england-cricket-team News, england-cricket-team News in kannada, england-cricket-team ಕನ್ನಡದಲ್ಲಿ ಸುದ್ದಿ, england-cricket-team Kannada News – HT Kannada
ಕನ್ನಡ ಸುದ್ದಿ  /  ವಿಷಯ  /  england cricket team

Latest england cricket team Photos

ಮುಲ್ತಾನ್ ಟೆಸ್ಟ್‌ನಲ್ಲಿ ಹ್ಯಾರಿ ಬ್ರೂಕ್ ತ್ರಿಶತಕ ಬಾರಿಸಿದರು. 310 ಎಸೆತಗಳಲ್ಲಿ ತ್ರಿಶತಕ ಗಡಿ ದಾಟಿದ ಅವರು, ಅಂತಿಮವಾಗಿ 322 ಎಸೆತಗಳಲ್ಲಿ 317 ರನ್ ಗಳಿಸಿ ಔಟಾದರು.

ಸೆಹ್ವಾಗ್ ಸಿಡಿಲಬ್ಬರ ನೆನಪಿಸಿದ ಹ್ಯಾರಿ ಬ್ರೂಕ್; ಪಾಕಿಸ್ತಾನ ವಿರುದ್ಧ ದಾಖಲೆಯ ತ್ರಿಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟರ್

Thursday, October 10, 2024

12 ಸಾವಿರ ರನ್​​ಗಳ ಗಡಿ ದಾಟುವುದರೊಂದಿಗೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಲಾರಾ 131 ಟೆಸ್ಟ್ ಪಂದ್ಯಗಳಲ್ಲಿ 11953 ರನ್ ಗಳಿಸಿದ್ದಾರೆ. ಈ ಟೆಸ್ಟ್​​​ಗೂ ಮೊದಲು ಲಾರಾಗಿಂತ 14 ರನ್ ಹಿಂದೆ ಇದ್ದ ರೂಟ್ ಈಗ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್; ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಮುರಿದ ಜೋ ರೂಟ್

Saturday, July 27, 2024

ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 241 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದೆ. ಇದೇ ವೇಳೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಸೋಲು ಕಂಡ ವೆಸ್ಟ್ ಇಂಡೀಸ್ ಆರನೇ ಸ್ಥಾನದಿಂದ ಕೊನೆಯ ಸ್ಥಾನಕ್ಕಿಳಿದಿದೆ.

ಡಬ್ಲ್ಯುಟಿಸಿ ಅಂಕಪಟ್ಟಿ: ವೆಸ್ಟ್ ಇಂಡೀಸ್‌ ವಿರುದ್ಧ ಗೆದ್ದು 6ನೇ ಸ್ಥಾನಕ್ಕೆ ಜಿಗಿದ ಇಂಗ್ಲೆಂಡ್; ಭಾರತ ಅಗ್ರಸ್ಥಾನದಲ್ಲೇ ಭದ್ರ

Monday, July 22, 2024

ನಾಟಿಂಗ್​ಹ್ಯಾಮ್​​ನ ಟ್ರೆಂಟ್​ಬ್ರಿಡ್ಜ್​​ನಲ್ಲಿ ಜುಲೈ 18ರ ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ಕೇವಲ 4.2 ಓವರ್​​ಗಳಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿತು. ಮೊದಲ ದಿನದಂದು ಇಂಗ್ಲೆಂಡ್ ಈ ಮೈಲಿಗಲ್ಲನ್ನು ತಲುಪಿದೆ.

ಇಪ್ಪತ್ತಾರೇ ಎಸೆತಗಳಲ್ಲಿ 50 ರನ್; ಟೆಸ್ಟ್​ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿ 30 ವರ್ಷಗಳ ಹಳೆಯ ದಾಖಲೆ ಮುರಿದ ಇಂಗ್ಲೆಂಡ್

Friday, July 19, 2024

ಇದೇ ವೇಳೆ ಸ್ಟೋಕ್ಸ್​ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಗ್ಯಾರಿ ಸೋಬರ್ಸ್ ಮತ್ತು ಜಾಕ್ ಕಾಲಿಸ್ ನಂತರ ಟೆಸ್ಟ್​​ನಲ್ಲಿ 6000ಕ್ಕೂ ಹೆಚ್ಚು ರನ್ ಮತ್ತು 200ಕ್ಕೂ ಅಧಿಕ ವಿಕೆಟ್ ಕಬಳಿಸಿದ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಟೋಕ್ಸ್ ಪಾತ್ರರಾಗಿದ್ದಾರೆ. 93 ಟೆಸ್ಟ್​​​ನಲ್ಲಿ 8032 ರನ್ ಗಳಿಸಿದ್ದು, 235 ವಿಕೆಟ್ ಪಡೆದಿದ್ದಾರೆ. ಕಾಲಿಸ್ 166 ಟೆಸ್ಟ್​​ಗಳಲ್ಲಿ 13289 ರನ್, 292 ವಿಕೆಟ್ ಪಡೆದಿದ್ದಾರೆ.

6000 ರನ್, 200 ವಿಕೆಟ್; ಜಾಕ್ ಕಾಲಿಸ್-ಗ್ಯಾರಿ ಸೋಬರ್ಸ್ ಕ್ಲಬ್ ಸೇರಿದ ಬೆನ್​ಸ್ಟೋಕ್ಸ್

Friday, July 12, 2024

ಗಯಾನಾದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್‌ 16.4 ಓವರ್ ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ವಿರುದ್ಧ ಭಾರತ 68 ರನ್‌ಗಳ ಭರ್ಜರಿ ಜಯ ಸಿಕ್ಕಿತು. ಎರಡು ವರ್ಷಗಳ ಹಿಂದೆ ಅಡಿಲೇಡ್‌ನಲ್ಲಿ ನಡೆದ ಸೆಮಿಕದನದಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಇದಕ್ಕೆ ಸೇಡು ತೀರಿಸಿಕೊಂಡ ಭಾರತ ಈ ಬಾರಿ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್ ವಿರುದ್ಧ ಗೆದ್ದು ವಿಶೇಷ ದಾಖಲೆ ಬರೆದ ಭಾರತ; 2014ರ ಬಳಿಕ ಟಿ20 ವಿಶ್ವಕಪ್‌ನಲ್ಲಿ ಯಾರೂ ಮಾಡಿಲ್ಲ ಈ ಸಾಧನೆ

Friday, June 28, 2024

ಟ್ರಿನಿಡಾಡ್​​​ನಲ್ಲಿ ಜೂನ್ 27ರ ಗುರುವಾರ ಬೆಳಿಗ್ಗೆ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿತ್ತು. ಸೆಮೀಸ್​ನಲ್ಲಿ ಸೋತರೂ ಈ ವರ್ಷದ ಟಿ20 ವಿಶ್ವಕಪ್ ಆಫ್ಘನ್ ಪಾಲಿಗೆ ಐತಿಹಾಸಿಕವಾಗಿದೆ. ಏಕೆಂದರೆ ಆಫ್ಘನ್ ವಿಶ್ವಕಪ್​ನಲ್ಲಿ ಸೆಮಿಫೈನಲ್ ತಲುಪಿದ್ದು ಇದೇ ಮೊದಲು. ಇದಲ್ಲದೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೊಡ್ಡ ತಂಡಗಳ ವಿರುದ್ಧ ಗೆಲುವು ಕೂಡ ಸಾಧಿಸಿದೆ.

ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದು ವಿಶ್ವಕಪ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಫಜಲ್ಹಕ್ ಫಾರೂಕಿ; ವನಿಂದು ಹಸರಂಗ ದಾಖಲೆ ಉಡೀಸ್

Thursday, June 27, 2024

ಎರಡನೇ ಸೆಮಿಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​​ನಲ್ಲಿ ನೇರ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 1 ಹೆಚ್​ಡಿ, ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಹೆಚ್​ಡಿ, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ 1 ತಮಿಳು ಮತ್ತು ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಮತ್ತು ಕನ್ನಡದ ಚಾನೆಲ್​ನಲ್ಲಿ ಪಂದ್ಯ ಪ್ರಸಾರವಾಗಲಿದೆ. ಡಿಡಿ ಸ್ಪೋರ್ಟ್ಸ್ ಚಾನೆಲ್​ನಲ್ಲೂ ಪ್ರಸಾರ ಮಾಡಲಾಗುತ್ತದೆ.

T20 World Cup 2024: ಭಾರತ vs ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

Thursday, June 27, 2024

ಎರಡನೇ ಸೆಮಿಫೈನಲ್ ಪಂದ್ಯ ಜೂನ್ 27ರಂದು ಗಯಾನಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಜೂನ್ 27ರಂದು ರಾತ್ರಿ 8.30ಕ್ಕೆ ಪಂದ್ಯ ಆರಂಭವಾಗಲಿದೆ. ಪಂದ್ಯವು ಮೀಸಲು ದಿನವಾಗಿದ್ದರೆ, ಅದು ಜೂನ್ 28 ರಂದು ಸ್ಥಳೀಯ ಸಮಯ ಬೆಳಿಗ್ಗೆ 10:30ಕ್ಕೆ ನಡೆಯುತ್ತಿತ್ತು. ಅಂದರೆ, ಭಾರತೀಯ ಸಮಯದ ಪ್ರಕಾರ, ಆ ದಿನ ರಾತ್ರಿ 8:30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡ 29 ರಂದು ಫೈನಲ್​ನಲ್ಲಿ ಆಡಬೇಕಾಗುತ್ತದೆ.

ಇಂಡೋ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕಿಲ್ಲ ರಿಸರ್ವ್ ಡೇ; ಪಂದ್ಯ ರದ್ದಾದರೆ ಫೈನಲ್​ಗೇರುವ ತಂಡ ಯಾವುದು?

Thursday, June 27, 2024

ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ 4 ವಿಕೆಟ್ ಕಿತ್ತರೆ, ಆದಿಲ್ ರಶೀದ್ ಹಾಗೂ ಸ್ಯಾಮ್ ಕರನ್ ತಲಾ 2 ವಿಕೆಟ್ ಪಡೆದರು. ರೀಸ್ ಟಾಪ್ಲೆ ಮತ್ತು ಲಿಯಾಮ್ ಲಿವಿಂಗ್​ಸ್ಟನ್ ತಲಾ ಒಂದು ವಿಕೆಟ್ ಪಡೆದರು.

ಹ್ಯಾಟ್ರಿಕ್ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡಾನ್; ಇದೇ ವಿಶ್ವಕಪ್​ನಲ್ಲಿ ಈ ಸಾಧನೆಗೈದ 3ನೇ ಆಟಗಾರ

Monday, June 24, 2024

ಸೇಂಟ್ ಲೂಸಿಯಾದಲ್ಲಿ ಜೂನ್ 20ರ ಗುರುವಾರ ಬೆಳಿಗ್ಗೆ ನಡೆದ ಟಿ20 ವಿಶ್ವಕಪ್ 2024ರ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಇಂಗ್ಲೆಂಡ್ 8 ವಿಕೆಟ್​ಗಳಿಂದ ಸೋಲಿಸಿತು. ಈ ಹಂತದಲ್ಲಿ ಇಂಗ್ಲೆಂಡ್ ಇನ್ನೊಂದು ಪಂದ್ಯ ಗೆದ್ದರೆ ಸೆಮಿಫೈನಲ್ ಟಿಕೆಟ್ ಖಚಿತಗೊಳ್ಳಲಿದೆ.

ಫಿಲ್ ಸಾಲ್ಟ್, ಬೈರ್​ಸ್ಟೋ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್​ಗೆ 8 ವಿಕೆಟ್​ ಭರ್ಜರಿ ಜಯ

Thursday, June 20, 2024

2022ರ ಟಿ20 ವಿಶ್ವಕಪ್​​ನಲ್ಲಿ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಆಸೀಸ್​ ನಂತರ ಸತತ 3 ಗೆಲುವು ದಾಖಲಿಸಿತ್ತು. 2024ರ ಆವೃತ್ತಿಯಲ್ಲೂ ಸತತ 4 ಗೆಲುವು ಸಾಧಿಸಿದೆ. ಒಟ್ಟಾರೆ ಸತತ 7 ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಮತ್ತು ಭಾರತ ದಾಖಲೆ ಸರಿಗಟ್ಟಿದೆ.

ಸ್ಕಾಟ್ಲೆಂಡ್ ಮಣಿಸಿ ಭಾರತ-ಇಂಗ್ಲೆಂಡ್ ನಿರ್ಮಿಸಿದ್ದ ವಿಶ್ವದಾಖಲೆ ಸರಿಗಟ್ಟಿದ ಆಸ್ಟ್ರೇಲಿಯಾ

Monday, June 17, 2024

ಪ್ರಸ್ತುತ ಇಂಗ್ಲೆಂಡ್ ಆಡಿರುವ 3 ಪಂದ್ಯಗಳಲ್ಲಿ 1ರಲ್ಲಿ ಸೋಲು, 1 ಗೆಲುವು, 1 ಪಂದ್ಯ ರದ್ದಾಗಿದೆ. ಹೀಗಾಗಿ 3 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.

ಓಮನ್ ವಿರುದ್ಧ ವಿಶ್ವದಾಖಲೆಯ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಕನಸು ಜೀವಂತವಾಗಿರಿಸಿದ ಇಂಗ್ಲೆಂಡ್

Friday, June 14, 2024

ಮಳೆಯ ನಂತರ ಪಂದ್ಯ ಪುನರಾರಂಭಗೊಂಡಿತು. ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್ ಆರಂಭಿಕ ಆಟಟಗಾರರು ಭದ್ರ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದರು. ಸ್ಕಾಟ್ಲೆಂಡ್ 6.2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 51 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಮಳೆಯ ನಂತರ ಆಟ ಪುನರಾರಂಭಗೊಂಡಾಗ ಓವರ್‌ಗಳನ್ನು ಕಡಿತಗೊಳಿಸಲಾಯ್ತು. ಇನ್ನಿಂಗ್ಸ್‌ಗೆ 10 ಓವರ್‌ ನಿಗದಿಪಡಿಸಲಾಯಿತು.

ಟಿ20 ವಿಶ್ವಕಪ್: ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಹೆಚ್ಚಿದ ಒತ್ತಡ

Wednesday, June 5, 2024

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಪಡೆದ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಎಕ್ಲೆಸ್ಟನ್ 4.1 ಓವರ್​​​ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದರು.

ಪಾಕಿಸ್ತಾನ ವಿರುದ್ಧ 3 ವಿಕೆಟ್ ಉರುಳಿಸಿ ಏಕದಿನ ಕ್ರಿಕೆಟ್​​ನಲ್ಲಿ​ 21 ವರ್ಷಗಳ ದಾಖಲೆ ಮುರಿದ ಸೋಫಿ ಎಕ್ಲೆಸ್ಟನ್

Thursday, May 30, 2024

ಬೇಕರ್ ತನ್ನ ಹುಟ್ಟುಹಬ್ಬಕ್ಕೆ 14 ದಿನಗಳ ಮೊದಲು ನಿಧನರಾಗಿದ್ದಾರೆ. ಮೇ 16 ರಂದು ತಮ್ಮ 21 ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದರು. ಆದರೆ ಅವರ ಸಾವಿಗೆ ಕಾರಣ ಬಹಿರಂಗಗೊಂಡಿಲ್ಲ.

Josh Baker: ಹುಟ್ಟುಹಬ್ಬಕ್ಕೆ 14 ದಿನಗಳಿರುವಾಗ ತನ್ನ 20ನೇ ವಯಸ್ಸಿಗೆ ಇಂಗ್ಲೆಂಡ್ ಕ್ರಿಕೆಟಿಗ ನಿಧನ

Thursday, May 2, 2024

ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ರವಿಚಂದ್ರ‌ನ್‌ ಅಶ್ವಿನ್, ಧರ್ಮಶಾಲಾ ಟೆಸ್ಟ್‌ ಮೂಲಕ 100ನೇ ಟೆಸ್ಟ್ ಪಂದ್ಯ ಆಡಿದ ವಿಶೇಷ ಮೈಲಿಗಲ್ಲು ತಲುಪಿದರು. ಧರ್ಮಶಾಲಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ರವಿ, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಅದರ ಬೆನ್ನಲ್ಲೇ ಐಸಿಸಿ ಶ್ರೇಯಾಂಕದಲ್ಲಿಬಡ್ತಿ ಪಡೆದಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ ಪಡೆದ ಅಶ್ವಿನ್, ಐಸಿಸಿಯ ನಂಬರ್ ವನ್ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.

ಐಸಿಸಿ ಬೌಲಿಂಗ್‌ ಶ್ರೇಯಾಂಕ: ಬುಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಶ್ವಿನ್‌; ರೋಹಿತ್, ಜೈಸ್ವಾಲ್‌ಗೂ ಬಡ್ತಿ

Wednesday, March 13, 2024

ಫೆಬ್ರುವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಒಟ್ಟು ಮೂವರು ನಾಮನಿರ್ದೇಶನಗೊಂಡಿದ್ದರು. ನ್ಯೂಜಿಲ್ಯಾಂಡ್‌ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ಅವರನ್ನು ಸೋಲಿಸಿ ಯಶಸ್ವಿ ಜೈಸ್ವಾಲ್ ಈ ಪ್ರಶಸ್ತಿ ಗೆದ್ದಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಅಸಾಧಾರಣ ಪ್ರದರ್ಶನ; ಕೇನ್ ವಿಲಿಯಮ್ಸನ್ ಹಿಂದಿಕ್ಕಿ ಐಸಿಸಿ ಪ್ರಶಸ್ತಿ ಪಡೆದ ಯಶಸ್ವಿ ಜೈಸ್ವಾಲ್

Tuesday, March 12, 2024

ಗೆದ್ದ ಎಲ್ಲಾ 12 ಟೆಸ್ಟ್ ಪಂದ್ಯಗಳಲ್ಲಿಯೂ ಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ರೋಹಿತ್.‌ ಅಥವಾ ಶತಕ ಸಿಡಿಸಿದ ಎಲ್ಲಾ 12 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ ಏಕೈಕ ಆಟಗಾರ ಹಿಟ್‌ಮ್ಯಾನ್.‌ ಇಷ್ಟು ಸಂಖ್ಯೆಯಲ್ಲಿ ಶತಕಗಳನ್ನು ಬಾರಿಸಿ ದೇಶವನ್ನು ಗೆಲ್ಲಿಸಿದ ಆಟಗಾರ ಬೇರೊಬ್ಬರಿಲ್ಲ.

12 ಸೆಂಚುರಿ, 12 ಗೆಲುವು; ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದಿದೆ ಭಾರತ!

Tuesday, March 12, 2024

ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನಲ್ಲಿ ಕಿವೀಸ್‌ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕಾಂಗರೂಗಳು, ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿದ 12 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 62.50 ಸರಾಸರಿಯಲ್ಲಿ 90 ಅಂಕಗಳನ್ನು ಗಳಿಸಿದೆ. ಅಂಕಗಳ ವಿಷಯದಲ್ಲಿ ಆಸೀಸ್ ಇತರ ಎಲ್ಲ ತಂಡಗಳಿಗಿಂತ ಮುಂದಿದೆ. ಆದರೆ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಮತ್ತು ಅಂತಿಮ ಎರಡು ತಂಡಗಳನ್ನು ಅಂಕಗಳ ಬದಲಾಗಿ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತ

Monday, March 11, 2024