ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ನಿಂತು ರಾನಾ ದಗ್ಗುಬಾಟಿಗೆ ಬಬ್ರುವಾಹನ ಚಿತ್ರದ ‘ಹೇಳು ಪಾರ್ಥ..’ ಡೈಲಾಗ್ ಹೇಳಿಕೊಟ್ಟ ರಿಷಬ್ ಶೆಟ್ಟಿ
- ರಾನಾ ದಗ್ಗುಬಾಟಿ ಶೋನಲ್ಲಿ ಈ ಸಲ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅತಿಥಿಯಾಗಿದ್ದಾರೆ. ಹಾಗಂತ ಸ್ಟುಡಿಯೋದಲ್ಲಿ ಕೂತು ಇವರಿಬ್ಬರು ಹರಟಿಲ್ಲ. ಬದಲಿಗೆ, ಹುಟ್ಟೂರು ಕೆರಾಡಿಗೆ ರಾನಾ ಅವರನ್ನೇ ಕರೆಸಿ, ಆಡಿ ಬೆಳೆದ ನೆಲದಲ್ಲಿ ನಿಂತು ಒಂದಷ್ಟು ವಿಚಾರಗಳನ್ನು ನೆನಪಿಸಿಕೊಂಡಿದ್ದಾರೆ. ಬಬ್ರುವಾಹನ ಸಿನಿಮಾದ ಡೈಲಾಗ್ ಜತೆಗೆ ಕನ್ನಡ ವರ್ಣಮಾಲೆಯನ್ನೂ ರಾನಾಗೆ ಕಲಿಸಿದ್ದಾರೆ.

(1 / 9)
ರಾನಾ ದಗ್ಗುಬಾಟಿ ನಡೆಸಿ ಕೊಡುವ ಟಾಕ್ ಶೋ ನವೆಂಬರ್ 23ರಿಂದ ಆರಂಭವಾಗಿದೆ. ಇತ್ತೀಚೆಗಷ್ಟೇ ಐದನೇ ಸಂಚಿಕೆಯ ಪ್ರೋಮೋ ಸಹ ಬಿಡುಗಡೆ ಆಗಿತ್ತು. (Instagram\ prime video)
(2 / 9)
ಆ ಪ್ರೋಮೋದಲ್ಲಿ ಕಾಣಿಸಿದ್ದು ಬೇರಾರು ಅಲ್ಲ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಈ ಟಾಕ್ ಶೋನಲ್ಲಿ ಕಾಂತಾರ ಶಿವ ಭಾಗವಹಿಸಿದ್ದಾರೆ.
(3 / 9)
ಹಾಗಂತ ಇದು ಟಿಪಿಕಲ್ ಸ್ಟುಡಿಯೋ ಸೆಟಪ್‌ನಲ್ಲಿ ನಡೆದ ಟಾಕ್ ಶೋ ಅಲ್ಲ. ಸ್ವತಃ ರಾನಾ ದಗ್ಗುಬಾಟಿ ಅವರೇ ರಿಷಬ್ ಶೆಟ್ಟಿ ಅವರ ಹುಟ್ಟೂರು ಕೆರಾಡಿಗೆ ಆಗಮಿಸಿದ್ದರು.
(4 / 9)
ಕೆರಾಡಿ ಊರನ್ನು ಪರಿಚಯಿಸಿಕೊಳ್ಳುತ್ತಲೇ, ತಾವು ಕಲಿತ ಶಾಲೆಯನ್ನೂ ರಾನಾ ಅವರಿಗೆ ತೋರಿಸಿದ್ದಾರೆ. ಆಡಿ ಬೆಳೆದ ಶಾಲೆಯ ಅಂಗಳದಲ್ಲಿಯೇ ಹರಟಿದ್ದಾರೆ.
(5 / 9)
ನಟಿ ನೇಹಾ ಶೆಟ್ಟಿ ಸಹ ರಾನಾ ಮತ್ತು ರಿಷಬ್ ಜತೆಗಿದ್ದರು. ನೇಹಾ ಸಹ ಮೂಲತಃ ಮಂಗಳೂರಿನವರು. ಇದೇ ನೆಪದಲ್ಲಿ ರಿಷಬ್ ಜತೆ ಕಾಣಿಸಿಕೊಂಡಿದ್ದಾರೆ.
(8 / 9)
ಇದಷ್ಟೇ ಅಲ್ಲ ಡಾ. ರಾಜ್‌ಕುಮಾರ್ ಅವರ ಬಬ್ರುವಾಹನ ಸಿನಿಮಾದ ಹೇಳು ಪಾರ್ಥ.. ಡೈಲಾಗ್ ಸಹ ಹೇಳಿಕೊಟ್ಟಿದ್ದಾರೆ ರಿಷಬ್. ಸದ್ಯ ಈ ಟಾಕ್ ಶೋ, ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ.
ಇತರ ಗ್ಯಾಲರಿಗಳು