Latest indian festival Photos

Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೀಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೆಯ ಸಂಭ್ರಮ. ಏಪ್ರಿಲ್‌ 10ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿತ್ತು. ದೇವಾಲಯದ ಗದ್ದೆಯ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಇನ್ನೊಂದೆಡೆ ಜಾತ್ರೆ ಸಂತೆಗಳು, ಆಟ ಆಕರ್ಷಣೆಗಳ ತಾಣ. ಏಪ್ರಿಲ್‌ 17ರಂದು ಪುತ್ತೂರು ಬೆಡಿ ಎಂದೇ ಜನಪ್ರಿಯತೆ ಪಡೆದ ಸುಡುಮದ್ದು ಪ್ರದರ್ಶನ ಇರಲಿದ್ದು, ಅಂದು ಹಲವು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು

Thursday, April 11, 2024

ಭಾರತದಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ ಅನ್ನು ಧಾರ್ಮಿಕ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಮಸೀದಿಗಳು ಮತ್ತು ತೆರೆದ ಮೈದಾನದಲ್ಲಿ ಪ್ರಾರ್ಥನೆಗಾಗಿ ಒಟ್ಟುಗೂಡಿದ್ದಾರೆ. ಈ ಹಬ್ಬವನ್ನು ಸಮುದಾಯದ ಒಗ್ಗೂಡುವಿಕೆಯ ಸಂಕೇತವಾಗಿ ಕಾಣಲಾಗುತ್ತಿದೆ.

ಈದ್-ಉಲ್-ಫಿತರ್ 2024: ಭಾರತದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌, ರಂಜಾನ್ ಹಬ್ಬದ ಪ್ರಾರ್ಥನೆಯ ಚಿತ್ರವೈವಿಧ್ಯ

Thursday, April 11, 2024

ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಭಾವೈಕ್ಯದ ರಂಜಾನ್ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ಹಾಗೂ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

Ramadan 2024: ಕರ್ನಾಟಕದಲ್ಲಿ ರಂಜಾನ್‌ಗೆ ಭರ್ಜರಿ ಸಿದ್ದತೆ; ಹೊಸ ಬಟ್ಟೆ ಸೇರಿ ಖರೀದಿ ಭರಾಟೆ ಜೋರು, ಫೋಟೋಸ್

Monday, April 8, 2024

ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಬೇವು-ಬೆಲ್ಲ ಹಂಚಿ ಸಂಭ್ರಮದಿಂದ ಆಚರಿಸುವ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್ (ಪಂಚಾಂಗ) ಚೈತ್ರ ಮಾಸದ ಮೊದಲ ದಿನದಂದು ಆಚರಿಸುವ ಹಬ್ಬವೇ ಯುಗಾದಿ. ಯುಗಾದಿ ಎಂಬ ಹೆಸರು ಯುಗ ಮತ್ತು ಆದಿ ಎಂಬ ಎರಡು ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿದೆ. ಯುಗ ಅಂದರೆ ವರ್ಷ, ಆದಿ ಅಂದರೆ ಆರಂಭ ಎಂದರ್ಥ. ಹೊಸ ಯುಗದ ಆರಂಭವೇ ಯುಗಾದಿ ಹಬ್ಬ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ನಲ್ಲಿ ಗುಡಿ ಪಾಡ್ವಾ ಎಂಬ ಹೆಸರಿನಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 9 ರಂದು (ಮಂಗಳವಾರ) ಹಬ್ಬವನ್ನು ಆಚರಿಸಲಾಗುತ್ತಿದೆ. ಯುಗಾದಿಯಂದು ಮನೆಗಳಲ್ಲಿ ಮಾತ್ರವಲ್ಲವೇ ದೇವಾಲಯಗಳಲ್ಲೂ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯುತ್ತೆ. ಈ ವರ್ಷ ಯುಗಾದಿಗೆ ನೀವು ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅಂತಿದ್ರೆ ಈ 10 ದೇವಾಲಯಗಳನ್ನು ಆಯ್ಕೆ ಮಾಡಿಕೊಳ್ಳಿ. ಇಂದೇ ಪ್ಲಾನ್‌ ಮಾಡಿ.

Ugadi 2024: ಯುಗಾದಿ ಹಬ್ಬದಂದು ಭೇಟಿ ನೀಡಬಹುದಾದ ದಕ್ಷಿಣ ಭಾರತದ 10 ಪ್ರಮುಖ ದೇವಾಲಯಗಳಿವು

Saturday, April 6, 2024

ಯುಗಾದಿ ಹಬ್ಬ ಎಂದರೆ ಹೊಸ ಆರಂಭ ಎಂಬ ಅರ್ಥವೂ ಇದೆ. ಈ ವರ್ಷ ಏಪ್ರಿಲ್‌ 9 ರಂದು ಯುಗಾದಿ ಹಬ್ಬವಿದ್ದು ಅಂದಿನಿಂದ ಕೋಧ್ರಿನಾಮ ಸಂವತ್ಸರ ಆರಂಭವಾಗಲಿದೆ. ಹಿಂದೂಗಳಿಗೆ ಇದು ಹೊಸ ವರ್ಷವೂ ಹೌದು. ಜ್ಯೋತಿಷ್ಯದಲ್ಲೂ ಯುಗಾದಿಗೆ ವಿಶೇಷ ಮಹತ್ವವಿದೆ.  ಮುಂಬರುವ ಹೊಸ ವರ್ಷಕ್ಕೆ ಮಂಗಳ ಗ್ರಹ ರಾಜನಾದರೆ ಶನಿಯು ಮಂತ್ರಿಯಾಗುತ್ತಾನೆ ಎನ್ನುತ್ತಾರೆ ಜ್ಯೋತಿಷಿಗಳು.

Yugadi 2024: ಯುಗಾದಿ ಹಬ್ಬದಿಂದ ಈ 4 ರಾಶಿಯವರಿಗೆ ರಾಜಯೋಗ; ಲಕ್ಷ್ಮೀದೇವಿಯ ಅನುಗ್ರಹದೊಂದಿಗೆ ಅದೃಷ್ಟವೂ ಜೊತೆಯಾಗಲಿದೆ

Friday, April 5, 2024

ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ವರ್ಷ ಏಪ್ರಿಲ್ 9ರಂದು ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹಬ್ಬವೆಂದು, ಮಹಾರಾಷ್ಟ್ರ, ದಿಯು ಮತ್ತು ದಮನ್ ಮುಂತಾದೆಡೆ ಗುಡಿ ಪಾಡ್ವಾ ಹೆಸರಿನಿಂದ ಕರೆಯಲ್ಪಡುತ್ತದೆ.

Yugadi 2024: ಹಿಂದೂಗಳ ಹೊಸ ವರ್ಷ ಯುಗಾದಿಯ ದಿನ ಪಾಲಿಸಬೇಕಾದ ಕ್ರಮಗಳೇನು, ಪೂಜಾ ವಿಧಿವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ

Friday, April 5, 2024

ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ.

ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

Wednesday, April 3, 2024

ಇತ್ತೀಚಿನ ದಿನಗಳಲ್ಲಿ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಆ ದಿನದ ಪರಿಕಲ್ಪನೆ ಅಥವಾ ಥೀಮ್‌ ಇರಿಸಿಕೊಂಡು ಪುಟ್ಟ ಕಂದಮ್ಮಗಳ ಫೋಟೊಶೂಟ್‌ ಮಾಡಿಸುವುದು ಟ್ರೆಂಡ್‌ ಆಗಿದೆ. ನೀವು ನಿಮ್ಮ ಮಗುವಿಗೆ ಈ ಯುಗಾದಿ ಹಬ್ಬಕ್ಕೆ ಯುಗಾದಿ ಥೀಮ್‌ನಲ್ಲಿ ಫೋಟೊಶೂಟ್‌ ಮಾಡಿಸಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.

Yugadi 2024: ಯುಗಾದಿ ಥೀಮ್‌ನಲ್ಲಿ ನಿಮ್ಮ ಪುಟಾಣಿಗೆ ಫೋಟೊಶೂಟ್‌ ಮಾಡಿಸಬೇಕು ಅಂತಿದೀರಾ, ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು

Wednesday, April 3, 2024

ಹಲಗೆ ಜತೆಗೆ ಬಣ್ಣದ ಬಂಡಿ ಕಟ್ಟಿಕೊಂಡು ಸ್ನೇಹಿತರನ್ನು ಹುಡುಕಿಕೊಂಡು ಹೋಗಿ ಬಣ್ಣ ಹಾಕುವುದು ಇಲ್ಲಿಯ ವಿಶೇಷ. ಸ್ನೇಹಿತರ ಬಾಂಧವ್ಯವನ್ನು ಅದು ಸಾರುತ್ತದೆ.

Holi 2024: ಬಾಗಲಕೋಟೆ ಹೋಳಿ; ಹಲಗೆ ಸದ್ದು, ಬಣ್ಣದ ಬಂಡಿ ಸಂಭ್ರಮ Photos

Tuesday, March 19, 2024

ರಂಗಾಯಣದಲ್ಲಿ ಪ್ರತಿ ದಿನ ಸಂಜೆ ಕನ್ನಡ ಮಾತ್ರವಲ್ಲದೇ ಇತರೆ ಭಾಷೆಗಳ ನಾಟಕಗಳೂ ಮೂರು ಕಡೆ ಪ್ರದರ್ಶನಗೊಂಡವು.

Mysore News: ರಂಗಾಯಣ ಬಹುರೂಪಿಯಲ್ಲಿ ಕಂಡ ಬಸವಣ್ಣನ ಅಭಿವ್ಯಕ್ತಿ, ಹೀಗಿತ್ತು ರಾಷ್ಟ್ರೀಯ ಉತ್ಸವ Photos

Tuesday, March 12, 2024

ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ. ಶಿವಭಕ್ತರು ಶಿವ ನಾಮಸ್ಮರಣೆ, ಜಾಗರಣೆ, ಉಪವಾಸದ ಮೂಲಕ ಶಿವನ ಆಶೀರ್ವಾದ ಬೇಡುತ್ತಿದ್ದಾರೆ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರವಾದ ಶ್ರೀ ಕ್ಷೇತ್ರ  ಧರ್ಮಸ್ಥಳದಲ್ಲಿಯೂ ಮಹಾಶಿವರಾತ್ರಿ ಕಳೆಗಟ್ಟಿದೆ. ದೀಪಾಲಂಕರದಿಂದ ಧರ್ಮಸ್ಥಳ ಜಗಮಗ ಎನ್ನುತ್ತಿದೆ.

ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಸಂಭ್ರಮ; ವಿಶೇಷ ದೀಪಾಲಂಕಾರದಿಂದ ಶ್ರೀ ಕ್ಷೇತ್ರ ಝಗಮಗ, ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Friday, March 8, 2024

ಹಿಂದೂ ಧರ್ಮದಲ್ಲಿ ಹಲವು ವಿಶೇಷ ಆಚರಣೆಗಳಿವೆ. ಪ್ರತಿಯೊಂದು ದೇವರನ್ನೂ ಪ್ರತ್ಯೇಕ ಹಬ್ಬ, ಆಚರಣೆಯ ಮೂಲಕ ಪೂಜಿಸಲಾಗುತ್ತದೆ. ಮಹಾಶಿವರಾತ್ರಿ ಶಿವನಿಗೆ ಅರ್ಪಿತವಾದ ಹಬ್ಬ. ಈ ದಿನ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಅಂದು ಶಿವಭಕ್ತರು ಜಾಗರಣೆ, ಉಪವಾಸ ವೃತ ಕೈಗೊಳ್ಳುತ್ತಾರೆ. ತ್ರಿಮೂರ್ತಿಗಳಲ್ಲಿ ಶಿವನನ್ನು ಲಯಕಾರಕ ಎಂದು ಕರೆದರೂ ಬ್ರಹ್ಮಾಂಡವನ್ನು ರಕ್ಷಿಸುವವನೂ ಅವನೇ ಎಂಬ ನಂಬಿಕೆಯಿದೆ. ಮಹಾ ಶಿವರಾತ್ರಿಯಂದು ಶಿವನ್ನು ಪೂಜಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನಲಾಗುತ್ತದೆ. ಈ ದಿನ ಹಲವಾರು ಶಿವ ಭಕ್ತರು ಉಪವಾಸ ಆಚರಿಸುವುದರ ಜೊತೆಗೆ ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಶಿವನ ಪ್ರಸಿದ್ಧ ದೇವಸ್ಥಾನಗಳಲ್ಲಿ ಅಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ಪ್ರತಿ ರಾಜ್ಯಗಳಲ್ಲೂ ಶಿವನ ದೇವಸ್ಥಾನಗಳನ್ನು ನೋಡಬಹುದಾಗಿದೆ. ಅವುಗಳಲ್ಲಿ ಕೆಲವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಲ್ಲೆಲ್ಲಾ ಶಿವನು ತನ್ನ ವಿವಿಧ ರೂಪಗಳಲ್ಲಿ ನೆಲೆನಿಂತು ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ. ಶಿವರಾತ್ರಿಯ ಶುಭ ಸಂದರ್ಭದಲ್ಲಿ ನೀವೂ ಈ ದೇವಾಲಯಗಳ ಬಗ್ಗೆ ತಿಳಿಯಿರಿ.

Mahashivratri 2024: ದಕ್ಷಿಣ ಭಾರತದ ಪ್ರಸಿದ್ಧ ಶಿವಾಲಯಗಳಿವು; ಮಹಾಶಿವರಾತ್ರಿಗೂ ಮುನ್ನ ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

Wednesday, March 6, 2024

ನಂಬಿಕೆಗಳ ಪ್ರಕಾರ ಶಿವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ವಿಶೇಷವಾಗಿ ಈ ದಿನ ಪರಮೇಶ್ವರನನ್ನು ಪೂಜಿಸುವ ಮತ್ತು ಉಪವಾಸ ಮಾಡುವ ಭಕ್ತರು ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಈ ದಿನ ಶುಭ್ರವಾದ, ಒಗೆದ ಬಿಳಿ, ಹಳದಿ ಬಟ್ಟೆಗಳನ್ನು ಧರಿಸಬೇಕು.

Maha Shivaratri 2024: ಮಹಾ ಶಿವರಾತ್ರಿ ದಿನ ಕಪ್ಪು ಬಣ್ಣ ಧರಿಸಬೇಡಿ, ಹಾಗಾದರೆ ಪೂಜೆ ಮಾಡುವಾಗ ಯಾವ ಬಣ್ಣದ ವಸ್ತ್ರ ಧರಿಸಬೇಕು?

Tuesday, March 5, 2024

ಭಗವಾನ್ ಶಿವನು ಇಷ್ಟಾರ್ಥಗಳನ್ನು ತ್ವರಿತವಾಗಿ ಪೂರೈಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಮಾರ್ಕಂಡೇಯ ಪುರಾಣ ಮತ್ತು ಶಿವಪುರಾಣದ ಪ್ರಕಾರ ಶಿವನಿಗೆ ಮರಣವನ್ನೂ ದೂರ ಮಾಡುವ ಶಕ್ತಿಯಿದೆ. ಯಾವುದೇ ವ್ಯಕ್ತಿ ಜೀವನದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರು ಶಿವನ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ರೋಗರುಜಿನಗಳು, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

Mrityunjaya Mantra: ಮೃತ್ಯುಂಜಯ ಮಂತ್ರದ ಅರ್ಥವೇನು? ಅದನ್ನು ಎಷ್ಟು ಬಾರಿ ಪಠಿಸಬೇಕು? ಇಲ್ಲಿದೆ ಉತ್ತರ

Tuesday, March 5, 2024

ತೆಲಂಗಾಣ ರಾಜ್ಯದ ಪುಟ್ಟ ಗ್ರಾಮ ಮೇಡಾವರಂ. ಜನಸಂಖ್ಯೆ 300ರ ಆಜುಬಾಜು. ಗ್ರಾಮದ ಜಾತ್ರೆ ಮಾತ್ರ ಕೋಟ್ಯಂತರ ಭಕ್ತರನ್ನು ಸೆಳೆಯುತ್ತದೆ. ಈ ಜಾತ್ರೆಯನ್ನು ಏಷ್ಯಾದ ಅತಿ ದೊಡ್ಡ ಜಾತ್ರೆ ಎಂದೇ ಗುರುತಿಸಲಾಗಿದೆ.

Medaram Jatara 2024: ಪುಟ್ಟ ಹಳ್ಳಿ ಮೇಡಾರಂನಲ್ಲಿ ಕೋಟಿ ಜನ ಸೇರುವ ವಿಶಿಷ್ಟ ಜಾತ್ರೆ, ಏನಿದರ ವಿಶೇಷ, ಹೋಗುವುದು ಹೇಗೆ

Wednesday, February 21, 2024

ಸೂರ್ಯ ನಮಸ್ಕಾರವು ರೂಪ, ಶಕ್ತಿ ಮತ್ತು ಲಯ ಎಂಬ ಮೂರು ಅಂಶಗಳಿಂದ ಕೂಡಿದೆ. ಸೂರ್ಯ ನಮಸ್ಕಾರವನ್ನು ಉಸಿರಾಟದೊಂದಿಗೆ ಸ್ಥಿರ ಮತ್ತು ಲಯಬದ್ಧವವಾಗಿ ಅಭ್ಯಾಸ ಮಾಡಬೇಕು. ಇದು ದೇಹದ ಎಲ್ಲಾ ಸ್ನಾಯುಗಳನ್ನು ತಲೆಯಿಂದ ಕಾಲ್ಬೆರಳಿನವರೆಗೆ ವಿಸ್ತರಿಸಿ, ದೇಹಕ್ಕೆ ಹೊಸ ಚೈತನ್ಯ ತುಂಬುತ್ತದೆ. ಅಲ್ಲದೆ ಮನಸು, ದೇಹ ಮತ್ತು ಉಸಿರಾಟ ಕ್ರಿಯೆಗೆ ಹೊಸ ಹುರುಪು ತುಂಬುತ್ತದೆ.

Ratha Sapthami 2024: ರಥಸಪ್ತಮಿಯಂದು ಸೂರ್ಯ ನಮಸ್ಕಾರಕ್ಕೆ ಯಾಕೆ ಪ್ರಾಶಸ್ತ್ಯ; ಈ ದಿನಕ್ಕೂ ಯೋಗಕ್ಕೂ ನಂಟೇನು

Thursday, February 15, 2024

ಮಾರ್ಚ್‌ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ. ವಸಂತೋತ್ಸವ, ಸುಗ್ಗಿ, ಹೋಲಿ ಸೇರಿದಂತೆ ಯಾವೆಲ್ಲಾ ಹಬ್ಬಗಳನ್ನು ಭಾರತೀಯ ಆಚರಿಸುತ್ತಾರೆ ಅನ್ನೋದರ ವಿವರ ಇಲ್ಲಿದೆ.

ಮಾರ್ಚ್‌ ತಿಂಗಳಲ್ಲಿ ಬರುವ ಹಬ್ಬಗಳಿವು: ಶಿವರಾತ್ರಿ ಸೇರಿದಂತೆ ಯಾವೆಲ್ಲ ಹಬ್ಬಗಳಿವೆ? ಇಲ್ಲಿದೆ ವಿವರ

Saturday, February 10, 2024

ಆಗ್ರಾದಲ್ಲಿ ಉತ್ಸವ ಏರ್ಪಡಿಸಿ ಇನ್ನಷ್ಟು ಪ್ರವಾಸಿಗರನ್ನು ಆರ್ಕಷಿಸುವುದು. ತಾಜ್‌ನ ಮಹತ್ವಕ್ಕೆ ಕಲೆ, ಸಂಸ್ಕೃತಿ. ಕರಕುಶಲ ಪ್ರದರ್ಶನದ ಸ್ಪರ್ಶ ನೀಡುವುದು ಪ್ರವಾಸೋದ್ಯಮ ಇಲಾಖೆ ಉದ್ದೇಶ. ಹತ್ತು ದಿನವೂ ಈ ಉತ್ಸವ ವಿಭಿನ್ನ ಅನುಭವ ನೀಡುತ್ತದೆ.

Taj Mahal Utsav: ಆಗ್ರಾದಲ್ಲಿ 10 ದಿನಗಳ ಉತ್ಸವ, ತಾಜ್‌ಮಹಲ್‌ ಕಣ್ತುಂಬಿಕೊಳ್ಳಲು ಅಣಿಯಾಗಿ

Friday, February 9, 2024

ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಸ್ಯಾಂಡಲ್‌ವುಡ್‌ ಸಿನಿಮಾ ನಟಿಯರು, ನಟರು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾಟೇರ ನಟ ದರ್ಶನ್‌, ಟಾಕ್ಸಿಕ್‌- ಕೆಜಿಎಫ್‌ ನಟ ಯಶ್‌, ಕಾಂತಾರ ನಟ ರಿಷಬ್‌ ಶೆಟ್ಟಿ, ಗಣೇಶ್‌, ಮಾಲಾಶ್ರಿ, ಆರಾಧನಾ ರಾಮ್‌ ಸೇರಿದಂತೆ ವಿವಿಧ ಸೆಲೆಬ್ರಿಟಿಗಳ ಫೋಟೋ ಆಲ್ಬಂ ಇಲ್ಲಿದೆ.

ಗಾಳಿಪಟ ಹಾರಿಸಿದ ಯಶ್‌, ಕಬ್ಬು ಜತೆ ಗಣೇಶ್‌, ರಾಸು ಜತೆ ಕಾಟೇರ ದರ್ಶನ್‌; ಸ್ಯಾಂಡಲ್‌ವುಡ್‌ ತಾರೆಯರ ಸಂಕ್ರಾಂತಿ ಆಲ್ಬಂ

Tuesday, January 16, 2024

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನ ಕಹಿಯೆಲ್ಲಾ ದೂರ ಮಾಡಿ ಸಿಹಿಯಷ್ಟೇ ತುಂಬಿರುವಂತೆ ಮಾಡಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಹಬ್ಬಕ್ಕೆ ವಿಶ್‌ ಮಾಡಲು ಇಲ್ಲಿದೆ ಒಂದಿಷ್ಟು ಐಡಿಯಾ

Sunday, January 14, 2024