OCD in Kids: ಶಾಲಾ ಮಕ್ಕಳನ್ನು ಕಾಡುವ ಗೀಳು ಮನೋರೋಗ; ವಿದ್ಯಾರ್ಥಿಗಳ ಈ 5 ವರ್ತನೆಗಳು ಒಸಿಡಿ ಲಕ್ಷಣಗಳಾಗಿರಬಹುದು-mental health how ocd affects kids in school obsessive compulsive disorder therapist explains in kannada pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ocd In Kids: ಶಾಲಾ ಮಕ್ಕಳನ್ನು ಕಾಡುವ ಗೀಳು ಮನೋರೋಗ; ವಿದ್ಯಾರ್ಥಿಗಳ ಈ 5 ವರ್ತನೆಗಳು ಒಸಿಡಿ ಲಕ್ಷಣಗಳಾಗಿರಬಹುದು

OCD in Kids: ಶಾಲಾ ಮಕ್ಕಳನ್ನು ಕಾಡುವ ಗೀಳು ಮನೋರೋಗ; ವಿದ್ಯಾರ್ಥಿಗಳ ಈ 5 ವರ್ತನೆಗಳು ಒಸಿಡಿ ಲಕ್ಷಣಗಳಾಗಿರಬಹುದು

  • How OCD affects kids: ಶಾಲಾ ಮಕ್ಕಳಲ್ಲಿ ಕೆಲವೊಮ್ಮೆ ಗೀಳು ಮನೋರೋಗ ಕಾಡುತ್ತದೆ. ಒಂದು ವಸ್ತುವನ್ನು ಹಲವು ಬಾರಿ ಟಚ್‌ ಮಾಡುವುದು, ಇತರೆ ಮಕ್ಕಳನ್ನು ಅವಾಯ್ಡ್‌ ಮಾಡುವುದು ಇತ್ಯಾದಿಗಳು ಮಕ್ಕಳ ಒಸಿಡಿಯ ಪ್ರಮುಖ ಲಕ್ಷಣ. ಶಾಲೆಯಲ್ಲಿ ಮಕ್ಕಳಲ್ಲಿ ಒಸಿಡಿ ಕಾಡುವುದನ್ನು ಕೆಲವೊಂದು ವರ್ತನೆಗಳ ಅಧ್ಯಯನದ ಮೂಲಕ ಗುರುತಿಸಬಹುದು.

ಒಬೇಸಿವ್‌ ಕಾಂಪಲ್ಸಿವ್‌ ಡಿಸಾರ್ಡರ್‌ ಯಾರಿಗೆ ಬೇಕಾದರೂ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಾಡಬಹುದು. ಸಾಮಾನ್ಯವಾಗಿ 8-12 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಒಸಿಡಿ ಪರಿಣಾಮ ಹೆಚ್ಚು. ಕೆಲವು ಮಕ್ಕಳಲ್ಲಿ 4 ವರ್ಷ ವಯಸ್ಸಿನಲ್ಲಿಯೇ ಒಸಿಡಿ ಅಥವಾ ಗೀಳು ಮನೋರೋಗ ಲಕ್ಷಣ ಕಾಣಿಸಬಹುದು. "ಒಸಿಡಿ ಸ್ಥಿತಿಯಲ್ಲಿರುವ ಮಕ್ಕಳು ತಮ್ಮ ಪರಿಸ್ಥಿತಿಯನ್ನು ಗುರುತಿಸುವುದಿಲ್ಲ. ಆದರೆ, ಕೆಲವು ಮಕ್ಕಳು ನಾಚಿಕೆ ವ್ಯಕ್ತಪಡಿಸುವುದು, ಕಿರಿಕಿರಿ ಅನುಭವಿಸುವುದು ಇತ್ಯಾದಿ ವರ್ತನೆ ತೋರುತ್ತಾರೆ. ಕೆಲವೊಮ್ಮೆ ಮಕ್ಕಳ ಈ ಗೀಳು ಮನೋರೋಗ ಅಥವಾ ಒಸಿಡಿಯು ಟಿಐಸಿ ಡಿಸಾರ್ಡರ್‌, ಎಡಿಎಚ್‌ಡಿ ಅಥವಾ ಇತರೆ ಖಿನ್ನತೆ ತೊಂದರೆಗಳನ್ನು ಉಂಟು ಮಾಡುತ್ತದೆ" ಎಂದು ಥೆರಪಿಸ್ಟ್‌ ಮೈಥಲ್‌ ಈಸಗೈನ್‌ ಹೇಳಿದ್ದಾರೆ.
icon

(1 / 6)

ಒಬೇಸಿವ್‌ ಕಾಂಪಲ್ಸಿವ್‌ ಡಿಸಾರ್ಡರ್‌ ಯಾರಿಗೆ ಬೇಕಾದರೂ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಾಡಬಹುದು. ಸಾಮಾನ್ಯವಾಗಿ 8-12 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಒಸಿಡಿ ಪರಿಣಾಮ ಹೆಚ್ಚು. ಕೆಲವು ಮಕ್ಕಳಲ್ಲಿ 4 ವರ್ಷ ವಯಸ್ಸಿನಲ್ಲಿಯೇ ಒಸಿಡಿ ಅಥವಾ ಗೀಳು ಮನೋರೋಗ ಲಕ್ಷಣ ಕಾಣಿಸಬಹುದು. "ಒಸಿಡಿ ಸ್ಥಿತಿಯಲ್ಲಿರುವ ಮಕ್ಕಳು ತಮ್ಮ ಪರಿಸ್ಥಿತಿಯನ್ನು ಗುರುತಿಸುವುದಿಲ್ಲ. ಆದರೆ, ಕೆಲವು ಮಕ್ಕಳು ನಾಚಿಕೆ ವ್ಯಕ್ತಪಡಿಸುವುದು, ಕಿರಿಕಿರಿ ಅನುಭವಿಸುವುದು ಇತ್ಯಾದಿ ವರ್ತನೆ ತೋರುತ್ತಾರೆ. ಕೆಲವೊಮ್ಮೆ ಮಕ್ಕಳ ಈ ಗೀಳು ಮನೋರೋಗ ಅಥವಾ ಒಸಿಡಿಯು ಟಿಐಸಿ ಡಿಸಾರ್ಡರ್‌, ಎಡಿಎಚ್‌ಡಿ ಅಥವಾ ಇತರೆ ಖಿನ್ನತೆ ತೊಂದರೆಗಳನ್ನು ಉಂಟು ಮಾಡುತ್ತದೆ" ಎಂದು ಥೆರಪಿಸ್ಟ್‌ ಮೈಥಲ್‌ ಈಸಗೈನ್‌ ಹೇಳಿದ್ದಾರೆ.(Unsplash)

ಒಸಿಡಿಯು ಮಕ್ಕಳ ಪ್ರತಿನಿತ್ಯದ ದಿನಚರಿಗೆ ಅಡ್ಡಿಯಾಗಬಹುದು. ಕೆಲವೊಮ್ಮೆ ಶಾಲೆಯಲ್ಲಿ ಮಕ್ಕಳ ಒಸಿಡಿ ಲಕ್ಷಣಗಳನ್ನು ಗುರುತಿಸಬಹುದು. ಶಾಲೆಯ ಬೆಂಚ್‌ನಲ್ಲಿಯೇ ಆಗಾಗ ಹೋಗಿ ಕುಳಿತುಕೊಳ್ಳುವುದು, ಒಂದು ವಸ್ತುವನ್ನು ಪದೇಪದೇ ಮುಟ್ಟುವುದು ಒಸಿಡಿಯ ಕೆಲವು ಲಕ್ಷಣಗಳಾಗಿವೆ.
icon

(2 / 6)

ಒಸಿಡಿಯು ಮಕ್ಕಳ ಪ್ರತಿನಿತ್ಯದ ದಿನಚರಿಗೆ ಅಡ್ಡಿಯಾಗಬಹುದು. ಕೆಲವೊಮ್ಮೆ ಶಾಲೆಯಲ್ಲಿ ಮಕ್ಕಳ ಒಸಿಡಿ ಲಕ್ಷಣಗಳನ್ನು ಗುರುತಿಸಬಹುದು. ಶಾಲೆಯ ಬೆಂಚ್‌ನಲ್ಲಿಯೇ ಆಗಾಗ ಹೋಗಿ ಕುಳಿತುಕೊಳ್ಳುವುದು, ಒಂದು ವಸ್ತುವನ್ನು ಪದೇಪದೇ ಮುಟ್ಟುವುದು ಒಸಿಡಿಯ ಕೆಲವು ಲಕ್ಷಣಗಳಾಗಿವೆ.(Unsplash)

ಶಾಲೆಯಲ್ಲಿ ಮಕ್ಕಳು ಪದೇಪದೇ ಒಂದೇ ಪ್ರಶ್ನೆಯನ್ನು ಕೇಳುವುದು  ಕೂಡ ಒಸಿಡಿ ಲಕ್ಷಣವಾಗಿರಬಹುದು. ಒಂದು ಕೆಲಸದ ಪುನಾರವರ್ತನೆ ಮಾಡುವ ಲಕ್ಷಣ ಇದಾಗಿದೆ. 
icon

(3 / 6)

ಶಾಲೆಯಲ್ಲಿ ಮಕ್ಕಳು ಪದೇಪದೇ ಒಂದೇ ಪ್ರಶ್ನೆಯನ್ನು ಕೇಳುವುದು  ಕೂಡ ಒಸಿಡಿ ಲಕ್ಷಣವಾಗಿರಬಹುದು. ಒಂದು ಕೆಲಸದ ಪುನಾರವರ್ತನೆ ಮಾಡುವ ಲಕ್ಷಣ ಇದಾಗಿದೆ. (Unsplash)

ಒಂದೇ ವಸ್ತುವನ್ನು ಮತ್ತೆಮತ್ತೆ ಮುಟ್ಟುವುದು, ಒಂದೇ ಕೆಲಸವನ್ನು ಪದೇಪದೇ ಮಾಡುವುದು, ಯಾವುದಾದರೂ ಒಂದೇ ವಿಷಯಕ್ಕೆ ಅಂಟಿಕೊಂಡಿರುವುದು  ಕೂಡ ಒಪಿಡಿಯ ಲಕ್ಷಣವಾಗಿದೆ. 
icon

(4 / 6)

ಒಂದೇ ವಸ್ತುವನ್ನು ಮತ್ತೆಮತ್ತೆ ಮುಟ್ಟುವುದು, ಒಂದೇ ಕೆಲಸವನ್ನು ಪದೇಪದೇ ಮಾಡುವುದು, ಯಾವುದಾದರೂ ಒಂದೇ ವಿಷಯಕ್ಕೆ ಅಂಟಿಕೊಂಡಿರುವುದು  ಕೂಡ ಒಪಿಡಿಯ ಲಕ್ಷಣವಾಗಿದೆ. (Unsplash)

ಇತರೆ ವಿದ್ಯಾರ್ಥಿಗಳನ್ನು ಅವಾಯ್ಡ್‌ ಮಾಡುವುದು, ಶಾಲೆಯಲ್ಲಿ ಇತರೆ ಮಕ್ಕಳ ಸ್ನೇಹ ಸಂಪಾದಿಸಲು ವಿಫಲವಾಗುವುದು, ಟೀಚರ್‌ಗಳಿಂದ ದೂರ ಇರಲು ಬಯಸುವುದು ಕೂಡ ಒಸಿಡಿಯ ಲಕ್ಷಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.
icon

(5 / 6)

ಇತರೆ ವಿದ್ಯಾರ್ಥಿಗಳನ್ನು ಅವಾಯ್ಡ್‌ ಮಾಡುವುದು, ಶಾಲೆಯಲ್ಲಿ ಇತರೆ ಮಕ್ಕಳ ಸ್ನೇಹ ಸಂಪಾದಿಸಲು ವಿಫಲವಾಗುವುದು, ಟೀಚರ್‌ಗಳಿಂದ ದೂರ ಇರಲು ಬಯಸುವುದು ಕೂಡ ಒಸಿಡಿಯ ಲಕ್ಷಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.(Unsplash)

ಶಾಲೆಯಲ್ಲಿ ಮಕ್ಕಳು ಬಾತ್‌ರೂಂಗೆ ಹೋಗಲು ಹಿಂಜರಿಯುವುದು ಕೂಡ ಒಸಿಡಿ ಲಕ್ಷಣವಾಗಿರಬಹುದು. ಬಾತ್‌ರೂಂ ಅಥವಾ ಟಾಯ್ಲೆಟ್‌ ಕೊಳಕು ಪ್ರದೇಶ ಎಂಬ ಮನೋಭಾವ ಅವರಲ್ಲಿರುತ್ತದೆ.  ಇಂತಹ ಲಕ್ಷಣಗಳು ಕಂಡುಬಂದರೆ ಮಕ್ಕಳಿಗೆ ಮನಸ್ಸು ಪರಿವರ್ತನೆ ಮಾಡಿಸಲು ಪ್ರಯತ್ನಿಸಬಹುದು. ಗೀಳು ಮನೋರೋಗ ಹೆಚ್ಚಾದರೆ ತಜ್ಞರ ನೆರವು ಪಡೆಯುವುದು ಉತ್ತಮ. 
icon

(6 / 6)

ಶಾಲೆಯಲ್ಲಿ ಮಕ್ಕಳು ಬಾತ್‌ರೂಂಗೆ ಹೋಗಲು ಹಿಂಜರಿಯುವುದು ಕೂಡ ಒಸಿಡಿ ಲಕ್ಷಣವಾಗಿರಬಹುದು. ಬಾತ್‌ರೂಂ ಅಥವಾ ಟಾಯ್ಲೆಟ್‌ ಕೊಳಕು ಪ್ರದೇಶ ಎಂಬ ಮನೋಭಾವ ಅವರಲ್ಲಿರುತ್ತದೆ.  ಇಂತಹ ಲಕ್ಷಣಗಳು ಕಂಡುಬಂದರೆ ಮಕ್ಕಳಿಗೆ ಮನಸ್ಸು ಪರಿವರ್ತನೆ ಮಾಡಿಸಲು ಪ್ರಯತ್ನಿಸಬಹುದು. ಗೀಳು ಮನೋರೋಗ ಹೆಚ್ಚಾದರೆ ತಜ್ಞರ ನೆರವು ಪಡೆಯುವುದು ಉತ್ತಮ. (Unsplash)


ಇತರ ಗ್ಯಾಲರಿಗಳು