ಉತ್ತಾನಾಸನ: ನಿಮಗೆ ನಿದ್ರೆ ಸರಿಯಾಗಿ ಬರ್ತಾ ಇಲ್ವ? ಹಾಗಾದ್ರೆ ಈ ಆಸನ ಮಾಡಿ; ಇದು ಒತ್ತಡವನ್ನೂ ನಿವಾರಿಸುತ್ತೆ
- ಉತ್ತನಾಸನದ ಪ್ರಯೋಜನ: ಯೋಗಾಸನ ಮಾಡುವುದರಿಂದ ಹಲವಾರು ಪ್ರಯೋಜನಗಳು ನಿಮಗೆ ದೊರೆಯುತ್ತದೆ. ನೀವು ಆರೋಗ್ಯವಾಗಿರಬೇಕು ಎಂದರೆ ಯೋಗ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಉತ್ತಾನಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ನೋಡಿ.
- ಉತ್ತನಾಸನದ ಪ್ರಯೋಜನ: ಯೋಗಾಸನ ಮಾಡುವುದರಿಂದ ಹಲವಾರು ಪ್ರಯೋಜನಗಳು ನಿಮಗೆ ದೊರೆಯುತ್ತದೆ. ನೀವು ಆರೋಗ್ಯವಾಗಿರಬೇಕು ಎಂದರೆ ಯೋಗ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಉತ್ತಾನಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ನೋಡಿ.
(1 / 9)
ಉತ್ತಾನಾಸನ ಇದನ್ನು ನೀವು ಪ್ರತಿನಿತ್ಯ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಯಾವುದೇ ಆಸನವಾದರೂ ಅದರ ಪ್ರಯೋಜನ ಸಿಗಬೇಕೆಂದರೆ ನಿತ್ಯವೂ ಮಾಡಬೇಕು.
(2 / 9)
ಕಾಲುಗಳು, ಕೆಳ ಬೆನ್ನು ಮತ್ತು ಹೊಟ್ಟೆಯನ್ನು ಈ ಆಸನವು ಬಿಗಿಗೊಳಿಸುತ್ತದೆ. ಈ ಆಸನ ಮಾಡುವ ವಿಧಾನ ಈ ಚಿತ್ರದಲ್ಲಿ ತೋರಿಸಿದಂತೆ ಇದೆ.
(3 / 9)
ಮೊದಲಿಗೆ ನೀವು ನಿಂತು, ಆ ನಂತರ ಉಸಿರನ್ನು ಬಿಡುತ್ತಾ ಬಾಗಬೇಕು. ಬಾಗಿ ನಿಮ್ಮ ಮೊಣಕಾಲುಗಳಿಗೆ ನಿಮ್ಮ ಹಣೆಭಾಗ ತಾಗುವಷ್ಟು ಬಾಗಬೇಕು. ನಂತರ ಎರಡೂ ಕೈಗಳಿಂದ ನಿಮ್ಮ ಕಾಲನ್ನು ಹಿಡಿದುಕೊಳ್ಳಬೇಕು
(4 / 9)
ಈ ಆಸನವು ನರಮಂಡಲವನ್ನು ಶಾಂತಗೊಳಿಸುತ್ತದೆ. ಶಾಂತಗೊಳಿಸಿದ ಕಾರಣ ಇದು ನಿಮಗೆ ನಿದ್ರೆ ಬರುತ್ತದೆ. ನಿದ್ರೆ ಮಾಡಲು ಸಮಸ್ಯೆ ಆಗುತ್ತಿರುವವರು ಈ ಆಸನವನ್ನು ಮಾಡಬಹುದು.
(5 / 9)
ಬೆನ್ನು ನೋವು ನಿವಾರಣೆ ಆಗುತ್ತದೆ. ಮೊದ ಮೊದಲು ನಿಮಗೆ ಈ ಆಸನವನ್ನು ಸಂಪೂರ್ಣವಾಗಿ ಮಾಡಲು ಸಾಧ್ಯ ಆಗದೇ ಇರಬಹುದು. ಆದರೆ ನಿರಂತರ ಪ್ರಯತ್ನ ಮಾಡಿದರೆ ಇದು ಸಾಧ್ಯವಿದೆ.
(6 / 9)
ಕುತ್ತಿಗೆಯ ಒತ್ತಡವನ್ನು ಕಡಿಮೆ ಮಾಡುತ್ತದೆ. ತುಂಬಾ ಜನರು ಲ್ಯಾಪ್‌ಟಾಪ್ ಮುಂದೆ ಕೂತು ಒಂದೇ ರೀತಿ ನೋಡಿ ಕತ್ತುನೋವಿನಿಂದ ಬಳಲುತ್ತಾರೆ. ಅವರು ಈ ಆಸನದ ಪ್ರಯೋಜನ ಪಡೆಯಬಹುದು.
(7 / 9)
ನಿಮಗೇನಾದರೂ ಬೆನ್ನು ಮೂಳೆಯ ಸಮಸ್ಯೆ ಇದೆ ಎಂದಾದರೆ ನೀವು ಬೆನ್ನು ನೋವು ನಿವಾರಣೆಗೆ ಈ ಆಸನವನ್ನು ಮಾಡಬಹುದು ಎಂದುಕೊಳ್ಳಬೇಡಿ. ಬೆನ್ನುಮೂಳೆ ಸಮಸ್ಯೆ ಇದ್ದವರು ಇದನ್ನು ಮಾಡಬಾರದು.
(8 / 9)
ಯಾವುದೇ ಆಸನವನ್ನು ಮಾಡುವಾಗಲೂ ನೀವು ಪರಿಣಿತರ ಸಹಾಯವನ್ನು ತೆಗೆದುಕೊಳ್ಳಲೇಬೇಕು. ಇಲ್ಲವಾದರೆ ತಪ್ಪಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇತರ ಗ್ಯಾಲರಿಗಳು