Bengaluru-Urban News, Bengaluru-Urban News in kannada, Bengaluru-Urban ಕನ್ನಡದಲ್ಲಿ ಸುದ್ದಿ, Bengaluru-Urban Kannada News – HT Kannada

Latest Bengaluru Urban Photos

ಭಾರತದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಮಾಣೀಕ್ ಷಾ ಪರೇಡ್‌ ಗ್ರೌಂಡ್‌ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಮನಸೆಳೆದ ಬುಡಕಟ್ಟು ಜನಾಂಗದ ವೇಷ.

ಬೆಂಗಳೂರಿನ ಮಾಣೀಕ್ ಷಾ ಪರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಆಕರ್ಷಕ ಫೋಟೋಸ್

Thursday, August 15, 2024

ಬೆಂಗಳೂರು ಮೆಟ್ರೋದ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರ (BIEC) ವರೆಗಿನ ರೀಚ್-3ರ ವಿಸ್ತರಿತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಸಂಚರಿಸುವ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ ವಾಗಲಿದೆ.

ಬೆಂಗಳೂರು ಮೆಟ್ರೋ ಹಸಿರು ಮಾರ್ಗ ರೀಚ್‌ 3 ಸಿಗ್ನಲಿಂಗ್ ಪರೀಕ್ಷೆ ಶುರು, ಆಗಸ್ಟ್ 15ರ ತನಕ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

Tuesday, August 13, 2024

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಗೆದ್ದರೆ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಸೋಲುಂಡಿದ್ದಾರೆ.

Karnataka Lok Sabha Result 2024: ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಕ್ಷೇತ್ರಗಳಲ್ಲಿ ಗೆದ್ದವರು-ಸೋತವರ ಪಟ್ಟಿ

Tuesday, June 4, 2024

ಬೆಂಗಳೂರು ಮಹಾನಗರದ ನಾಲ್ಕು ಬೇರೆ ಬೇರೆ ಕಡೆಗಳಲ್ಲಿ ಇಂದು (ಮೇ 10) ಬೇರೆ ಬೇರೆ ಕಾರಣಗಳಿಗೆ ವಾಹನ ಸಂಚಾರ ನಿಧಾನಗತಿಯಲ್ಲಿದೆ. ಒಂದೆಡೆ ಲಾರಿ ಕೆಟ್ಟು ನಿಂತಿದ್ದರೆ, ಇನ್ನೊಂದೆಡೆ ಮಳೆ ನೀರು, ಮತ್ತೊಂದು ಕಡೆ ಲಾರಿ ಪಲ್ಟಿಯಾಗಿದೆ. ಮಗದೊಂದು ಕಡೆ ಬಿಎಂಟಿಸಿ ಬಸ್ ಕೆಟ್ಟು ನಿಂತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಲಾರಿ ಪಲ್ಟಿ, ಬಿಎಂಟಿಸಿ ಬಸ್ ಕೆಟ್ಟು ನಿಂತು ನಿಧಾನಗತಿಯ ಸಂಚಾರ, ಇತ್ತೀಚಿನ 4 ಸಂಚಾರ ಸಲಹೆಗಳು ಹೀಗಿವೆ

Friday, May 10, 2024

ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ರೋಗಿಗಳು ಹಾಗೂ ಸಿಬ್ಬಂದಿಗಳು ಭಯಭೀತರಾಗಿದ್ದರು. ಅಗ್ನಿ ಅನಾಹುತಕ್ಕೆ ಕಾರಣ ಏನೆಂದು ತಿಳಿದಿಲ್ಲ ಆಸ್ಪತ್ರೆ ಮುಖ್ಯದ್ವಾರದ ಬಳಿ ದಟ್ಟ ಹೊಗೆ ಆವರಿಸಿಕೊಂಡಿತ್ತು.

ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌ನಲ್ಲಿ ಅಗ್ನಿ ಅನಾಹುತ, ಅದೃಷ್ಟವಶಾತ್ ರೋಗಿಗಳು ಬಚಾವ್-ಫೋಟೋಸ್‌

Tuesday, May 7, 2024

ಬೆಂಗಳೂರು ಬಾಲಕಿ ಕುಮಾರಿ ಕೀರ್ತನಾ (17) ಗೋವಿಂದ ಕೋಟಿ ಬರೆದು ತಿರುಮಲ ತಿರುಪತಿ ಸನ್ನಿಧಾನಕ್ಕೆ ಒಪ್ಪಿಸಿದ್ದು, ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ಸಮೀಪ ದರ್ಶನ ಪಡೆದು ಭಾವಪರವಶರಾದರು. ಇಷ್ಟ ದೇವರ ದರ್ಶನ ಭಾಗ್ಯ ಪಡೆದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಟಿಟಿಡಿ ಟ್ವೀಟ್ ಮಾಡಿದೆ.

ಗೋವಿಂದ ಕೋಟಿ ಬರೆದ 17 ವರ್ಷದ ಬೆಂಗಳೂರು ಬಾಲಕಿಗೆ ಶ್ರೀವಾರಿ ದೇವರ ಅನುಗ್ರಹ, ಗಮನ ಸೆಳೆಯಿತು ಟಿಟಿಡಿ ಟ್ವೀಟ್‌

Wednesday, May 1, 2024

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ  ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ

Wednesday, April 24, 2024

ಬೆಂಗಳೂರು ಮಹಾನಗರದಲ್ಲಿ ಇಂದಿನಿಂದ 10 ದಿನಗಳ ಕಾಲ ಕರಗ ಉತ್ಸವ ನಡೆಯಲಿದೆ. ಬೆಂಗಳೂರು ಕರಗ 2024 ರ 10 ದಿನ ಕರಗ ಉತ್ಸವಗಳು ಮತ್ತು ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ವಿವರ ಇಲ್ಲಿದೆ.

ಬೆಂಗಳೂರು ಕರಗ 2024; ಇಂದಿನಿಂದ 10 ದಿನ ಕರಗ ಉತ್ಸವ, ನಿತ್ಯದ ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ

Monday, April 15, 2024

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾ ಶಿವಕುಮಾರ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರವಾಗಿ ಮತಯಾಚಿಸಿದರು.

Lok Sabha Election2024: ಸಿಎಂ, ಮಾಜಿ ಸಿಎಂ ಸಹಿತ ಪ್ರಮುಖರ ಪ್ರಚಾರ ಜೋರು, ಮೈದುನ ಪರ ಅಖಾಡಕ್ಕಿಳಿದ ಡಿಕೆಶಿ ಪತ್ನಿ photos

Sunday, April 7, 2024

ದೆಹಲಿ//
ಭಾರತದ ರಾಜಧಾನಿ ದೆಹಲಿ ಬರೀ ಪರಿಸರ ಮಾಲಿನ್ಯ ನಗರಿಯಲ್ಲ. ನೀರಿನ ಸಮಸ್ಯೆಯೂ ಆಗಾಗ ಕೆಲವು ಕಡೆ ಕಾಡುತ್ತಲೇ ಇರುತ್ತದೆ. ಈ ಬಾರಿ ಯಮುನಾ ನದಿ ಉಕ್ಕಿ ಹರಿದು ದೆಹಲಿ ನಗರ ದ್ವೀಪವಾದರೂ ನೀರಿನ ಸಮಸ್ಯೆಯೂ ಇಲ್ಲಿದೆ. ಈಗಲೂ ಮಾಲಿನ್ಯಗೊಂಡ ಯಮುನಾ ನದಿಯಿಂದಲೇ ನೀರನ್ನು ಶುದ್ದೀಕರಿಸಿ ದೆಹಲಿ ಜನರಿಗೆ ನೀಡಲಾಗುತ್ತಿದೆ. ದೆಹಲಿಯ ಹಲವಾರು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೆಹಲಿ ಸರ್ಕಾರ ಸಮಸ್ಯೆ ಬಿಗಡಾಯಿಸದಂತೆ ಹೆಣಗಾಡುತ್ತಿದೆ.

Water Crisis: ಬೆಂಗಳೂರು ಮಾತ್ರವಲ್ಲ, ಭಾರತದ ಈ 6 ಮಹಾನಗರಗಳಲ್ಲೂ ಕಾಡಲಿದೆ ನೀರಿನ ಸಮಸ್ಯೆ Photos

Thursday, March 21, 2024

ಜೀವನ ಅನ್ನೋದು ಒಂದು ಪರೀಕ್ಷೆ. ಅಲ್ಲಿ ಸಿಲೆಬೆಸ್ ಗೊತ್ತಿರಲ್ಲ. ಪ್ರಶ್ನೆ ಪತ್ರಿಕೆ ತಯಾರು ಮಾಡಿರಲ್ಲ. ಮಾದರಿ ಪ್ರಶ್ನೆ ಪತ್ರಿಕೆಯಂತು ಸಿಗೋದೇ ಇಲ್ಲ.

Women's Day Special: ಅಂತಾರಾಷ್ಟ್ರೀಯ ಮಹಿಳಾ ದಿನ; ಲೇಖಕಿ ಸುಧಾ ಮೂರ್ತಿಯವರ ಜೀವನಾನುಭವದ 10 ನುಡಿಮುತ್ತುಗಳು

Friday, March 8, 2024

ಬೆಂಗಳೂರು ಮಹಾನಗರ  ಪಾಲಿಕೆ ವ್ಯಾಪ್ತಿಯಲ್ಲಿನ ಹೊಸ ಲೇ-ಔಟ್‌ಗಳಲ್ಲಿ ಹೊಸದಾಗಿ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆ, ಇತ್ಯಾದಿ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಈ ಬಾರಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

BBMP Budget2024: ರಸ್ತೆ, ಕೆರೆ, ಶಾಲೆ, ಹಸುರೀಕರಣ, ಬೆಂಗಳೂರು ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ 10 ಕಾರ್ಯಕ್ರಮಗಳು Photos

Thursday, February 29, 2024

ಬೆಂಗಳೂರಿನಲ್ಲಿ ಈಗ ಹಲವು ರಸ್ತೆಗಳಲ್ಲಿ ಟಬೂಬಿಯಾ ರೋಸಿಯಾ ಮರದ ಕಂಪು, ಅದನ್ನು ನೋಡಲು ಚೆಂದವೋ ಚಂದ.

Pink Bangalore: ಬೆಂಗಳೂರು ರಸ್ತೆಗಳೆಲ್ಲಾ ಗುಲಾಬಿಯಾದವೋ, ಟಬೂಬಿಯಾ ರೋಸಿಯಾ ಮರದ ಕಂಪು ಹೇಗಿದೆ ನೋಡಿ Photos

Sunday, February 18, 2024

ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

ಬೆಂಗಳೂರು ಮಹಾನಗರದಲ್ಲಿ ಸೋಮವಾರ ಸಂಜೆಯ ನಂತರ ಭಾರಿ ಮಳೆ ಬಿದ್ದ ಬಳಿಕ, ಮಂಗಳವಾರ ಬೆಳಗ್ಗೆ ಆಗಸದಲ್ಲಿ ಕಣ್ಮನ ಸೆಳೆಯುವ ದೃಶ್ಯ ಕಂಡುಬಂದಿತ್ತು. ಮನಮೋಹಕ ದೃಶ್ಯಗಳನ್ನು ಬೆಂಗಳೂರಿಗರು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ದೃಶ್ಯಗಳು ವೈರಲ್ ಆಗಿವೆ.

Bengaluru Rainbow: ಬೆಂಗಳೂರಿನ ಆಗಸದಲ್ಲಿಂದು ಕಾಮನಬಿಲ್ಲಿನ ಚಿತ್ತಾರ, ಮಳೆಯ ನಂತರ ಮೋಡಿ ಮಾಡಿತು ಮಳೆಬಿಲ್ಲು

Tuesday, November 7, 2023

ಮೈಸೂರಿನ ಇಸ್ಕಾನ್‌ನಲ್ಲಿ ಕೃಷ್ಣಜನ್ಮಾಷ್ಟಮಿಗೆ ಸಿದ್ದಪಡಿಸಲಾಗಿರುವ ಕೃಷ್ಣ ಬಲರಾಮರ ನೃತ್ಯ ವೈಭವದ ಮೂರ್ತಿಗಳು.

Iskon krishna janmashtami: ಕರ್ನಾಟಕದ ಇಸ್ಕಾನ್‌ಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ: ಹೀಗಿತ್ತು ಕೃಷ್ಣ ವೈಭವ

Thursday, September 7, 2023

ಕರ್ನಾಟಕ ಬಹುತೇಕ ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ. ತಾಲೂಕುಮಟ್ಟದಲ್ಲಿ ಕೆಲವು ಕಡೆ ಬರಪರಿಸ್ಥಿತಿ ತಲೆದೋರಿದೆ. ಎಲ್ಲೆಡೆ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ಇಂದು (ಆ.31) ಪ್ರಕಟಿಸಿರುವ ಮಳೆ ಮುನ್ಸೂಚನೆ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆ ಆಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

Weather Updates: ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಮಳೆ, ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ; ಇಲ್ಲಿದೆ ವಿವರ

Thursday, August 31, 2023

ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಶಿವಮೊಗ್ಗ ಲಯನ್ಸ್‌ ತಂಡವು 11 ರನ್‌ಗಳಿಂದ ಮಣಿಸಿತು. ಆ ಮೂಲಕ ಸೆಮೀಸ್‌ ಸ್ಥಾನ ಖಚಿತಪಡಿಸಿತು.

ಕೊನೆಯ ತಂಡವಾಗಿ ಮಹಾರಾಜ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದ ಶಿವಮೊಗ್ಗ ಲಯನ್ಸ್‌

Sunday, August 27, 2023

ಮಹಿಳೆಯರು, ಪೀಳಿಗೆಯನ್ನು ಬದಲಾಯಿಸುತ್ತಲೇ ಅವರೂ ಬದಲಾಗುವುದನ್ನು ಸಂಭ್ರಮಿಸುವುದೇ ತನೈರಾ ಸೀರೆ ಓಟದ ಉದ್ದೇಶ. ಇದು ಮಹಿಳೆಯರಿಗೆಂದೇ ವಿಶೇಷವಾಗಿ ನಡೆಯುವ ಓಟ. ತಾಯಿ-ಮಗಳು, ಅತ್ತೆ-ಸೊಸೆ, ಒಂದಿಡೀ ಕುಟುಂಬ, ಮೂರು ತಲೆಮಾರಿನ ತಾಯಿ, ಮಗಳು, ಮೊಮ್ಮಗಳು, ಸ್ನೇಹಿತರ ಗುಂಪು ಹೀಗೆ ವೈವಿಧ್ಯಮಯವಾಗಿ ಮಹಿಳೆಯರು ಓಟಕ್ಕಿಳಿದರು. ಮಹಿಳಾ ಸಂಘಸಂಸ್ಥೆಗಳ ಸದಸ್ಯರು, ಅಪಾರ್ಟ್‌ಮೆಂಟ್‌ಗಳ ಮಹಿಳೆಯರು, ಅವರಿಗೆ ಜೊತೆಯಾದರು. ತಮ್ಮ ವೈಯಕ್ತಿಕ ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸುವುದರ ಜೊತೆಗೆ ಎಲ್ಲ ಬಗೆಯ ಸಾಮಾಜಿಕ ಸಂಕೋಲೆಗಳನ್ನು ಕಿತ್ತುಹಾಕುವ ಉತ್ಸಾಹ ಮಹಿಳೆಯರಲ್ಲಿತ್ತು.

Photos: ಸೀರೆಯುಟ್ಟು, ನಾಚಿಕೆ ಬದಿಗಿಟ್ಟು ಓಡಿದ ನೀರೆಯರು; ಬೆಂಗಳೂರಲ್ಲಿ ಗಮನ ಸೆಳೆದ ಸೀರೆ ಓಟ

Sunday, August 27, 2023