Yellow Teeth: ಹಳದಿ ಹಲ್ಲಿನ ಸಮಸ್ಯೆಯಿಂದ ನೊಂದಿದ್ದೀರಾ? ಹಲ್ಲುಗಳನ್ನು ಬಿಳಿಯಾಗಿಸಿ, ಹೊಳಪು ಹೆಚ್ಚುವಂತೆ ಮಾಡಲು ಇಲ್ಲಿವೆ ಸರಳ ಮನೆಮದ್ದುಗಳು
- Home Remedies to Whiten Teeth: ಬೆಳ್ಳನೆಯ, ಮುತ್ತಿನಂತಹ ಹಲ್ಲು ತಮ್ಮದಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ಕೆಲವರಿಗೆ ಹಳದಿ ಹಲ್ಲಿನ ಸಮಸ್ಯೆ ಇರುತ್ತದೆ. ಇದರಿಂದ ಮುಜಗರಕ್ಕೆ ಒಳಗಾಗುತ್ತಾರೆ. ಆದರೆ ಇದರ ನಿವಾರಣೆಗೆ ವೈದ್ಯರು ಅಥವಾ ಔಷಧಿ ಅಗತ್ಯವಿಲ್ಲ. ಮನೆಮದ್ದುಗಳ ಮೂಕಲವೇ ಹಲ್ಲನ್ನು ಬಿಳಿಯಾಗಿಸಬಹುದು. ಹೇಗೆ ಅಂತಿರಾ ಈ ಸ್ಟೋರಿ ಓದಿ.
- Home Remedies to Whiten Teeth: ಬೆಳ್ಳನೆಯ, ಮುತ್ತಿನಂತಹ ಹಲ್ಲು ತಮ್ಮದಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ಕೆಲವರಿಗೆ ಹಳದಿ ಹಲ್ಲಿನ ಸಮಸ್ಯೆ ಇರುತ್ತದೆ. ಇದರಿಂದ ಮುಜಗರಕ್ಕೆ ಒಳಗಾಗುತ್ತಾರೆ. ಆದರೆ ಇದರ ನಿವಾರಣೆಗೆ ವೈದ್ಯರು ಅಥವಾ ಔಷಧಿ ಅಗತ್ಯವಿಲ್ಲ. ಮನೆಮದ್ದುಗಳ ಮೂಕಲವೇ ಹಲ್ಲನ್ನು ಬಿಳಿಯಾಗಿಸಬಹುದು. ಹೇಗೆ ಅಂತಿರಾ ಈ ಸ್ಟೋರಿ ಓದಿ.
(1 / 7)
ಹಲ್ಲುಗಳು ಬಿಳಿಯಾಗಿರಬೇಕು ಎಂಬುದು ಎಲ್ಲರಿಗೂ ಆಸೆ. ಆದರೆ ಕೆಲವರಿಗೆ ಎಷ್ಟೇ ಬ್ರಷ್ ಮಾಡಿದ್ರು ಹಲ್ಲು ಬಿಳಿಯಾಗುವುದಿಲ್ಲ. ಹಾಗಾಗಿ ಹಲವರು ವೈದ್ಯರ ಬಳಿ ತಮ್ಮ ಗೋಳು ಹೇಳಿಕೊಳ್ಳುತ್ತಾರೆ. ಆದರೆ ಅದರ ಬದಲು ಈ ಮನೆಮದ್ದುಗಳನ್ನು ಬಳಸಿ ಹಲ್ಲನ್ನು ಬಿಳಿಯಾಗಿಸಬಹುದು. ಇದಕ್ಕೆ ಯಾವುದೇ ಔಷಧ ಅಥವಾ ರಾಸಾಯನಿಕಗಳ ಅಗತ್ಯವಿಲ್ಲ. ನಿಯಮಿತವಾಗಿ ಈ ವಿಧಾನ ಅನುಸರಿಸುವ ಮೂಲಕ ಹಲ್ಲುಗಳನ್ನು ಶಾಶ್ವತವಾಗಿ ಬಿಳಿಯಾಗಿಸಬಹುದು.
(2 / 7)
ಅನುವಂಶೀಯ ಸಮಸ್ಯೆಯಿಂದ ಕೆಲವರು ಹಳದಿ ಹಲ್ಲಿನ ಸಮಸ್ಯೆಯನ್ನು ಎದುರಿಸುತ್ತಾರೆ ಎನ್ನುತ್ತಾರೆ ತಜ್ಞರು. ಆದರೆ ಹಲ್ಲು ಹಳದಿಯಾಗಿರಬೇಕು ಎಂಬುದು ಪ್ರತಿಯೊಬ್ಬರ ಆಸೆ ಎನ್ನುವುದು ಸುಳ್ಳಲ್ಲ.
(3 / 7)
ಸ್ಟ್ರಾಬೆರಿ: ಈ ಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ. ಇದರಲ್ಲಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುವ ಕೆಲವು ಅಂಶಗಳಿವೆ. ಅಲ್ಲದೆ ಸ್ಟ್ರಾಬೆರಿ ತಿರುಳನ್ನು ಸ್ಮ್ಯಾಶ್ ಮಾಡಿ ವಾರಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ.
(4 / 7)
ಉಪ್ಪು ಮತ್ತು ಎಣ್ಣೆ: ಬಾಲ್ಯದಲ್ಲಿ ಅನೇಕರಿಗೆ ಉಪ್ಪು ಮತ್ತು ಸಾಸಿವೆ ಎಣ್ಣೆಯಿಂದ ಹಲ್ಲುಜ್ಜಲು ಹೇಳಲಾಗುತ್ತಿತ್ತು. ಈ ಮಿಶ್ರಣವು ಹಲ್ಲುಗಳ ನಡುವಿನ ಅಂತರದಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಹಲ್ಲುಗಳ ಹಳದಿ ಬಣ್ಣವು ಕಡಿಮೆಯಾಗುತ್ತದೆ.
(5 / 7)
ನಿಂಬೆ ಮತ್ತು ಅಡಿಗೆ ಸೋಡಾ: ಈ ಎರಡನ್ನೂ ಒಟ್ಟಿಗೆ ಮಿಶ್ರಣ ಮಾಡಿ ಮತ್ತು ವಾರಕ್ಕೆ ಒಂದು ಅಥವಾ ಎರಡು ಬಾರಿ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಹಲ್ಲುಗಳು ಬಿಳಿಯಾಗುತ್ತವೆ. ಹಳದಿ ಕಡಿಮೆಯಾಗುತ್ತದೆ.
(6 / 7)
ಬಾಳೆಹಣ್ಣಿನ ಸಿಪ್ಪೆ: ಬಾಳೆಹಣ್ಣು ತಿನ್ನುವುದು ಹಲ್ಲುಗಳಿಗೆ ಉತ್ತಮ. ಇದರಿಂದ ಹಲ್ಲುಗಳು ಬಿಳಿಯಾಗುತ್ತವೆ, ಜೊತೆಗೆ ಬೇರುಗಳು ಬಲಗೊಳ್ಳುತ್ತವೆ. ಬಾಳೆಹಣ್ಣಿನ ಸಿಪ್ಪೆಯನ್ನು ಹಲ್ಲುಗಳ ಮೇಲೆ ಉಜ್ಜುವುದರಿಂದ ಹಲ್ಲುಗಳ ಹಳದಿ ಬಣ್ಣ ನಿವಾರಣೆಯಾಗಿ ಹಲ್ಲು ಬಿಳಿಯಾಗುತ್ತದೆ.
ಇತರ ಗ್ಯಾಲರಿಗಳು