Sela Pass Tunnel: ಸಿದ್ಧವಾಗುತ್ತಿದೆ ಸೆಲಾ ಪಾಸ್‌ ಸುರಂಗ ಮಾರ್ಗ: ಕಠಿಣವಾಗದು ಇನ್ನು ತವಾಂಗ್‌ ಸಂಪರ್ಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sela Pass Tunnel: ಸಿದ್ಧವಾಗುತ್ತಿದೆ ಸೆಲಾ ಪಾಸ್‌ ಸುರಂಗ ಮಾರ್ಗ: ಕಠಿಣವಾಗದು ಇನ್ನು ತವಾಂಗ್‌ ಸಂಪರ್ಕ

Sela Pass Tunnel: ಸಿದ್ಧವಾಗುತ್ತಿದೆ ಸೆಲಾ ಪಾಸ್‌ ಸುರಂಗ ಮಾರ್ಗ: ಕಠಿಣವಾಗದು ಇನ್ನು ತವಾಂಗ್‌ ಸಂಪರ್ಕ

  • ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಘರ್ಷಣೆ ಮತ್ತು ಆ ನಂತರದ ಬೆಳವಣಿಗೆಗಳು ಜಾಗತಿಕವಾಗಿ ಗಮನ ಸೆಳೆದಿವೆ. ಈ ಮಧ್ಯೆ ದುರ್ಗಮ ತವಾಂಗ್‌ಗೆ ಸುಲಭ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದ ನಿರ್ಮಾಣವೊಂದು ಯಾವುದೇ ಸದ್ದಿಲ್ಲದೇ ನಡೆಯುತ್ತಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಅರುಣಾಚಲ ಪ್ರದೇಶದ ಗಡಿ ಭಾಗವಾದ ತವಾಂಗ್‌ಗೆ ಎಲ್ಲಾ ಋತುವಿನಲ್ಲೂ ಸುಲಭ ಸಂಪರ್ಕವನ್ನು ಒದಗಿಸುವ, ಸೆಲಾ ಪಾಸ್ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 
icon

(1 / 5)

ಅರುಣಾಚಲ ಪ್ರದೇಶದ ಗಡಿ ಭಾಗವಾದ ತವಾಂಗ್‌ಗೆ ಎಲ್ಲಾ ಋತುವಿನಲ್ಲೂ ಸುಲಭ ಸಂಪರ್ಕವನ್ನು ಒದಗಿಸುವ, ಸೆಲಾ ಪಾಸ್ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. (ANI)

13,000 ಅಡಿ ಎತ್ತರದಲ್ಲಿ ಸೆಲಾ ಪಾಸ್‌ ಸುರಂಗ ಮಾರ್ಗ ನಿರ್ಮಾಣವಾಗುತ್ತಿದ್ದು, ತವಾಂಗ್‌ನ ದುರ್ಗಮ ಸ್ಥಳಗಳನ್ನು ಅತ್ಯಂತ ಸುಲಭವಾಗಿ ತಲುಪಬಹುದಾಗಿದೆ.
icon

(2 / 5)

13,000 ಅಡಿ ಎತ್ತರದಲ್ಲಿ ಸೆಲಾ ಪಾಸ್‌ ಸುರಂಗ ಮಾರ್ಗ ನಿರ್ಮಾಣವಾಗುತ್ತಿದ್ದು, ತವಾಂಗ್‌ನ ದುರ್ಗಮ ಸ್ಥಳಗಳನ್ನು ಅತ್ಯಂತ ಸುಲಭವಾಗಿ ತಲುಪಬಹುದಾಗಿದೆ.(ANI)

BRO ಸೆಲಾ ಪಾಸ್ ಸುರಂಗ ಮಾರ್ಗದ ನಿರ್ಮಾಣ ಮಾಡುತ್ತಿದ್ದು, ಇದು 2023ರ ಜುಲೈ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ‌ ಎಂದು ನಿರ್ಮಾಣ ಕಾಮಗಾರಿ ಸಿಬ್ಬಂದಿ ನಂದ್‌ ಕಿಶೋರ್‌ ತಿಳಿಸಿದ್ದಾರೆ.
icon

(3 / 5)

BRO ಸೆಲಾ ಪಾಸ್ ಸುರಂಗ ಮಾರ್ಗದ ನಿರ್ಮಾಣ ಮಾಡುತ್ತಿದ್ದು, ಇದು 2023ರ ಜುಲೈ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ‌ ಎಂದು ನಿರ್ಮಾಣ ಕಾಮಗಾರಿ ಸಿಬ್ಬಂದಿ ನಂದ್‌ ಕಿಶೋರ್‌ ತಿಳಿಸಿದ್ದಾರೆ.(ANI)

ಭಾರತದ ರಕ್ಷಣಾ ದೃಷ್ಟಿಯಿಂದ ಸೆಲಾ ಪಾಸ್‌ ಸುರಂಗ ಮಾರ್ಗ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇದರ ನಿರ್ಮಾಣದಿಂದ ಗಡಿಗೆ ಭಾರತೀಯ ಸೇನಾ ವಾಹನಗಳು ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ತಲುಪಬಹುದಾಗಿದ್ದು, ಎಲ್‌ಎಸಿ ರಕ್ಷಣಾ ಕ್ಷಮತೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
icon

(4 / 5)

ಭಾರತದ ರಕ್ಷಣಾ ದೃಷ್ಟಿಯಿಂದ ಸೆಲಾ ಪಾಸ್‌ ಸುರಂಗ ಮಾರ್ಗ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇದರ ನಿರ್ಮಾಣದಿಂದ ಗಡಿಗೆ ಭಾರತೀಯ ಸೇನಾ ವಾಹನಗಳು ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ತಲುಪಬಹುದಾಗಿದ್ದು, ಎಲ್‌ಎಸಿ ರಕ್ಷಣಾ ಕ್ಷಮತೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.(ANI)

ಇದೇ ಕಾರಣಕ್ಕೆ ಚೀನಾ ಈ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು ವಿರೋಧಿಸುತ್ತಿದ್ದು, ಇತ್ತೀಚಿಗೆ ಭಾರತೀಯ ಯೋಧರೊಂದಿಗೆ ಚೀನಾ ಯೋಧರು ಘರ್ಷಣೆ ನಡೆಸಿರುವ ಹಿಂದೆಯೂ ಇದೇ ಕಾರಣವಿದೆ ಎಂದು ಹೇಳಲಾಗುತ್ತಿದೆ.
icon

(5 / 5)

ಇದೇ ಕಾರಣಕ್ಕೆ ಚೀನಾ ಈ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು ವಿರೋಧಿಸುತ್ತಿದ್ದು, ಇತ್ತೀಚಿಗೆ ಭಾರತೀಯ ಯೋಧರೊಂದಿಗೆ ಚೀನಾ ಯೋಧರು ಘರ್ಷಣೆ ನಡೆಸಿರುವ ಹಿಂದೆಯೂ ಇದೇ ಕಾರಣವಿದೆ ಎಂದು ಹೇಳಲಾಗುತ್ತಿದೆ.(ANI)


ಇತರ ಗ್ಯಾಲರಿಗಳು