ವಿಜಯ್ ಹಜಾರೆ ಟ್ರೋಫಿ: ಚರಿತ್ರೆ ಸೃಷ್ಟಿಸಿದ 13 ವರ್ಷದ ವೈಭವ್ ಸೂರ್ಯವಂಶಿ, ಈ ಸಾಧನೆ ಮಾಡಿದ ಮೊದಲ ಭಾರತೀಯ
- ನವೆಂಬರ್ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗುವ ಮೂಲಕ ಸುದ್ಧಿಯಾಗಿದ್ದ 13 ವರ್ಷದ ವೈಭವ್ ಸೂರ್ಯವಂಶಿ, ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಕಣಕ್ಕಿಳಿದು ವಿಶೇಷ ದಾಖಲೆ ನಿರ್ಮಿಸಿದ್ದಾರೆ.
- ನವೆಂಬರ್ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗುವ ಮೂಲಕ ಸುದ್ಧಿಯಾಗಿದ್ದ 13 ವರ್ಷದ ವೈಭವ್ ಸೂರ್ಯವಂಶಿ, ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಕಣಕ್ಕಿಳಿದು ವಿಶೇಷ ದಾಖಲೆ ನಿರ್ಮಿಸಿದ್ದಾರೆ.
(1 / 5)
ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯುವ ಮೂಲಕ 13 ವರ್ಷದ ವೈಭವ್ ಸೂರ್ಯವಂಶಿ ಹೊಸ ದಾಖಲೆ ಬರೆದಿದ್ದಾರೆ. ಶನಿವಾರ (ಡಿಸೆಂಬರ್ 21ರ) ತನ್ನ ತವರು ರಾಜ್ಯ ಬಿಹಾರ ತಂಡ ಪ್ರತಿನಿಧಿಸಿದ ಬಳಿಕ ದೇಶೀಯ ಕ್ರಿಕೆಟ್ನಲ್ಲಿ ನೂತನ ಚರಿತ್ರೆ ಸೃಷ್ಟಿಸಿದ್ದಾರೆ.(AFP)
(2 / 5)
ಲಿಸ್ಟ್ ಎ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ. ಅವರಿಗೆ ಈಗ 13 ವರ್ಷ 269 ದಿನಗಳು. ಈ ಹಿಂದೆ ಅಲಿ ಅಕ್ಬರ್ ಈ ದಾಖಲೆ ಬರೆದಿದ್ದರು. ಅವರು 14 ವರ್ಷ 51 ದಿನಗಳ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದರು. (AP)
(3 / 5)
ಇದಕ್ಕೂ ಮುನ್ನ ನವೆಂಬರ್ನಲ್ಲಿ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರನ್ನು ರಾಜಸ್ಥಾನ್ ಅವರನ್ನು 1.10 ಕೋಟಿ ರೂ.ಗೆ ಖರೀದಿಸಿದೆ.(PTI)
(4 / 5)
ಆದಾಗ್ಯೂ, ವೈಭವ್ ತಮ್ಮ ಲಿಸ್ಟ್ ಎ ನ ತನ್ನ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಕೇವಲ ೪ ರನ್ ಗಳಿಗೆ ಔಟಾದರು. ಆದಾಗ್ಯೂ, ವೈಭವ್ ಮೊದಲ ಎಸೆತದಲ್ಲಿ ಬೌಂಡರಿ ಹೊಡೆಯುವ ತನ್ನ ಅಭಿಯಾನ ಆರಂಭಿಸಿದರಾದರೂ ಮರು ಎಸೆತದಲ್ಲೇ ಔಟಾದರು.(AP)
ಇತರ ಗ್ಯಾಲರಿಗಳು