Oppo A78: ಭಾರತಕ್ಕೆ ಬಂತು ಒಪ್ಪೊ ಎ78 ಸ್ಮಾರ್ಟ್‌ಫೋನ್, ದರ 17,499 ರೂಪಾಯಿ, ಕ್ಯಾಮೆರಾ ಹೇಗಿದೆ, ಫೀಚರ್ಸ್ ಏನೇನಿದೆ
Oppo A78 launched in India: ಒಪ್ಪೊ ಪ್ರಿಯರಿಗೆ ಸಿಹಿಸುದ್ದಿ. ಒಪ್ಪೊ ಎ78 ಸ್ಮಾರ್ಟ್‌ಫೋನ್ ಭಾರತಕ್ಕೆ ಆಗಮಿಸಿದೆ. ಇದರ ದರ 17,499 ರೂಪಾಯಿಯಿಂದ ಆರಂಭ. ಈ ಫೋನ್‌ನ ಫೀಚರ್ಸ್, ವಿಶೇಷತೆಗಳ ಚಿತ್ರ ನೋಟ ಇಲ್ಲಿದೆ.
(1 / 6)
ಒಪ್ಪೊ ಕಂಪನಿಯು ತನ್ನ ಎ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಒಪ್ಪೊ ಎ78 ಎಂಬ ಹೊಸ ಫೋನೊಂದನ್ನು ಸೇರ್ಪಡೆ ಮಾಡಿದೆ. ಇದರಲ್ಲಿ 6.4 ಇಂಚಿನ ಫುಲ್ ಎಚ್ಡಿ ಮತ್ತು ಅಮೊಲೆಡ್ ಡಿಸ್‌ಪ್ಲೇ ಇದೆ. ಇದು ಅಕ್ವಾ ಗ್ರೀನ್ ಮತ್ತು ಮಿಸ್ಟ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ದೊರಕುತ್ತದೆ. ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ನಿಮಗೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು.(oppo)
(2 / 6)
ಈ ಸ್ಮಾರ್ಟ್ ಫೋನ್ 90Hz ರಿಫ್ರೆಶ್ ರೇಟ್ ಹೊಂದಿದೆ. ಗೇಮಿಂಗ್ ಉದ್ದೇಶಕ್ಕಾಗಿ 180Hz ಟಚ್ ಸ್ಯಾಂಪ್ಲಿಂಗ್ ಇದೆ. ಕಂಪನಿಯ ಪ್ರಕಾರ ಈ ಸ್ಮಾರ್ಟ್ ಫೋನ್ ಡ್ಯೂಯೆಲ್ ಸ್ಟಿರಿಯೋ ಸ್ಪೀಕರ್‌ಗೆ ಬೆಂಬಲ ನೀಡುತ್ತದೆಯಂತೆ. (oppo)
(3 / 6)
Oppo A78 ನಲ್ಲಿ ಸ್ನಾಪ್‌ಡ್ರಾಗನ್ 680 SoC ಇದೆ. ಇದು 8ಜಿಬಿ ರಾಂ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹೊಂದಿದೆ. ಮೈಕ್ರೊಎಸ್‌ಡಿ ಕಾರ್ಡ್ ನೆರವಿನಿಂದ ಹೆಚ್ಚುವರಿಯಾಗಿ 1 ಟಿಬಿಯವರೆಗೆ ಸಂಗ್ರಹ ಸ್ಥಳಾವಕಾಶ ವಿಸ್ತರಿಸಿಕೊಳ್ಳಬಹುದು. (oppo)
(4 / 6)
ಇದರಲ್ಲಿ ಡ್ಯೂಯೆಲ್ ಸೆಟಪ್‌ನ ಕ್ಯಾಮೆರಾ ಇದೆ. ಅಂದರೆ 50 ಎಂಪಿಯ ಮುಖ್ಯ ಕ್ಯಾಮೆರಾ ಮತ್ತು 2ಎಂಪಿಯ ಡೆಪ್ತ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ 8 ಮೆಗಾ ಫಿಕ್ಸೆಲ್‌ನ ಕ್ಯಾಂಎರಾ ಇದೆ. ಆಂಡ್ರಾಯ್ಡ್ 13 ಆಧರಿತ ColorOS 13.1 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.(Flipkart)
(5 / 6)
5 ಸಾವಿರ ಎಂಎಎಚ್ ಬ್ಯಾಟರಿ ಇದೆ. 30 ನಿಮಿಷದಲ್ಲಿ ಶೇಕಡ 73ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಪ್ರತಿಪಾದಿಸಿದೆ.(oppo)
ಇತರ ಗ್ಯಾಲರಿಗಳು