Kitchen Hacks: ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಈ ವಿಷಯಗಳನ್ನು ನೆನಪಿಡಿ; ತೊಳೆಯುವಾಗ ಕೂಡಾ!
- Kitchen Hacks: ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಮತ್ತು ಅವುಗಳನ್ನು ತೊಳೆಯುವಾಗ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಒಂದು ವೇಳೆ ನೀವು ಈ ಕಾಳಜಿ ವಹಿಸದಿದ್ದರೆ ಈ ಸಮಸ್ಯೆಗಳಾಗುತ್ತವೆ.
- Kitchen Hacks: ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಮತ್ತು ಅವುಗಳನ್ನು ತೊಳೆಯುವಾಗ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಒಂದು ವೇಳೆ ನೀವು ಈ ಕಾಳಜಿ ವಹಿಸದಿದ್ದರೆ ಈ ಸಮಸ್ಯೆಗಳಾಗುತ್ತವೆ.
(1 / 6)
ಅನೇಕ ಜನರು ನಾನ್ ಸ್ಟಿಕ್ ಪ್ಯಾನ್‌ಗಳಲ್ಲಿ ಅಡುಗೆ ಮಾಡುವುದನ್ನು ಆನಂದಿಸುತ್ತಾರೆ. ಸಾಕಷ್ಟು ಹಣ ಖರ್ಚು ಮಾಡಿ ನಾನ್ ಸ್ಟಿಕ್ ಪಾತ್ರೆಗಳನ್ನೇ ಖರೀದಿಸುತ್ತಾರೆ.
(2 / 6)
ಅಂಗಡಿಯಿಂದ ನಾನ್ ಸ್ಟಿಕ್ ಪ್ಯಾನ್ ಖರೀದಿಸಿದ ಬಳಿಕ, ಮೊದಲು ಅದನ್ನು ಒದ್ದೆ ಸ್ಪಾಂಜ್‌ನಿಂದ ಒರೆಸಿ. ನಂತರ ಅದರ ಪದರವನ್ನು ಸುರಕ್ಷಿತವಾಗಿರಿಸಲು ಸ್ವಲ್ಪ ಎಣ್ಣೆಯನ್ನು ಹಚ್ಚಿ.
(3 / 6)
ನಾನ್‌ಸ್ಟಿಕ್ ಪ್ಯಾನ್‌ಗಳನ್ನು ಇತರ ಸಾಮಾನ್ಯ ಪ್ಯಾನ್‌ಗಳಂತೆ ಹೆಚ್ಚು ಬಿಸಿ ಮಾಡಬಾರದು. ಯಾವಾಗಲೂ ಮಧ್ಯಮದಿಂದ ಕಡಿಮೆ ಉರಿಯಲ್ಲಿ ಮಾತ್ರ ಬೇಯಿಸಿ. ನಾನ್ ಸ್ಟಿಕ್ ಪ್ಯಾನ್‌ಗಳನ್ನು ಖಾಲಿಯಾಗಿ ಬಿಸಿ ಮಾಡಬಾರದು.
(4 / 6)
ನಾನ್‌ಸ್ಟಿಕ್ ಪ್ಯಾನ್‌ಗಳೊಂದಿಗೆ ಮರದ ಅಥವಾ ಸಿಲಿಕಾನ್ ಚಮಚಗಳನ್ನು ಬಳಸಿ. ಲೋಹದ ಸ್ಪೂನ್‌ಗಳನ್ನು ಬಳಸಿದರೆ, ಪ್ಯಾನ್‌ನ ಲೇಪನಕ್ಕೆ ಹಾನಿಯಾಗಬಹುದು.
(5 / 6)
ನಾನ್ ಸ್ಟಿಕ್ ಪ್ಯಾನ್ ಅನ್ನು ಸ್ವಚ್ಛಗೊಳಿಸಲು ಸ್ಪಾಂಜ್ ಬಳಸಿ. ಸ್ಕ್ರಬ್ಬರ್ ಬಳಸಿ ಉಜ್ಜಬೇಡಿ. ತೊಳೆಯಲು ಸೌಮ್ಯವಾದ ದ್ರವ ರೂಪದ ಲಿಕ್ವಿಡ್ ಬಳಸಿ. ಎಣ್ಣೆಯಂತಹ ಜಿಡ್ಡಿನ ಅಂಶ ಇಲ್ಲದಿದ್ದರೆ ಬಿಸಿ ನೀರಿನಿಂದ ತೊಳೆಯಿರಿ.
ಇತರ ಗ್ಯಾಲರಿಗಳು