ಬೆನ್ಸ್ಟೋಕ್ಸ್ ವಿಕೆಟ್ ಪಡೆದು ಕಪಿಲ್ ದೇವ್ರ ಎರಡು ಸಾರ್ವಕಾಲಿಕ ದಾಖಲೆಗಳನ್ನು ಮುರಿದ ಆರ್ ಅಶ್ವಿನ್
- Ravichandran Ashwin: ಭಾರತ ಮತ್ತು ಇಂಗ್ಲೆಂಡ್ ನಡುವಿನ ಧರ್ಮಶಾಲಾ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ರವಿಚಂದ್ರನ್ ಅಶ್ವಿನ್ ಅವರು ಕಪಿಲ್ ದೇವ್ ಅವರ 2 ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದ್ದಾರೆ.
- Ravichandran Ashwin: ಭಾರತ ಮತ್ತು ಇಂಗ್ಲೆಂಡ್ ನಡುವಿನ ಧರ್ಮಶಾಲಾ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ರವಿಚಂದ್ರನ್ ಅಶ್ವಿನ್ ಅವರು ಕಪಿಲ್ ದೇವ್ ಅವರ 2 ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದ್ದಾರೆ.
(1 / 8)
ರವಿಚಂದ್ರನ್ ಅಶ್ವಿನ್ ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ ದಿಗ್ಗಜ ಕಪಿಲ್ ದೇವ್ ಅವರ ಎರಡು ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದ್ದಾರೆ. ಧರ್ಮಶಾಲಾ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದ ಕೂಡಲೇ ಅಶ್ವಿನ್ ದಾಖಲೆ ಪುಸ್ತಕದಲ್ಲಿ ಹೊಸ ಪುಟವೊಂದನ್ನು ತೆರೆದಿದ್ದಾರೆ.
(2 / 8)
ಧರ್ಮಶಾಲಾ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಸ್ಟೋಕ್ಸ್, ಅಶ್ವಿನ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೋಕ್ಸ್ ಅವರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆ ಅಶ್ವಿನ್ ಪಾಲಾಯಿತು. ಆ ಮೂಲಕ ಭಾರತದ ಹೊಸ ದಾಖಲೆ ನಿರ್ಮಿಸಿದ್ದಾರೆ.
(3 / 8)
ಟೆಸ್ಟ್ನಲ್ಲಿ ಸ್ಟೋಕ್ಸ್ ಅವರನ್ನು ಅಶ್ವಿನ್, 13 ಬಾರಿ ಔಟ್ ಮಾಡಿದ್ದಾರೆ. ಇದರೊಂದಿಗೆ ಎದುರಾಳಿ ತಂಡದ ಆಟಗಾರನೊಬ್ಬನನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಹೆಗ್ಗಳಿಕೆಗೆ ಅಶ್ವಿನ್ ಭಾಜನರಾದರು. ಈ ಸಾರ್ವಕಾಲಿಕ ದಾಖಲೆ ಈ ಹಿಂದೆ ಕಪಿಲ್ ದೇವ್ ಹೆಸರಿನಲ್ಲಿತ್ತು.
(4 / 8)
ಪಾಕಿಸ್ತಾನದ ಮುದಾಸರ್ ನಜರ್ ಅವರನ್ನು ಕಪಿಲ್ ದೇವ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 12 ಬಾರಿ ಔಟ್ ಮಾಡಿದ ದಾಖಲೆ ಹೊಂದಿದ್ದರು. ಧರ್ಮಶಾಲಾದಲ್ಲಿ ಶನಿವಾರ (ಮಾರ್ಚ್ 9) ಸ್ಟೋಕ್ಸ್ರನ್ನು ಔಟ್ ಮಾಡಿದ ತಕ್ಷಣವೇ ಕಪಿಲ್ ರೆಕಾರ್ಡ್ ಅನ್ನು ಅಶ್ವಿನ್ ಹಿಂದಿಕ್ಕಿದರು.
(5 / 8)
ಟೆಸ್ಟ್ ಕ್ರಿಕೆಟ್ನಲ್ಲಿ ಆಟಗಾರನೊಬ್ಬನನ್ನು ಅತಿ ಹೆಚ್ಚು ಔಟ್ ಮಾಡಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ. ಅಶ್ವಿನ್, ಕಪಿಲ್ ನಂತರ ಇಶಾಂತ್ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ. ಆಸೀಸ್ನ ಡೇವಿಡ್ ವಾರ್ನರ್ರನ್ನು ಇಶಾಂತ್ 11 ಬಾರಿ ಔಟ್ ಮಾಡಿದ್ದಾರೆ.
(6 / 8)
Dharaಟೆಸ್ಟ್ ಮಾತ್ರವಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಬಾರಿ ಆಟಗಾರನೊಬ್ಬನನ್ನು ಔಟ್ ಮಾಡಿದ ದಾಖಲೆಯಲ್ಲೂ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ. ವೆಸ್ಟ್ ಇಂಡೀಸ್ನ ಡೆಸ್ಮಂಡ್ ಹೇನ್ಸ್ ಅವರನ್ನು ಕಪಿಲ್ 16 ಬಾರಿ ಔಟ್ ಮಾಡಿದ್ದಾರೆ. (ICC - X )
(7 / 8)
ಇದೀಗ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ 17 ಬಾರಿ ಔಟ್ ಮಾಡಿದ್ದಾರೆ, ಇದು ಭಾರತೀಯರ ಬೌಲರ್ಗಳಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ. (REUTERS)
ಇತರ ಗ್ಯಾಲರಿಗಳು