Sameer Rizvi: 97 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಮಿರ್ ರಿಜ್ವಿ; ದೇಶೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಡಬಲ್ ಸೆಂಚುರಿ ಇದು!
ಕನ್ನಡ ಸುದ್ದಿ  /  ಕ್ರಿಕೆಟ್  /  Sameer Rizvi: 97 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಮಿರ್ ರಿಜ್ವಿ; ದೇಶೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಡಬಲ್ ಸೆಂಚುರಿ ಇದು!

Sameer Rizvi: 97 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಮಿರ್ ರಿಜ್ವಿ; ದೇಶೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಡಬಲ್ ಸೆಂಚುರಿ ಇದು!

Sameer Rizvi: ಅಂಡರ್​ 23 ರಾಜ್ಯ ಎ ಟ್ರೋಫಿಯಲ್ಲಿ ಸಮೀರ್ ರಿಜ್ವಿ ಕೇವಲ 97 ಎಸೆತಗಳಲ್ಲಿ ಅಜೇಯ 201 ರನ್ ಗಳಿಸುವ ಮೂಲಕ ದೇಶೀಯ ಕ್ರಿಕೆಟ್​​ನಲ್ಲಿ ವೇಗವಾಗಿ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

97 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಮಿರ್ ರಿಜ್ವಿ; ದೇಶೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಡಬಲ್ ಸೆಂಚುರಿ ಇದು
97 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಮಿರ್ ರಿಜ್ವಿ; ದೇಶೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಡಬಲ್ ಸೆಂಚುರಿ ಇದು

ವಡೋದರಾ: ತ್ರಿಪುರಾ ವಿರುದ್ಧದ 23 ವರ್ಷದೊಳಗಿನವರ ರಾಜ್ಯ ಎ ಟ್ರೋಫಿಯಲ್ಲಿ ಸಮೀರ್ ರಿಜ್ವಿ (Sameer Rizvi) ಅವರು ವೇಗದ ದ್ವಿಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸಮೀರ್ 97 ಎಸೆತಗಳಲ್ಲಿ ಅಜೇಯ 210 ರನ್ ಗಳಿಸಿ ನ್ಯೂಜಿಲೆಂಡ್​​ನ ಚಾಡ್ ಬೋವ್ಸ್ ವರ್ಲ್ಡ್​ ರೆಕಾರ್ಡ್​ ಅನ್ನು ಮುರಿದಿದ್ದಾರೆ. ತ್ರಿಪುರಾ ಬೌಲರ್​​ಗಳ ವಿರುದ್ಧ ದಂಡಯಾತ್ರೆ ನಡೆಸಿದ ಉತ್ತರ ಪ್ರದೇಶ ತಂಡದ ನಾಯಕ ಸಮೀರ್ ಅವರ ದ್ವಿಶತಕದ ಇನ್ನಿಂಗ್ಸ್​​ನಲ್ಲಿ 20 ಸಿಕ್ಸರ್​, 13 ಬೌಂಡರಿಗಳಿವೆ. ಪುರುಷರ ಅಂಡರ್-23 ರಾಜ್ಯ ಎ ಟ್ರೋಫಿಯ ಇತಿಹಾಸದಲ್ಲಿ ರಿಜ್ವಿ ವೇಗವಾಗಿ ದ್ವಿಶತಕ ಬಾರಿಸಿದ ದಾಖಲೆಯನ್ನು ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಫೋರ್ಡ್ ಟ್ರೋಫಿಯಲ್ಲಿ ಒಟಾಗೋ ವಿರುದ್ಧ 103 ಎಸೆತಗಳಲ್ಲಿ ಡಬಲ್ ಸೆಂಚುರಿ ಬಾರಿಸಿದ ನ್ಯೂಜಿಲೆಂಡ್​​ನ ಚಾಡ್ ಬೋವ್ಸ್ ಹೆಸರಿನಲ್ಲಿ ಲಿಸ್ಟ್ ಎ ಕ್ರಿಕೆಟ್​​ನಲ್ಲಿ ವೇಗದ ದ್ವಿಶತಕದ ದಾಖಲೆ ಇದೆ. 23ನೇ ಓವರ್​​ನಲ್ಲಿ ಬ್ಯಾಟಿಂಗ್​​ಗೆ ಇಳಿದ ಸಮೀರ್ ರಿಜ್ವಿ ತ್ರಿಪುರಾ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ಇದು ಅಂಡರ್ 23 ಟೂರ್ನಿಯಲ್ಲಿ ರಿಜ್ವಿ ಬಾರಿಸಿದ ಮೂರನೇ ಶತಕವಾಗಿದೆ. ಅವರು ಈಗ ನಾಲ್ಕು ಇನ್ನಿಂಗ್ಸ್ ಗಳಲ್ಲಿ 515 ರನ್ ಗಳಿಸಿ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಉಳಿದ ಪಂದ್ಯಗಳಲ್ಲೂ ಅಬ್ಬರಿಸುವ ಮುನ್ಸೂಚನೆ ನೀಡಿದ್ದು, ಐಪಿಎಲ್​ಗೂ ಮುನ್ನ ಭರವಸೆ ನೀಡಿದ್ದಾರೆ.

ಕಳೆದ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ 21ರ ಹರೆಯದ ರಿಜ್ವಿ 8 ಪಂದ್ಯಗಳಲ್ಲಿ ಕೇವಲ 51 ರನ್ ಗಳಿಸಿದ್ದರು. ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆ ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳದೆ ಕೈ ಬಿಟ್ಟಿತು. ನವೆಂಬರ್ 24, 25ರಂದು ನಡೆದ ಮೆಗಾ ಹರಾಜಿನ ಆರಂಭದಲ್ಲಿ ಯಾವ ತಂಡವೂ ಅವರನ್ನು ಖರೀದಿಗೆ ಒಲವು ತೋರಲಿಲ್ಲ. ಆದರೆ, ಕೊನೆಗೆ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 95 ಲಕ್ಷ ರೂ.ಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇದಕ್ಕೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಅವರನ್ನು ಚೆನ್ನೈ ತಂಡ 8.4 ಕೋಟಿ ರೂ.ಗೆ ಖರೀದಿಸಿತ್ತು.

ಅಭಿಷೇಕ್ ಪೋರೆಲ್ ಅಬ್ಬರ

ವಿಜಯ್ ಹಜಾರೆ ಟ್ರೋಫಿ 2025 ಟೂರ್ನಿಯಲ್ಲಿ ಡೆಲ್ಲಿ ವಿರುದ್ಧದ ಬೆಂಗಾಲ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಎಡಗೈ ಬ್ಯಾಟ್ಸ್​ಮನ್ ಅಭಿಷೇಕ್ ಪೊರೆಲ್, 130 ಎಸೆತಗಳಲ್ಲಿ 170 ರನ್​ ಸಿಡಿಸಿದ್ದಾರೆ. ಪೊರೆಲ್ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ, 7 ಸಿಕ್ಸರ್‌ಗಳಿದ್ದವು ಎಂಬುದು ವಿಶೇಷ. ಕ್ರೀಸ್​ಗೆ ಬಂದ ಕೂಡಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದ ಪೊರೆಲ್​, ಅಭಿಷೇಕ್ ಆರ್ಭಟಕ್ಕೆ ಬ್ರೇಕ್​ ಹಾಕಲು ಡೆಲ್ಲಿಗೆ ಹೆಣಗಾಡಿತು. ಈ ಯುವ ಬ್ಯಾಟರ್​ ಸುನಾಮಿ ಬ್ಯಾಟಿಂಗ್​ಗೆ ದೆಹಲಿ ಬೌಲರ್‌ಗಳು ಸುಸ್ತಾದರು. ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ, 7 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಇದರೊಂದಿಗೆ ಬೆಂಗಾಲ್ ಕೇವಲ 41.3 ಓವರ್‌ಗಳಲ್ಲಿ 274 ರನ್ ಗಳಿಸಿ ಗೆದ್ದು ಬೀಗಿತು. ಈ ಪೈಕಿ 170 ರನ್ ಪೊರೆಲ್ ಗಳಿಸಿದ್ದು.

Whats_app_banner