Lok Sabha Election 2024: ಲೋಕಸಭೆ ಸದಸ್ಯರಿಗೂ ರಾಜ್ಯಸಭೆ ಸದಸ್ಯರಿಗೂ ಏನು ವ್ಯತ್ಯಾಸ? ಹೀಗಿರತ್ತೆ ಆಯ್ಕೆ ವಿಧಾನ, ಆಡಳಿತ ಪರಿ
- Lok Sabha Election 2024: ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ನಡುವಿನ ವ್ಯತ್ಯಾಸವೇನು? ಆಯ್ಕೆ ವಿಧಾನ, ಆಡಳಿತ, ಹಕ್ಕುಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
- Lok Sabha Election 2024: ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ನಡುವಿನ ವ್ಯತ್ಯಾಸವೇನು? ಆಯ್ಕೆ ವಿಧಾನ, ಆಡಳಿತ, ಹಕ್ಕುಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
(1 / 9)
ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ನಡುವಿನ ವ್ಯತ್ಯಾಸವನ್ನು ನೋಡುವುದಾದರೆ ಲೋಕಸಭಾ ಸದಸ್ಯರಾಗಲು ಕನಿಷ್ಠ 25 ವರ್ಷ ಪೂರ್ಣಗೊಂಡಿರಬೇಕು, ರಾಜ್ಯಸಭಾ ಸದಸ್ಯರಾಗಲು ಕನಿಷ್ಠ 30 ವರ್ಷ ಆಗಿರಬೇಕು (ಫೋಟೋ-ಲೋಕಸಭೆ)(ANI)
(2 / 9)
ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು ಪೈಕಿ ಒಬ್ಬರು ಸ್ಪೀಕರ್ ಆಗಿರುತ್ತಾರೆ. ಭಾರತದ ಉಪ ರಾಷ್ಟ್ರಪತಿ ರಾಜ್ಯಸಭೆಯ ಸಭಾಪತಿಗಳಾಗಿರುತ್ತಾರೆ. (ಫೋಟೊ-ರಾಜ್ಯಸಭೆ)(ANI)
(3 / 9)
ಲೋಕಸಭಾ ಸದಸ್ಯರನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಆಯ್ಕೆ ಮಾಡುತ್ತಾರೆ.ರಾಜ್ಯಸಭಾ ಸದಸ್ಯರು ವಿವಿಧ ರಾಜ್ಯಗಳ ಜನಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ (ಪೋಟೋ-ಲೋಕಸಭೆ)(HT )
(4 / 9)
ಲೋಕಸಭೆಯಲ್ಲಿ ಅಲ್ಲಿನ ಸದಸ್ಯರು ಮಾತ್ರ ಹಣಕಾಸಿನ ಮಸೂದೆಗಳನ್ನು ಮಂಡಿಸಬಹುದು. ರಾಜ್ಯಸಭಾ ಸದಸ್ಯರು ಹಣಕಾಸಿನ ಮಸೂದೆಗಳಿಗೆ ಒಪ್ಪಿಗೆ ನೀಡಬಹುದು. ಆದರೆ ತಿರಸ್ಕರಿಸುವುದು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. (ಫೋಟೊ- ರಾಜ್ಯಸಭೆ)(ANI)
(5 / 9)
ಲೋಕಸಭಾ ಸದಸ್ಯರಿಗೆ ಹೆಚ್ಚಿನ ಅಧಿಕಾರ ಇರುತ್ತದೆ. ರಾಜ್ಯಸಭಾ ಸದಸ್ಯರು ಲೋಕಸಭಾ ಸದಸ್ಯರಿಗಿಂತ ಕಡಿಮೆ ಅಧಿಕಾರವನ್ನು ಹೊಂದಿರುತ್ತಾರೆ.(HT)
(6 / 9)
ರಾಜ್ಯಸಭೆಯ ಪೂರ್ಣಾವಧಿಯ ಚುನಾಯಿತ ಸದಸ್ಯರು 6 ವರ್ಷಗಳ ಕಾಲ ಕಾರ್ಯನಿರ್ಹಿಸುತ್ತಾರೆ. ರಾಜ್ಯಸಭೆಯ ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ 2 ವರ್ಷಗಳ ನಂತರ ನಿವೃತ್ತರಾಗುತ್ತಾರೆ. ಲೋಕಸಭೆಯ ಸದಸ್ಯರ ಅವಧಿ 5 ವರ್ಷಗಳಾಗಿರುತ್ತದೆ. (ಫೋಟೊ-ರಾಜ್ಯಸಭೆ)(ANI)
(7 / 9)
ಲೋಕಸಭೆ ಮತ್ತು ರಾಜ್ಯಸಭೆ ಭಾರತದ ಸಂಸತ್ತಿನ ಎರಡು ಅವಿಭಾಜ್ಯ ಸದನಗಳಾಗಿವೆ. ಲೋಕಸಭೆಯಲ್ಲಿ 543 ಸದಸ್ಯ ಸ್ಥಾನಗಳಿದ್ದರೆ, ರಾಜ್ಯಸಭೆಯಲ್ಲಿ 250 ಸದಸ್ಯ ಸ್ಥಾನಗಳಿವೆ.(ANI )
(8 / 9)
ಲೋಕಸಭಾ ಸದಸ್ಯರಿರುವ ಸದನವನ್ನು ಕೆಳಮನೆ, ರಾಜ್ಯಸಭಾ ಸದಸ್ಯರಿರುವ ಸದನವನ್ನು ಮೇಲ್ಮನೆ ಅಂತಲೂ ಕರೆಯುತ್ತಾರೆ. ಲೋಕಸಭೆಯು ರಾಜ್ಯಸಭೆಗಿಂತ ಎಲ್ಲಾ ವಿಚಾರಗಳಲ್ಲೂ ಹೆಚ್ಚು ಶಕ್ತಿಶಾಲಿಯಾಗಿದೆ.(ANI)
ಇತರ ಗ್ಯಾಲರಿಗಳು