ಸಿಂಹ ಮೆರೆವ ಕಾಡಿನಲ್ಲಿ.. ಕದ್ದು ಬಂತು ಗುಳ್ಳೆ ನರಿ..; ಸುದೀಪ್ ಮ್ಯಾಕ್ಸ್​ ಚಿತ್ರದ 2ನೇ ಹಾಡು ರಿಲೀಸ್, ಇಲ್ಲಿದೆ ಸಿಂಹ ಘರ್ಜನೆ ಸಾಹಿತ್ಯ
ಕನ್ನಡ ಸುದ್ದಿ  /  ಮನರಂಜನೆ  /  ಸಿಂಹ ಮೆರೆವ ಕಾಡಿನಲ್ಲಿ.. ಕದ್ದು ಬಂತು ಗುಳ್ಳೆ ನರಿ..; ಸುದೀಪ್ ಮ್ಯಾಕ್ಸ್​ ಚಿತ್ರದ 2ನೇ ಹಾಡು ರಿಲೀಸ್, ಇಲ್ಲಿದೆ ಸಿಂಹ ಘರ್ಜನೆ ಸಾಹಿತ್ಯ

ಸಿಂಹ ಮೆರೆವ ಕಾಡಿನಲ್ಲಿ.. ಕದ್ದು ಬಂತು ಗುಳ್ಳೆ ನರಿ..; ಸುದೀಪ್ ಮ್ಯಾಕ್ಸ್​ ಚಿತ್ರದ 2ನೇ ಹಾಡು ರಿಲೀಸ್, ಇಲ್ಲಿದೆ ಸಿಂಹ ಘರ್ಜನೆ ಸಾಹಿತ್ಯ

Max Movie Song: ಡಿಸೆಂಬರ್​ 25ರಂದು ಕ್ರಿಸ್​​ಮಸ್​ಗೆ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್​ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ.

ಸಿಂಹ ಮೆರೆವ ಕಾಡಿನಲ್ಲಿ.. ಕದ್ದು ಬಂತು ಗುಳ್ಳೆ ನರಿ..; ಸುದೀಪ್ ಮ್ಯಾಕ್ಸ್​ ಚಿತ್ರದ 2ನೇ ಹಾಡು ರಿಲೀಸ್, ಇಲ್ಲಿದೆ ಸಿಂಹ ಘರ್ಜನೆ ಸಾಹಿತ್ಯ
ಸಿಂಹ ಮೆರೆವ ಕಾಡಿನಲ್ಲಿ.. ಕದ್ದು ಬಂತು ಗುಳ್ಳೆ ನರಿ..; ಸುದೀಪ್ ಮ್ಯಾಕ್ಸ್​ ಚಿತ್ರದ 2ನೇ ಹಾಡು ರಿಲೀಸ್, ಇಲ್ಲಿದೆ ಸಿಂಹ ಘರ್ಜನೆ ಸಾಹಿತ್ಯ

Max Movie Song: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಡಿಸೆಂಬರ್ 25ರಂದು ಕ್ರಿಸ್​ಮಸ್​ಗೆ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಮ್ಯಾಕ್ಸ್ ಚಿತ್ರ ತಂಡ​, ಅಭಿಮಾನಿಗಳಿಗೆ ಮ್ಯಾಕ್ಸಿಮಮ್ ಎಂಟರ್​​ಟೈನ್​ಮೆಂಟ್ ನೀಡಲು ಭರ್ಜರಿ ಕಸರತ್ತು ನಡೆಸುತ್ತಿದೆ. ಡಿಸೆಂಬರ್ 25ರಂದು ಈ ಸಿನಿಮಾ 5 ಭಾಷೆಯ ಬದಲು ಕೇವಲ 3 ಭಾಷೆ ಅಂದರೆ, ಕನ್ನಡ, ತೆಲುಗು, ತಮಿಳಿನಲ್ಲಿ ಮಾತ್ರ ತೆರೆಗೆ ಬರುತ್ತಿದೆ. ಆದರೆ ಡಿಸೆಂಬರ್‌ 25ಕ್ಕೆ ಕನ್ನಡ ಅವತರಣಿಕೆ ಕರ್ನಾಟಕದಲ್ಲಿ ಬಿಡುಗಡೆಯಾಗಲಿದ್ದರೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ಡಿಸೆಂಬರ್‌ 27ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರಕ್ಕೆ ಯು\ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.

ಸಿಂಹ ಘರ್ಜನೆ ಹಾಡಿಗೆ ಬಿ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅನೂಪ್ ಭಂಡಾರಿ ಅವರ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಅವರು ಕಂಠ ಒದಗಿಸಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟು ಹಬ್ಬಕ್ಕೆ ಬಿಡುಗಡೆಯಾಗಿದ್ದ ಮ್ಯಾಕ್ಸ್​ ಚಿತ್ರದ ಮೊದಲ ಹಾಡು ಈಗಾಗಲೇ ಸೂಪರ್​ ಹಿಟ್ ಆಗಿದೆ. ಈ ಹಾಡಿಗೂ ಅನೂಪ್​ ಭಂಡಾರಿ ಅವರದ್ದೇ ಸಾಹಿತ್ಯ ಇದ್ದು, ಚೇತನ್ ಗಂಧರ್ವ ಮತ್ತು ರಾಪ್ ಎಂಸಿ ಬಿಜ್ಜು ಅವರಿಂದ ಕಂಠದಾನವಾಗಿದೆ. ಇದೀಗ 2ನೇ ಹಾಡು ಸಹ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಬ್ಲಾಕ್​ ಬಸ್ಟರ್ ಟಾಕ್ ಪಡೆಯುತ್ತಿದೆ. ಲಯನ್ ರೋರಿಂಗ್ ಲಿರಿಕಲ್ ಹಾಡು ತುಂಬಾ ಅರ್ಥಪೂರ್ಣವಾಗಿದೆ. ಜಗತ್ತಿನಲ್ಲಿ ಮೋಸ ಮಾಡುವವರ ನಿಜ ಬಣ್ಣ ಯಾವತ್ತಿದ್ದರೂ ಗೊತ್ತಾಗಲೇಬೇಕು ಎನ್ನುವ ಅರ್ಥ ಈ ಹಾಡಿನಲ್ಲಿದೆ. ಅದು ಯಾಕೆ ಎನ್ನುವುದನ್ನು ತಿಳಿಯಲು ಡಿಸೆಂಬರ್ 25ರ ತನಕ ಕಾಯಲೇಬೇಕು.

ಸಿಂಹ ಘರ್ಜನೆ ಹಾಡಿನ ಸಾಹಿತ್ಯ

ಸಿಂಹ ಮೆರೆವ ಕಾಡಿನಲ್ಲಿ...

ಡಂ ಡಂ ಡಂ ಡಂ...

ಕದ್ದು ಬಂತು ಗುಳ್ಳೆ ನರಿ...

ಡಂ ಡಂ ಡಂ ಡಂ...

ಸುಳ್ಳು ಮೋಸ ಕಪಟದಲ್ಲಿ...

ಡಂ ಡಂ ಡಂ ಡಂ...

ಸಿಂಹ ಗುಹೆ ಒಳಗೆ ನರಿ...

ಡಂ ಡಂ ಡಂ ಡಂ...

ಬೇಟೆ ಆಡಲೆಂದು ಹೋಗಿ... ಬೇಸತ್ತು ಬೆಂಡಾಗಿ...

ಕಣ್ಣು ಉರಿದು ಕೆಂಪಾಗಿ ಸುಡುವ ಕೆಂಡದಂತಾಗಿ ಕ್ರೋದ ನೆತ್ತಿ ತುದಿಗೇರಿ ಘರ್ಜಿಸಿದ ಸಿಂಹ... ಅದುರಿಹೋದ ಬ್ರಹ್ಮ...

ಡುಮ್ಡಂ... ಡಮ್ಡಂ... ಡುಮ್ಡಂ... ಡಂ

ದುಮ್ಡುಮ್ಡಮ್...ಡಮ್ಡಮ್ಡಮ್...ಡಮ್ಡಮ್ಡಮ್...

ಘರ್ಜನೆಯ ಕೇಳಲು ಆಕಾಶ ಅದರಿ ಹೋಯ್ತು...

ಬೇದರಿ ಸುರಿದ ಮಳೆ ಹನಿಗೆ ನರಿ ವೇಷ ಕಳಚಿ ಹೋಯ್ತು...

ವೇಷ ಕಳಚಿದ ನರಿಗೆ ಮೈಯೆಲ್ಲ...

ಸಿಡುಕು ಮಿಡುಕು... ಸಿಡುಕು ಮಿಡುಕು... ಸಿಡುಕು ಮಿಡುಕು... ಸಿಡುಕು ಮಿಡುಕು...

ಹೆಂಗೆ ಸಿಂಹ ಇಡ್ತಲ್ಲ ನರಿ ಬುಡಕ್ಕು…

ಮ್ಯಾಕ್ಸ್ ಚಿತ್ರದ ತಾರಾಗಣ ಮತ್ತು ತಾಂತ್ರಿಕ ಬಳಗ

ವಿ ಕ್ರಿಯೇಷನ್ಸ್ & ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್​ ಥಾನು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳಿನ ನಿರ್ದೇಶಕ ವಿಜಯ್ ಕಾರ್ತಿಕೇಯ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರವನ್ನು ಡೈರೆಕ್ಟ್ ಮಾಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಎಸ್‌ಆರ್ ಗಣೇಶ್ ಬಾಬು ಅವರ ಸಂಕಲನ, ಚೇತನ್ ಡಿಸೋಜ, ಶಿವಕುಮಾರ್ ಅವರ ಕಲಾ ನಿರ್ದೇಶನ ಸಾಹಸ ನಿರ್ದೇಶನ ಚಿತ್ರಕ್ಕಿದೆ., ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ. ಕಿಚ್ಚ ಸುದೀಪ್ ಜೊತೆಗೆ ವರಲಕ್ಷಿ ಶರತ್ ಕುಮಾರ್, ಸಂಯುಕ್ತ ಹೊರನಾಡು, ಸುನಿಲ್, ಪ್ರಮೋದ್ ಶೆಟ್ಟಿ, ಸುಧಾ ಬೆಳವಾಡಿ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

Whats_app_banner