Amruthadhaare: ಬದುಕಿರುವ ಗೌತಮ್‌ನ ತಾಯಿ, ತಂಗಿಗೆ ತಿಥಿ ಮಾಡಿಸಲು ಮುಂದಾದ ಶಕುಂತಲಾ ಗ್ಯಾಂಗ್‌; ಬರೀ ಇದೇ ಆಯ್ತು ಅಂತಿದ್ದಾರೆ ಪ್ರೇಕ್ಷಕರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಬದುಕಿರುವ ಗೌತಮ್‌ನ ತಾಯಿ, ತಂಗಿಗೆ ತಿಥಿ ಮಾಡಿಸಲು ಮುಂದಾದ ಶಕುಂತಲಾ ಗ್ಯಾಂಗ್‌; ಬರೀ ಇದೇ ಆಯ್ತು ಅಂತಿದ್ದಾರೆ ಪ್ರೇಕ್ಷಕರು

Amruthadhaare: ಬದುಕಿರುವ ಗೌತಮ್‌ನ ತಾಯಿ, ತಂಗಿಗೆ ತಿಥಿ ಮಾಡಿಸಲು ಮುಂದಾದ ಶಕುಂತಲಾ ಗ್ಯಾಂಗ್‌; ಬರೀ ಇದೇ ಆಯ್ತು ಅಂತಿದ್ದಾರೆ ಪ್ರೇಕ್ಷಕರು

  • Amruthadhare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಡಿಸೆಂಬರ್‌ 12ರ ಸಂಚಿಕೆಯಲ್ಲಿ ಶಕುಂತಲಾ ಗ್ಯಾಂಗ್‌ ನಾಟಕ ಮುಂದುವರೆದಿದೆ. ಅಮ್ಮ ಮತ್ತು ತಂಗಿ ಸತ್ತಿದ್ದಾರೆ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಮೂಲಕ ಸುಳ್ಳು ಹೇಳಿಸಿದ್ದ ಜೈದೇವ್‌ ಇದೀಗ ಗೌತಮ್‌ ಕೈಯಿಂದಲ್ಲೇ ತಿಥಿ ಮಾಡಿಸಲು ಮುಂದಾಗಿದ್ದಾನೆ.

ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಅಮ್ಮ ಮತ್ತು ತಂಗಿ ಮನೆಗೆ ಬರುತ್ತಾರೆ ಎಂದು ಖುಷಿಯಿಂದ ಕಾದು ಕುಳಿತಿದ್ದ ಗೌತಮ್‌ಗೆ ಶಾಕ್‌ ಆಗುವಂತೆ "ನಿಮ್ಮ ಅಮ್ಮ ಮತ್ತು ತಂಗಿ ಮೂರು ವರ್ಷದ ಹಿಂದೆಯೇ ಬಸ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ" ಎಂದು ಇನ್‌ಸ್ಪೆಕ್ಟರ್‌ ಹೇಳುತ್ತಾರೆ. ಈ ರೀತಿ ಸುಳ್ಳು ಹೇಳಿಸಿದ್ದು ಜೈದೇವ್‌. ಇಂದಿನ ಸಂಚಿಕೆಯಲ್ಲಿ ಜೈದೇವ್‌ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾನೆ. ಗೌತಮ್‌ ಕೈಯಲ್ಲಿಯೇ ತನ್ನ ತಾಯಿ ಮತ್ತು ತಂಗಿಯ ತಿಥಿ ಮಾಡಿಸಲು ತನ್ನ ಅಮ್ಮನಿಗೆ ಸೂಚಿಸಿದ್ದಾನೆ. 
icon

(1 / 10)

"ಭಾಗ್ಯಮ್ಮ ಮತ್ತು ಸುಧಾ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಗೌತಮ್‌ ನಂಬಿಯಾಗಿದೆ. ಇನ್ನು ಅವನ ಕೈಯಿಂದಲೇ ಅವರಿಬ್ಬರ ತಿಥಿ ಮಾಡಿಸೋಣ. ಇದಕ್ಕೆ ಗೌತಮ್‌ ಒಪ್ಪಿಗೆ ಪಡೆ" ಎಂದು ಜೈದೇವ್‌ ತನ್ನ ತಾಯಿ ಶಕುಂತಲಾ ದೇವಿಗೆ ಹೇಳುತ್ತಾನೆ.
icon

(2 / 10)

ಅದೇ ರೀತಿ ಶಕುಂತಲಾ ದೇವಿ ಗೌತಮ್‌ ಬಳಿಗೆ ಬಂದು "ಇನ್ನು ಎಷ್ಟು ದಿನ ದುಃಖ ಪಡೋದು, ಆಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಮೃತಪಟ್ಟ ಅವರಿಬ್ಬರು ಆತ್ಮಕ್ಕೆ ಶಾಂತಿ ದೊರಕಿಸಲು ಪ್ರಯತ್ನಿಸಬೇಕು. ಸಂಪ್ರದಾಯದ ಪ್ರಕಾರ ಯಾವೆಲ್ಲ ವಿಧಿವಿಧಾನಗಳು ನಡೆಯಬೇಕೋ ಅದನ್ನೆಲ್ಲ ಮಾಡಬೇಕು. ಅವರಿಬ್ಬರಿಗೆ ತಿಥಿ ಮಾಡಿಸಬೇಕು" ಎಂದು ಹೇಳುತ್ತಾರೆ.
icon

(3 / 10)

ಈ ವಿಚಾರ ಕೇಳಿದಾಗ ದುಃಖವಾದರೂ ಗೌತಮ್‌ ಒಪ್ಪಿಕೊಳ್ಳುತ್ತಾರೆ. ಈ ಮೂಲಕ ತನ್ನ ತಾಯಿ ಮತ್ತು ತಂಗಿ ಬದುಕಿರುವ ವಿಚಾರ ತಿಳಿಯದೆ ಗೌತಮ್‌ ಇಂತಹ ಕೆಲಸಕ್ಕೆ ಮುಂದಾಗುತ್ತಾರೆ. ತನ್ನ ಮಲತಾಯಿಯ ಕುತಂತ್ರ ಅರಿಯದ ಗೌತಮ್‌ ತನ್ನ ಅಮ್ಮ ಮತ್ತು ತಂಗಿಯ ತಿಥಿ ಮಾಡಲಿದ್ದಾನೆ.
icon

(4 / 10)

ಆದರೆ, ಇನ್ನೊಂದೆಡೆ ಗೌತಮ್‌ನ ನಿಜವಾದ ತಾಯಿ ಮತ್ತು ತಂಗಿ ಬದುಕಿದ್ದಾರೆ. ಈತನ ತಾಯಿ ಮತ್ತು ತಂಗಿಯನ್ನು ಬೆಂಕಿ ಹಚ್ಚಿ ಸಾಯಿಸಲು ಜೈದೇವ್‌ ಮಾಡಿದ ಪ್ರಯತ್ನ ವಿಫಲವಾಗಿದೆ. ಮನೆಗೆ ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿದ್ದ. ಆದರೆ, ಆ ಸಮಯದಲ್ಲಿ ಭಾಗ್ಯಮ್ಮನನ್ನು ಸುಧಾ ಆಸ್ಪತ್ರೆಗೆ ಕೊಂಡೊಯ್ದ ಕಾರಣ ಮನೆಯೊಳಗೆ ಯಾರೂ ಇರಲಿಲ್ಲ. ಇವರಿಬ್ಬರು ಬದುಕಿ ಉಳಿದಿದ್ದರು.
icon

(5 / 10)

ಸುಧಾ ಮತ್ತು ಭಾಗ್ಯಮ್ಮ ಮನೆಗೆ ಬರುತ್ತಾರೆ ಎಂದು ಕಾದುಕುಳಿತ ಗೌತಮ್‌ಗೆ ಇನ್ಸ್ಪೆಕ್ಟರ್‌ ಮೂಲಕ ಸುಳ್ಳು ಹೇಳಿಸಿದ್ದರು.  ನಿಮ್ಮ ಅಮ್ಮ ಮತ್ತು ತಂಗಿ ಬದುಕಿಲ್ಲ. ಅವರು ಸತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ, ಧನ್ಯ ಹೇಳಿದ್ದೇನು ಎಂದು ಗೌತಮ್‌ ಕೇಳಿದ್ದಾರೆ. ಆಕೆಗೆ ತಿಳಿದ ಮಾಹಿತಿ ಹಳೆಯದು, ತುಮಕೂರಿನದ್ದು ಆಗಿರಬಹುದು ಎಂದು ಪೊಲೀಸ್‌ ಹೇಳುತ್ತಾರೆ. "ಭಾಗ್ಯಮ್ಮ ಮತ್ತು ಸುಧಾಳ ಶವವನ್ನು ಹಲವು ದಿನಗಳ ಕಾಲ ಇಡಲಾಗಿತ್ತು. ಬಳಿಕ ಅನಾಥ ಶವವೆಂದು ಅಂತ್ಯಸಂಸ್ಕಾರ ಮಾಡಲಾಯಿತು" ಎಂದು ಇನ್‌ಸ್ಪೆಕ್ಟರ್‌ ಹೇಳುತ್ತಾರೆ. ಅಮ್ಮ ಮತ್ತು ತಂಗಿಗೆ ಕಾಯುತ್ತಿದ್ದ ಈ ಸುದ್ದಿ ಗೌತಮ್‌ಗೆ ದುಃಖ ಹೇಳತೀರದು.
icon

(6 / 10)

ಇಂದಿನ ಸಂಚಿಕೆಯಲ್ಲಿ ಆನಂದ್‌ ಮತ್ತು ಅಪರ್ಣಾ ಅವರು ಗೌತಮ್‌ನ ನೋವಿನ ಸುದ್ದಿ ಕೇಳಿ ದುಃಖಿಸುವ ಚಿತ್ರಣವೂ ಇದೆ. ಇದೇ ಸಮಯದಲ್ಲಿ ಭೂಮಿಕಾ ಮತ್ತು ಗೌತಮ್‌ ಅವರ ದೃಶ್ಯಗಳೂ ಇವೆ.  ಮುಂದಿನ ಕೆಲವು ಸಂಚಿಕೆಗಳಲ್ಲಿ ತಿಥಿ ಕಾರ್ಯಗಳು ನಡೆಯುವ ಸೂಚನೆ ಇದೆ. 
icon

(7 / 10)

ಗೌತಮ್‌ಗೆ ತನ್ನ ತಾಯಿ ಮತ್ತು ತಂಗಿಯನ್ನು ಭೇಟಿಯಾಗಿಸಲು ನಿರ್ದೇಶಕರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವುದಕ್ಕೆ ಪ್ರೇಕ್ಷಕರಲ್ಲಿ ಅಸಹನೆ ಕಾಣಿಸಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ "ಬರೀ ಇದೇ ಆಯ್ತು" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ. 
icon

(8 / 10)

ಗೌತಮ್‌ಗೆ ತನ್ನ ತಾಯಿ ಮತ್ತು ತಂಗಿ ಬದುಕಿರುವ ಸತ್ಯ ಮತ್ತೆ ತಿಳಿಯುತ್ತದೆಯೇ, ಅಮ್ಮ ಮತ್ತು ತಂಗಿಯ ಬದುಕಿನ ಕಥೆ, ಶಕುಂತಲಾ ಕುತಂತ್ರ ಎಲ್ಲವೂ ತಿಳಿಯುತ್ತದೆಯೇ? ಈ ಸತ್ಯ ತಿಳಿಯಲು ಪ್ರೇಕ್ಷಕರು ಇನ್ನೂ ಸಾಕಷ್ಟು ದಿನ ಕಾಯಬೇಕಿದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಇತರ ಗ್ಯಾಲರಿಗಳು