ಕನ್ನಡ ಸುದ್ದಿ  /  Photo Gallery  /  Mental Health What Hiding Anxiety Looks Like Expert Opinion Control Feelings Smiling Distraction Kannada News Rst

Anxiety: ಮುಖ ಮನಸ್ಸಿನ ಕನ್ನಡಿ; ಆತಂಕವನ್ನು ಮರೆಮಾಚಬೇಡಿ; ಆತ್ಮೀಯರೊಂದಿಗೆ ಹಂಚಿಕೊಂಡು ನಿರಾಳರಾಗಿ

  • Hiding Anxiety: ಆತಂಕ ಇಂದು ಹಲವರನ್ನು ಕಾಡುತ್ತಿರುವ ಮಾನಸಿಕ ಸಮಸ್ಯೆ. ಈ ಸಮಸ್ಯೆಗೆ ಕಾರಣಗಳು ಹಲವು. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಇದನ್ನು ಮುಚ್ಚಿಡಬೇಕಾಗುತ್ತದೆ. ನೋವು ಮರೆಮಾಚಲು ನಗುವುದರಿಂದ ಹಿಡಿದು ಚಡಪಡಿಕೆ, ವಿಚಲಿತವಾಗುವವರೆಗೆ ಜನರು ಆತಂಕವನ್ನು ಮರೆಮಾಚುವ ಕೆಲವು ವಿಧಾನಗಳು ಇಲ್ಲಿವೆ.

ಮನುಷ್ಯನಿಗೆ ಆತಂಕವಾಗುವುದು ಸಹಜ. ಹಾಗಂತ ಇದನ್ನ ಮರೆಮಾಚುವುದು ಕಷ್ಟದ ಸಂಗತಿ. ನಮ್ಮ ಮನದ ಭಾವನೆಗಳು, ದುಃಖ ಅಥವಾ ಆತಂಕವನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡಿದಾಗ ಅದನ್ನು ಮುಚ್ಚಿಡಲು ಯತ್ನಿಸುತ್ತೇವೆ. ಆದರೆ ಎಲ್ಲಾ ಸಂದರ್ಭದಲ್ಲೂ ಆತಂಕವನ್ನು ಮುಚ್ಚಿಡಲು ಸಾಧ್ಯವಿಲ್ಲ. ಮುಖ ಮನಸ್ಸಿನ ಕನ್ನಡಿ, ಮನಸ್ಸಿನ ಆತಂಕವು ಮುಖದಲ್ಲಿ ಕಾಣಿಸಬಹುದು. ಈ ಬಗ್ಗೆ ಮನೋಚಿಕಿತ್ಸಕ ಅಂಬರ್‌ ಸ್ಮಿತ್‌ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ʼಆತಂಕವನ್ನು ಮರೆಮಾಡುವುದು ಜೀವನದಲ್ಲಿ ಹಲವು ರೀತಿಯ ಪರಿಣಾಮಗಳಿಗೆ ಕಾರಣವಾಗಬಹುದು. ನಮ್ಮ ಆತಂಕ ಇತರರಿಗೆ ಕಾಣಿಸಬಾರದು ಎಂದು ಹರಸಾಹಸ ಪಡುತ್ತೇವೆ. ಆದರೆ ಆತಂಕದ ಲಕ್ಷಣಗಳ ಮೂಲವನ್ನು ತಿಳಿಯುವುದು ಮತ್ತು ನಿಭಾಯಿಸಲು ಮಾರ್ಗಗಳನ್ನು ಕಂಡುಕೊಳ್ಳುವುದು ಬಹಳ ಅವಶ್ಯವಾಗಿದೆ. ಆ ಮೂಲಕ ಆತಂಕ ನಿವಾರಣೆಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಇದರಿಂದ ಆತಂಕವನ್ನು ಮರೆ ಮಾಚುವುದನ್ನು ತಪ್ಪಿಸಬಹುದುʼ ಎನ್ನುತ್ತಾರೆ ಅವರು. ಅವರ ಪ್ರಕಾರ ಆತಂಕವನ್ನು ಮರೆಮಾಚಲು ಮನುಷ್ಯರ ಯತ್ನಿಸುವ ಕೆಲವು ಅಂಶಗಳ ಹೀಗಿವೆ. 
icon

(1 / 7)

ಮನುಷ್ಯನಿಗೆ ಆತಂಕವಾಗುವುದು ಸಹಜ. ಹಾಗಂತ ಇದನ್ನ ಮರೆಮಾಚುವುದು ಕಷ್ಟದ ಸಂಗತಿ. ನಮ್ಮ ಮನದ ಭಾವನೆಗಳು, ದುಃಖ ಅಥವಾ ಆತಂಕವನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡಿದಾಗ ಅದನ್ನು ಮುಚ್ಚಿಡಲು ಯತ್ನಿಸುತ್ತೇವೆ. ಆದರೆ ಎಲ್ಲಾ ಸಂದರ್ಭದಲ್ಲೂ ಆತಂಕವನ್ನು ಮುಚ್ಚಿಡಲು ಸಾಧ್ಯವಿಲ್ಲ. ಮುಖ ಮನಸ್ಸಿನ ಕನ್ನಡಿ, ಮನಸ್ಸಿನ ಆತಂಕವು ಮುಖದಲ್ಲಿ ಕಾಣಿಸಬಹುದು. ಈ ಬಗ್ಗೆ ಮನೋಚಿಕಿತ್ಸಕ ಅಂಬರ್‌ ಸ್ಮಿತ್‌ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ʼಆತಂಕವನ್ನು ಮರೆಮಾಡುವುದು ಜೀವನದಲ್ಲಿ ಹಲವು ರೀತಿಯ ಪರಿಣಾಮಗಳಿಗೆ ಕಾರಣವಾಗಬಹುದು. ನಮ್ಮ ಆತಂಕ ಇತರರಿಗೆ ಕಾಣಿಸಬಾರದು ಎಂದು ಹರಸಾಹಸ ಪಡುತ್ತೇವೆ. ಆದರೆ ಆತಂಕದ ಲಕ್ಷಣಗಳ ಮೂಲವನ್ನು ತಿಳಿಯುವುದು ಮತ್ತು ನಿಭಾಯಿಸಲು ಮಾರ್ಗಗಳನ್ನು ಕಂಡುಕೊಳ್ಳುವುದು ಬಹಳ ಅವಶ್ಯವಾಗಿದೆ. ಆ ಮೂಲಕ ಆತಂಕ ನಿವಾರಣೆಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಇದರಿಂದ ಆತಂಕವನ್ನು ಮರೆ ಮಾಚುವುದನ್ನು ತಪ್ಪಿಸಬಹುದುʼ ಎನ್ನುತ್ತಾರೆ ಅವರು. ಅವರ ಪ್ರಕಾರ ಆತಂಕವನ್ನು ಮರೆಮಾಚಲು ಮನುಷ್ಯರ ಯತ್ನಿಸುವ ಕೆಲವು ಅಂಶಗಳ ಹೀಗಿವೆ. (Unsplash)

ನಾವು ಹೊಂದಿರುವ ನೋವನ್ನು ಮರೆಮಾಚಲು ಮತ್ತು ಮುಗುಳ್ನಗಲು ಪ್ರಯತ್ನಿಸುವುದು ನಾವು ಹೊಂದಿರುವ ಆತಂಕದ ಭಾವನೆಗಳನ್ನು ಮರೆಮಾಚುವ ಒಂದು ಶ್ರೇಷ್ಠ ಮಾರ್ಗವಾಗಿದೆ.
icon

(2 / 7)

ನಾವು ಹೊಂದಿರುವ ನೋವನ್ನು ಮರೆಮಾಚಲು ಮತ್ತು ಮುಗುಳ್ನಗಲು ಪ್ರಯತ್ನಿಸುವುದು ನಾವು ಹೊಂದಿರುವ ಆತಂಕದ ಭಾವನೆಗಳನ್ನು ಮರೆಮಾಚುವ ಒಂದು ಶ್ರೇಷ್ಠ ಮಾರ್ಗವಾಗಿದೆ.(Unsplash)

ಸಾಮಾನ್ಯವಾಗಿ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಭಯಪಡುತ್ತೇವೆ ಮತ್ತು ಬದಲಿಗೆ ಮೌನವಾಗಿರಲು ಆಯ್ಕೆ ಮಾಡುತ್ತೇವೆ.
icon

(3 / 7)

ಸಾಮಾನ್ಯವಾಗಿ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಭಯಪಡುತ್ತೇವೆ ಮತ್ತು ಬದಲಿಗೆ ಮೌನವಾಗಿರಲು ಆಯ್ಕೆ ಮಾಡುತ್ತೇವೆ.(Unsplash)

ಆತಂಕದ ಛಾಯೆ ಕಾಣಿಸಿದಾಗ ದೇಹದ ನರಗಳು ಬಿಗಿದಂತಾಗುತ್ತದೆ. ಅಲ್ಲದೆ ಇದು ದೇಹದಲ್ಲಿ ಆತಂಕ ಛಾಯೆ ಮೂಡುವಂತೆ ಮಾಡುತ್ತದೆ. ಆಗ ಚಡಪಡಿಕೆ ಉಂಟಾಗುತ್ತದೆ. ಕೆಲವರು ಆ ಚಡಪಡಿಕೆಯನ್ನು ನಿಯಂತ್ರಿಸುತ್ತಾರೆ. 
icon

(4 / 7)

ಆತಂಕದ ಛಾಯೆ ಕಾಣಿಸಿದಾಗ ದೇಹದ ನರಗಳು ಬಿಗಿದಂತಾಗುತ್ತದೆ. ಅಲ್ಲದೆ ಇದು ದೇಹದಲ್ಲಿ ಆತಂಕ ಛಾಯೆ ಮೂಡುವಂತೆ ಮಾಡುತ್ತದೆ. ಆಗ ಚಡಪಡಿಕೆ ಉಂಟಾಗುತ್ತದೆ. ಕೆಲವರು ಆ ಚಡಪಡಿಕೆಯನ್ನು ನಿಯಂತ್ರಿಸುತ್ತಾರೆ. (Unsplash)

ಕೆಲವರು ಆತಂಕದ ಭಾವನೆಗಳಿಂದ ಜನರನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಅಲ್ಲದೆ ಜನರಿಂದ ದೂರ ಉಳಿಯಲು ಯತ್ನಿಸುತ್ತಾರೆ. 
icon

(5 / 7)

ಕೆಲವರು ಆತಂಕದ ಭಾವನೆಗಳಿಂದ ಜನರನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಅಲ್ಲದೆ ಜನರಿಂದ ದೂರ ಉಳಿಯಲು ಯತ್ನಿಸುತ್ತಾರೆ. (Unsplash)

ವ್ಯಾಕುಲತೆಯು ಆತಂಕದ ಮುಖವಾಡವಾಗಿದೆ. ಇದನ್ನು ನಾವು ಎದುರಿಸಲು ಕಷ್ಟವಾಗುತ್ತದೆ. ಆ ಕಾರಣಕ್ಕೆ ಅದನ್ನು ತೋರ್ಪಡಿಸದೇ ಕೆಲವರು ಕೆಲಸದಲ್ಲಿ ಬ್ಯುಸಿ ಇರುವಂತೆ ವರ್ತಿಸುತ್ತಾರೆ. 
icon

(6 / 7)

ವ್ಯಾಕುಲತೆಯು ಆತಂಕದ ಮುಖವಾಡವಾಗಿದೆ. ಇದನ್ನು ನಾವು ಎದುರಿಸಲು ಕಷ್ಟವಾಗುತ್ತದೆ. ಆ ಕಾರಣಕ್ಕೆ ಅದನ್ನು ತೋರ್ಪಡಿಸದೇ ಕೆಲವರು ಕೆಲಸದಲ್ಲಿ ಬ್ಯುಸಿ ಇರುವಂತೆ ವರ್ತಿಸುತ್ತಾರೆ. (Unsplash)

ಕೆಲವೊಮ್ಮೆ ನಮ್ಮ ಭಾವನೆಗಳು ಎಷ್ಟು ಕೆಟ್ಟದ್ದಿವೆ ಎಂಬುದನ್ನು ನಾವು ತೋರ್ಪಡಿಸಲು ಅಥವಾ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತೇವೆ. ಆಗ ನಮಗೆ ಇದು ಇನ್ನಷ್ಟು ತೊಂದರೆ ಉಂಟು ಮಾಡಬಹುದು. ನಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. 
icon

(7 / 7)

ಕೆಲವೊಮ್ಮೆ ನಮ್ಮ ಭಾವನೆಗಳು ಎಷ್ಟು ಕೆಟ್ಟದ್ದಿವೆ ಎಂಬುದನ್ನು ನಾವು ತೋರ್ಪಡಿಸಲು ಅಥವಾ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತೇವೆ. ಆಗ ನಮಗೆ ಇದು ಇನ್ನಷ್ಟು ತೊಂದರೆ ಉಂಟು ಮಾಡಬಹುದು. ನಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. (Unsplash)


ಇತರ ಗ್ಯಾಲರಿಗಳು