Manu Bhaker Net Worth: ಒಲಿಂಪಿಕ್ಸ್ನಲ್ಲಿ 2 ಪದಕ ವಿಜೇತೆ ಮನು ಭಾಕರ್ ಎಷ್ಟು ಕೋಟಿಗೆ ಒಡತಿ?
- Manu Bhaker Net Worth: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪರ ಎರಡು ಪದಕ ಗೆದ್ದಿರುವ ಮನು ಭಾಕರ್ ಅವರು ಎಷ್ಟು ಕೋಟಿಗೆ ಒಡತಿಯಾಗಿದ್ದಾರೆ. ಇಲ್ಲಿದೆ ವಿವರ.
- Manu Bhaker Net Worth: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪರ ಎರಡು ಪದಕ ಗೆದ್ದಿರುವ ಮನು ಭಾಕರ್ ಅವರು ಎಷ್ಟು ಕೋಟಿಗೆ ಒಡತಿಯಾಗಿದ್ದಾರೆ. ಇಲ್ಲಿದೆ ವಿವರ.
(1 / 5)
22 ವರ್ಷದ ಮನು ಭಾಕರ್ ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಕಂಚಿಗೆ ಮುತ್ತಿಕ್ಕಿದ್ದಾರೆ. ಮನು ಅವರಿಗಿಂತ ಮೊದಲು ಒಲಿಂಪಿಕ್ಸ್ನಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಬಿಂದ್ರಾ, ಗಗನ್ ನಾರಂಗ್ ಮತ್ತು ವಿಜಯ್ ಕುಮಾರ್ ಪದಕ ಗೆದ್ದಿದ್ದರು.
(2 / 5)
ಶೂಟಿಂಗ್ ಅನ್ನು ವೃತ್ತಿಯಾಗಿ ಆರಿಸಿಕೊಂಡ ಶಾರ್ಪ್ ಶೂಟರ್ ಮನು ಭಾಕರ್ ನಿವ್ವಳ ಮೌಲ್ಯ 12 ಕೋಟಿ ರೂ.ಗಳಷ್ಟಿದೆ ಎಂದು ಮಾಧ್ಯಮ ವರದಿ ಮಾಡಿವೆ. ಮನು ಭಾಕರ್ಗೆ ತನ್ನ ವೃತ್ತಿಜೀವನದ ಆರಂಭದಲ್ಲಿ 1.5 ಲಕ್ಷ ರೂ.ಗಳನ್ನು ಅವರ ತಂದೆ ಖರ್ಚು ಮಾಡಿದ್ದರು. ಆದರೀಗ ಅವರ ನಿವ್ವಳ ಮೌಲ್ಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.(AFP)
(3 / 5)
2018ರ ಯೂತ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮನು ಭಾಕರ್ ಅವರಿಗೆ ಹರಿಯಾಣ ಸರ್ಕಾರ 2 ಕೋಟಿ ರೂಪಾಯಿ ನೀಡುವುದಾಗಿ ಹೇಳಿತ್ತು. ಆದರೆ, ಅದು ಆಶ್ವಾಸನೆಯಾಗಿಯೇ ಉಳಿದುಕೊಂಡಿತ್ತು. ಈ ಬಗ್ಗೆ ಅವರು ಟ್ವೀಟ್ ಮಾಡಿ ಬೇಸರವನ್ನೂ ಹೊರಹಾಕಿದ್ದರು. (Team India-X)
(4 / 5)
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಮನು ಭಾಕರ್ ಅವರ ತರಬೇತಿಗೆ ಕೇಂದ್ರ ಸರ್ಕಾರವು 2 ಕೋಟಿ ರೂ ಖರ್ಚು ಮಾಡಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಬಹಿರಂಗಪಡಿಸಿದ್ದಾರೆ. ಒಲಿಂಪಿಕ್ಸ್ಗೂ ಮುನ್ನ ತರಬೇತಿಗಾಗಿ ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ಗೆ ಕಳುಹಿಸಿಕೊಡಲಾಗಿತ್ತು. ಅವರ ಆಯ್ಕೆಯ ಕೋಚ್ ಅನ್ನೂ ನೇಮಿಸಲಾಗಿತ್ತು.(PTI)
ಇತರ ಗ್ಯಾಲರಿಗಳು