ಮಧುಮಗಳ ಕೈಗಳಿಗೆ ರಾಯಲ್ ಟಚ್ ನೀಡುವ ಮೆಹಂದಿ ಡಿಸೈನ್‌ಗಳು, ಈ ರಾಜಸ್ಥಾನಿ ಮೆಹಂದಿ ಚಿತ್ತಾರ ವಧುವಿನ ಅಂದ ಹೆಚ್ಚಿಸೋದು ಪಕ್ಕಾ
ಮದುವೆ ಸೀಸನ್ ಶುರುವಾಗಿದ್ದು ಮೆಹಂದಿ ಡಿಸೈನ್‌ಗಾಗಿ ಹುಡುಕಾಟ ನಡೆಸಿದ್ದರೆ ಇಲ್ಲೊಮ್ಮೆ ಗಮನಿಸಿ. ಈ ಡಿಸೈನ್‌ಗಳು ವಧುವಿನ ಕೈಗಳಿಗೆ ರಾಯಲ್ ಟಚ್ ನೀಡುತ್ತವೆ. ರಾಜ-ರಾಣಿ ಮತ್ತು ನವಿಲಿನ ಚಿತ್ತಾರವಿರುವ ಈ ಮಾರ್ವಾಡಿ ಶೈಲಿಯ ಮೆಹಂದಿ ಡಿಸೈನ್‌ಗಳು ಖಂಡಿತ ಮಧುಮಗಳ ಅಂದಕ್ಕೆ ಹೊಸ ಸ್ವರ್ಶ ಕೊಡುವುದು ಸುಳ್ಳಲ್ಲ. ಈ ಚಿತ್ತಾರಗಳನ್ನು ಬಿಡಿಸುವುದೂ ಸುಲಭ.
(1 / 8)
ನೀವು ಶೀಘ್ರದಲ್ಲೇ ಮದುವೆಯಾಗುತ್ತಿದ್ದೀರಾ ಅಥವಾ ನಿಮ್ಮ ಆತ್ಮೀಯರಲ್ಲಿ ಯಾರಾದರೂ ಮದುವೆಯಾಗುವ ಹುಡುಗಿ ಇದ್ದರಾ, ಹಾಗಾದ್ರೆ ಗಮನಿಸಿ. ವಧುವಿನ ಅಲಂಕಾರಕ್ಕೆ ರಾಯಲ್ ಟಚ್ ನೀಡಲು ಲೆಹೆಂಗಾ ಮತ್ತು ಆಭರಣಗಳ ಜೊತೆಗೆ ಕೈಗಳಿಗೆ ರಾಯಲ್ ಮೆಹಂದಿಯನ್ನು ಹಚ್ಚಬೇಕು. ಮಾರ್ವಾಡಿ ಶೈಲಿಯ ಮೆಹಂದಿ ವಿನ್ಯಾಸಗಳು ವಧುವಿನ ಲುಕ್‌ಗೆ ವಿಶೇಷ ನೋಟ ಸಿಗುವಂತೆ ಮಾಡುತ್ತದೆ. ಅಂತಹ ಒಂದಿಷ್ಟು ವಿಶೇಷ ಮೆಹಂದಿ ಡಿಸೈನ್‌ಗಳು ಇಲ್ಲಿವೆ ನೋಡಿ. (anushkamehndi)
(2 / 8)
ಈ ಮೆಹಂದಿ ಡಿಸೈನ್‌ಗಳು ಕೈಗಳ ಹಿಂದೆ ಹಾಗೂ ಮುಂದೆ ಎರಡೂ ಕಡೆ ಬಿಡಿಸಲು ಹೇಳಿ ಮಾಡಿಸಿದಂತಿವೆ. ಇದರಿಂದ ಕೈಗಳ ಅಂದ ಹೆಚ್ಚುವ ಜೊತೆಗೆ ವಧುವಿನ ಕೈಗಳಿಗೆ ಹೇಳಿ ಮಾಡಿಸಿದಂತಿದೆ. ಇದನ್ನು ಮದುವೆಯಂತಹ ಸಮಾರಂಭಗಳಲ್ಲಿ ಬೇರೆಯವರು ಬಿಡಿಸಿಕೊಳ್ಳಬಹುದು.
(3 / 8)
ರಾಜ-ರಾಣಿ ಮತ್ತು ನವಿಲು ಚಿತ್ತಾರ ಹೊಂದಿರುವ ಈ ಕೆಳಗಿನ ಮಾರ್ವಾಡಿ ಮೆಹಂದಿ ವಿನ್ಯಾಸಗಳು ಕೈಗಳಿಗೆ ವಿಶಿಷ್ಟವಾದ ರಾಯಲ್ ಸ್ಪರ್ಶವನ್ನು ನೀಡುತ್ತವೆ. ಈ ವಿನ್ಯಾಸ ವಧುವಿಗೆ ಮಾತ್ರವಲ್ಲ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಇತರರು ಕೂಡ ಕೈಗಳ ಮೇಲೆ ಬಿಡಿಸಿಕೊಳ್ಳುವ ಮೂಲಕ ಕೈಗಳ ಅಂದ ಹೆಚ್ಚಿಸಿಕೊಳ್ಳಬಹುದು.
(4 / 8)
ರಾಜಸ್ಥಾನಿ ಮೆಹಂದಿ ವಿನ್ಯಾಸದಲ್ಲಿ, ನೀವು ರಾಜ ಮತ್ತು ರಾಣಿಯ ಮುಖದ ಈ ಮೆಹಂದಿ ಮಾದರಿಯನ್ನು ಸಹ ಪ್ರಯತ್ನಿಸಬಹುದು. ಮೆಹೆಂದಿಯ ಈ ವಿನ್ಯಾಸವು ರಾಜ ಸಂಪ್ರದಾಯಗಳ ನೋಟವನ್ನು ಒಳಗೊಂಡಿದೆ. ನಿಮ್ಮ ಕೈಯಲ್ಲಿ ಈ ರೀತಿಯ ಮೆಹಂದಿ ವಿನ್ಯಾಸವನ್ನು ಬಿಡಿಸುವ ಜೊತೆಗೆ ನಿಮ್ಮ ಹಾಗೂ ನಿಮ್ಮ ಸಂಗಾತಿಯಾಗುವವರ ಹೆಸರು ಬರೆಯಬಹುದು.
(5 / 8)
ಸಂಪೂರ್ಣ ಕೈಗಳನ್ನು ಆವರಿಸುವ ಈ ಮೆಹಂದಿ ವಿನ್ಯಾಸವು ವಧುವಿನ ಕೈಗೆ ತುಂಬಾ ಸುಂದರವಾಗಿ ಕಾಣಿಸುತ್ತದೆ. ಈ ಸಂಕೀರ್ಣ ವಿನ್ಯಾಸವು ನಿಮ್ಮ ವಧುವಿನ ಅಲಂಕಾರಕ್ಕೆ ರಾಯಲ್ ಟಚ್ ಕೊಡುವುದು ಖಂಡಿತ.
(6 / 8)
ಕೈಗಳ ಹಿಂಭಾಗಕ್ಕೆ ಬಿಡಿಸಲು ಈ ಮೆಹಂದಿ ವಿನ್ಯಾಸವು ಸಾಕಷ್ಟು ವಿಶಿಷ್ಟವಾಗಿದೆ. ಇದು ಟ್ರೆಂಡಿ ವಿನ್ಯಾಸವೂ ಹೌದು. ಮಧುಮಗಳ ಕೈಗಳಿಗೆ ಈ ಡಿಸೈನ್ ಹೇಳಿ ಮಾಡಿಸಿದ್ದು. ಇದು ಸರಳವಾಗಿದ್ದರೂ ತುಂಬಾ ಸುಂದರವಾಗಿ ಕಾಣಿಸುವ ವಿನ್ಯಾಸವಾಗಿದೆ.
(7 / 8)
ಈ ರಾಜಸ್ಥಾನಿ ಮೆಹಂದಿ ವಿನ್ಯಾಸ ನೋಡಲು ತುಂಬಾ ಸುಂದರವಾಗಿದೆ ಮತ್ತು ಮಾಡಲು ತುಂಬಾ ಸರಳವಾಗಿದೆ. ಮುಂಭಾಗದ ಕೈಯನ್ನು ಹೊರತುಪಡಿಸಿ, ನೀವು ಈ ವಿನ್ಯಾಸವನ್ನು ಬ್ಯಾಕ್‌ಹ್ಯಾಂಡ್‌ನಲ್ಲಿಯೂ ಮಾಡಬಹುದು. ಇದು ಕೂಡ ಟ್ರೆಂಡಿ ಆಗಿದೆ.
ಇತರ ಗ್ಯಾಲರಿಗಳು