Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್
ಕನ್ನಡ ಸುದ್ದಿ  /  ಮನರಂಜನೆ  /  Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್

Keerthy Suresh: ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್

ಕೀರ್ತಿ ಸುರೇಶ್ ಮಂಗಳಸೂತ್ರ: ಕೀರ್ತಿ ಸುರೇಶ್ ತನ್ನ ಮದುವೆಯ ನಂತರ ಮೊದಲ ಬಾರಿಗೆ ಕೊರಳಲ್ಲಿ ಮಂಗಳಸೂತ್ರದೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಕೆಂಪು ಮಾಡ್ರೆನ್ ಡ್ರೆಸ್ ನಲ್ಲಿ ಆಕೆಯನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.

ಮದುವೆಯಾದ ಬಳಿಕ ಮೊದಲ ಬಾರಿಗೆ ಮಾಡ್ರೆನ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಕೀರ್ತಿ ಸುರೇಸ್
ಮದುವೆಯಾದ ಬಳಿಕ ಮೊದಲ ಬಾರಿಗೆ ಮಾಡ್ರೆನ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಕೀರ್ತಿ ಸುರೇಸ್

ಕೀರ್ತಿ ಸುರೇಶ್ ಮಂಗಳಸೂತ್ರ: ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆಯ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾರಣಿಸಿಕೊಂಡಿದ್ದು, ಮಾಡ್ರೆನ್ ಡ್ರೆಸ್ ಜೊತೆಗೆ ಮಂಗಳಸೂತ್ರದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಮೊದಲ ಬಾಲಿವುಡ್ ಸಿನಿಮಾ ಬೇಬಿ ಜಾನ್‌ನ ಪ್ರಚಾರದ ಭಾಗವಾಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಕೆಂಪು ಬಾಡಿಕಾನ್ ಡ್ರೆಸ್‌ನಲ್ಲಿ ಕೀರ್ತಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೊಸ್ ಈಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮಂಗಳಸೂತ್ರದೊಂದಿಗೆ ಕೀರ್ತಿ ಸುರೇಶ್

ಕೀರ್ತಿ ಸುರೇಶ್ 2024ರ ಡಿಸೆಂಬರ್ 12 ರಂದು ಗೋವಾದಲ್ಲಿ ತನ್ನ ಗೆಳೆಯ ಆಂಟೋನಿ ತಾಟಿಲ್ ಅವರನ್ನು ವಿವಾಹವಾದರು. ಮೊದಲು ಹಿಂದೂ ಸಂಪ್ರದಾಯದಲ್ಲಿ ಆ ನಂತರ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ವಿವಾಹವಾದರು. ಆದರೆ ಮದುವೆಯ ನಂತರ ಮೊದಲ ಬಾರಿಗೆ ಹೊರಗೆ ಬಂದ ಕೀರ್ತಿ ಸುರೇಶ್ ಕೊರಳಲ್ಲಿ ಅರಿಶಿನ ದಾರದ ಮಂಗಳಸೂತ್ರದೊಂದಿಗೆ ಕಾಣಿಸಿಕೊಂಡಿದ್ದಾರೆ.

ಕೆಂಪು ಬಾಡಿಕಾನ್ ಮಾಡ್ರೆನ್ ಡ್ರೆಸ್‌ನಲ್ಲಿ ಮಂಗಳಸೂತ್ರ ಸ್ಪಷ್ಟವಾಗಿ ಕಾಣಿಸುವಂತೆ ಇತ್ತು. ಇದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಬೇಬಿ ಜಾನ್ ಚಿತ್ರದ ಪ್ರಚಾರದ ಭಾಗವಾಗಿ ವರುಣ್ ಧವನ್, ನಿರ್ದೇಶಕ ಅಟ್ಲಿ ಹಾಗೂ ವಾಮಿಕಾ ಗಬ್ಬಿ ಅವರೊಂದಿಗೆ ಕೀರ್ತಿ ಈ ಕಾರ್ಯಕ್ರಮಕ್ಕೆ ಬಂದಿದ್ದರು.

ಕೀರ್ತಿ ಅವರ ಲುಕ್‌ಗೆ ಅಭಿಮಾನಿಗಳು ಫಿದಾ

ಬೇಬಿ ಜಾನ್ ಸಮಾರಂಭದಲ್ಲಿ ಕೀರ್ತಿ ಸುರೇಶ್ ಅವರನ್ನು ನೋಡಿದ ಅಭಿಮಾನಿಗಳು ಅವರಲ್ಲಿ ಮದುವೆಯ ಕಲೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ವಾಸ್ತವವಾಗಿ ಕೀರ್ತಿ ತುಂಬಾ ಹಾಟ್ ಮತ್ತು ಸ್ಲಿಮ್ ಆಗಿ ಕಾಣುತ್ತಿದ್ದರು. ಕೀರ್ತಿ ಸಂಪ್ರದಾಯಗಳನ್ನು ಚೆನ್ನಾಗಿ ಅನುಸರಿಸುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆಕೆ ತುಂಬಾ ಸುಂದರವಾಗಿದ್ದಾರೆ ಎಂದು ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯಿಸಿದ್ದಾರೆ.

ಗೋವಾದಲ್ಲಿ ಮದುವೆಯ ನಂತರ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಬೇಬಿ ಜಾನ್ ಚಿತ್ರ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಇದು ತಮಿಳಿನಲ್ಲಿ ಸೂಪರ್ ಹಿಟ್ ಆದ ತೇರಿ ಚಿತ್ರದ ರಿಮೇಕ್. ಇದರ ನಂತರ ಬೇಬಿ ಜಾನ್, ಕೀರ್ತಿ ರಿವಾಲ್ವರ್ ರೀಟಾ ಎಂಬ ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ.

ಕೀರ್ತಿ, ಆಂಟೋನಿ ಮದುವೆ

ಕೀರ್ತಿ ಮತ್ತು ಆಂಟೋನಿ 15 ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದಿದೆ. ಹೈಸ್ಕೂಲ್‌ನಲ್ಲಿ ಶುರುವಾದ ತಮ್ಮ ಪ್ರೀತಿ ಇತ್ತೀಚೆಗಷ್ಟೇ 15 ವರ್ಷ ಪೂರೈಸಿದೆ ಎಂದು ಕೀರ್ತಿ ಪೋಸ್ಟ್ ಮಾಡಿದ್ದಾರೆ. ನಂತರ ಡಿಸೆಂಬರ್ 12 ರಂದು ಗೋವಾದಲ್ಲಿ ವಿವಾಹವಾದರು. ನಾಲ್ಕು ದಿನಗಳ ಕಾಲ ನಡೆದ ವಿವಾಹವು ಮೊದಲು ಹಿಂದೂ ಸಂಪ್ರದಾಯದಲ್ಲಿ ಮತ್ತು ನಂತರ ಕ್ರಿಶ್ಚಿಯನ್ ಶೈಲಿಯಲ್ಲಿ ನಡೆಯಿತು. ವಿವಾಹದ ಸಂದರ್ಭದಲ್ಲಿ ಅವರ ಲಿಪ್ ಲಾಕ್ ಫೋಟೋಗಳು ಕೂಡ ವೈರಲ್ ಆಗಿದ್ದವು. ಮಹಾನಟಿ ಸಿನಿಮಾ ಕೀರ್ತಿ ಸುರೇಶ್ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಸದ್ಯ ಹಲವಾರು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

Whats_app_banner