Election 2024: ಸಿಎಂ ಜಗನ್‌ರಿಂದ ನಟ ಜೂ.ಎನ್‌ಟಿಆರ್‌ವರೆಗೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಗಣ್ಯರಿಂದ ಮತದಾನ; ಫೋಟೊಸ್
- ಆಂಧ್ರ ಪ್ರದೇಶದ ವಿಧಾನಸಭೆ, ಲೋಕಸಭೆಯ ಹಾಗೂ ತೆಲಂಗಾಣದ ಲೋಕಸಭೆ ಚುನಾವಣೆಯ 4ನೇ ಹಂತಗ ಮತದಾನ ಆರಂಭವಾಗಿದೆ. ಬೆಳಿಗ್ಗೆ 6 ಗಂಟೆಗೂ ಮುನ್ನವೇ ಹೆಚ್ಚಿನ ಜನರು ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ. ಜೂ ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ ಕೂಡ ಹಕ್ಕು ಚಲಾಯಿಸಿದ್ದಾರೆ.
- ಆಂಧ್ರ ಪ್ರದೇಶದ ವಿಧಾನಸಭೆ, ಲೋಕಸಭೆಯ ಹಾಗೂ ತೆಲಂಗಾಣದ ಲೋಕಸಭೆ ಚುನಾವಣೆಯ 4ನೇ ಹಂತಗ ಮತದಾನ ಆರಂಭವಾಗಿದೆ. ಬೆಳಿಗ್ಗೆ 6 ಗಂಟೆಗೂ ಮುನ್ನವೇ ಹೆಚ್ಚಿನ ಜನರು ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ. ಜೂ ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ ಕೂಡ ಹಕ್ಕು ಚಲಾಯಿಸಿದ್ದಾರೆ.
(1 / 9)
ಟಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣ ಚಿರಂಜೀವಿ, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ನಟರಾದ ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ಮತದಾನ ಮಾಡಿದ್ದಾರೆ. ಎಲ್ಲರೂ ವೋಟಿಂಗ್ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದ್ದಾರೆ.
(2 / 9)
ವಿಜಯವಾಡದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಮಹಿಳಾ ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿರುವ ದೃಶ್ಯ ಕಂಡು ಬಂದಿತು.
(3 / 9)
ಪಶ್ಚಿಮ ಗೋದಾವರಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿರುವ ಚುನಾವಾಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ.
(4 / 9)
ಹೈದರಾಬಾದ್‌ನಲ್ಲಿ ನಟ ಜೂನಿಯರ್ ಎನ್‌ಟಿಆರ್ ಮತ್ತವರ ಕುಟುಂಬ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಎಲ್ಲರೂ ತಪ್ಪದೇ ಮತದಾನ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಎನ್‌ಟಿಆರ್ ಕರೆ ನೀಡಿದ್ದಾರೆ.
(6 / 9)
ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಟ ಅಲ್ಲು ಅರ್ಜುನ್ ಹಕ್ಕು ಚಲಾಯಿಸಿದ್ದಾರೆ. ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವೆಲ್ಲರೂ ಮತದಾನ ಮಾಡಬೇಕೆಂದು. ದಯವಿಟ್ಟು ಎಲ್ಲರೂ ಹಕ್ಕು ಚಲಾಯಿಸಿ ಎಂದು ಹೇಳಿದ್ದಾರೆ.
(7 / 9)
ಕಡಪದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ ಚಲಾಯಿಸಿದ್ದಾರೆ. ಕಳೆದ 5 ವರ್ಷಗಳ ಆಡಳಿತವನ್ನು ನೋಡಿದ್ದೀರಿ. ನಿಮಗೆ ಈ ಆಡಳಿತದಿಂದ ಲಾಭವಾಗಿದ್ದಾರೆ ನಿಮ್ಮ ಭವಿಷ್ಯಕ್ಕಾಗಿ ಇದೇ ಆಡಳಿತ ಮತ ನೀಡಿ ಎಂದಿದ್ದಾರೆ.
(8 / 9)
ಟಾಲಿವುಡ್‌ನ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಹೈದರಾಬಾದ್‌ನಲ್ಲಿ ಮತ ಚಲಾಯಿಸಿದ್ದಾರೆ. ಪ್ರತಿಯೊಬ್ಬರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದ ಕರೆ ನೀಡಿದ್ದಾರೆ.
ಇತರ ಗ್ಯಾಲರಿಗಳು