delhi-capitals News, delhi-capitals News in kannada, delhi-capitals ಕನ್ನಡದಲ್ಲಿ ಸುದ್ದಿ, delhi-capitals Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಡೆಲ್ಲಿ ಕ್ಯಾಪಿಟಲ್ಸ್

Latest delhi capitals Photos

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಜೇಯ ಅರ್ಧಶತಕ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್​ ಬ್ಯಾಟರ್​ ಕೆಎಲ್ ರಾಹುಲ್ ಭರ್ಜರಿ ಮೂರು ದಾಖಲೆಗಳನ್ನು ಮುರಿದಿದ್ದಾರೆ.

ಡೇವಿಡ್ ವಾರ್ನರ್​ ಹಿಂದಿಕ್ಕಿ ಐಪಿಎಲ್​ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್, ಏನದು?

Wednesday, April 23, 2025

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಏಕೈಕ ಸಿಕ್ಸರ್​ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್​ ಕೆಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.

ಬೃಹತ್ ಮೈಲಿಗಲ್ಲು ತಲುಪಿದ ಕೆಎಲ್ ರಾಹುಲ್; ಐಪಿಎಲ್​ನಲ್ಲಿ ಭಾರತದ ನಯಾ ಸಿಕ್ಸರ್ ಕಿಂಗ್

Sunday, April 20, 2025

ಫಾಫ್ ಡು ಪ್ಲೆಸಿಸ್ ಫಿಟ್ ಆದರೆ, ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆಯಬಹುದು. ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ್ದ ಜೇಕ್ ಫ್ರೇಸರ್, ಈ ಬಾರಿ ಆಡಿದ 6 ಇನ್ನಿಂಗ್ಸ್‌ಗಳಲ್ಲಿ 105.76ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 55 ರನ್ ಮಾತ್ರ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಶನಿವಾರ ಡಬಲ್ ಧಮಾಕಾ; 2 ರೋಚಕ ಪಂದ್ಯಗಳ 10 ಪ್ರಮುಖ ಅಂಶಗಳು

Friday, April 18, 2025

2022ರ ನಂತರ ಐಪಿಎಲ್​ನಲ್ಲಿ ಕಣಕ್ಕಿಳಿದು ಅಬ್ಬರಿಸಿದ ಕರುಣ್ ನಾಯರ್ 2025ರ ಆವೃತ್ತಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಸ್ಮರಣೀಯ ಇನ್ನಿಂಗ್ಸ್ ಕಟ್ಟುವುದರೊಂದಿಗೆ ದಾಖಲೆ ನಿರ್ಮಿಸಿದ್ದಾರೆ.

ಇತಿಹಾಸ ನಿರ್ಮಿಸಿದ ಕರುಣ್ ನಾಯರ್; ಎರಡು ಅರ್ಧಶತಕಗಳ ಅಂತರದ ವಿಶ್ವದಾಖಲೆ

Monday, April 14, 2025

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 13) ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್​​ಗಳ ಸೋಲನುಭವಿಸಿದೆ. ಸೋತ ಬೆನ್ನಲ್ಲೇ ನಾಯಕ ಅಕ್ಷರ್ ಪಟೇಲ್​ಗೆ ಬಿಸಿಸಿಐ ಆಘಾತ ನೀಡಿದೆ.

ಮೊದಲ ಸೋಲಿನ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್​ ಪಟೇಲ್​ಗೆ ದಂಡದ ಬರೆ

Monday, April 14, 2025

ಐಪಿಎಲ್‌ನಲ್ಲಿ ಆರ್‌ಆರ್‌ ಮತ್ತು ಆರ್‌ಸಿಬಿ ತಂಡಗಳು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಆರ್‌ಸಿಬಿ 15 ಪಂದ್ಯಗಳಲ್ಲಿ ಗೆದ್ದರೆ, ರಾಜಸ್ಥಾನ 14 ಪಂದ್ಯಗಳನ್ನು ಗೆದ್ದಿದೆ.

IPL 2025: ಹಸಿರು ಜೆರ್ಸಿಯಲ್ಲಿ ಬದಲಾಗುತ್ತಾ ಆರ್‌ಸಿಬಿ ಅದೃಷ್ಟ; ಇಂದಿನ ಐಪಿಎಲ್‌ ಪಂದ್ಯಗಳ 10 ಆಸಕ್ತಿಕರ ಅಂಶಗಳು

Saturday, April 12, 2025

ಏಪ್ರಿಲ್‌ 10ರಂದು ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 6 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಕಳಪೆ ಸಾಧನೆ; ತವರಲ್ಲಿ ಹೆಚ್ಚು ಪಂದ್ಯ ಸೋತ ತಂಡ ಎಂಬ ಹಣೆಪಟ್ಟಿ

Friday, April 11, 2025

2025ರ ಇಂಡಿಯನ್ ಪ್ರೀಮಿಯರ್ ಲೀಗ್​ 24ನೇ ಪಂದ್ಯದಲ್ಲಿ ಅಜೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲಿಗೆ ಸಜ್ಜಾಗಿದೆ. ಆರ್​ಸಿಬಿ ತವರಿನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸುವ ಗುರಿ ಹೊಂದಿದೆ. ಮತ್ತೊಂದೆಡೆ ತವರಿನ ಅಭಿಮಾನಿಗಳ ಮುಂದೆ ರಾಯಲ್ ಚಾಲೆಂಜರ್ಸ್ ಮೊದಲ ಜಯದ ಹಂಬಲದಲ್ಲಿದೆ.  ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ತವರಿನಲ್ಲಿ ಆರ್​ಸಿಬಿಗೆ ಸೋಲೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ಸವಾಲು; ಇಂದಿನ ಹೈವೋಲ್ಟೇಜ್ ಕದನದ ಪ್ರಮುಖ ಅಂಶಗಳು

Wednesday, April 9, 2025

ಅತ್ತ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯಗಳು ಹೆಚ್ಚಾಗಿ ಹೈ ಸ್ಕೋರಿಂಗ್‌ಗೆ ಸಾಕ್ಷಿ ಆಗಿವೆ. ಮೈದಾನದಲ್ಲಿ ಸ್ಪಿನ್ನರ್‌ಗಳು ಸಹಾಯ ಪಡೆದ ಕೆಲವು ನಿದರ್ಶನಗಳಿವೆಯಾದರೂ, ಬ್ಯಾಟರ್‌ಗಳು ಹೆಚ್ಚು ಮೇಲುಗೈ ಸಾಧಿಸುತ್ತಾರೆ. ಆದರೆ, ಪ್ರಸಕ್ತ ಆವೃತ್ತಿಯಲ್ಲಿ ಈ ಸ್ಟೇಡಿಯನಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. ಹೀಗಾಗಿ ವಿಕೆಟ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಟೇಬಲ್ ಟಾಪರ್ಸ್‌ಗೆ ಮಾಜಿ ಚಾಂಪಿಯನ್‌ಗಳ ಸವಾಲು; ಇಂದಿನ ಐಪಿಎಲ್ ಪಂದ್ಯಗಳ 10 ಅಂಶಗಳು

Friday, April 4, 2025

ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾದ ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಪಂದ್ಯದ ವೇಳೆ ಅಮೋಘ ಪ್ರದರ್ಶನ ನೀಡಿದರು. ಡೆಲ್ಲಿ ತಂಡದ ಭಾಗವಾಗಿರುವ ಸ್ಟಾರ್ಕ್ 3.4 ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟು 5 ವಿಕೆಟ್‌ಗಳನ್ನು ಪಡೆದ್ದಾರೆ. ಇದರೊಂದಿಗೆ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್‌ನಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಹಿರಿಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 35 ವರ್ಷ 59 ​​ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಪಟ್ಟಿಯಲ್ಲಿ ಸ್ಟಾರ್ಕ್ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಐಪಿಎಲ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಅತಿ ಹಿರಿಯ ಆಟಗಾರರಿವರು; ಪಟ್ಟಿಗೆ ಮಿಚೆಲ್ ಸ್ಟಾರ್ಕ್ ಹೊಸ ಸೇರ್ಪಡೆ

Monday, March 31, 2025

ಕೊನೆಯ ಪಂದ್ಯದಲ್ಲಿ ಆಡಿದ್ದ ವೇಗಿ ಸಿಮರ್‌ಜೀತ್ ಸಿಂಗ್ ಬದಲಿಗೆ ಆಡಿದ ಝೀಶನ್, ತಂಡದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಉತ್ತರ ಪ್ರದೇಶದ ಬೌಲರ್‌ಅನ್ನು ತಂಡಕ್ಕೆ ಸೇರಿಸಲಾಯಿತು, ಪಂದ್ಯದಲ್ಲಿ ಎಸ್‌ಆರ್‌ಎಚ್‌ ಗೆಲುವು ಸಾಧಿಸಲು ಸಾಧ್ಯವಾಗದಿದ್ದರೂ, ಅನ್ಸಾರಿ ತಮ್ಮ ಸ್ಪಿನ್ ಬೌಲಿಂಗ್‌ನಿಂದ ಎಲ್ಲರನ್ನೂ ಮೆಚ್ಚಿಸಿದರು.

ಎಸ್‌ಆರ್‌ಎಚ್‌ ಪರ ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲೇ 3 ವಿಕೆಟ್; ರಿಷಭ್ ಪಂತ್ ಜತೆಗೆ ಅಂಡರ್-19 ಆಡಿದ್ದ ಝೀಶನ್ ಅನ್ಸಾರಿ ಯಾರು

Sunday, March 30, 2025

ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈವರೆಗೆ ನಡೆದ ಐಪಿಎಲ್ ಪಂದ್ಯಗಳಲ್ಲಿ 8.57ರ ರನ್ ರೇಟ್‌ನಲ್ಲಿ ರನ್‌ ಒಟ್ಟಾಗಿದೆ. ಭಾರತದ ಇತರ ಕ್ರೀಡಾಂಗಣದಂತೆ ಇಲ್ಲಿ ರನ್‌ ಮಳೆ ಹರಿದು ಬರುವುದಿಲ್ಲ. ಮೇಲ್ಮೈ ಸ್ವಲ್ಪ ಒಣಗಿದಂತಿದ್ದು ಹೆಚ್ಚು ಹುಲ್ಲಿನ ಹೊದಿಕೆ ಇಲ್ಲ. ಇಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ.

IPL 2025: ವಾರಂತ್ಯ ದಿನ ಡಬಲ್ ಮನರಂಜನೆ: ಭಾನುವಾರದ 2 ಐಪಿಎಲ್ ಪಂದ್ಯಗಳ 10 ಅಂಶಗಳು ಇಲ್ಲಿವೆ

Saturday, March 29, 2025

ಚೆನ್ನೈ ಸೂಪರ್ ಕಿಂಗ್ಸ್ 2025ರ ಐಪಿಎಲ್​​ನಲ್ಲಿ​ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನೊಂದಿಗೆ ಪ್ರಾರಂಭಿಸಿತು. ಆದಾಗ್ಯೂ, ತವರಿನಲ್ಲಿ ತಮ್ಮ 2ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತರು. ಇದರೊಂದಿಗೆ ಚೆನ್ನೈ ಆಡಿರುವ 2 ಪಂದ್ಯಗಳಲ್ಲಿ 2 ಅಂಕ ಗಳಿಸಿದೆ. ಅವರ ನೆಟ್ ರನ್ ರೇಟ್ -1.013 ಆಗಿದ್ದು,4ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ.

ಐಪಿಎಲ್ ಅಂಕಪಟ್ಟಿ: ಆರ್​​​ಸಿಬಿ ವಿರುದ್ಧ ಸೋತ ಬೆನ್ನಲ್ಲೇ ಭಾರಿ ಕುಸಿದ ಸಿಎಸ್​ಕೆ, ಬೆಂಗಳೂರು ಅಗ್ರಸ್ಥಾನ ಭದ್ರ

Saturday, March 29, 2025

ಸನ್​ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ರನ್ನಿಂದ ಗೆದ್ದು 2 ಅಂಕ ಪಡೆದ ಪ್ಯಾಟ್ ಕಮಿನ್ಸ್ ಪಡೆ +2.200 ನೆಟ್​ರನ್​ರೇಟ್​ ಹೊಂದಿದೆ.

ಐಪಿಎಲ್ ಅಂಕಪಟ್ಟಿ; ಟೇಬಲ್ ಟಾಪರ್ ಯಾರು?

Wednesday, March 26, 2025

ಸದ್ಯಕ್ಕೆ ಕ್ರಿಕೆಟ್​ ಪ್ರಿಯರ ಕಣ್ಣು ನೆಟ್ಟಿರುವುದು ಡೆಲ್ಲಿ ಕ್ಯಾಪಿಟಲ್ಸ್​​ಗೆ ರೋಚಕ ಗೆಲುವು ತಂದುಕೊಟ್ಟ ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ಮೇಲೆ. ಈ ಯುವ ಆಟಗಾರರ ಆಟದ ವೈಭವಕ್ಕೆ ಕ್ರಿಕೆಟ್​​ ಜಗತ್ತೇ ಬೆರಗಾಗಿದೆ. ಗೆಲುವು ಸಾಧಿಸಿದ್ದರ ನಡುವೆಯೂ ಡೆಲ್ಲಿ ತಂಡಕ್ಕೆ ಕಾಡಿದ ಈ ಮಿಸ್ಟರಿ ಸ್ಪಿನ್ನರ್​ ಬಗ್ಗೆ ಯಾರಿಗೂ ಗೊತ್ತಿಲ್ಲ!

ಸೋತರೂ ಡೆಲ್ಲಿಗೆ ಸಿಕ್ಕಾಪಟ್ಟೆ ಕಾಡಿದ ಲಕ್ನೋ ದಿಗ್ವೇಶ್ ಸಿಂಗ್ ಯಾರು? ಭಾರತಕ್ಕೆ ಸಿಕ್ಕರು ಮತ್ತೊಬ್ಬ ಮಿಸ್ಟರಿ ಸ್ಪಿನ್ನರ್

Tuesday, March 25, 2025

2025ರ ಐಪಿಎಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಡಬಲ್‌ ಉತ್ಸಾಹ ತುಂಬಿತು. ಸೋಮವಾರ (ಮಾರ್ಚ್ 24) ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 1 ವಿಕೆಟ್‌ನಿಂದ ಲಕ್ನೋ ಸೂಪರ್‌ ಜೈಂಟ್ಸ್ ತಂಡವನ್ನು ಸೋಲಿಸಿತು. 210 ರನ್‌ಗಳ ಗುರಿ ಬೆನ್ನಟ್ಟುವಾಗ ಅಶುತೋಷ್ ಶರ್ಮಾ ಅಮೋಘ ಅರ್ಧಶತಕ ಬಾರಿಸಿದರು. 31 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದರು. ಇದು ಐಪಿಎಲ್‌ ಇತಿಹಾಸದ ಆರನೇ 1 ವಿಕೆಟ್‌ ಗೆಲುವು ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮಾತ್ರವಲ್ಲ; ಐಪಿಎಲ್ ಇತಿಹಾಸದಲ್ಲಿ 1 ವಿಕೆಟ್‌ನಿಂದ ರೋಚಕವಾಗಿ ಗೆದ್ದ ತಂಡಗಳಿವು

Tuesday, March 25, 2025

ಯುವ ಆಲ್‌ರೌಂಡರ್ ಮೊದಲು UPT20 ಟೂರ್ನಿಯ 2024ರ ಋತುವಿನಲ್ಲಿ ಗಮನ ಸೆಳೆದಿದ್ದರು. ಯುಪಿ ಫಾಲ್ಕನ್ಸ್ ಪರ 12 ಪಂದ್ಯಗಳನ್ನು ಆಡಿದ್ದರು. 7.45ರ ಎಕಾನಮಿಯಲ್ಲಿ 20 ವಿಕೆಟ್‌ ಕಬಳಿಸಿದ್ದರು.

Vipraj Nigam: ಅಂದು ಬ್ಯಾಟರ್, ಇಂದು ಆಲ್‌ರೌಂಡರ್‌; ಐಪಿಎಲ್ ಹೊಸ ಸೆನ್ಸೇಷನ್ 20 ವರ್ಷದ ವಿಪ್ರಾಜ್ ನಿಗಮ್ ಯಾರು?

Tuesday, March 25, 2025

ಡಿಸಿ ವಿರುದ್ಧ ಆಡುವ ಮೂಲಕ ರಿಷಭ್ ಅವರು ಯುವರಾಜ್ ಸಿಂಗ್ ಮತ್ತು ಸ್ಟೀವ್ ಸ್ಮಿತ್‌ ಅವರನ್ನು ಹಿಂದಿಕ್ಕಲಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಾಯಕರ ಪಟ್ಟಿಯಲ್ಲಿ ಈ ಇಬ್ಬರನ್ನು ಪಂತ್‌ ಹಿಂದಿಕ್ಕಲಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಪರ ರಿಷಭ್ ಪಂತ್ ಪದಾರ್ಪಣೆ; ಯುವರಾಜ್ ಸಿಂಗ್, ಸ್ಮಿತ್ ಹಿಂದಿಕ್ಕಲಿದ್ದಾರೆ ಎಲ್‌ಎಸ್‌ಜಿ ನಾಯಕ

Monday, March 24, 2025

ಮಹಿಳಾ ಪ್ರೀಮಿಯರ್ ಲೀಗ್​​​ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದೆ. 2025ರ ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ವಡೋದರಾದಲ್ಲಿ ನಡೆಯಲಿರುವ ಆರಂಭಿಕ ಪಂದ್ಯಕ್ಕೂ ಮುನ್ನ ಟೂರ್ನಿಯ 5 ತಂಡಗಳ ವಿವರ ಇಲ್ಲಿದೆ.

WPL 2025: ಮಹಿಳಾ ಪ್ರೀಮಿಯರ್ ಲೀಗ್​​ 3ನೇ ಆವೃತ್ತಿಯ 5 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Thursday, February 13, 2025

ಪುರುಷರ ಸ್ಪರ್ಧೆಯಲ್ಲಿ 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ 19 ದೇಶ ಭಾಗವಹಿಸುತ್ತಿವೆ. ಲೀಗ್ ಹಂತವು ಜನವರಿ 16 ರಂದು ಕೊನೆಗೊಳ್ಳಲಿದೆ.

Photos: ಚೊಚ್ಚಲ ಖೋ ಖೋ ವಿಶ್ವಕಪ್‌ಗೆ ವಿಧ್ಯುಕ್ತ ಚಾಲನೆ; ಗಮನ ಸೆಳೆದ ವರ್ಣರಂಜಿತ ಸಾಂಸ್ಕೃತಿಕ ಪ್ರದರ್ಶನ

Tuesday, January 14, 2025