ರೈಲು ಪ್ರಯಾಣದ ಖುಷಿ ಅನುಭವಿಸಬೇಕಾದ್ರೆ ಈ 10 ಮಾರ್ಗಗಳಲ್ಲಿ ಸಂಚರಿಸಬೇಕು ಎನ್ನುತ್ತಾರೆ ಪ್ರವಾಸ ಪ್ರಿಯರು, ಇಲ್ಲಿದೆ ಚಿತ್ರನೋಟ
ಪ್ರವಾಸ ಬಹುತೇಕ ಎಲ್ಲರಿಗೂ ಇಷ್ಟ. ರೈಲು ಪ್ರಯಾಣ ಮಾಡ್ತಾ ಪ್ರವಾಸ ಮಾಡುವವರು ಬಹುತೇಕರು. ಅದರ ಖುಷಿ, ಸಂಭ್ರಮವೇ ಬೇರೆ. ದೀರ್ಘ ದೂರದ ರೈಲು ಪ್ರಯಾಣವಾದರೆ ಆ ಖುಷಿ ಇನ್ನಷ್ಟು ಹೆಚ್ಚು. ರೈಲು ಪ್ರಯಾಣದ ಖುಷಿ ಅನುಭವಿಸಬೇಕಾದ್ರೆ ಈ 10 ಮಾರ್ಗಗಳಲ್ಲಿ ಸಂಚರಿಸಬೇಕು ಎನ್ನುತ್ತಾರೆ ಪ್ರವಾಸ ಪ್ರಿಯರು. ಆ ಮಾರ್ಗಗಳ ಚಿತ್ರನೋಟ ಇಲ್ಲಿದೆ.
(1 / 11)
ದೀರ್ಘ ದೂರದ ರೈಲು ಪ್ರಯಾಣ ಸ್ವಲ್ಪ ಅಡ್ವೆಂಚರಸ್. ಅದೇ ರೀತಿ ಹೊಸ ಹೊಸ ಅನುಭವ ನೀಡುವಂಥದ್ದು. ವಿವಿಧ ಭೂದೃಶ್ಯಗಳನ್ನು ಒದಗಿಸುವ ರೈಲು ಪ್ರಯಾಣವು, ಪ್ರವಾಸವನ್ನು ಇಷ್ಟಪಡುವವರಿಗೆ ಆನಂದಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಅಂತಹ 10 ದೀರ್ಘ ದೂರದ ರೈಲು ಪ್ರಯಾಣದ ವಿವರ ಇಲ್ಲಿದೆ.
(2 / 11)
ಟ್ರಾನ್ಸ್-ಸೈಬೀರಿಯನ್ ರೈಲ್ವೇ, ವಿಶ್ವದ ಅತಿ ಉದ್ದದ ನಿರಂತರ ರೈಲು ಮಾರ್ಗ, ಮಾಸ್ಕೋದಿಂದ ವ್ಲಾಡಿವೋಸ್ಟಾಕ್‌ಗೆ ಮಹಾ ಪ್ರಯಾಣ ಇದಾಗಿದ್ದು ವೈವಿಧ್ಯ ಅನುಭವವನ್ನು ನೀಡುತ್ತದೆ. ಉರಲ್ ಪರ್ವತಗಳಿಂದ ಬೈಕಲ್ ಸರೋವರದ ತೀರದವರೆಗಿನ ರಷ್ಯಾದ ವೈವಿಧ್ಯಮಯ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.
(3 / 11)
ಬೀಜಿಂಗ್-ಮಾಸ್ಕೋ ರೈಲ್ವೇ, ಟ್ರಾನ್ಸ್-ಮಂಗೋಲಿಯನ್ ರೈಲ್ವೆ ಎಂದೂ ಕರೆಯಲ್ಪಡುತ್ತದೆ, ಇದು ಚೀನಾ, ಮಂಗೋಲಿಯಾ ಮತ್ತು ರಷ್ಯಾದ ಮೂಲಕ ಪ್ರಯಾಣಿಸುತ್ತದೆ. ಈ ಪ್ರಯಾಣದಲ್ಲಿ ಗೋಬಿ ಮರುಭೂಮಿ ಮತ್ತು ಭವ್ಯವಾದ ಅಲ್ಟಾಯ್ ಪರ್ವತಗಳ ಸಂಪೂರ್ಣ ಸೌಂದರ್ಯವನ್ನು ಅನುಭವಿಸಬಹುದು.
(4 / 11)
ಟೊರೊಂಟೊದಿಂದ ವ್ಯಾಂಕೋವರ್‌ಗೆ ಸಾಗುವ ಕೆನಡಾದ ರೈಲು ಮಾರ್ಗವು ವಿಶಾಲ ಹುಲ್ಲುಗಾವಲುಗಳು, ಬೆಟ್ಟಗುಡ್ಡಗಳ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಕ್ರಾಸ್-ಕಂಟ್ರಿ ಪ್ರಯಾಣದ ಅನುಭವ ಹೃದ್ಯವಾದುದು.
(5 / 11)
ಇಂಡಿಯನ್ ಪೆಸಿಫಿಕ್ ರೈಲು ಪ್ರಯಾಣವು ಸಿಡ್ನಿಯಿಂದ ಪರ್ತ್‌ವರೆಗಿನ ರೈಲು ಮಾರ್ಗದ್ದು. ಇದು ಆಸ್ಟ್ರೇಲಿಯಾದ ವೈವಿಧ್ಯಮಯ ಭೂದೃಶ್ಯಗಳನ್ನು ದಾಟಿ, ನೀಲಿ ಪರ್ವತಗಳು, ನುಲ್ಲಾರ್ಬೋರ್ ಮರುಭೂಮಿ ಮೂಲಕ ಸಾಗಿ ನಿಜವಾದ ವೈವಿಧ್ಯದ ಅನುಭವ ಕೊಡುತ್ತದೆ.
(6 / 11)
ಶಾಂಘೈ-ಲಾಸಾ ರೈಲ್ವೆಯು ಸದಾ ಗಿಜಿಗುಟ್ಟುವ ಶಾಂಘೈ ನಗರವನ್ನು ಪ್ರಶಾಂತ ಟಿಬೆಟಿಯನ್ ರಾಜಧಾನಿ ಲಾಸಾಗೆ ಸಂಪರ್ಕಿಸುತ್ತದೆ. ಈ ಪ್ರಯಾಣದಲ್ಲಿ ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ವಿಶ್ವದ ಅತಿ ಎತ್ತರದ ರೈಲುಮಾರ್ಗದ ಪ್ರಕೃತಿ ವೈವಿಧ್ಯ ವೀಕ್ಷಿಸಬಹುದು.
(7 / 11)
ಷಿಕಾಗೋದಿಂದ ಸ್ಯಾನ್ ಫ್ರಾನ್ಸಿಸ್ಕೋದವರೆಗಿನ ಈ ರೈಲು ಮಾರ್ಗದಲ್ಲಿ ಕ್ಯಾಲಿಫೋರ್ನಿಯಾ ಜೆಫಿರ್ ರಾಕಿ ಪರ್ವತಗಳು ಮತ್ತು ಗ್ರ್ಯಾಂಡ್ ಕ್ಯಾನ್ಯನ್ ಸೇರಿ ವೈವಿಧ್ಯಮಯ ಭೂದೃಶ್ಯಗಳಿವೆ. ಇದು ಅಮೆರಿಕದ ಅತ್ಯಂತ ಸುಂದರ ರೈಲು ಪ್ರಯಾಣದ ಅನುಭವ ಒದಗಿಸುವ ಮಾರ್ಗವಾಗಿದೆ.
(8 / 11)
ಘಾನ್ ರೈಲು ಅಡಿಲೇಡ್‌ನಿಂದ ಡಾರ್ವಿನ್‌ವರೆಗಿನ ರೈಲು ಪ್ರಯಾಣವಾಗಿದ್ದು, ಆಸ್ಟ್ರೇಲಿಯಾದ ಹೃದಯ ಭಾಗವನ್ನು ಹಾದುಹೋಗುತ್ತದೆ, ಶುಷ್ಕ ಭೂಮಿ ಮತ್ತು ಬೆರಗುಗೊಳಿಸುವ ಮ್ಯಾಕ್‌ಡೊನೆಲ್ ಶ್ರೇಣಿಗಳ ಒಂದು ನೋಟವನ್ನು ಈ ಪ್ರಯಾಣವು ಒದಗಿಸುತ್ತದೆ.
(9 / 11)
ಭಾರತೀಯ ರೈಲ್ವೆಯ ಮಹಾರಾಜ ಎಕ್ಸ್‌ಪ್ರೆಸ್ ಭಾರತದಾದ್ಯಂತ ರಾಯಲ್ ಪ್ರಯಾಣದ ಅನುಭವವನ್ನು ಒದಗಿಸುತ್ತದೆ, ಐಷಾರಾಮಿ ಸೌಕರ್ಯಗಳೊಂದಿಗೆ ತನ್ನ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುತ್ತದೆ. ಜೈಪುರ, ಆಗ್ರಾ ಮತ್ತು ವಾರಣಾಸಿಯಂತಹ ಸಾಂಪ್ರದಾಯಿಕ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತದೆ.
(10 / 11)
ಈಸ್ಟರ್ನ್ ಮತ್ತು ಓರಿಯಂಟಲ್ ಎಕ್ಸ್‌ಪ್ರೆಸ್‌ನಲ್ಲಿ ಥೈಲ್ಯಾಂಡ್, ಮಲೇಷಿಯಾ ಮತ್ತು ಸಿಂಗಾಪುರದ ಮೂಲಕ ಪ್ರಯಾಣ ಮಾಡುವ ಈ ರೈಲು ಅಲ್ಲಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಶೈಲಿಯಲ್ಲಿ ಬೆರಗುಗೊಳಿಸುವ ಭೂದೃಶ್ಯಗಳ ನೋಟಗಳನ್ನು ಒದಗಿಸುತ್ತದೆ.
ಇತರ ಗ್ಯಾಲರಿಗಳು