Shanvi Srivastava: ಮಾಲ್ಡೀವ್ಸ್ ಕಡಲತೀರದಲ್ಲಿ ಬಿಕಿನಿ ಸುಂದರಿ ಶಾನ್ವಿ ಶ್ರೀವಾಸ್ತವ; ಮಾಸ್ಟರ್ ಪೀಸ್ ನಟಿಯ ವೈವಿಧ್ಯಮಯ ಫೋಟೋ ವೈಭವ
- Shanvi Srivastava: ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾತ್ಸವ ಇತ್ತೀಚೆಗೆ ಅಭಿಮಾನಿಗಳಿಗೆ ಬಿಕಿನಿ ಫೋಟೋ ಟ್ರೀಟ್ ನೀಡಿದ್ದಾರೆ. ಇವರ ಇನ್‌ಸ್ಟಾಗ್ರಾಂ ಇಣುಕಿದರೆ ವೈವಿಧ್ಯಮಯ ಫೋಟೋ ವೈಭವಗಳ ದರ್ಶನವಾಗುತ್ತದೆ. ಶಾನ್ವಿಯ ಸಿನಿ ಜರ್ನಿಯ ವಿವರವನ್ನು ಪಡೆಯುತ್ತ ಅವರ ಆಕರ್ಷಕ ಫೋಟೋಗಳನ್ನು ನೋಡೋಣ ಬನ್ನಿ.
- Shanvi Srivastava: ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾತ್ಸವ ಇತ್ತೀಚೆಗೆ ಅಭಿಮಾನಿಗಳಿಗೆ ಬಿಕಿನಿ ಫೋಟೋ ಟ್ರೀಟ್ ನೀಡಿದ್ದಾರೆ. ಇವರ ಇನ್‌ಸ್ಟಾಗ್ರಾಂ ಇಣುಕಿದರೆ ವೈವಿಧ್ಯಮಯ ಫೋಟೋ ವೈಭವಗಳ ದರ್ಶನವಾಗುತ್ತದೆ. ಶಾನ್ವಿಯ ಸಿನಿ ಜರ್ನಿಯ ವಿವರವನ್ನು ಪಡೆಯುತ್ತ ಅವರ ಆಕರ್ಷಕ ಫೋಟೋಗಳನ್ನು ನೋಡೋಣ ಬನ್ನಿ.
(1 / 9)
Shanvi Srivastava: ಶಾನ್ವಿ ಶ್ರೀವಾತ್ಸವ ಅವರು ಇತ್ತೀಚೆಗೆ ತನ್ನ ಫ್ರೆಂಡ್ಸ್ ಜತೆ ಮಾಲ್ಡೀವ್ಸ್‌ಗೆ ಪ್ರವಾಸ ಹೋಗಿದ್ದರು. ಮಾಲ್ಡೀವ್ಸ್‌ನಲ್ಲಿ ಬಿಕಿನಿ ಧರಿಸಿ ಇವರು ಫೋಟೋಶೂಟ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್ ಎಂದಿದ್ದಾರೆ. ಈ ಫೋಟೋಗಳ ಜತೆ ಶಾನ್ವಿಯ ಇನ್ನಿತರೆ ಇನ್‌ಸ್ಟಾಗ್ರಾಂ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.
(2 / 9)
ಶಾನ್ವಿ ಶ್ರೀವಾತ್ಸವ ಅವರು 1993ರ ಡಿಸೆಂಬರ್ 8ರಂದು ಜನಿಸಿದರು. ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾಸ್ಟರ್‌ಪೀಸ್ ಸಿನಿಮಾದ ನಟನೆಗಾಗಿ ಸೈಮಾ ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೇಸ್ ಅವಾರ್ಡ್ ಪಡೆದಿದ್ದರು. ತಾರಕ್ ಸಿನಿಮಾದ ನಟನೆಗೆ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಇವೆಡು ಸಿನಿಮಾಗಳನ್ನು ಪಡೆದ ಮೊದಲ ಕನ್ನಡ ನಟಿ ಇವರು.
(3 / 9)
ನಟಿ ಶಾನ್ವಿ ಶ್ರೀವಾತ್ಸವ ಮೂಲತಃ ವಾರಾಣಾಸಿಯವರು. ಇವರು ಉತ್ತರ ಪ್ರದೇಶದ ಚಿಲ್ಡ್ರನ್ ಕಾಲೇಜ್ ಅಜಂಗರ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು. ಮುಂಬೈನ ಠಾಕೂರ್ ಕಾಲೇಜ್ ಆಫ್ ಸೈನ್ಸ್ ಆಂಡ್ ಕಾಮರ್ಸ್‌ನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಇವರು ತಂಗಿ ವಿಧಿಶಾ ಕೂಡ ನಟಿ.
(4 / 9)
ಇವರು ಬಿಕಾಂ ಓದುವಾಗಲೇ ಲವ್‌ಲಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ತೆಲುಗಿನಲ್ಲಿ ಅಡ್ಡ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಾದ ಬಳಿ ರಾಂ ಗೋಪಲ್ ವರ್ಮಾ ಮತ್ತು ವಿಷ್ಣು ಮಂಚು ತೆಲುಗು ಸಿನಿಮಾ ರೌಡಿಯಲ್ಲಿ ನಟಿಸಿದ್ದರು.
(5 / 9)
ಬಹುತೇಕ ಕನ್ನಡ ನಟಿಯರು ಕನ್ನಡದಿಂದ ತೆಲುಗಿಗೆ ಹೋಗುತ್ತಾರೆ. ಆದರೆ, ಈ ನಟಿ ತೆಲುಗಿನಿಂದ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ.
(6 / 9)
2014ರಲ್ಲಿ ಕನ್ನಡ ಹಾರರ್ ಕಾಮಿಡಿ ಚಿತ್ರ ಚಂದ್ರಲೇಖದಲ್ಲಿ ನಟಿಸಿದರು. ಇದಾದ ಬಳಿಕ 2015ರಲ್ಲಿ ಇವರು ನಟಿಸಿದ ಮಾಸ್ಟರ್‌ಪೀಸ್ ಬಿಡುಗಡೆಯಾಯಿತು. ಮಂಜು ಮಾಂಡವ್ಯ ನಿರ್ದೇಶನದ ಈ ಚಿತ್ರದ ನಟನೆಗೆ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿ ಪಡೆದರು. ತಾರಕ್ ಸಿನಿಮಾದ ನಟನೆಗೂ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
(7 / 9)
ಇವರು ಯೆ ಟಿಯಾನ್ ಜಿ ಎಂಬ ಚೈನೀಸ್ ಡ್ರಾಮಾ ಸರಣಿಯಲ್ಲೂ ನಟಿಸಿದ್ದಾರೆ. ಆರಂಭದಲ್ಲಿ ಈ ಪಾತ್ರಕ್ಕೆ ಸನ್ನಿ ಲಿಯೋನ್‌ರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಶಾನ್ವಿಯನ್ನು ಆಯ್ಕೆ ಮಾಡಲಾಗಿತ್ತು.
(8 / 9)
ಅವನೇ ಶ್ರೀಮನ್ನಾರಾಯಣ ಮತ್ತು ಗೀತಾ ಚಿತ್ರದಲ್ಲಿ ಸ್ವತಃ ಶಾನ್ವಿ ಶ್ರೀವಾತ್ಸವ ತನ್ನ ಧ್ವನಿಗೆ ಡಬ್ಬಿಂಗ್ ಮಾಡಿದ್ದಾರೆ. ಇವರು ನಟಿಸಿರುವ ಚಿತ್ರಗಳ ವಿವರ ಈ ಮುಂದಿನಂತೆ ನೀಡಬಹುದು. ಲವ್‌ಲಿ, ಅಡ್ಡ, ಚಂದ್ರಲೇಖಾ, ರೌಡಿ, ಪ್ಯಾರ್ ಮೇನ್ ಪಡಿಪಾಯನೆ ಮುಂತಾದವು ಇವರ ಆರಂಭಿಕ ಸಿನಿಮಾಗಳು.
ಇತರ ಗ್ಯಾಲರಿಗಳು