Suraksha Diagnostics ipo gmp: ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒಗೆ ಬಿಡ್ ಸಲ್ಲಿಸಲು ಡಿಸೆಂಬರ್ 03 ಕೊನೆ ದಿನ, ಜಿಎಂಪಿ ವಿವರ ತಿಳಿಯಿರಿ
Suraksha Diagnostics ipo gmp: ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒ 846.25 ಕೋಟಿ ರೂಪಾಯಿಯ 1.92 ಕೋಟಿ ಷೇರುಗಳ ಮಾರಾಟದ ಕೊಡುಗೆಯಾಗಿದೆ. ಈ ಐಪಿಒಗೆ ಬಿಡ್ ಸಲ್ಲಿಸಲು ಡಿಸೆಂಬರ್ 3 ಕೊನೆಯ ದಿನವಾಗಿದೆ. ಈ ಐಪಿಒದ ಜಿಎಂಪಿ ಎಷ್ಟಿದೆ ತಿಳಿಯೋಣ.
Suraksha Diagnostics ipo gmp: ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒ ಬಿಡ್ಡಿಂಗ್ ನವೆಂಬರ್ 29ರಂದು ಆರಂಭವಾಗಿತ್ತು. ಇದು ಡಿಸೆಂಬರ್ 3, 2024ರಂದು ಮುಕ್ತಾಯಗೊಳ್ಳುತ್ತದೆ. ಅಂದರೆ, ಐಪಿಒಗೆ ಅಪ್ಲೈ ಮಾಡಲು ನಾಳೆ ಕೊನೆಯ ದಿನವಾಗಿದೆ. ಈ ಸಮಯದಲ್ಲಿ ಈ ಐಪಿಒದ ಜಿಎಂಪಿ ಎಷ್ಟಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒ ಹಂಚಿಕೆ ಡಿಸೆಂಬರ್ 4ರಂದು ಅಂತಿಮಗೊಳಿಸುವ ನಿರೀಕ್ಷೆಯಿದೆ. ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಡಿಸೆಂಬರ್ 6ರಂದು ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒ ಲಿಸ್ಟ್ ಮಾಡಲಾಗುತ್ತದೆ.
ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒದಲ್ಲಿ ಪ್ರತಿ ಷೇರಿಗೆ 420 - 441 ರೂಪಾಯಿ ನಿಗದಿಪಡಿಸಲಾಗಿದೆ. ಕನಿಷ್ಠ ಲಾಟ್ ಗಾತ್ರವು 34 ಷೇರುಗಳಾಗಿವೆ. ಚಿಲ್ಲರೆ ಹೂಡಿಕೆದಾರರಿಗೆ ಅಗತ್ಯವಿರುವ ಕನಿಷ್ಠ ಹೂಡಿಕೆಯ ಮೊತ್ತ 14,994 ರೂಪಾಯಿಯಾಗಿದೆ. sNIIಗಾಗಿ ಕನಿಷ್ಠ ಲಾಟ್ ಗಾತ್ರದ ಹೂಡಿಕೆಯು 14 ಲಾಟ್‌ಗಳು (476 ಷೇರುಗಳು). ಇಷ್ಟು ಲಾಟ್‌ಗಳಿಗೆ 209,916 ರೂಪಾಯಿ ಇರುತ್ತದೆ. bNII ಗಾಗಿ 67 ಲಾಟ್‌ಗಳನ್ನು (2,278 ಷೇರುಗಳು) ನಿಗದಿಪಡಿಸಲಾಗಿದೆ. ಇದರ ಮೊತ್ತ 1,004,598 ರೂಪಾಯಿ ಆಗಿದೆ.
- ಐಪಿಒ ಆರಂಭಿಕ ದಿನಾಂಕ: ನವೆಂಬರ್ 29, 2024
- ಐಪಿಒ ಮುಕ್ತಾಯ ದಿನಾಂಕ: ಡಿಸೆಂಬರ್ 3, 2024
- ಹಂಚಿಕೆ: ಡಿಸೆಂಬರ್ 4, 2024
- ಹಣ ಮರುಪಾವತಿಯ ಪ್ರಾರಂಭ : ಡಿಸೆಂಬರ್ 5, 2024
- ಡಿಮ್ಯಾಟ್ ಖಾತೆಗಳಿಗೆ ಷೇರು ಕ್ರೆಡಿಟ್ ಆಗುವ ದಿನ: ಡಿಸೆಂಬರ್ 5, 2024
- ಷೇರುಪೇಟೆಯಲ್ಲಿ ಲಿಸ್ಟ್ ಆಗುವ ದಿನಾಂಕ: ಡಿಸೆಂಬರ್ 6, 2024
ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒಗೆ ಬಿಡ್ ಸಲ್ಲಿಸಬಹುದೇ?
ವಿವಿಧ ಐಪಿಒಗಳಿಗೆ ಮಾರುಕಟ್ಟೆ ವಿಶ್ಲೇಷಕರು, ಷೇರುಪೇಟೆ ತಜ್ಞರು ವಿಮರ್ಶೆ ನೀಡುತ್ತಾರೆ. ಕೆಲವೊಂದು ಐಪಿಒಗೆ ಅರ್ಜಿ ಸಲ್ಲಿಸಿ ಎಂದು, ಇನ್ನು ಕೆಲವು ಐಪಿಒಗಳಿಗೆ ಅರ್ಜಿ ಸಲ್ಲಿಸಬಹುದು (ಮೇ ಅಪ್ಲೈ) ಎಂದೂ ಮತ್ತು ಕೆಲವೊಂದು ಐಪಿಒಗಳಿಗೆ ಅವಾಯ್ಡ್ (ಬೇಡ) ಎಂದು ತಿಳಿಸುತ್ತಾರೆ. ಸುರಕ್ಷಾ ಐಪಿಒಗೆ ಬಹುತೇಕ ವಿಶ್ಲೇಷಕರು (may apply) "ಅರ್ಜಿ ಸಲ್ಲಿಸಬಹುದೇನೋ" ಎಂದು ಷರಾ ಬರೆದಿದ್ದಾರೆ. ಅಂದರೆ, ಷೇರುಪೇಟೆಯ ಕುರಿತು ತಿಳಿದಿರುವವರು, ದೀರ್ಘಕಾಲದ ಹೂಡಿಕೆ ಬಯಸುವವರು ಇದರ ಮೇಲೆ ಎಚ್ಚರಿಕೆಯಿಂದ ಹೂಡಿಕೆ ಮಾಡಬಹುದು ಎಂದು ಹೇಳಿದ್ದಾರೆ.
ಸುರಕ್ಷಾ ಡಯಾಗ್ನೋಸ್ಟಿಕ್ ಐಪಿಒದ ಜಿಎಂಪಿ ಎಷ್ಟಿದೆ?
ಗ್ರೇ ಮಾರ್ಕೆಟ್ ಪ್ರೀಮಿಯಂ ನೋಡುತ್ತ ಸಾಕಷ್ಟು ಜನರು ಐಪಿಒಗೆ ಬಿಡ್ ಮಾಡುತ್ತಾರೆ. ಜಿಎಂಪಿ ಎನ್ನುವುದು ಐಪಿಒ ಪ್ರೀಮಿಯಂ ನಿರ್ಧರಿಸುವ ಅಧಿಕೃತ ಮಾನದಂಡ ಆಗಿರದೆ ಇದ್ದರೂ ಜಿಎಂಪಿ ಟ್ರೆಂಡ್‌ಗೆ ತಕ್ಕಂತೆ ಸಾಕಷ್ಟು ಐಪಿಒಗಳು ವರ್ತಿಸಿವೆ.
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಸುರಕ್ಷಾ ಕ್ಲಿನಿಕ್ ಆಂಡ್ ಡಯೋಗ್ನಸ್ಟಿಕ್ಸ್ ಐಪಿಒದ ಡಿಸೆಂಬರ್ 2ರ ಜಿಎಂಪಿ 0 ರೂಪಾಯಿ ಆಗಿದೆ. ನಾಳೆಯ ವೇಳೆಗೆ ಜಿಎಂಪಿ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ.