Karnataka News Live December 22, 2024 : ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರ ಕ್ಷಮೆ ಕೋರಿದ ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 22 Dec 202403:04 PM IST
Mandya Sahitya Sammelana: ಕರ್ನಾಟಕದಲ್ಲಿ ತಾವು ಸಿಎಂ ಆಗಿದ್ದಾಗ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ ವಿಚಾರವಾಗಿ ಈಗ ಕೇಂದ್ರ ಸಚಿವರಾಗಿರುವ ಎಚ್‌ಡಿಕುಮಾರ ಸ್ವಾಮಿ ಕ್ಷಮೆ ಕೋರಿದ ಪ್ರಸಂಗ ನಡೆಯಿತು.
Sun, 22 Dec 202402:29 PM IST
- Mandya Sahitya Sammelana: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿತು. ಕೆಲ ವಿವಾದ, ಗೊಂದಲಗಳ ನಡುವೆಯೂ ಕನ್ನಡ ಹಬ್ಬ ಕರುನಾಡ ಮನಸುಗಳನ್ನು ಬೆಸೆಯುವ ಕೆಲಸವನ್ನಂತೂ ಮಾಡಿತು.
Sun, 22 Dec 202401:42 PM IST
- ಕ್ರಿಸ್‌ಮಸ್ ಹಬ್ಬ ಮತ್ತು ರಜೆಯ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮಂಗಳೂರು ನಡುವೆ ನೈಋತ್ಯ ರೈಲ್ವೆ ಹೆಚ್ಚುವರಿ ರೈಲನ್ನು ಓಡಿಸುತ್ತಿದೆ. ಹಬ್ಬದ ಸಮಯದಲ್ಲಿ ಹೆಚ್ಚುವರಿ ಟಿಕೆಟ್ ಬೇಡಿಕೆ ಇರುತ್ತದೆ. ಹೆಚ್ಚುವರಿ ಪ್ರಯಾಣಿಕರನ್ನು ನಿಭಾಯಿಸಲು ರೈಲ್ವೆಯು ತಲಾ ಎರಡು ಟ್ರಿಪ್ ಹೆಚ್ಚುವರಿ ರೈಲು ಬಿಟ್ಟಿದೆ.
Sun, 22 Dec 202412:30 PM IST
- ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ಹೇಗಿರಬೇಕು ಎನ್ನುವ ಕುರಿತು ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಜ್ಞರು ವಿಸ್ತೃತವಾಗಿ ಚರ್ಚಿಸಿದರು.
Sun, 22 Dec 202412:13 PM IST
CT Ravi: ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣ ಗಂಭೀರವಾಗಿದೆ. ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ. ಇತ್ತೀಚಿನ 7 ಮುಖ್ಯ ವಿದ್ಯಮಾನ ವಿವರ ಇಲ್ಲಿದೆ.
Sun, 22 Dec 202411:47 AM IST
- ಮಹಾತ್ಮ ಗಾಂಧೀಜಿ ಅತ್ಯಂತ ಶ್ರೇಷ್ಠ ವ್ಯಕ್ತಿ. ಇಂತಹ ಅನೇಕ ಮಹನೀಯರ ಹೋರಾಟದ ಫಲದಿಂದ ಬಂದ ಸ್ವಾತಂತ್ರ್ಯ ದುರ್ಬಳಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಷಾದಿಸಿದ್ದಾರೆ.
Sun, 22 Dec 202411:40 AM IST
- Mandya Sahitya Sammelana: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ನೇಮಕವೂ ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ.
Sun, 22 Dec 202411:15 AM IST
- Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರ ದೇಶದಲ್ಲಿರುವ ನೆಲೆಸಿರುವ ಕನ್ನಡಿಗರು ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತು ಹಲವು ಅಭಿಪ್ರಾಯ ವ್ಯಕ್ತಪಡಿಸಿದರು.
Sun, 22 Dec 202411:08 AM IST
- ಹೊಲವನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸುವುದಾಗಿ ಸೇಲ್ ಡೀಡ್ ಮಾಡಿಸಿ ಹಣ ಕಟ್ಟಿಸಿಕೊಂಡು, ವಾಪಸ್ ಹೊಲ ಕೇಳಿದರೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Sun, 22 Dec 202410:32 AM IST
Dharwad Power Cut: ಧಾರವಾಡದ 110 ಕೆವಿ ಯುಎಎಸ್ (ಕೃಷಿ ವಿಶ್ವವಿದ್ಯಾಲಯ ಧಾರವಾಡ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 23 ರಂದು 3ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ, ಧಾರವಾಡದ ವಿವಿಧ ಪ್ರದೇಶಗಳಲ್ಲಿ ಡಿಸೆಂಬರ್ 23 ರಂದು ಪವರ್‌ಕಟ್ ಜಾರಿಯಲ್ಲಿರಲಿದೆ. ಎಲ್ಲೆಲ್ಲಿ ಎಷ್ಟು ಹೊತ್ತು ಎಂಬಿತ್ಯಾದಿ ವಿವರ ಇಲ್ಲಿದೆ.
Sun, 22 Dec 202409:24 AM IST
- Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಊಟದ ಮೆನುವಿನಲ್ಲಿ ಭಾನುವಾರ ಸಂಜೆ ಮೊಟ್ಟೆಯೂ ಸೇರಲಿದೆ. ಭಾರೀ ವಿರೋಧಕ್ಕೆ ಮಣಿದ ಮಂಡ್ಯ ಜಿಲ್ಲಾಡಳಿತ ಮೊಟ್ಟೆ ವಿತರಿಸಲು ಮುಂದಾಗಿದೆ
Sun, 22 Dec 202408:54 AM IST
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ನಡುವೆ ಕೆಎಸ್ ಕಲ್ಯಾಣ ಕುಮಾರ್ ಅವರ ಸುದ್ದಿಪತ್ರಿಕೆಗಳ ಸಂಗ್ರಹ ನೋಡುಗರನ್ನು ನಿಬ್ಬೆರಗು ಮಾಡುವಂತೆ ಇತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹಳ್ಳಿಯೊಂದರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರ ಹವ್ಯಾಸದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Sun, 22 Dec 202408:27 AM IST
- ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯವಸ್ಥೆಗಳಷ್ಟೇ ಅವ್ಯವಸ್ಥೆಯೂ ಇತ್ತು. ಮೊಬೈಲ್ ನೆಟ್ವರ್ಕ್ ಇಲ್ಲದೇ ಜನರು ಪರದಾಡಿದ್ರು. ಕೊಂಚ ಮಳೆ ಹನಿಸಿದ್ದೇ ತಡ ಸಮ್ಮೇಳನ ನಡೆಯುತ್ತಿದ್ದ ಜಾಗವು ಕೆಸರು ಗದ್ದೆಯಂತಾಗಿತ್ತು. ಟಾಯ್ಲೆಟ್‌ಗಳ ಪರಿಸ್ಥಿತಿಯಂತೂ ಕೇಳೋದೇ ಬೇಡವಾಗಿತ್ತು. ಕುಡಿಯುವ ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಿತ್ತು.
Sun, 22 Dec 202406:35 AM IST
- ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಸಾಹಿತ್ಯ ಸಮ್ಮೇಳನವೂ ಪುಸ್ತಕ ಮಾರಾಟಗಾರರಿಗೆ ಮಾತ್ರವಲ್ಲ, ವಿವಿಧ ಉತ್ಪನ್ನಗಳ ಮಾರಾಟಗಾರರಿಗೂ ವೇದಿಕೆಯಾಗಿತ್ತು. ರಾಜ್ಯ, ದೇಶದ ವಿವಿಧ ಭಾಗಗಳಿಂದ ಬಂದ ಮಾರಾಟಗಾರರು ಇಲ್ಲಿದ್ದರು. ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಕುರಿ ಉಣ್ಣೆಯ ಉತ್ಪನ್ನಗಳ ಮಾರಾಟಗಾರೊಬ್ಬರು ಗಮನ ಸೆಳೆದರು.
Sun, 22 Dec 202405:43 AM IST
- ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 100ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿವೆ. ಕನ್ನಡದ ಹಲವು ಲೇಖಕರ ಪುಸ್ತಕಗಳು ಇಲ್ಲಿ ಕಾಣ ಸಿಗುತ್ತವೆ. ಪುಸ್ತಕ ಮಳಿಗೆಗಳ ಮುಂದೆ ಜನ ಕಿಕ್ಕಿರಿದು ನಿಂತಿರುತ್ತಾರೆ. ಆದರೆ ಮಾರಾಟಗಾರರನ್ನು ಮಾತನಾಡಿಸಿದರೆ ಸಿಕ್ಕ ವಾಸ್ತವ ಅಂಶವೇ ಬೇರೆ.
Sun, 22 Dec 202405:07 AM IST
Kannada Sahitya Sammelana: ಕರ್ನಾಟಕದ ಗಡಿನಾಡು ಪ್ರದೇಶವಾದ ಬಳ್ಳಾರಿಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಐತಿಹಾಸಿಕ ಮಹತ್ವವಿರುವ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
Sun, 22 Dec 202404:54 AM IST
Chrysanthemum: ಸೇವಂತಿಗೆ ಪಕೋಡಾ ವೈರಲ್ ಮಾಡೋದಕ್ಕಾಗಿಯೇ ಮಾಡಿದ್ದಾ ಅಥವಾ ತಿನ್ನೋದಕ್ಕಾ, ಸಂದೇಹವಂತೂ ಹಲವರಲ್ಲಿದೆ. ಸೇವಂತಿಗೆ ಪಕೋಡಾ ವಿಡಿಯೋ ನೋಡಿದ ಕೂಡಲೇ ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು ಎಂಬ ಪ್ರತಿಕ್ರಿಯೆ ವ್ಯಕ್ತವಾಗಿರೋದು. ಈ ವೈರಲ್ ವಿಡಿಯೋಕ್ಕೆ ಸಕತ್ ಪ್ರತಿಕ್ರಿಯೆ ಇದ್ದು, ಅದರ ವಿವರ ಇಲ್ಲಿದೆ.
Sun, 22 Dec 202403:35 AM IST
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳ ನಡುವೆ ಮಿಥಿಕ್ ಸೊಸೈಟಿಯ ಅಕ್ಷರ ಭಂಡಾರ ಸಾಕಷ್ಟು ಜನರ ಗಮನ ಸೆಳೆದಿದೆ. ಇಂದಿನ ಕನ್ನಡದ ಮೂಲಕ ಅಂದಿನ ಕನ್ನಡ (ಪ್ರಾಚೀನ ಕನ್ನಡ ಲಿಪಿ) ಓದುವ ಖುಷಿ ನೀಡುವ "ಅಕ್ಷರ ಭಂಡಾರ"ದ ಕುರಿತು ಇಲ್ಲಿ ವಿವರ ನೀಡಲಾಗಿದೆ.
Sun, 22 Dec 202403:30 AM IST
- Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮೇಳದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಶಿಷ್ಟ ಪುಸ್ತಕಗಳಿಗೆ ಬೇಡಿಕೆ ಅಧಿಕ. ಕಾರಣವಾದರೂ ಏನು.
Sun, 22 Dec 202402:30 AM IST
- Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಚಳಿವಳಿಗಳು, ಅಸ್ಮಿತೆಯ ಕುರಿತು ಚರ್ಚೆ ನಡೆದು ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಎಂದಿಗೂ ಆಗದಿರಲಿ ಎನ್ನುವ ಒತ್ತಾಯವೂ ಕೇಳಿ ಬಂದಿತು.
Sun, 22 Dec 202402:14 AM IST
- ಕರ್ನಾಟಕದಲ್ಲಿನ ಅರಾಜಕತೆಗೆ ಸಂಬಂಧಿಸಿದ ವಿಷಯಕ್ಕೆ ವಿಧಾನ ಪರಿಷತ್‌ನ ಅರ್ಧದಷ್ಟು ಸದಸ್ಯರು ಬಾಯಿಗೆ ಬೀಗ ಹಾಕಿಕೊಂಡಿರುವ ಕಾರಣ ಪರಿಷತ್‌ನ ಅಗತ್ಯವೇನಿದೆ? ಯಾಕೆ ಎಂಬುದರ ಕುರಿತು ರಾಜೀವ ಹೆಗಡೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿದೆ ವಿವರ.
Sun, 22 Dec 202401:30 AM IST
- Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಏನೇನು ಗೋಷ್ಠಿ, ಚಟುವಟಿಕೆಗಳಿವೆ. ಇಲ್ಲಿದೆ ವಿವರ.
Sun, 22 Dec 202401:08 AM IST
- ಕರ್ನಾಟಕದಲ್ಲಿ ಮುಂದಿನ ಮೂರ್ನಾಲ್ಕು ದಿನ ಯಾವುದೇ ರೀತಿಯ ಮಳೆಯ ಮುನ್ಸೂಚನೆ ಇಲ್ಲ. ಆದರೆ ಡಿಸೆಂಬರ್ 26ಕ್ಕೆ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ 13 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಡಿಸೆಂಬರ್ 22ರ ಭಾನುವಾರದ ಹವಾಮಾನ ವರದಿ ಇಲ್ಲಿದೆ.