Snakes: ಭಯ ಹುಟ್ಟಿಸುವ ಜೀವಿಯ ಭಯಂಕರ ರೂಪ; ಜಗತ್ತಿನ ಅತಿ ಉದ್ದದ 7 ಹಾವುಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Snakes: ಭಯ ಹುಟ್ಟಿಸುವ ಜೀವಿಯ ಭಯಂಕರ ರೂಪ; ಜಗತ್ತಿನ ಅತಿ ಉದ್ದದ 7 ಹಾವುಗಳಿವು

Snakes: ಭಯ ಹುಟ್ಟಿಸುವ ಜೀವಿಯ ಭಯಂಕರ ರೂಪ; ಜಗತ್ತಿನ ಅತಿ ಉದ್ದದ 7 ಹಾವುಗಳಿವು

  • ಭೂಮಿಯ ಮೇಲಿರುವ ವಿಷಕಾರಿ ಜೀವಿಗಳಲ್ಲಿ ಹಾವೂ ಸಹ ಒಂದು. ಕೈಕಾಲುಗಳಿಲ್ಲದ, ಜನರಲ್ಲಿ ಭಯ ಹುಟ್ಟಿಸುವ ಇವುಗಳನ್ನು ಅನೇಕ ಬಗೆಗಳಲ್ಲಿ ನೋಡಬಹುದಾಗಿದೆ. ಬೆರಳಿನಷ್ಟು ಉದ್ದವಿರುವ ಹಾವುಗಳಿಂದ ಹಿಡಿದು ಉದ್ದದ ಹಾವುಗಳನ್ನು ನಾವು ನೋಡಬಹುದು. ಪ್ರಪಂಚದ ಉದ್ದದ 7 ಹಾವುಗಳು ಇಲ್ಲಿವೆ.

ಭೂಮಿಯ ಮೇಲೆ ಅತಿ ಭಯ ಹುಟ್ಟಿಸುವ ಜೀವಿ ಹಾವು ಎಂದರೆ ತಪ್ಪಾಗಲಾರದು. ಹಾವಿಗೆ ಹೆದರದ ವ್ಯಕ್ತಿಯೇ ಇಲ್ಲವೆನೋ. ಹಾವು ಈ ಶಬ್ದವೇ ಮನುಷ್ಯನನ್ನು ಚಿಂತೆಗೀಡಾಗಿಸುತ್ತದೆ. ಅದಕ್ಕೆ ಕಾರಣ ಎಲ್ಲರಿಗೂ ತಿಳಿದೇ ಇದೆ. ಕಚ್ಚಿದ ಕೆಲವೇ ಸಮಯದಲ್ಲಿಯೇ ಬಲಿಪಡೆಯುವಷ್ಟು ಖ್ಯಾತಿ ಗಳಿಸಿಕೊಂಡಿದೆ. ಅತಿ ಭಯ ಹುಟ್ಟಿಸುವ ಕೈಕಾಲುಗಳಲ್ಲಿದ, ತಣ್ಣಗಿನ ರಕ್ತದ ಮಾಂಸಾಹಾರಿ ಸರಿಸೃಪವಾಗಿದೆ. ಹಾವುಗಳಲ್ಲಿ ಅನೇಕ ವಿಧಗಳಿವೆ. ಕೆಲವು ದಾಳಿ ನಡೆಸುವ ಅತಿ ವಿಷಕಾರಿಯಾಗಿದ್ದರೆ, ಇನ್ನು ಕೆಲವು ಹರಿದಾಡಲೂ ಕಷ್ಟಪಡುತ್ತಿದೆಯೇನೋ ಎಂಬ ಆಲೋಚನೆ ಬರುತ್ತದೆ. ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವ ಈ ಜೀವ ಒಂದೊಂದು ಪ್ರದೇಶದಲ್ಲಿ ಒಂದೊಂದು ಗಾತ್ರ, ಉದ್ದದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಕೈ ಬೆರಳಿನಷ್ಟು ಉದ್ದವಿದ್ದರೆ, ಇನ್ನು ಕೆಲವು ಸುಮಾರು 30 ಫೀಟ್‌ಗಳಷ್ಟು ಉದ್ದವಿರುವ ಹಾವುಗಳು ಪ್ರಪಂಚದಲ್ಲಿವೆ. ಪ್ರಪಂಚದಲ್ಲಿ ಅಂತಹ 7 ಉದ್ದನೆಯ ಹಾವುಗಳು ಯಾವುದು ಇಲ್ಲಿದೆ ನೋಡಿ. (PC: Unsplash)
icon

(1 / 8)

ಗ್ರೀನ್‌ ಅನಕೊಂಡಾ: ದಕ್ಷಿಣ ಅಮೇರಿಕಾದ ಅಮೆಜಾನ್‌ ನದೀ ತೀರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಗುವ ಗ್ರೀನ್‌ ಅನಕೊಂಡಾ ಭೂಮಿಯ ಮೇಲಿನ ಅತ್ಯಂತ ಉದ್ದ ಹಾವಾಗಿದೆ. 30 ಫೀಟ್‌ಗಳಷ್ಟು ಉದ್ದ ಬೆಳೆಯುವ ಈ ಹಾವು, 12 ಇಂಚಿನಷ್ಟು ದಪ್ಪ, 250 ಕೆಜಿ ತೂಕ ಹೊಂದಬಲ್ಲದು. (PC: unsplash)
icon

(2 / 8)

ರೆಟಿಕ್ಯುಲೇಟ್‌ ಪೈಥಾನ್‌: ಆಗ್ನೇಯ ಏಷ್ಯಾದ ಭಾಗದಲ್ಲಿ ಕಾಣಸಿಗುವ ಈ ಹಾವು ಸುಮಾರು 29 ಫೀಟ್‌ಗಳಷ್ಟು ಉದ್ದ ಬೆಳೆಯಬಲ್ಲದು ಮತ್ತು 270 ಕೆಜಿ ತೂಗಬಲ್ಲದು. (PC: pinterest)
icon

(3 / 8)

ಅಮೆಥಿಸ್ಟೈನ್‌ ಪೈಥಾನ್‌: ಜಗತ್ತಿನ ಉದ್ದನೆಯ ಹಾವುಗಳ ಪಟ್ಟಿಯಲ್ಲಿರುವ ಅಮೆಥಿಸ್ಟೈನ್‌ ಪೈಥಾನ್‌ 27 ಫೀಟ್‌ಗಳಷ್ಟು ಉದ್ದ ಬೆಳೆಯಬಲ್ಲದು. ಇದು 27 ಕೆಜಿ ತೂಕ ಹೊಂದಬಲ್ಲ ಈ ಜೀವಿ ಸಾಮಾನ್ಯವಾಗಿ ಇಂಡೋನೇಷಿಯಾ ಮತ್ತು ಪಪುವಾ ನ್ಯೂ ಗೈನಾದಲ್ಲಿ ಕಾಣಿಸುಗತ್ತದೆ. (PC: Freepik)
icon

(4 / 8)

ಬರ್ಮೀಸ್‌ ಪೈಥಾನ್‌: ಮರದ ಮೇಲೆ ಕಾಣಿಸಿಗುವ ಉದ್ದನೆಯ ಹಾವಾಗಿದೆ. ಬರ್ಮೀಸ್‌ ಪೈಥಾನ 23 ಫೀಟ್‌ ಉದ್ದದವರೆಗೆ ಬೆಳೆಯಬಲ್ಲದು. 90 ಕೆಜಿ ತೂಕ ಹೊಂದಬಲ್ಲದು. (PC:unsplash)
icon

(5 / 8)

ಬ್ಲಾಕ್‌ ಮಾಂಬಾ: ಆಫ್ರಿಕಾದ ಸವನ್ನಾ ಹಾಗೂ ದಕ್ಷಿಣ ಮತ್ತು ಪೂರ್ವದ ಗುಡ್ಡಗಾಡು ಪ್ರದೇಶದಲ್ಲಿ ಕಾಣಸಿಗುವ ಈ ಹಾವು, ಆಫ್ರಿಕಾ ಖಂಡದ ಅತಿ ಉದ್ದನೆಯ ವಿಷಪೂರಿತ ಹಾವಾಗಿದೆ. ಸುಮಾರು 14 ಫೀಟ್‌ಗಳಷ್ಟು ಬೆಳೆಯುವ ಈ ಹಾವು ಗಂಟೆಗೆ 12.5 ಕಿ.ಮಿ. ವೇಗದಲ್ಲಿ ಹರಿದಾಡುತ್ತದೆ. (Unsplash)
icon

(6 / 8)

ಬೋವಾ ಕನ್‌ಸ್ಟ್ರಿಕ್ಟರ್‌: ದಕ್ಷಿಣ ಅಮೇರಿಕಾದಲ್ಲಿ ಕಾಣಸಿಗವ ಬೋವಾ ಕನ್‌ಸ್ಟ್ರಿಕ್ಟರ್‌ 13 ಪೀಟ್‌ಗಳಷ್ಟು ಉದ್ದ ಮತ್ತು 45 ಕೆಜಿ ತೂಕದ ಜಗತ್ತಿನ ದೊಡ್ಡ ಹಾವುಗಳ ಪಟ್ಟಿಯಲ್ಲಿದೆ. ಒಮ್ಮೆ ಬೇಟೆಯಾಡಿ ತಿಂದರೆ ವಾರಗಳವರೆಗೆ ಹಾಗೆಯೇ ಇರಬಲ್ಲದು. (PC:Unsplash)
icon

(7 / 8)

ಕಿಂಗ್‌ ಕೋಬ್ರಾ: ಜಗತ್ತಿನ ಉದ್ದದ ಹಾವುಗಳ ಪಟ್ಟಿಯಲ್ಲಿ ಸೇರಿರುವುದರ ಜೊತೆಗೆ ಇದು ಅತಿ ವಿಷಕಾರಿ ಹಾವೂ ಕೂಡಾ ಆಗಿದೆ. ಸುಮಾರು 13 ಫೀಟ್‌ ಉದ್ದ ಬೆಳೆಯಬಲ್ಲ ಈ ಹಾವು ಏಷ್ಯಾ ಖಂಡದಲ್ಲಿ ಕಾಣಸಿಗುತ್ತದೆ. (PC: Unsplash)
icon

(8 / 8)

ಇತರ ಗ್ಯಾಲರಿಗಳು