Viduthalai Part 2 OTT: ವೆಟ್ರಿಮಾರನ್, ವಿಜಯ್ ಸೇತುಪತಿಯ ವಿಡುದಲೈ 2 ಒಟಿಟಿ ಬಿಡುಗಡೆ ಯಾವಾಗ? ವೀಕ್ಷಣೆ ಎಲ್ಲಿ?
- Viduthalai Part 2 OTT Release Update: ವಿಜಯ್ ಸೇತುಪತಿ ಮತ್ತು ನಿರ್ದೇಶಕ ವೆಟ್ರಿಮಾರನ್ ಕಾಂಬಿನೇಷನ್‌ನ ವಿಡುದಲೈ ಪಾರ್ಟ್ 2 ಸಿನಿಮಾ ಇಂದು (ಡಿ. 20) ಬಿಡುಗಡೆ ಆಗಿದೆ. ಪಾಸಿಟಿವ್ ವಿಮರ್ಶೆಗಳಿಂದ ಮೆಚ್ಚುಗೆ ಪಡೆಯುತ್ತಿರುವ ಇದೇ ಸಿನಿಮಾದ ಒಟಿಟಿ ಬಿಡುಗಡೆ ಅಪ್‌ಡೇಟ್ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಹೀಗಿದೆ ಈ ಕುರಿತ ಮಾಹಿತಿ.

(1 / 7)
ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದಲ್ಲಿ ವಿಡುದಲೈ ಪಾರ್ಟ್ 2 ಸಿನಿಮಾ ಇಂದು ಬಿಡುಗಡೆ ಆಗಿದೆ. 2023ರ ಮಾರ್ಚ್‌ನಲ್ಲಿ ಇದೇ ಚಿತ್ರದ ಮೊದಲ ಭಾಗ ಬಿಡುಗಡೆ ಆಗಿತ್ತು. ವೀಕ್ಷಕರಿಂದ ಹೆಚ್ಚು ಪ್ರಶಂಸೆ ಪಡೆದ ಇದೇ ಸಿನಿಮಾದ ಮುಂದುವರಿದ ಭಾಗ ಇದೀಗ ಚಿತ್ರಮಂದಿರದಲ್ಲಿ ತೆರೆಕಂಡಿದೆ.
(2 / 7)
ಮೊದಲ ಭಾಗದಲ್ಲಿ ಸೂರಿ (ಕುಮಾರೇಸನ್) ಕಥೆಯ ನಾಯಕನಾಗಿ ಇಡೀ ಸಿನಿಮಾವನ್ನು ಹೊತ್ತು ಸಾಗಿದ್ದರು. ಈಗ ಎರಡನೇ ಭಾಗದಲ್ಲಿ ಅದರ ಜವಾಬ್ದಾರಿ ಸೇತುಪತಿ ಹೆಗಲೇರಿದೆ. ಅಂದರೆ, ವಾಥಿಯಾರ್ ಹಿನ್ನೆಲೆಯಲ್ಲಿ ಎರಡನೇ ಭಾಗದ ಕಥೆ ಹೇಳಿದ್ದಾರೆ ನಿರ್ದೇಶಕರು.
(4 / 7)
ಪಿರಿಯಾಡಿಕ್ ಡ್ರಾಮಾ ಶೈಲಿಯ ಮೂಡಿಬಂದ ಈ ಚಿತ್ರಕ್ಕೆ ಇಳಯರಾಜಾ ಸಂಗೀತ ನೀಡಿದ್ದು ವಿಶೇಷ. ವೆಲ್ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ
(5 / 7)
ಮೊದಲ ಭಾಗದಲ್ಲಿ ವಾಥಿಯಾರ್ ಬಂಧನದ ಮೂಲಕ ಸಿನಿಮಾ ಮುಗಿದಿತ್ತು. ಇದೀಗ ಹೀಗೆ ಬಂಧನವಾದ ವಾಥಿಯಾರ್ ಯಾರು? ಅವನ ಹಿನ್ನೆಲೆ ಮತ್ತು ಹೋರಾಟ ಹೇಗಿತ್ತು ಎಂಬುದನ್ನು ಪಾರ್ಟ್ 2 ಚಿತ್ರದಲ್ಲಿ ಕಾಣಬಹುದಾಗಿದೆ.
(6 / 7)
ಇದೀಗ ಇದೇ ಚಿತ್ರ ಯಾವ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಬಹುದು ಎಂಬುದಕ್ಕೂ ಉತ್ತರ ಸಿಕ್ಕಿದೆ. ವಿಡುದಲೈ ಪಾರ್ಟ್ 1 ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಜೀ 5 ಪಡೆದುಕೊಂಡಿತ್ತು. ಇದೀಗ ಎರಡನೇ ಭಾಗದ ಹಕ್ಕುಗಳೂ ಜೀ5 ಪಾಲಾಗಿವೆ.
ಇತರ ಗ್ಯಾಲರಿಗಳು