ಜಾಹ್ನವಿ ಕಪೂರ್ ನೋಡಿದಾಗ ನನಗೆ ಶ್ರೀದೇವಿ ಕಣ್ಮುಂದೆ ಬಂದಂತಾಯ್ತು; ದೇವರ ಸಿನಿಮಾ ಶೂಟಿಂಗ್‌ ದಿನಗಳನ್ನು ನೆನೆದ ಜೂ. ಎನ್‌ಟಿಆರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಾಹ್ನವಿ ಕಪೂರ್ ನೋಡಿದಾಗ ನನಗೆ ಶ್ರೀದೇವಿ ಕಣ್ಮುಂದೆ ಬಂದಂತಾಯ್ತು; ದೇವರ ಸಿನಿಮಾ ಶೂಟಿಂಗ್‌ ದಿನಗಳನ್ನು ನೆನೆದ ಜೂ. ಎನ್‌ಟಿಆರ್‌

ಜಾಹ್ನವಿ ಕಪೂರ್ ನೋಡಿದಾಗ ನನಗೆ ಶ್ರೀದೇವಿ ಕಣ್ಮುಂದೆ ಬಂದಂತಾಯ್ತು; ದೇವರ ಸಿನಿಮಾ ಶೂಟಿಂಗ್‌ ದಿನಗಳನ್ನು ನೆನೆದ ಜೂ. ಎನ್‌ಟಿಆರ್‌

  • ಜಾಹ್ನವಿ ಕಪೂರ್ ಅವರನ್ನು ನೋಡಿದಾಗ ನನಗೆ ನಟಿ ಶ್ರೀದೇವಿ ಅವರ ನೆನಪಾಯಿತು ಎಂದು ಜೂನಿಯರ್ ಎನ್‌ಟಿಆರ್ ಹೇಳಿದ್ದಾರೆ. ದೇವರ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ತಾರಕ್‌ ಹೇಳಿಕೊಂಡಿದ್ದಾರೆ. ಅಂದಹಾಗೆ, ಸೆ. 27ರಂದು ದೇವರ ಸಿನಿಮಾ ತೆರೆಗೆ ಬರಲಿದೆ.

ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ದೇವರ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಎನ್‌ಟಿಆರ್ ಎದುರು ನಾಯಕಿಯಾಗಿ ನಟಿಸಿದ್ದಾರೆ. 
icon

(1 / 5)

ದೇವರ ಚಿತ್ರದ ಪ್ರಚಾರದ ಭಾಗವಾಗಿ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಯೋಜಿಸಿದ್ದ ಸಂದರ್ಶನದಲ್ಲಿ ಎನ್‌ಟಿಆರ್‌, ಜಾನ್ವಿ ಕಪೂರ್, ನಿರ್ದೇಶಕ ಕೊರಟಾಲ ಶಿವ ಮತ್ತು ಸೈಫ್ ಅಲಿ ಖಾನ್ ಭಾಗವಹಿಸಿದ್ದರು.
icon

(2 / 5)

ಈ ವೇಳೆ ಮಾತನಾಡಿದ ಎನ್‌ಟಿಆರ್‌,  ದೇವರ ಚಿತ್ರದ ಫೋಟೋಶೂಟ್ ಸಮಯದಲ್ಲಿ ಜಾಹ್ನವಿ ಕೆಲವು ಭಂಗಿಗಳಲ್ಲಿ ಶ್ರೀದೇವಿಯಂತೆ ಕಾಣುತ್ತಿದ್ದರು ಎಂದು ಎನ್‌ಟಿಆರ್‌ ಹೇಳಿದರು. “ಜಾಹ್ನವಿ ದೋಣಿಯ ಮೇಲೆ ಕುಳಿತು ಕ್ಯಾಮೆರಾವನ್ನು ನೋಡುತ್ತಿದ್ದರು. ಆಗ ಶ್ರೀದೇವಿಯಂತೆ ಕಂಡರು” ಎಂದಿದ್ದಾರೆ.  
icon

(3 / 5)

ಜಾಹ್ನವಿ ಸಿನಿಮಾದಲ್ಲಿ ನಟಿಸಿದ ರೀತಿ ಕೂಡ ಶ್ರೀದೇವಿಯನ್ನು ನೆನಪಿಸುತ್ತದೆ ಎಂದು ಎನ್‌ಟಿಆರ್ ಹೇಳಿದರು. “ಅವರ ನಟನೆ ಮತ್ತು ಅವರ ಮುಗುಳ್ನಕ್ಕ ರೀತಿ ನನಗೆ ಮತ್ತೆ ಶ್ರೀದೇವಿಯನ್ನು, ನೋಡಿದಂತೆ ಕಂಡಿತು” ಎಂದು ಎನ್‌ಟಿಆರ್‌ ಹೇಳಿದರು. 
icon

(4 / 5)

'ದೇವರ' ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಎನ್ ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಈ ಸಿನಿಮಾ ತೆರೆಗೆ ಬರಲಿದೆ.
icon

(5 / 5)

ಇತರ ಗ್ಯಾಲರಿಗಳು