CPIM Political Conference: ಬಾಗೇಪಲ್ಲಿಯಲ್ಲಿ ಸಿಪಿಎಂ ರಾಜಕೀಯ ಸಮಾವೇಶದ ಸಿದ್ಧತೆ ಜೋರು
- ಬಾಗೇಪಲ್ಲಿ: ಇದೇ ಸೋಮವಾರ (ಸೆಪ್ಟೆಂಬರ್ 18) ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ರಾಜಕೀಯ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಪಕ್ಷದ ಹಲವು ಪ್ರಮುಖರು ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದ ಈ ರಾಜಕೀಯ ಸಮಾವೇಶಕ್ಕಾಗಿ ಬಾಗೇಪಲ್ಲಿಯಲ್ಲಿ ಸಿದ್ಧತೆ ಜೋರಾಗಿದೆ.

(1 / 5)
ಸಿಪಿಐಎಂ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ರಾಜಕೀಯ ಸಮಾವೇಶದಲ್ಲಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಕ್ಷದ ಪಾಲಿಟ್‌ಬ್ಯುರೋ ಸದಸ್ಯರಾಗಿರುವ ಬಿ.ವಿ. ರಾಘವಲು, ಮತ್ತೋರ್ವ ಪಾಲಿಟ್‌ಬ್ಯುರೋ ಸದಸ್ಯರಾಗಿರುವ ಎಂ.ಎ. ಬೇಬಿ, ಸಿಪಿಐಎಂ ರಾಜ್ಯ ಘಟಕದ ಕಾರ್ಯದರ್ಶಿ ಯು. ಬಸವರಾಜು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.(Verified Twitter)
(2 / 5)
ಸಿಪಿಐಎಂ ರಾಜಕೀಯ ಸಮಾವೇಶಕ್ಕೆ ಈಗಾಗಲೇ ಬಾಗೇಪಲ್ಲಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಪಕ್ಷದ ಧ್ವಜ ನೆಡುವ ಮೂಲಕ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.(Verified Twitter)
(3 / 5)
ಸೌಹಾರ್ದ, ಸಮೃದ್ಧ, ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಹಾಗೂ ಪ್ರಗತಿಪರ ಪರ್ಯಾಯಕ್ಕಾಗಿ ರಾಜಕೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐಎಂ ರಾಜ್ಯ ಘಟಕ ಸ್ಪಷ್ಟಪಡಿಸಿದೆ.(Verified Twitter)
(4 / 5)
ಸಮಾವೇಶದ ಕುರಿತು ಮಾಹಿತಿ ನೀಡಿರುವ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಪರ್ಯಾಯ ರಾಜಕೀಯ ನೀತಿಗಳನ್ನು ಪಕ್ಷವು ಜನರ ಮುಂದಿಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಕಾರ್ಪೋರೇಟ್ ಶಕ್ತಿಗಳಿಗೆ ಸಂಪೂರ್ಣವಾಗಿ ಮಣಿದಿದ್ದು, ಜನಪರ ಮತ್ತು ಬಡವರ ಪರ ನೀತಿಗಳಿಗಾಗಿ ಸಿಪಿಐಎಂ ಧ್ವನಿ ಎತ್ತಲಿದೆ ಎಂದು ಯು. ಬಸವರಾಜು ಹೇಳಿದರು.(Verified Twitter)
ಇತರ ಗ್ಯಾಲರಿಗಳು