ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಶರವೇಗದ ಅರ್ಧಶತಕ ಸಿಡಿಸಿದವರು ಯಾರು; ಟಾಪ್-6ರಲ್ಲಿಲ್ಲ ಭಾರತೀಯರು
Fastest Fifty in Test Cricket: ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರ ಯಾರು ಎಂದು ನಿಮಗೆ ತಿಳಿದಿದೆಯೇ? ಟಾಪ್-6ರಲ್ಲಿ ಭಾರತದ ಯಾವುದೇ ಆಟಗಾರನ ಹೆಸರಿಲ್ಲ. ಹಿಟ್ಟರ್ಗಳಾದ ವೀರೇಂದ್ರ ಸೆಹ್ವಾಗ್, ರಿಷಭ್ ಪಂತ್ ಕೂಡ ಟಾಪ್-6ರಲ್ಲಿ ಸ್ಥಾನ ಪಡೆದಿಲ್ಲ.
(1 / 7)
ಟಿ20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಫಿಫ್ಟಿ ಬಾರಿಸಿದವರು ಸಿಗುವುದು ತೀರಾ ವಿರಳ. ಆದರೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಅನ್ನೂ ಟಿ20 ಅಂತೆಯೇ ಆಡುತ್ತಿರುವುದನ್ನು ಗಮನಿಸಬೇಕಾದ ಸಂಗತಿ. ಹಾಗಾದರೆ, ಟೆಸ್ಟ್‌ನಲ್ಲಿ ಫಾಸ್ಟೆಸ್ಟ್ ಹಾಫ್ ಸೆಂಚುರಿ ಬಾರಿಸಿದವರು ಯಾರು? ಭಾರತದ ಬ್ಯಾಟರ್ಗಳು ಸ್ಥಾನ ಪಡೆದಿದ್ದಾರೆಯೇ? ಇಲ್ಲಿದೆ ಉತ್ತರ.
(2 / 7)
Misbah ul haq : ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅತಿವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2014ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಿಸ್ಬಾ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕವಾಗಿದ್ದು, ಈ ದಾಖಲೆಯನ್ನು ಮುರಿಯಲು ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ.(ICC X Handle)
(3 / 7)
David Warner: ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. ವಾರ್ನರ್ 2017 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಸಿಡ್ನಿ ಕ್ರಿಕೆಟ್ ಮೈದಾನವು ವಾರ್ನರ್ ಅವರ ತವರು ಮೈದಾನವೂ ಆಗಿದೆ.(ICC X Handle)
(4 / 7)
Jacques Kallis: ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಮೂರನೇ ಸ್ಥಾನದಲ್ಲಿದ್ದಾರೆ. 2005 ರಲ್ಲಿ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಕಾಲಿಸ್ ಜಿಂಬಾಬ್ವೆ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.(ICC X Handle)
(5 / 7)
Ben Stokes: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕಗಳಲ್ಲಿ ಜಾಕ್ ಕಾಲೀಸ್ ಅವರಂತೆ ಬೆನ್ ಸ್ಟೋಕ್ಸ್ ಕೂಡ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ನಾಯಕ 2024 ರಲ್ಲಿ ಬರ್ಮಿಂಗ್ಹ್ಯಾಮ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು.(ICC X Handle)
(6 / 7)
Shane Shillingford: 2014ರಲ್ಲಿ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ನ ಬೌಲರ್ ಶೇನ್ ಶಿಲ್ಲಿಂಗ್‌ಫೋರ್ಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಶಿಲ್ಲಿಂಗ್‌ಫೋರ್ಡ್ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.(WICB Media)
(7 / 7)
Shahid Afridi: 2005ರಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಶಾಹೀದ್ ಅಫ್ರಿದಿ ಈ ಸಾಧನೆ ಮಾಡಿದ್ದರು. ಬೆಂಗಳೂರು ಟೆಸ್ಟ್‌ನಲ್ಲಿ ಅಫ್ರಿದಿ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ 168 ರನ್‌ಗಳಿಂದ ಸೋಲಿಸಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ಟಾಪ್-6 ಪಟ್ಟಿಯಲ್ಲಿ ಭಾರತೀಯರು ಸ್ಥಾನ ಪಡೆದಿಲ್ಲ.(ICC X Handle)
ಇತರ ಗ್ಯಾಲರಿಗಳು