Relationship: ವೈವಾಹಿಕ ಜೀವನದಲ್ಲಿ ಪತಿಯ ಆಸಕ್ತಿ ಕಡಿಮೆಯಾಗಲು ಮುಖ್ಯ ಕಾರಣಗಳಿವು; ಈ ತಪ್ಪು ನೀವು ಮಾಡದಿರಿ
- ಸಂಸಾರವೆಂಬ ಎತ್ತಿನ ಬಂಡಿಯಲ್ಲಿ, ಎರಡೂ ಎತ್ತುಗಳು ಜೊತೆಯಾಗಿ ಸಾಗಬೇಕು. ಆಧುನಿಕ ಕಾಲದಲ್ಲಿ ದಂಪತಿಗಳ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಜಗಳಗಳು ನಡೆದು ಮದುವೆಯೆಂಬ ಪವಿತ್ರ ಬಂಧನ ಅರ್ಥಹೀನವಾಗುತ್ತಿದೆ. ಕೆಲವೊಮ್ಮೆ ಸಣ್ಣ ಅಥವಾ ಸೂಕ್ಷ್ಮ ವಿಷಯಗಳಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ಉಂಟಾಗುತ್ತವೆ. ನೀವು ನಿಮ್ಮ ಬದುಕಿನಲ್ಲಿ ಈ ತಪ್ಪುಗಳನ್ನು ಮಾಡದಿರಿ.
- ಸಂಸಾರವೆಂಬ ಎತ್ತಿನ ಬಂಡಿಯಲ್ಲಿ, ಎರಡೂ ಎತ್ತುಗಳು ಜೊತೆಯಾಗಿ ಸಾಗಬೇಕು. ಆಧುನಿಕ ಕಾಲದಲ್ಲಿ ದಂಪತಿಗಳ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಜಗಳಗಳು ನಡೆದು ಮದುವೆಯೆಂಬ ಪವಿತ್ರ ಬಂಧನ ಅರ್ಥಹೀನವಾಗುತ್ತಿದೆ. ಕೆಲವೊಮ್ಮೆ ಸಣ್ಣ ಅಥವಾ ಸೂಕ್ಷ್ಮ ವಿಷಯಗಳಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ಉಂಟಾಗುತ್ತವೆ. ನೀವು ನಿಮ್ಮ ಬದುಕಿನಲ್ಲಿ ಈ ತಪ್ಪುಗಳನ್ನು ಮಾಡದಿರಿ.
(1 / 7)
ಪತಿ-ಪತ್ನಿಯರು ಪರಸ್ಪರ ಸಂತೋಷದಿಂದ ಬದುಕಲು ಹಲವು ಕಾರಣಗಳಿರುತ್ತವೆ. ಆದರೆ, ದೂರವಾಗಲು ಒಂದು ಸಣ್ಣ ನೆಪ ಸಾಕು. ಹೆಚ್ಚಿನ ದಾಂಪತ್ಯ ಜೀವನ ಮುರಿದು ಬೀಳುವುದು ಸಣ್ಣಪುಟ್ಟ ವಿಷಯಗಳಿಂದ. ಇಂಥಾ ಸಂದರ್ಭದಲ್ಲಿ ಖುಷಿಯಾಗಿ ಇರಲು ಇರುವ ಹಲವು ಕಾರಣಗಳನ್ನು ಪರಿಗಣಿಸಬೇಕು.(shutterstock)
(2 / 7)
ಪ್ರತಿಬಾರಿಯೂ ಸಂಬಂಧ ಮುರಿದು ಬೀಳಲು ಪತಿಯೇ ಕಾರಣ ಎಂದಲ್ಲ. ಕೆಲವೊಮ್ಮೆ ಪತ್ನಿ ಮಾಡುವ ತಪ್ಪುಗಳು ಕೂಡ ಆ ಸಂಬಂಧದ ಬಂಧವನ್ನು ದುರ್ಬಲಗೊಳಿಸಬಹುದು. ಆ 5 ತಪ್ಪುಗಳು ಯಾವುವು ಎಂದು ನೋಡೋಣ. ಇಂಥಾ ತಪ್ಪುಗಳಾದರೆ, ಪತಿಗೆ ತನ್ನ ಸಂಗಾತಿಯ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು.(shutterstock)
(3 / 7)
ಚರ್ಚೆ: ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಪರಸ್ಪರ ಗೌರವ ಮತ್ತು ಪ್ರೀತಿಯ ಅಡಿಪಾಯದ ಮೇಲೆ ನಿಂತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಸಣ್ಣ ವಿಷಯಕ್ಕೂ ಜಗಳವಾಡಿದರೆ ಮತ್ತು ಗಂಡನನ್ನು ಅವಮಾನಿಸಿದರೆ, ನಿಧಾನವಾಗಿ ಪತಿಯು ಅಸಮಾಧಾನಗೊಳ್ಳುತ್ತಾನೆ. ಇದರಿಂದಾಗಿ ಮನೆಯಲ್ಲಿ ಆಗಾಗ ಜಗಳ ಅಥವಾ ವಾದಗಳನ್ನು ತಪ್ಪಿಸಲು ಪತಿ ಕ್ರಮೇಣ ತನ್ನ ಹೆಂಡತಿಯೊಂದಿಗೆ ಮಾತನಾಡಲು ಹಿಂಜರಿಯುತ್ತಾನೆ. ಇದರಿಂದ ಗಂಡ-ಹೆಂಡತಿ ನಡುವೆ ಬಿರುಕು ಶುರುವಾಗುತ್ತದೆ.(shutterstock)
(4 / 7)
ತಪ್ಪು ಅರ್ಥ ಕಲ್ಪಿಸುವುದು: ಪ್ರತಿಯೊಂದನ್ನೂ ನೀವು ತಪ್ಪಾಗಿ ಅರ್ಥ ಮಾಡಿಕೊಂಡರೆ, ಮುಂದೆ ಎಚ್ಚರದಿಂದಿರಿ. ನಿಮ್ಮ ಈ ಅಭ್ಯಾಸವು ನಿಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಬಹುದು. ಹೆಂಡತಿಯು ತನ್ನ ಗಂಡನ ಮಾತುಗಳನ್ನು ಅರ್ಥಮಾಡಿಕೊಳ್ಳುವ ಬದಲು ಅದರಲ್ಲಿ ಬೇರೆ ಅರ್ಥವನ್ನು ಹುಡುಕುತ್ತಾ ಜಗಳವಾಡಲು ಆರಂಭಿಸಿದರೆ, ಗೊಂದಲ ಮೂಡುತ್ತದೆ. ಆಗ ಪತಿ ನಿಧಾನವಾಗಿ ಹೆಂಡತಿಯನ್ನು ಗೌರವಿಸುವುದನ್ನು ನಿಲ್ಲಿಸಬಹುದು.(shutterstock)
(5 / 7)
ಗೌರವ ನೀಡದಿರುವುದು: ಬಾಹ್ಯ ಪ್ರಪಂಚದಲ್ಲಿ ಪತಿಯೊಂದಿಗೆ ನಗುತ್ತಾ ಮಾತನಾಡಿದರೂ, ಗಂಡನಿಗೆ ಸರಿಯಾಗಿ ಗೌರವ ನೀಡದಿದ್ದರೆ, ಮುಂದೆ ಪತಿ ಕೂಡಾ ನಿಮ್ಮನ್ನು ಗೌರವಿಸುವುದನ್ನು ನಿಲ್ಲಿಸಬಹುದು. ಮನೆಯವರು ಅಥವಾ ಸ್ನೇಹಿತರ ಮುಂದೆ ಪತಿಯನ್ನು ಪದೇ ಪದೇ ಅವಮಾನಿಸುತ್ತಿದ್ದರೆ, ಆ ಅಭ್ಯಾಸವನ್ನು ತಕ್ಷಣವೇ ಬದಲಾಯಿಸಿಕೊಳ್ಳಿ.(shutterstock)
(6 / 7)
ಅನುಮಾನಾಸ್ಪದ ಹೆಂಡತಿ: ಸಣ್ಣ ಸಣ್ಣ ವಿಷಯಗಳಲ್ಲಿ ನೀವು ನಿಮ್ಮ ಪತಿಯನ್ನು ಅನುಮಾನಿಸುತ್ತಿದ್ದರೆ, ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಸದಾ ಗಂಡನ ಮೇಲೆ ಅನುಮಾನ ಪಡುವ, ಒಂಟಿಯಾಗಿ ಬಿಡದ ಹೆಂಡತಿ ಮುಂದೆ ಪತಿಯಿಂದ ದೂರ ಆಗಬಹುದು.(shutterstock)
(7 / 7)
ಸಂಗಾತಿಯನ್ನು ನಿಯಂತ್ರಿಸಲು ಪ್ರಯತ್ನಿಸುವುದು: ಯಾವಾಗಲೂ ಪತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಆ ಅಭ್ಯಾಸವನ್ನು ಬದಲಾಯಿಸಿ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸಿ. ನೀವು ಇದನ್ನು ಮಾಡದಿದ್ದರೆ, ನಿಮ್ಮ ಪತಿ ನಿಮ್ಮಿಂದ ದೂರವಿರಲು ದಾರಿ ಹುಡುಕಬಹುದು. ಉಸಿರುಗಟ್ಟುವ ವಾತಾವರಣದಲ್ಲಿ ಇರಲು ಯಾರೂ ಬಯಸುವುದಿಲ್ಲ.(shutterstock)
ಇತರ ಗ್ಯಾಲರಿಗಳು