ಬೆರಕೆ ಸೊಪ್ಪು, ಹಕ್ಕರಿಕಿ ಸೊಪ್ಪು, ಸಕತ್ ಸೊಪ್ಪು, ಮೈಸೂರಿನ ಸೊಪ್ಪು ಮೇಳದಲ್ಲಿ ಇನ್ನೂ ಏನೆಲ್ಲಾ ಇತ್ತು, ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆರಕೆ ಸೊಪ್ಪು, ಹಕ್ಕರಿಕಿ ಸೊಪ್ಪು, ಸಕತ್ ಸೊಪ್ಪು, ಮೈಸೂರಿನ ಸೊಪ್ಪು ಮೇಳದಲ್ಲಿ ಇನ್ನೂ ಏನೆಲ್ಲಾ ಇತ್ತು, ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ

ಬೆರಕೆ ಸೊಪ್ಪು, ಹಕ್ಕರಿಕಿ ಸೊಪ್ಪು, ಸಕತ್ ಸೊಪ್ಪು, ಮೈಸೂರಿನ ಸೊಪ್ಪು ಮೇಳದಲ್ಲಿ ಇನ್ನೂ ಏನೆಲ್ಲಾ ಇತ್ತು, ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ

  • ಮೈಸೂರಿನಲ್ಲಿ ಎರಡು ದಿನಗಳ ಸೊಪ್ಪು ಮೇಳ ನಡೆಯುತ್ತಿದೆ. ಈ ಮೇಳದ ಮೂಲಕ ರಾಜ್ಯದ ವಿವಿಧ ಭಾಗದಲ್ಲಿ ಸಿಗುವ ಸೊಪ್ಪುಗಳೆಲ್ಲವೂ ಒಂದೇ ಸೂರಿನಡಿ ಸಿಗುತ್ತಿವೆ. ನೀವು ಹೆಸರು ಕೂಡ ಕೇಳಿರದ ಸೊಪ್ಪುಗಳನ್ನು ಈ ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ನಡೆಯುತ್ತಿರುವ ಸೊಪ್ಪು ಮೇಳದ ಫೋಟೊಗಳನ್ನು ನೀವು ಕಣ್ತುಂಬಿಕೊಳ್ಳಿ.

ಮೈಸೂರಿನಲ್ಲಿ ನಡೆಯುವ ಎರಡು ದಿನಗಳ ಸೊಪ್ಪು ಮೇಳಕ್ಕೆ ನಿನ್ನೆ (ಸೆಪ್ಟೆಂಬರ್ 21) ಚಾಲನೆ ದೊರೆತಿದೆ. ಇಂದು (ಸೆಪ್ಟೆಂಬರ್‌ 22) ಕೂಡ ಸೊಪ್ಪು ಮೇಳ ಇರಲಿದೆ. ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು ಕೇಳಿದ್ದ ನಮಗೆ ಈ ಸೊಪ್ಪು ಮೇಳದಲ್ಲಿ ಸಿಗುವ ವಿವಿಧ ರೀತಿಯ ಸೊಪ್ಪುಗಳ ಹೆಸರು ಕೇಳಿದ್ರೆ ಅಚ್ಚರಿ ಆಗೋದು ಖಂಡಿತ. ಈ ಸೊಪ್ಪುಗಳು ರುಚಿಗಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಸೊಪ್ಪು ಮೇಳದಲ್ಲಿ ಏನೆಲ್ಲಾ ಇತ್ತು ಎಂಬುದನ್ನು ನೀವು ಈ ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ. 
icon

(1 / 8)

ಮೈಸೂರಿನಲ್ಲಿ ನಡೆಯುವ ಎರಡು ದಿನಗಳ ಸೊಪ್ಪು ಮೇಳಕ್ಕೆ ನಿನ್ನೆ (ಸೆಪ್ಟೆಂಬರ್ 21) ಚಾಲನೆ ದೊರೆತಿದೆ. ಇಂದು (ಸೆಪ್ಟೆಂಬರ್‌ 22) ಕೂಡ ಸೊಪ್ಪು ಮೇಳ ಇರಲಿದೆ. ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು ಕೇಳಿದ್ದ ನಮಗೆ ಈ ಸೊಪ್ಪು ಮೇಳದಲ್ಲಿ ಸಿಗುವ ವಿವಿಧ ರೀತಿಯ ಸೊಪ್ಪುಗಳ ಹೆಸರು ಕೇಳಿದ್ರೆ ಅಚ್ಚರಿ ಆಗೋದು ಖಂಡಿತ. ಈ ಸೊಪ್ಪುಗಳು ರುಚಿಗಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಸೊಪ್ಪು ಮೇಳದಲ್ಲಿ ಏನೆಲ್ಲಾ ಇತ್ತು ಎಂಬುದನ್ನು ನೀವು ಈ ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ. ((PC: Krishna Prasad Govindaiah/Facebook))

ರಾಜ್ಯ ವಿವಿಧ ಭಾಗಗಳಿಂದ ಬಂದ ಜನರು ಇಲ್ಲಿ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ಹೆಗ್ಗಡದೇವನ ಕೋಟೆ, ಧಾರವಾಡ, ಕನಕಪುರ, ಶಿರಸಿ ಮೊದಲಾದ ಕಡೆಗಳಿಂದ ಮಹಿಳೆಯರು ಸೊಪ್ಪು ಮಾರಲು ಇಲ್ಲಿಗೆ ಬಂದಿದ್ದರು. 
icon

(2 / 8)

ನೂರಕ್ಕೂ ಹೆಚ್ಚಿನ ಸೊಪ್ಪು ಪ್ರದರ್ಶನಕ್ಕೆ ಬಂದಿತ್ತು. ಮೇಳದ ವಿಷೇಷ ಎಂದರೆ ಅರಿಸಿನ ಎಲೆಯ ಐಸ್ ಕ್ರೀಂ ಮತ್ತು ಮಿಂಟ್ ಐಸ್ ಕ್ರೀಂ. ಇದರೊಂದಿಗೆ ಮಲೆನಾಡಿನ ಖಾದ್ಯಗಳು ಸೊಪ್ಪು ಮೇಳಕ್ಕೆ ಬಂದವರ ಹೊಟ್ಟೆ ತಣಿಸಿತ್ತು. 
icon

(3 / 8)

ಹೆಗ್ಗಡದೇವನಕೋಟೆ  ರೈತ ಮಹಿಳೆಯರು ಮಾಡಿದ 'ಬೆರಕೆ ಸೊಪ್ಪು‌' ಸಾಂಬಾರ್ ರಾಗಿ ಮುದ್ದೆ ಮಾರಾಟ ಮಾಡಿದ್ದರೆ, ಧಾರವಾಡದ ಮಹಿಳಾ ಸಂಘದವರು ತಂದಿದ್ದ 'ಹಕ್ಕರಕಿ ಸೊಪ್ಪು' ತಂದಿದ್ದರು. ಈ ಮೇಳದಲ್ಲಿ ಸಕತ್ ಸೊಪ್ಪು ಹತ್ತಾರು ಸೊಪ್ಪಿನ ಅಡುಗೆ ಮಾಡಿತ್ತು.‌
icon

(4 / 8)

ಮೇಳದಲ್ಲಿ ಸೊಪ್ಪಿನ‌ ಕೃಷಿಯ ತರಬೇತಿ ಕಾರ್ಯಕ್ರಮ ಇತ್ತು. 40ಕ್ಕೂ‌ ಹೆಚ್ಚಿನ ರೈತರು ಸಾವಯವ ಸೊಪ್ಪು ಬೆಳೆಸಲು ಆಸಕ್ತಿ ತೋರಿ ಮುಂದೆ ಬಂದರು. 
icon

(5 / 8)

ಸಹಜ ಸೀಡ್ಸ ಮಳಿಗೆಯಲ್ಲಿ ಸೊಪ್ಪಿನ‌ ಗಿಡವೊಂದನ್ನು ಪ್ರದರ್ಶಕ್ಕೆ ಇಟ್ಟಿದ್ದರು. ಅದರ ಎಲೆ ಮುಟ್ಟಿದರೆ ಒಣ ಮೀನಿನ ಘಾಟು ವಾಸನೆ. ಇದನ್ನು ಕಂಡು ಗ್ರಾಹಕರು ಅಚ್ಚರಿಪಟ್ಟರು.
icon

(6 / 8)

ಇಂದು (ಸೆಪ್ಟೆಂಬರ್ 22) ಕೂಡ ಸೊಪ್ಪು ಮೇಳ ನಡೆಯುತ್ತಿದ್ದು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಹಿರಿಯರಿಗಾಗಿ ಸೊಪ್ಪಿನ‌ ಅಡುಗೆ ಸ್ಪರ್ಧೆ ಇದೆ 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು