ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಸಕ್ಕರೆ ನಾಡಿನ ಈ 10 ತಾಣಗಳನ್ನು ವೀಕ್ಷಿಸುವುದನ್ನು ತಪ್ಪಿಸಿಕೊಳ್ಳಬೇಡಿ
- Mandya Kannada Sahitya Sammelana: ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಿರುವವರಿಗೆ ಮಂಡ್ಯ ಜಿಲ್ಲೆಯ ಪ್ರಮುಖ, ನೋಡಬಹುದಾದ ಪ್ರವಾಸಿ ತಾಣಗಳ ವಿವರ ಇಲ್ಲಿ ನೀಡಲಾಗಿದೆ.
- Mandya Kannada Sahitya Sammelana: ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಿರುವವರಿಗೆ ಮಂಡ್ಯ ಜಿಲ್ಲೆಯ ಪ್ರಮುಖ, ನೋಡಬಹುದಾದ ಪ್ರವಾಸಿ ತಾಣಗಳ ವಿವರ ಇಲ್ಲಿ ನೀಡಲಾಗಿದೆ.
(1 / 10)
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಾವೇರಿ ತೀರದ ಶಿವನಸಮುದ್ರ ಕರ್ನಾಟಕದಲ್ಲಿ ಮೊದಲ ವಿದ್ಯುತ್ ಘಟಕ. ಸಮೀಪದಲ್ಲಿಯೇ ಗಗನಚುಕ್ಕಿ ಜಲಪಾತವೂ ಇದೆ. ಮಳವಳ್ಳಿಯಿಂದ ಇಪ್ಪತ್ತು ಕಿ.ಮಿ ದೂರದಲ್ಲಿದೆ ಈ ತಾಣ.
(2 / 10)
ಮಂಡ್ಯ ಜಿಲ್ಲೆಯ ಕಾವೇರಿ ತೀರದ ಮುತ್ತತ್ತಿ ಮುತ್ತೆತ್ತರಾಯ ಆಂಜನೇಯಸ್ವಾಮಿ ದೇಗುಲ ಪ್ರಮುಖವಾದದ್ದು. ಕಾವೇರಿ ತೀರದಲ್ಲಿ ಕೆಲ ಹೊತ್ತು ಕಳೆಯಲು ಸುಂದರ ವಾತಾವರಣ ಇಲ್ಲಿದೆ. ಹಲಗೂರಿನಿಂದ ಮುತ್ತತ್ತಿ ಸಮೀಪ.
(3 / 10)
ಮಂಡ್ಯ ಜಿಲ್ಲೆ ಕೆಆರ್‌ಪೇಟೆ ಪಟ್ಟಣದಿಂದ ಸಮೀಪದಲ್ಲೇ ಇರುವ ಹೊಸ ಹೊಳಲು ಲಕ್ಷ್ಮಿ ನರಸಿಂಹಸ್ವಾಮಿ ದೇಗುಲ ಪುರಾತನವಾದದ್ದು. ದೇಗುಲದ ನೋಟವೇ ಚೆಂದ. ಒಳಗಡೆಯ ಸೌಂದರ್ಯವೂ ಚೆನ್ನಾಗಿದೆ.
(4 / 10)
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಸಮೀಪದಲ್ಲಿರುವ ಶಿವಪುರದ ಸತ್ಯಾಗ್ರಹ ಸೌಧವೂ ವಿಶೇಷವಾಗಿದೆ. ಶಿವಪುರ ಹೋರಾಟದ ನೆನಪಿಗೆ ಇಲ್ಲಿ ವಿಭಿನ್ನವಾಗಿ ಸೌಧ ನಿರ್ಮಿಸಲಾಗಿದೆ.
(5 / 10)
ಮಂಡ್ಯ ಜಿಲ್ಲೆಯ ಐತಿಹಾಸಿಕ ಬೆಟ್ಟದ ಸಾಲಿನಲ್ಲಿ ಮೇಲುಕೋಟೆ ಪ್ರಮುಖ ಹೆಸರು. ಇಲ್ಲಿನ ಚಲುವನಾರಾಯಣ ದೇಗುಲಗಳು, ಅಕ್ಕತಂಗಿಯರ ಕೊಳ, ಧನುಷ್ಕೋಟಿ, ಸಂಸ್ಕೃತ ಅಕಾಡೆಮಿ ವಿಶೇಷ ಆಕರ್ಷಣೆ, ಸಾಹಿತಿ ಪುತಿನ ಅವರ ಸ್ಮಾರಕವೂ ಇಲ್ಲಿಯೇ ಇದೆ. ಮಂಡ್ಯದಿಂದ ಮೂವತ್ತು ಕಿ.ಮಿ ದೂರದಲ್ಲಿದೆ ಮೇಲುಕೋಟೆ.
(6 / 10)
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಐತಿಹಾಸಿಕ ತಾಣ. ಬೆಟ್ಟದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠ, ಭೈರವೇಶ್ವರ ದೇಗುಲ ಇಲ್ಲಿನ ವಿಶೇಷ. ಬೆಂಗಳೂರು- ಮಂಗಳೂರು ಹೆದ್ದಾರಿಯಿಂದ ತುಮಕೂರಿಗೆ ಹೋಗುವ ಮಾರ್ಗದಲ್ಲಿದೆ ಆದಿಚುಂಚನಗಿರಿ ಶ್ರೀಕ್ಷೇತ್ರ.
(7 / 10)
ಶ್ರೀರಂಗಪಟ್ಟಣ ಎಂದರೆ ನೆನಪಾಗೋದು ಕಾವೇರಿ ನದಿ, ಟಿಪ್ಪು ಸುಲ್ತಾನ್ ಆಳ್ವಿಕೆ ಹಾಗೂ ಐತಿಹಾಸಿಕ ತಾಣಗಳು. ಶ್ರೀರಂಗಪಟ್ಟಣದಲ್ಲಿಯೇ ಟಿಪ್ಪು ಕುಟುಂಬದವರ ಸಮಾಧಿ, ಬೇಸಿಗೆ ಅರಮನೆ, ಶ್ರೀರಂಗನಾಥ ದೇಗುಲ, ನಿಮಿಷಾಂಬ ದೇಗುಲಗಳಿವೆ. ಅಲ್ಲದೇ ಸಮೀಪವೇ ಇರುವ ಕರಿಘಟ್ಟದ ಮೇಲೇರಿದರೆ ಕಾವೇರಿ ಹರಿಯುವ ವಾತಾವರಣವನ್ನು ಕಾಣಬಹುದು.
(8 / 10)
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರದ ಬೃಂದಾವನದಲ್ಲಿ ರಾತ್ರಿ ವೇಳೆಯ ಕಾರಂಜಿ ವೀಕ್ಷಣೆ ಮುದ ನೀಡುತ್ತದೆ. ಈಗಂತೂ ಹೊಸ ವಿನ್ಯಾಸದ, ತಂತ್ರಜ್ಞಾನ ಬಳಸಿ ಕಾರಂಜಿ ಚಿಮ್ಮುವ, ಹೊಸ ಹಾಡುಗಳನ್ನು ನೋಡುವುದೇ ಚಂದ. ಇದು ಶ್ರೀರಂಗಪಟ್ಟಣದಿಂದಲೇ ಹದಿನೈದು ಕಿ.ಮಿ ದೂರದಲ್ಲಿದೆ.
(9 / 10)
ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮಕ್ಕೆ ಈಗ ಸಹಸ್ರಾರು ಪಕ್ಷಿಗಳು ಸಂತಾನಾಭಿವೃದ್ದಿಗೆ ಬಂದಿವೆ. ಶ್ರೀರಂಗಪಟ್ಟಣದಿಂದ ಕೆಆರ್‌ಎಸ್‌ಗೆ ಹೋಗುವ ಮಾರ್ಗದಲ್ಲಿರುವ ಇಲ್ಲಿನ ಪಕ್ಷಿಧಾಮ ಭೇಟಿ, ಬೋಟಿಂಗ್ ಯಾನ ಮುದ ನೀಡುತ್ತದೆ.
ಇತರ ಗ್ಯಾಲರಿಗಳು