Cleanliness drive: ಮುಂಬೈನ ಕಿರಿದಾದ ಓಣಿಯ ಸ್ವಚ್ಛತೆಗೆ ಬೃಹತ್ ಅಭಿಯಾನ; ಒಂದು ತಿಂಗಳಲ್ಲಿ 1000 ಮನೆಯ ಗಲ್ಲಿ ಕ್ಲೀನಿಂಗ್
ವಾಣಿಜ್ಯ ನಗರಿ ಮುಂಬೈನ ಗ್ರಾಂಟ್ ರೋಡ್ ಪ್ರದೇಶದ ಕಿರಿದಾದ ಓಣಿಗಳನ್ನು ಸ್ವಚ್ಛಗೊಳಿಸಲು ಬೃಹತ್ ಮುಂಬೈ ಮಹಾನಗರ ಪಾಲಿಕೆ ವಿಶೇಷ ಅಭಿಯಾನವನ್ನು ಆರಂಭಿಸಿದೆ. ನಗರದ 'ಡಿ ವಾರ್ಡ್'ನ ಘನತ್ಯಾಜ್ಯ ನಿರ್ವಹಣೆ ವಿಭಾಗವು ಎರಡು ಕಟ್ಟಡಗಳ ನಡುವಿನ ಕಿರಿದಾದ ಮಾರ್ಗಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದೆ. ಡಿಸೆಂಬರ್ ಅಂತ್ಯದವರೆಗೆ ನಡೆಯುವ ಈ ಅಭಿಯಾನದಲ್ಲಿ, ಸುಮಾರು 1000 ಮನೆಯ ನಡುವಿನ ಓಣಿಗಳನ್ನು ಸ್ವಚ್ಛತಾ ಕಾರ್ಮಿಕರು ಸ್ವಚ್ಛಗೊಳಿಸಲಿದ್ದಾರೆ. ಈ ಪ್ರದೇಶಕ್ಕೆ 'ಹೆಚ್‌ಟಿ' ಛಾಯಾಗ್ರಾಹಕ ಸತೀಶ್ ಬಾಟೆ ಭೇಟಿ ನೀಡಿದ್ದರು. ಈ ವೇಳೆ ಅವರು ಕ್ಲಿಕ್ಕಿಸಿದ ಫೋಟೋಗಳು ಹೀಗಿವೆ.
(1 / 9)
ನವೆಂಬರ್ 25ರಂದು ಮುಂಬೈನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನದ ಸಂದರ್ಭದಲ್ಲಿ ವಾರ್ಡ್‌ನ ಘನತ್ಯಾಜ್ಯ ನಿರ್ವಹಣಾ ತಂಡದ ಕಾರ್ಯಕರ್ತರೊಬ್ಬರು ಕೆಲಸದ ವೇಳೆ ಕಾಣಿಸಿಕೊಂಡಿದ್ದು ಹೀಗೆ. ಹಳೆಯ ಕಟ್ಟಡಗಳ ನಡುವಿನ ಓಣಿಗಳನ್ನು ಅಭಿಯಾನದಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ. ಇವುಗಳಿಗೆ ಸೆಸ್ಡ್ ಕಟ್ಟಡಗಳು ಎಂದು ಹೇಳಲಾಗುತ್ತಿದ್ದು, ಹಳೆಯ ಅಥವಾ ಶಿಥಿಲಗೊಂಡ ಕಟ್ಟಡಗಳಾಗಿವೆ.(Satish Bate / HT Photo)
(2 / 9)
ಮುಂಬರುವ ಕೆಲವು ವಾರಗಳಲ್ಲಿ D ವಾರ್ಡ್‌ನ ಘನತ್ಯಾಜ್ಯ ನಿರ್ವಹಣಾ ತಂಡದ ಸಿಬ್ಬಂದಿ ಸರಿಸುಮಾರು 1000 ಮನೆಯ ಗಲ್ಲಿಗಳನ್ನು ಸ್ವಚ್ಛಗೊಳಿಸಲಿದ್ದಾರೆ.(Satish Bate / HT Photo)
(3 / 9)
“ನಿಯಮದ ಪ್ರಕಾರ, ಮುಂಬೈ ಮಹಾನಗರ ಪಾಲಿಕೆ ಈ ಓಣಿಗಳನ್ನು ಸ್ವಚ್ಛಗೊಳಿಸಬೇಕು. ವಾರ್ಡ್‌ನ ಎಲ್ಲಾ ಭಾಗಗಳ ಮನೆಯ ಗಲ್ಲಿಗಳಲ್ಲಿ ಮೀಸಲು ಕ್ಲೀನರ್‌ಗಳಿದ್ದಾರೆ. ಆದಾಗ್ಯೂ, ಈ ಬಾರಿ ಈ ಲೇನ್‌ಗಳನ್ನು ಸ್ವಚ್ಛಗೊಳಿಸಲು ನಾವು ವಾರ್ಡ್‌ನ ಎಲ್ಲಾ 146 ಮನೆಗಳ ಗಲ್ಲಿ ಕ್ಲೀನರ್‌ಗಳನ್ನು ಒಟ್ಟುಗೂಡಿಸಿದ್ದೇವೆ,” ಎಂದು ಡಿ ವಾರ್ಡ್ ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಎಂಜಿನಿಯರ್ ಶ್ರೀಕಾಂತ್ ರಾಥೋಡ್ ಹೆಚ್‌ಟಿಗೆ ತಿಳಿಸಿದ್ದಾರೆ.(Satish Bate / HT Photo)
(4 / 9)
ದೈನಂದಿನವಾಗಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಮಿಕರು ಸರಾಸರಿಯಾಗಿ ಸುಮಾರು ಐದು ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. (Satish Bate / HT Photo)
(5 / 9)
ನವೆಂಬರ್ 25ರಂದು ಮುಂಬೈನಲ್ಲಿ ನಡೆದ ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ 41 ವರ್ಷದ ಲಕ್ಷ್ಮಿ ಕುಂಚಿಕೋರ್ವೆ ಪಾಲ್ಗೊಂಡರು.(Satish Bate / HT Photo)
(7 / 9)
ಸ್ವಚ್ಛತಾ ಅಭಿಯಾನವನ್ನು ಪ್ರಾಥಮಿಕವಾಗಿ ಮುಂಬೈನ ಬಿ, ಸಿ ಮತ್ತು ಡಿ ವಾರ್ಡ್‌ಗಳ ಓಣಿಗಳಲ್ಲಿ ನಡೆಸಲಾಗುತ್ತಿದೆ.(Satish Bate / HT Photo)
ಇತರ ಗ್ಯಾಲರಿಗಳು