Lakshmi Baramma Serial: ಜೈಲಲ್ಲಿ ಮನೆಯವರ ಆಗಮನಕ್ಕಾಗಿ ಕಾದ ಕಾವೇರಿ; ಲಕ್ಷ್ಮೀ ಕಾಣದೆ ಬೇಸರದಲ್ಲಿದ್ದಾನೆ ವೈಷ್ಣವ್
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಲ್ಲಿ ಇದ್ದಾಳೆ. ಆದರೆ ತಮ್ಮ ಮನೆಯವರಿಗಾಗಿ ಅವಳು ಕಾಯುತ್ತಿದ್ದಾಳೆ. ಅವಳಿಗೆ ಜೈಲಿನ ರೀತಿ ನೀತಿ ಯಾವುದೂ ಗೊತ್ತಿಲ್ಲ. ಮನೆಯ ಐಷಾರಾಮಿ ಜೀವನವೇ ಬೇಕು ಎನ್ನುತ್ತಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಲ್ಲಿ ತನ್ನ ದಿನ ಕಳೆಯುತ್ತಿದ್ದರೆ, ಇತ್ತ ಮನೆಯಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಆರಾಮಾಗೇ ಇದ್ದಾರೆ. ಮನೆಯಲ್ಲಿ ಎಲ್ಲಿ ಹುಡುಕಿದರೂ ಲಕ್ಷ್ಮೀ ಕಾಣದೇ ಇರುವುದನ್ನು ಕಂಡು ಹುಡುಕಾಡುತ್ತಿದ್ದಾನೆ. ಆಗ ಅಲ್ಲೇ ಕೆಲಸ ಮಾಡುತ್ತಿರುವ ಗಂಗಕ್ಕ ಅವನ ಪ್ರಶ್ನೆಗೆ ಉತ್ತರಿಸುತ್ತಾಳೆ. ವಿಧಿ ಅಲ್ಲೇ ಕುಳಿತುಕೊಂಡಿದ್ದರೂ ವೈಷ್ಣವ್ ಲಕ್ಷ್ಮೀ ಎಲ್ಲಿ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಹೀಗಿರುವಾಗ ಅಲ್ಲಿಗೆ ಸುಪ್ರಿತಾ ಕೂಡ ಬರುತ್ತಾಳೆ.
ತನ್ನ ಮನೆಯಲ್ಲೇ ತನಗೆ ಸಮಾಧಾನ ಇಲ್ಲ
ಗಂಗಕ್ಕ ಉತ್ತರಿಸುವ ಮುನ್ನವೇ ಸುಪ್ರಿತಾ ತನ್ನ ಮಾತನ್ನು ಮುಂದುವರೆಸುತ್ತಾಳೆ. ಅವಳು ನಿನ್ನ ತಂಗಿ ವಿಧಿ ಆಡಿದ ಮಾತಿನಿಂದ ಇಲ್ಲಿಂದ ಹೊರಟು ಹೋಗಿದ್ದಾಳೆ. ಲಕ್ಷ್ಮೀ ಹತ್ತಿರ ನಿನ್ನಿಂದಾಗಿ ಅಣ್ಣನ ಸಿಂಗಿಂಗ್ ಶೋ ರದ್ದಾಯ್ತು ಎಂದು ವಿಧಿ ಹೇಳಿದ್ದಾಳೆ ಅದಕ್ಕೆ ಕ್ಷಮೆ ಕೇಳಿ ಮತ್ತೆ ಅವರನ್ನು ಒಪ್ಪಿಸಲು ಅವಳು ಹೋಗಿದ್ದಾಳೆ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ವೈಷ್ಣವ್‌ಗೆ ತಲೆ ಕೆಡುತ್ತದೆ. ಯಾಕೆ ಹೀಗಾಯ್ತು ಎಂದು ಅಂದುಕೊಳ್ಳುತ್ತಾ ಅಲ್ಲಿಂದ ಹೊರಟು ಹೋಗುತ್ತಾನೆ. ಅವನಿಗೆ ಮನೆಯಲ್ಲಿ ಸಮಾಧಾನ ಇಲ್ಲ.
ಜೈಲಿನಲ್ಲಿ ಕಾವೇರಿ
ಕಾವೇರಿ ಜೈಲಿನಲ್ಲಿ ಇದ್ದಾಳೆ. ಅವಳಿಗೆ ಕೆಲಸ ಮಾಡಲು ಹೇಳಿದ್ದಾರೆ. ಆದರೆ ಮನೆಯಲ್ಲಿ ಒಂದು ಕಡ್ಡಿಯನ್ನೂ ಅತ್ತಿಂದ ಇತ್ತ ಎತ್ತಿಡದ ಅವಳಿಗೆ ಎಲ್ಲವೂ ಭಾರವಾಗಿ ಕಾಣುತ್ತಿದೆ. ಉಡಲು ಸೀರೆಯಿಲ್ಲ. ತೊಡಲು ಒಡವೆಇಲ್ಲ ಎಂದು ಅವಳು ಹೇಳುತ್ತಿದ್ದಾಳೆ. ಹೀಗಿರುವಾಗ ಸೈರನ್ ಆಗುತ್ತದೆ ಎಲ್ಲರೂ ಓಡಿ ಹೋಗುತ್ತಾರೆ, ಆದರೆ ಅವಳಿಗೆ ಅವರೆಲ್ಲ ಯಾಕೆ ಓಡಿದ್ದು ಎಂದು ಗೊತ್ತಾಗೋದಿಲ್ಲ. ಪೊಲೀಸ್ ಹತ್ತಿರ ಕಾರಣ ಕೇಳುತ್ತಾಳೆ. ಆಗ ಅವಳು ಇದು ಮನೆಯವರು ವಿಸಿಟ್ ಮಾಡುವ ಸಮಯ ಎಂದು ಹೇಳುತ್ತಾಳೆ.
ಆಗ ಅವಳು ಆಸೆಯಿಂದ ತಮ್ಮ ಮನೆಯಿಂದಲೂ ಯಾರಾದರೂ ಬಂದಿರಬಹುದು ಎಂದುಕೊಂಡು ಹೋಗುತ್ತಾಳೆ. ಆದರೆ ಯಾರೂ ಇರುವುದಿಲ್ಲ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.