Shambho Shiva Shankara Film Gallery: 'ಶಂಭೋ ಶಿವ ಶಂಕರ' ಸಿನಿಮಾ ಮೇಕಿಂಗ್ ಫೋಟೋ ಗ್ಯಾಲರಿ
- ಶಂಕರ್ ಕೋನಮಾನಹಳ್ಳಿ ನಿರ್ದೇಶನದ 'ಶಂಭೋ ಶಿವ ಶಂಕರ' ಚಿತ್ರೀಕರಣ ಮುಗಿದಿದ್ದು ಇತ್ತೀಚೆಗೆ ಸಿನಿಮಾ ಸೆನ್ಸಾರ್ ಕೂಡಾ ಆಗಿದೆ. ಸೆನ್ಸಾರ್ ಮಂಡಳಿಯು ಯಾವುದೇ ಕಟ್, ಮ್ಯೂಟ್ ಇಲ್ಲದೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರದ ಕೆಲವೊಂದು ಮೇಕಿಂಗ್ ಫೋಟೋಗಳು ಇಲ್ಲಿವೆ

(1 / 7)
'ಶಂಭೋ ಶಿವ ಶಂಕರ' ಚಿತ್ರಕ್ಕೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶಂಕರ್ ಕೋನಮಾನಹಳ್ಳಿ ಕಿರುತೆರೆಯಲ್ಲಿ ಪರಿಚಿತ ಹೆಸರು. ಜೋಡಿಹಕ್ಕಿ ಸೇರಿದಂತೆ ಕೆಲವೊಂದು ಧಾರಾವಾಹಿಯನ್ನು ಶಂಕರ್ ಕೋನಮಾನಹಳ್ಳಿ ನಿರ್ದೇಶಿಸಿದ್ದಾರೆ.
(2 / 7)
ಚಿತ್ರದಲ್ಲಿ ಮೂರು ಸುಂದರ ಹಾಡುಗಳಿದ್ದು ಹಿತನ್ ಹಾಸನ್ ಸಂಗೀತ ನೀಡಿದ್ದಾರೆ. ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ನಾಟಿ ಕೋಳಿ...ಹಾಡು ಹೆಚ್ಚು ವ್ಯೂವ್ಸ್ ಪಡೆದಿದೆ.
(3 / 7)
ಚಿತ್ರದಲ್ಲಿ ಸುಪ್ರಿಂ ಹೀರೋ ಶಶಿಕುಮಾರ್, ಸೋನಾಲ್ ಮಾಂಟೆರೊ, ಜೋಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್, ಡಿ.ಸಿ.ತಮ್ಮಣ್ಣ ಹಾಗೂ ಮುಂತಾದವರು ಹಾಗೂ ಇನ್ನಿತರರು ನಟಿಸಿದ್ದಾರೆ.
(4 / 7)
'ಶಂಭೋ ಶಿವ ಶಂಕರ' ಚಿತ್ರದಲ್ಲಿ ಮೂವರು ನಾಯಕರಿದ್ದಾರೆ. ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ನಾಯಕರಾಗಿ ನಟಿಸಿದ್ದಾರೆ. ಶಂಭು ಎಂಬ ಪಾತ್ರವನ್ನು ಅಭಯ್ ಪುನೀತ್, ಶಿವನ ಪಾತ್ರವನ್ನು ರಕ್ಷಕ್ ಹಾಗೂ ಶಂಕರನ ಪಾತ್ರದಲ್ಲಿ ರೋಹಿತ್ ನಟಿಸುತ್ತಿದ್ದಾರೆ.
(5 / 7)
ಸಿನಿಮಾ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲೇ ನಡೆದಿದೆ. ಹಾಡಿನ ಚಿತ್ರೀಕರಣ ಮಾತ್ರ ಭಾರತ-ಚೀನಾ ಗಡಿಯ ಲಾಹೌಲ್ ಸ್ಪಿಟಿ ಎಂಬ ಸ್ಥಳದಲ್ಲಿ ನಡೆದಿದೆ.
ಇತರ ಗ್ಯಾಲರಿಗಳು