇವ ಜೀ ಕನ್ನಡದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮೊದಲ ಬಾರಿಗೆ ಹಿಮಾನಿ ಸಿಂಗ್‌ ಕ್ಯಾಮರಾ ಮುಂದೆ ಬಂದು ಪತಿಯನ್ನು ಹೊಗಳಿದ್ದರು. 
icon

(7 / 13)

50ನೇ ವಯಸ್ಸಿನಲ್ಲಿ ಪ್ರಭುದೇವ ಹೆಣ್ಣು ಮಗುವಿನ ತಂದೆ ಆಗಿದ್ದಾರೆ. ಒಬ್ಬ ಮಗನನ್ನು ಕಳೆದುಕೊಂಡ ಪ್ರಭುದೇವ ಬಾಳಲ್ಲಿ ಮಹಾಲಕ್ಷ್ಮಿ ಆಗಮಿಸಿದ್ದಾಳೆ. ಇದು ಪ್ರಭುದೇವ ಮನೆಯವರ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. 
icon

(8 / 13)

ಹಿಮಾನಿ ಸಿಂಗ್‌ ಕೆಲವು ದಿನಗಳ ಹಿಂದೆಯೇ ಮಗುವಿಗೆ ಜನ್ಮ ನೀಡಿದ್ದು ಪ್ರಭುದೇವ ಮಾತ್ರ ಈ ವಿಚಾರವನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿಲ್ಲ. ಪ್ರಭುದೇವ ಮಗಳನ್ನು ನೋಡಲು ಅಭಿಮಾನಿಗಳು ಕೂಡಾ ಕಾತರರಾಗಿದ್ದಾರೆ. ಮಗುವಿಗೆ ಹಾರೈಸುತ್ತಿದ್ದಾರೆ. 
icon

(9 / 13)

ಪ್ರಭುದೇವ ಸಿನಿಮಾಗಳ ವಿಚಾರಕ್ಕೆ ಬರುವುದಾರೆ ಮಾರ್ಚ್‌ನಲ್ಲಿ 'ಬಘೀರ' ಸಿನಿಮಾ ತೆರೆ ಕಂಡಿತ್ತು. ಈಗ ಅವರು 'ಫ್ಲ್ಯಾಶ್‌ಬ್ಯಾಕ್‌' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. 
icon

(10 / 13)

ಪ್ರಭುದೇವ ಮಕ್ಕಳು (ಮೊದಲ ಪತ್ನಿ ರಮ್ಲತ್‌) ರಿಷಿದೇವ, ಅದಿತ್‌ ದೇವ
icon

(11 / 13)

ಪ್ರಭುದೇವ ಮಕ್ಕಳು (ಮೊದಲ ಪತ್ನಿ ರಮ್ಲತ್‌) ರಿಷಿದೇವ, ಅದಿತ್‌ ದೇವ

ತಂದೆ ಮೂಗೂರು ಸುಂದರಂ ತಾಯಿ ಮಹದೇವಮ್ಮ ಜೊತೆ ಪ್ರಭುದೇವ
icon

(12 / 13)

ತಂದೆ ಮೂಗೂರು ಸುಂದರಂ ತಾಯಿ ಮಹದೇವಮ್ಮ ಜೊತೆ ಪ್ರಭುದೇವ

ಮಗನೊಂದಿಗೆ ಡ್ಯಾನ್ಸಿಂಗ್‌ ಸ್ಟಾರ್‌
icon

(13 / 13)

ಮಗನೊಂದಿಗೆ ಡ್ಯಾನ್ಸಿಂಗ್‌ ಸ್ಟಾರ್‌

ಇತರ ಗ್ಯಾಲರಿಗಳು