Year in Review: 2024ರಲ್ಲಿ ಬೆಳಕಿಗೆ ಬಂದ ಭಾರತದ 8 ಉದಯೋನ್ಮುಖ ಕ್ರೀಡಾಪಟುಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year In Review: 2024ರಲ್ಲಿ ಬೆಳಕಿಗೆ ಬಂದ ಭಾರತದ 8 ಉದಯೋನ್ಮುಖ ಕ್ರೀಡಾಪಟುಗಳು

Year in Review: 2024ರಲ್ಲಿ ಬೆಳಕಿಗೆ ಬಂದ ಭಾರತದ 8 ಉದಯೋನ್ಮುಖ ಕ್ರೀಡಾಪಟುಗಳು

  • Sports Year in Review 2024 ಹಲವು ಪ್ರಮುಖ ಕ್ರೀಡಾಕೂಟಗಳು ನಡೆದ ಮಹತ್ವದ ವರ್ಷ. ಈ ವರ್ಷದಲ್ಲಿ ಕ್ರೀಡಾಲೋಕಕ್ಕೆ ಹೊಸ ಹೊಸ ಪ್ರತಿಭೆಗಳ ದರ್ಶನವಾಯ್ತು. ಭಾರತದ ಹಲವು ಉದಯೋನ್ಮುಖ ಪ್ರತಿಭೆಗಳು ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಗಮನಸೆಳೆದರು. ಅಂಥಾ ಪ್ರತಿಭೆಗಳ, ಉದಯೋನ್ಮುಖ ಆಟಗಾರರ ವಿವರ ಇಲ್ಲಿದೆ.

ಈ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್, ಮಹತ್ವದ ಕ್ರೀಡಾಕೂಟ. ಇದರ ಜೊತೆಗೆ ಟಿ20 ವಿಶ್ವಕಪ್‌ ಮಾತ್ರವಲ್ಲದೆ ಐಪಿಎಲ್‌ ಪಂದ್ಯಾವಳಿ ಕೂಡಾ ನಡೆದವು. ಹಲವು ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಜನಪ್ರಿಯರಾದ ಉದಯೋನ್ಮುಖ ಆಟಗಾರರನ್ನು ನೋಡೋಣ.
icon

(1 / 9)

ಈ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್, ಮಹತ್ವದ ಕ್ರೀಡಾಕೂಟ. ಇದರ ಜೊತೆಗೆ ಟಿ20 ವಿಶ್ವಕಪ್‌ ಮಾತ್ರವಲ್ಲದೆ ಐಪಿಎಲ್‌ ಪಂದ್ಯಾವಳಿ ಕೂಡಾ ನಡೆದವು. ಹಲವು ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಜನಪ್ರಿಯರಾದ ಉದಯೋನ್ಮುಖ ಆಟಗಾರರನ್ನು ನೋಡೋಣ.

ಮನು ಭಾಕರ್‌: ಪ್ಯಾರಿಸ್ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ 2 ಕಂಚಿನ ಪದಕಗಳನ್ನು ಗೆದ್ದ ಆಟಗಾರ್ತಿ ಮನು ಭಾಕರ್. ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದರು. ಅದರ ಬೆನ್ನಲ್ಲೇ ಮನು ಭಾಕರ್ ಬ್ರಾಂಡ್ ವ್ಯಾಲ್ಯೂ ಹೆಚ್ಚಳವಾಯ್ತು.
icon

(2 / 9)

ಮನು ಭಾಕರ್‌: ಪ್ಯಾರಿಸ್ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ 2 ಕಂಚಿನ ಪದಕಗಳನ್ನು ಗೆದ್ದ ಆಟಗಾರ್ತಿ ಮನು ಭಾಕರ್. ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದರು. ಅದರ ಬೆನ್ನಲ್ಲೇ ಮನು ಭಾಕರ್ ಬ್ರಾಂಡ್ ವ್ಯಾಲ್ಯೂ ಹೆಚ್ಚಳವಾಯ್ತು.(Nitin Lawate )

ಸ್ವಪ್ನಿಲ್‌ ಕುಸಾಲೆ: ಸ್ವಪ್ನಿಲ್ ಕುಸಾಲೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪುರುಷರ 50 ಮೀಟರ್ ರೈಫಲ್ ಮೂರು ಸ್ಥಾನಗಳ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
icon

(3 / 9)

ಸ್ವಪ್ನಿಲ್‌ ಕುಸಾಲೆ: ಸ್ವಪ್ನಿಲ್ ಕುಸಾಲೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪುರುಷರ 50 ಮೀಟರ್ ರೈಫಲ್ ಮೂರು ಸ್ಥಾನಗಳ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.(AP)

ಡಿ ಗುಕೇಶ್: ವಿಶ್ವ ಚೆಸ್‌ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಭಾರತದ ಎರಡನೇ ಆಟಗಾರ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ‌ ಭಾರತದ ಎರಡನೇ ವಿಶ್ವ ಚಾಂಪಿಯನ್ ಆಗುವ ಹೊಸ್ತಿಲಲ್ಲಿ ಗುಕೇಶ್‌ ಇದ್ದಾರೆ.
icon

(4 / 9)

ಡಿ ಗುಕೇಶ್: ವಿಶ್ವ ಚೆಸ್‌ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಭಾರತದ ಎರಡನೇ ಆಟಗಾರ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ‌ ಭಾರತದ ಎರಡನೇ ವಿಶ್ವ ಚಾಂಪಿಯನ್ ಆಗುವ ಹೊಸ್ತಿಲಲ್ಲಿ ಗುಕೇಶ್‌ ಇದ್ದಾರೆ.(HT_PRINT)

ವೈಭವ್‌ ಸೂರ್ಯವಂಶಿ: ಕೇವಲ 13 ವರ್ಷದ ಆಟಗಾರ ಐಪಿಎಲ್‌ ಮೆಗಾ ಹರಾಜಿನಲ್ಲಿ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜಸ್ಥಾನ್‌ ರಾಯಲ್ಸ್ ತಂಡ ಇವರನ್ನು ಖರೀದಿ ಮಾಡಿತು.
icon

(5 / 9)

ವೈಭವ್‌ ಸೂರ್ಯವಂಶಿ: ಕೇವಲ 13 ವರ್ಷದ ಆಟಗಾರ ಐಪಿಎಲ್‌ ಮೆಗಾ ಹರಾಜಿನಲ್ಲಿ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜಸ್ಥಾನ್‌ ರಾಯಲ್ಸ್ ತಂಡ ಇವರನ್ನು ಖರೀದಿ ಮಾಡಿತು.(AFP)

ಮಯಾಂಕ್‌ ಯಾದವ್‌: ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರ ಅತಿ ವೇಗದ ಎಸೆತ ಬೌಲಿಂಗ್‌ ಮಾಡಿ ಗಮನ ಸೆಳೆದ ಆಟಗಾರ ಮಯಾಂಕ್‌ ಯಾದವ್.‌ ಬಲಗೈ ವೇಗಿ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದರು. ಆ ಬಳಿಕ ಭಾರತ ತಂಡಕ್ಕೂ ಆಯ್ಕೆಯಾದರು.
icon

(6 / 9)

ಮಯಾಂಕ್‌ ಯಾದವ್‌: ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರ ಅತಿ ವೇಗದ ಎಸೆತ ಬೌಲಿಂಗ್‌ ಮಾಡಿ ಗಮನ ಸೆಳೆದ ಆಟಗಾರ ಮಯಾಂಕ್‌ ಯಾದವ್.‌ ಬಲಗೈ ವೇಗಿ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದರು. ಆ ಬಳಿಕ ಭಾರತ ತಂಡಕ್ಕೂ ಆಯ್ಕೆಯಾದರು.(PTI)

ಅಮನ್‌ ಸೆಹ್ರಾವತ್‌: ಕುಸ್ತಿಪಟು ಅಮನ್ ಸೆಹ್ರಾವತ್ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗಳಿಸಿದರು. ವೈಯಕ್ತಿಕ ಒಲಿಂಪಿಕ್ ಪದಕವನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರಾದರು.
icon

(7 / 9)

ಅಮನ್‌ ಸೆಹ್ರಾವತ್‌: ಕುಸ್ತಿಪಟು ಅಮನ್ ಸೆಹ್ರಾವತ್ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗಳಿಸಿದರು. ವೈಯಕ್ತಿಕ ಒಲಿಂಪಿಕ್ ಪದಕವನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರಾದರು.(HT_PRINT)

ನಿತೀಶ್‌ ಕುಮಾರ್‌ ರೆಡ್ಡಿ: ಸನ್‌ರೈಸರ್ಸ್‌ ಹೈದರಾಬಾದ್‌ ಪರ ಐಪಿಎಲ್‌ ಬೆಳಕಿಗೆ ಬಂದ ಪ್ರತಿಭೆ ನಿತೀಶ್‌ ರೆಡ್ಡಿ. ಆಲ್‌ರೌಂಡರ್‌ ಆಗಿ ಹಲವು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿ, ಟೀಮ್‌ ಇಂಡಿಯಾಗೆ ಆಯ್ಕೆಯಾದರು. ಬಾರ್ಡರ್-ಗವಾಸ್ಕರ್‌ ಟ್ರೋಫಿಯಲ್ಲೂ ಇದೀಗ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
icon

(8 / 9)

ನಿತೀಶ್‌ ಕುಮಾರ್‌ ರೆಡ್ಡಿ: ಸನ್‌ರೈಸರ್ಸ್‌ ಹೈದರಾಬಾದ್‌ ಪರ ಐಪಿಎಲ್‌ ಬೆಳಕಿಗೆ ಬಂದ ಪ್ರತಿಭೆ ನಿತೀಶ್‌ ರೆಡ್ಡಿ. ಆಲ್‌ರೌಂಡರ್‌ ಆಗಿ ಹಲವು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿ, ಟೀಮ್‌ ಇಂಡಿಯಾಗೆ ಆಯ್ಕೆಯಾದರು. ಬಾರ್ಡರ್-ಗವಾಸ್ಕರ್‌ ಟ್ರೋಫಿಯಲ್ಲೂ ಇದೀಗ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.(AP)

ಅಭಿಷೇಕ್‌ ಶರ್ಮಾ: ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅಬ್ಬರಿಸಿದ ಆರಂಭಿಕ ಆಟಗಾರ, ಆ ಬಳಿಕ ಟೀಮ್ ಇಂಡಿಯಾಗೆ ಆಯ್ಕೆಯಾದರು. ಆಡಿದ ಎರಡನೇ ಅಂತಾರಾಷ್ಟ್ರೀಯ ಟಿ20ಯಲ್ಲೇ ಶತಕ ಸಿಡಿಸಿದರು.
icon

(9 / 9)

ಅಭಿಷೇಕ್‌ ಶರ್ಮಾ: ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅಬ್ಬರಿಸಿದ ಆರಂಭಿಕ ಆಟಗಾರ, ಆ ಬಳಿಕ ಟೀಮ್ ಇಂಡಿಯಾಗೆ ಆಯ್ಕೆಯಾದರು. ಆಡಿದ ಎರಡನೇ ಅಂತಾರಾಷ್ಟ್ರೀಯ ಟಿ20ಯಲ್ಲೇ ಶತಕ ಸಿಡಿಸಿದರು.(AP)


ಇತರ ಗ್ಯಾಲರಿಗಳು