ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭೆ ಚುನಾವಣೆಗೆ ಕುಟುಂಬದವರ ಪ್ರಚಾರ, ಅಖಾಡಕ್ಕಿಳಿದ ಮಗ, ಪತ್ನಿ, ಸಹೋದರ, ಅಮ್ಮ Photos

ಲೋಕಸಭೆ ಚುನಾವಣೆಗೆ ಕುಟುಂಬದವರ ಪ್ರಚಾರ, ಅಖಾಡಕ್ಕಿಳಿದ ಮಗ, ಪತ್ನಿ, ಸಹೋದರ, ಅಮ್ಮ photos

  • ಚುನಾವಣೆಗೆ ಸ್ಪರ್ಧಿಸಿದರೂ ಕುಟುಂಬದವರ ಬೆಂಬಲವಿಲ್ಲದೇ ಪ್ರಚಾರ ಅಸಾಧ್ಯ. ಕರ್ನಾಟಕದಲ್ಲೂ ಕೆಲವು ಕ್ಷೇತ್ರಗಳಲ್ಲಿ ಕುಟುಂಬದವರೂ ಅಖಾಡಕ್ಕಿಳಿದು ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಅದರ ಚಿತ್ರನೋಟ ಇಲ್ಲಿದೆ. 

ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಸಾಂಪ್ರದಾಯಿಕ ಪಂಚೆ ಶೈಲಿಯಲ್ಲಿಯೇ ಕ್ಷೇತ್ರ ಸುತ್ತಿ ತಂದೆ ಪರ ಪ್ರಚಾರ ಕೈಗೊಂಡಿದ್ದಾರೆ.
icon

(1 / 6)

ಹಾವೇರಿ ಬಿಜೆಪಿ ಅಭ್ಯರ್ಥಿಯಾಗಿರುವ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಪತ್ನಿ ಚನ್ನಮ್ಮ ಅವರು ರಾಣೆಬೆನ್ನೂರು ಸಹಿತ ಹಲವು ಕಡೆ ಮಹಿಳಾ ಸಂಘಟನೆಗಳವರನ್ನು ಭೇಟಿ ಮಾಡಿ ಪತಿ ಪರ ಮತ ಕೇಳುತ್ತಿದ್ದಾರೆ.
icon

(2 / 6)

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥೀಯಾಗಿರುವ ರಾಜವಂಶಸ್ಥ ಯದುವೀರ್‌ ಅವರ ಪರವಾಗಿ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್‌ ಅವರೂ ಪ್ರಚಾರಕ್ಕೆ ಧುಮುಕಿದ್ದಾರೆ. ಕನ್ನಡ ಮಾತನಾಡಿ ಗಮನ ಸೆಳೆಯುತ್ತಿದ್ದಾರೆ. 
icon

(3 / 6)

ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಪರವಾಗಿ ಸಹೋದರ ರಾಹುಲ್‌ ಜಾರಕಿಹೊಳಿ ಅವರು ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ.
icon

(4 / 6)

ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಡಿ.ಕೆ.ಸುರೇಶ್‌ ಅವರ ಪರವಾಗಿ ಅವರ ಅತ್ತಿಗೆ, ಡಿಕೆ ಶಿವಕುಮಾರ್‌ ಪತ್ನಿ ಉಷಾ ಅವರು ಮನೆಮನೆಗೆ ಎಡತಾಕಿ ಮೈದುನನ ಪರ ಮತ ಕೇಳುತ್ತಿದ್ದಾರೆ.
icon

(5 / 6)

ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌ ಅವರಿಗೆ ಅವರ ತಾಯಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರೇ ಮಹಾ ಬಲ. ಲಕ್ಷ್ಮಿ ಅವರು ಮಗನ ಪರವಾಗಿ ಎಡಬಿಡದ ಪ್ರಚಾರ ಕೈಗೊಂಡಿದ್ದಾರೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು