international-news News, international-news News in kannada, international-news ಕನ್ನಡದಲ್ಲಿ ಸುದ್ದಿ, international-news Kannada News – HT Kannada
ಕನ್ನಡ ಸುದ್ದಿ  /  ವಿಷಯ  /  international news

Latest international news Photos

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಸುಮಾರು 100 ಪ್ರಯಾಣಿಕರು ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದಿಂದ ರಾವಲ್ಪಿಂಡಿಗೆ ಪ್ರಯಾಣಿಸಲು ರೈಲಿಗಾಗಿ ಕಾಯುತ್ತಿದ್ದರು. ಆಗ ಈ ಸ್ಫೋಟ ಸಂಭವಿಸಿದೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ನಿಲ್ದಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಪ್ರತ್ಯೇಕತಾವಾದಿ ಗುಂಪು ಹೇಳಿಕೊಂಡಿದೆ.

ಪಾಕಿಸ್ತಾನ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸ್ಫೋಟ; ಸಾವಿನ ಸಂಖ್ಯೆ 24ಕ್ಕೆ ಏರಿಕೆ, 50ಕ್ಕೂ ಹೆಚ್ಚು ಗಾಯ

Saturday, November 9, 2024

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ 132 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತರೂ ಮುಂದಿನ ಚುನಾವಣೆಯಲ್ಲಿ ಗೆದ್ದು ಗದ್ದುಗೆಗೇರಿದ 2ನೇ ಯುಎಸ್​ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1892ರಲ್ಲಿ ಗ್ರೋವರ್ ಕ್ಲೀವ್​ಲ್ಯಾಂಡ್ ಈ ಸಾಧನೆ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಸತತ 3 ಚುನಾವಣೆಗಳಲ್ಲಿ ಮೊದಲ ಮತ್ತು 3ನೇ ಅವಧಿಯಲ್ಲಿ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ. ಗ್ರೋವರ್ ಅವರು ಸಹ ಇದೇ ರೀತಿ ಗೆದ್ದಿದ್ದರು.

Donald Trump: ಅಮೆರಿಕ ಚುನಾವಣೆಯಲ್ಲಿ ಗೆದ್ದು 132 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ ಡೊನಾಲ್ಡ್ ಟ್ರಂಪ್

Wednesday, November 6, 2024

ರಿಪಬ್ಲಿಕನ್ ಪಕ್ಷದ ಪರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿ ವ್ಯಾನ್ಸ್ ಅವರ ಪತ್ನಿ ಚಿಲುಕುರಿ ಉಷಾ ಅವರ ಕುಟುಂಬವು ಈಗ ಅಮೆರಿಕದಲ್ಲಿ ನೆಲೆಸಿದೆ. ಉಷಾ ಅವರ ಪೋಷಕರು 60ರ ದಶಕದಲ್ಲೇ ಯುಎಸ್​ಗೆ ತೆರಳಿದ್ದರು. ಪ್ರಸ್ತುತ ರಿಪಬ್ಲಿಕ್ ಪಕ್ಷವು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಮತ್ತೊಂದೆಡೆ ಡೆಮಾಕ್ರಟಿಕ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವ ಕಮಲಾ ಹ್ಯಾರಿಸ್ ಅವರ ಪೂರ್ವಜರು ತಮಿಳುನಾಡಿನವರು ಎಂಬುದು ವಿಶೇಷ.

ಅಮೆರಿಕ ಅಧ್ಯಕ್ಷ ಚುನಾವಣೆ: ಉಪಾಧ್ಯಕ್ಷ ರೇಸ್​ನಲ್ಲಿ ಆಂಧ್ರಪ್ರದೇಶದ ಅಳಿಯ; ಯಾರವರು, ಭಾರತಕ್ಕೆ ಕನೆಕ್ಷನ್ ಹೇಗೆ?

Wednesday, November 6, 2024

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಇಂದು (ನವೆಂಬರ್ 5 ) ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಶುರುವಾಗಿದೆ. ಪೆನ್ಸಿಲ್ವೇನಿಯಾದ ಐರ್‌ ಎಂಬಲ್ಲಿನ ಚರ್ಚ್ ಒಂದರ ಬಳಿ ಮತದಾನ ದಿನ ಎಂಬುದನ್ನು ಬಿಂಬಿಸುವ ಇಲೆಕ್ಟ್ರಾನಿಕ್ ಸೈನ್ ಬೋರ್ಡ್‌ ಕಂಡು ಬಂದುದು ಹೀಗೆ.

ಅಮೆರಿಕ ಚುನಾವಣೆಗೆ ಅಮೆರಿಕನ್ನರು ಮತ ಹೇಗೆ ಚಲಾಯಿಸ್ತಾರೆ, ಮತಗಟ್ಟೆ ಚಿತ್ರಣ ಹೇಗಿದೆ- ಇಲ್ಲಿದೆ ಚಿತ್ರನೋಟ

Tuesday, November 5, 2024

ಲೆಬನಾನ್‌ ದೇಶದಲ್ಲಿ ಸರಣಿ ಸ್ಪೋಟ ಸಂಭವಿಸಿದೆ. ಸಾರ್ವಜನಿಕ ಸ್ಥಳಗಳು, ಮಾಲ್‌ಗಳಲ್ಲಿಯೇ ಪೇಜರ್‌, ಸೋಲಾರ್‌ ಪೆನಲ್‌ಗಳ ಸ್ಪೋಟದಿಂದ ಭಾರೀ ಸಾವು ನೋವುಗಳು ಸಂಭವಿಸಿವೆ.

ಲೆಬನಾನ್‌ನಲ್ಲಿ ಪೇಜರ್‌, ವಾಕಿಟಾಕಿ, ಸೋಲಾರ್‌ ವಸ್ತುಗಳ ಸ್ಪೋಟದಿಂದ 32 ಮಂದಿ ಸಾವು; ಹೀಗಿತ್ತು ಸ್ಪೋಟದ ತೀವ್ರತೆಯ ನೋಟ

Thursday, September 19, 2024

ಬ್ಯಾಂಕ್ ಆಫ್ ಜಪಾನ್ ಗವರ್ನರ್ ಕಝುವೊ ಉಯೆಡಾ ಅವರು ಟೋಕಿಯೊದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಹೊಸ ಯೆನ್ ನೋಟುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.(ಚಿತ್ರ ಶೀರ್ಷಿಕೆ). ಜಪಾನ್‌ನ ಅರ್ಥ ವ್ಯವಸ್ಥೆಯಲ್ಲಿ ನಕಲಿ ನೋಟುಗಳ ಚಲಾವಣೆ ತಡೆಯುವುದಕ್ಕಾಗಿ ಅಲ್ಲಿನ ಸರ್ಕಾರ ಪ್ರತಿ 20 ವರ್ಷಕ್ಕೊಮ್ಮೆ ನೋಟುಗಳ ಬದಲಾವಣೆ ಮಾಡುತ್ತದೆ. ಅದರಂತೆ, ಇಂದು (ಜುಲೈ 3) 1,000 ಯೆನ್, 5,000 ಯೆನ್, 10,000 ಯೆನ್‌ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ. ವಿಶೇಷ ಎಂದರೆ ಭಾರತದ ನೆರೆಯ ನೇಪಾಳದ ನೆರವಿಲ್ಲದೆ ಜಪಾನ್‌ ಕರೆನ್ಸಿ ಪ್ರಿಂಟ್ ಆಗಲ್ಲ. 10 ಕುತೂಹಲಕಾರಿ ಅಂಶಗಳು

ಭಾರತದ ನೆರೆಯ ನೇಪಾಳದ ನೆರವಿಲ್ಲದೆ ಜಪಾನ್‌ ಕರೆನ್ಸಿ ಪ್ರಿಂಟ್ ಆಗಲ್ಲ, ಹೊಸ ಜಪಾನಿ ಯೆನ್‌ ನೋಟು ಇಂದು ಚಲಾವಣೆಗೆ, 10 ಕುತೂಹಲಕಾರಿ ಅಂಶಗಳು

Wednesday, July 3, 2024

ಸಿದ್ದಾರ್ಥ ಮಲ್ಯ ಕೆಲ ವರ್ಷಗಳ ಹಿಂದೆ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡದೊಂದಿಗೆ ಕಾಣಿಸಿಕೊಳ್ಳುತ್ತಿದ್ದ  ಉದ್ಯಮಿ ವಿಜಯಮಲ್ಯ ಪುತ್ರ. ಈಗ ಸಿದ್ದಾರ್ಥ ಮದುವೆ ಲಂಡನ್‌ ನಲ್ಲಿ ನೆರವೇರಿದೆ. ಹಿಂದೂ ಸಂಪ್ರದಾಯದಂತೆಯೂ ಮದುವೆಯನ್ನು ಸಿದ್ದಾರ್ಥ ಮಾಡಿಕೊಂಡಿದ್ದಾರೆ..

Mallya Marriage: ವಿಜಯಮಲ್ಯ ಪುತ್ರನ ವಿವಾಹ ಸಂಭ್ರಮ, ಕ್ರಿಶ್ಚಿಯನ್‌, ಹಿಂದೂ ಸಂಪ್ರದಾಯದಂತೆ ಗೆಳತಿ ವರಿಸಿದ ಸಿದ್ದಾರ್ಥ್‌ photos

Monday, June 24, 2024

ಈ ಬಾರಿ ಮೆಕ್ಕಾದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಮೆಕ್ಕಾದಲ್ಲಿ ಬಿಸಿಲಿನ ಕಾರಣದಿಂದ ಅಲ್ಲಿಗೆ ಬರುವವರು ಬಳಲಿ ಹೋಗಿದ್ದಾರೆ. ಸ್ಥಳೀಯರು ನೀರು ಕೊಟ್ಟು ಸಹಕರಿಸುತ್ತಿದ್ದಾರೆ.

Mecca: ಮೆಕ್ಕಾದಲ್ಲಿ ಮಿತಿ ಮೀರಿದ ಬಿಸಿಲಿಗೆ 900 ಹಜ್‌ ಯಾತ್ರಿಕರ ಸಾವು, ಹೇಗಿದೆ ಪರಿಸ್ಥಿತಿ photos

Thursday, June 20, 2024

ಅರಸ್ ನದಿಗೆ ಇರಾನ್ ಮತ್ತು ಅಜೆರ್‌ಬೈಜಾನ್‌ ಜಂಟಿಯಾಗಿ ನಿರ್ಮಿಸಿದ ಮೂರನೇ ಅಣೆಕಟ್ಟು ಕ್ವಿಜ್ ಖಲಾಸಿಯನ್ನು ಉದ್ಘಾಟಿಸುವುದಕ್ಕೆಂದು ಮೇ 19 ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (ಧ್ವಜದ ಪಕ್ಕದಲ್ಲೇ ಇರುವವರು) ಹೋಗಿದ್ದರು. ಉದ್ಘಾಟನಾ ಸಮಾರಂಭದ ಸಂದರ್ಭ ಇದು.

ಹೆಲಿಕಾಪ್ಟರ್ ಪತನ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅನ್ನು ರಕ್ಷಣಾ ಸಿಬ್ಬಂದಿ ಪತ್ತೆ ಹಚ್ಚಿದ್ದು ಹೀಗೆ - ಚಿತ್ರನೋಟ

Monday, May 20, 2024

ಚೀನಾ ದೇಶದ ದಕ್ಷಿಣ ಭಾಗದಲ್ಲಿ ಕೆಲವು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಲೇ ಇದೆ.ಬುಧವಾರ ಸುರಿದ ಭಾರೀ ಮಳೆಗೆ  ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು ಕನಿಷ್ಠ 48 ಮಂದಿ ಜೀವ ಕಳೆದುಕೊಂಡಿದ್ದಾರೆ.

China Rains: ಚೀನಾದಲ್ಲಿ ಭಾರೀ ಮಳೆ ಅನಾಹುತ, ಹೆದ್ದಾರಿ ಕುಸಿತ, 48 ಮಂದಿ ಬಲಿ photos

Thursday, May 2, 2024

ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 2024ರ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ಹೆಸರು ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್. ವೃತ್ತಿಯಲ್ಲಿ ನ್ಯಾಯವಾದಿ ಮತ್ತು ಪತ್ರಕರ್ತೆ. ಈ ಮೂಲಕ ಅವರು ವಯಸ್ಸು ಮತ್ತು ಸೌಂದಯ್ಯದ ವಿಚಾರದಲ್ಲಿ ತಮ್ಮದೇ ಆದ ವ್ಯಾಖ್ಯೆಯನ್ನು ಬರೆದುಬಿಟ್ಟರು.

Alejandra Rodriguez; ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 60 ವರ್ಷದ ಸುರಸುಂದರಿ, ಪತ್ರಕರ್ತೆ, ನ್ಯಾಯವಾದಿ ಅಲೆಜಾಂಡ್ರಾ ರೋಡ್ರಿಗಸ್ ಫೋಟೋಸ್

Saturday, April 27, 2024

ದುಬೈ ಮಹಾನಗರದ ರಸ್ತೆಯಿದು. ಈ ರಸ್ತೆಯೇ ನದಿಯಾಗಿ ಮಾರ್ಪಡುವ ಮಟ್ಟಿಗೆ ಭಾರೀ ಮಳೆ ಸುರಿದಿದೆ. ಜನ ಮಳೆಯಿಂದ ಉಕ್ಕಿ ಹರಿಯುತ್ತಿರುವ ರಸ್ತೆಯಲ್ಲೇ ಸಂಚರಿಸುವ ಸನ್ನಿವೇಶವಿದು.

Dubai Rains2024: ದುಬೈ ನಗರದಲ್ಲಿ ಕುಂಭದ್ರೋಣ ಮಳೆ, ಕೊಚ್ಚಿ ಹೋದ ಪ್ರವಾಸಿ ನಗರ, ಹೇಗಿದೆ ಮಳೆ ಸ್ಥಿತಿಗತಿ photos

Wednesday, April 17, 2024

ಇರಾನ್‌ ದಾಳಿ ಮಾಡಿದರೂ ಕ್ಷಿಪಣಿಗಳನ್ನು ತಡೆಯುವ ಪ್ರತಿ ಕ್ಷಿಪಣಿಗಳನ್ನು ಇಸ್ರೇಲ್‌ ಬಳಕೆ ಮಾಡುತ್ತಿದೆ. ಇದು ಇಸ್ರೇಲ್‌ ಬಳಸುತ್ತಿರುವ ಪ್ರತಿತಂತ್ರದ ಚಿತ್ರ.

Iran Attacks Israel: ಇಸ್ರೇಲ್‌ ಮೇಲೆ ಇರಾನ್‌ ಮಾಡಿದ ಕ್ಷಿಪಣಿಗಳ ಪ್ರತಿ ದಾಳಿ ಹೇಗಿದೆ photos

Sunday, April 14, 2024

ಮಧ್ಯಪ್ರಾಚ್ಯ ಯುದ್ಧದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಇರಾನ್ ಶನಿವಾರ ಇಸ್ರೇಲಿ ಉದ್ಯಮಿ ಇಯಾಲ್ ಆಫರ್‌ಗೆ ಸಂಬಂಧಿಸಿದ ಸರಕು ಹಡಗನ್ನು ವಶಪಡಿಸಿಕೊಂಡಿದೆ. MSC ಏರೀಸ್‌ನಲ್ಲಿ 17 ಭಾರತೀಯ ನಾಗರಿಕರು ಇದ್ದಾರೆ ಎಂದು ತಿಳಿದ ನಂತರ ಭಾರತೀಯ ಅಧಿಕಾರಿಗಳು ಈಗ ತಮ್ಮ ಇರಾನಿನ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಪೋರ್ಚುಗೀಸ್-ಧ್ವಜದ ಎಂಎಸ್‌ಸಿ ಏರಿಸ್‌ ಎಂದು ಗುರುತಿಸಲಾದ ಹಡಗನ್ನು ಈಗ ಟೆಹ್ರಾನ್‌ನ “ಪ್ರಾದೇಶಿಕ ಜಲ ವ್ಯಾಪ್ತಿ”ಗೆ ಬಂದಿದೆ ಎಂದು ಇರಾನ್ ಮಾಧ್ಯಮ ಹೇಳಿದೆ.

ಎಂಎಸ್‌ಸಿ ಏರಿಸ್‌ ಸರಕು ಸಾಗಣೆ ಹಡಗು ಇರಾನ್ ವಶ; 17 ಭಾರತೀಯರ ಬಿಡುಗಡೆಗೆ ಭಾರತ ಸರ್ಕಾರದ ಪ್ರಯತ್ನ

Saturday, April 13, 2024

ತೈವಾನ್ 25 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಪ್ರಬಲ ಭೂಕಂಪವನ್ನು ಅನುಭವಿಸಿದೆ. ಭಂಕಪನ ಬಳಿಕ ಕಾಣೆಯಾದವರನ್ನ ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಶೋಧ ನಡೆಸುತ್ತಿದ್ದಾರೆ. ಭೂಕಂಪದಿಂದಾಗಿ ಬಂಡೆಗಳು ಮತ್ತು ಮಣ್ಣು ಪರ್ವತಗಳು ರಸ್ತೆ ಬಿದ್ದಿದ್ದು, ಸಂಚಾರ ಬಂದ್ ಆಗಿದೆ. ಈ ದುರಂತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ತೈವಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪನ; 10 ಮಂದಿ ಸಾವು, 1,100 ಮಂದಿಗೆ ಗಾಯ; ಫೋಟೊಸ್ -Taiwan Earthquake

Thursday, April 4, 2024

ದಿ ವೇವ್‌-ಅರಿಜೋನಾ, ಅಮೆರಿಕ: ಈ ಜಾಗವು ಅದ್ಭುತ ಮರಳುಗಲ್ಲಿನ ಗುಹೆಗಳಿಂದ ಕೂಡಿದೆ. ಕೆಂಪು ಅಲೆಗಳಂತೆ ಕಾಣುವ ಕಡಿದಾದ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ಪೆರಿಯಾ ಕಣಿವೆಯಲ್ಲಿದೆ ಈ ತಾಣ. ಇದು ಜಗತ್ತಿನ ಅಸಹಜ ಎನ್ನಿಸುವ ತಾಣಗಳಲ್ಲಿ ಒಂದು.

ಜಗತ್ತಿನ 10 ವಿಸ್ಮಯಕಾರಿ ತಾಣಗಳಿವು; ಇಲ್ಲಿನ ಅಚ್ಚರಿಯನ್ನು ಕಣ್ಣಾರೆ ಕಂಡ್ರು ನೀವು ನಂಬೋದು ಕಷ್ಟ

Friday, March 29, 2024

ಈ ಬಾರಿಯ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಲವು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹದ್ದು. ಇದೇ ಸಂದರ್ಭದಲ್ಲಿ ನಿರಾಶೆ, ಹತಾಶೆ, ಅನಿರೀಕ್ಷಿತ ಕ್ಷಣಗಳಿಗೆ ಆಸ್ಕರ್‌ ಕಾರ್ಯಕ್ರಮ ಸಾಕ್ಷಿಯಾಗಿದೆ. ಕೆಲವು ಸಿನಿಮಾಗಳು, ನಟಿಯರು, ನಟರು ಅನಿರೀಕ್ಷಿತವಾಗಿ ಗೆಲುವಿನ ನಗೆ ಬೀರಿದರು. ಕೆಲವೊಂದು ಘಟನೆಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದವು.

ಅಯ್ಯೋ, ಆಸ್ಕರ್‌ ಕಾರ್ಯಕ್ರಮದಲ್ಲಿ ಹೀಗೆಲ್ಲ ಆಯ್ತ? ಅತ್ಯುತ್ತಮ, ಕೆಟ್ಟ ಮತ್ತು ಅತಿರೇಕದ ಕ್ಷಣಗಳಿಗೆ ಸಾಕ್ಷಿಯಾದ ಸಮಾರಂಭ

Monday, March 11, 2024

ಮಾರ್ಚ್ 10 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ96 ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆಯಿತು.  'ಪೂರ್ ಥಿಂಗ್ಸ್' ಚಿತ್ರದಲ್ಲಿ ಬೆಲ್ಲಾ ಬಾಕ್ಸ್ಟರ್ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಎಮ್ಮಾ ಸ್ಟೋನ್ ಗೆದ್ದರು. ಇವರು ತನ್ನ ಸುಂದರವಾದ ಉಡುಗೆ ಮತ್ತು ಆಸ್ಕರ್‌ ಪ್ರಶಸ್ತಿ ಜತೆ ಹೀಗೆ ಕಾಣಿಸಿಕೊಂಡರು.

Oscars 2024: ಅಕಾಡೆಮಿ ಅವಾರ್ಡ್‌ಗೆ ಶಂಗೆಲಾ ಏನ್‌ ಉಟ್ಟಿದ್ರು? ಸಲ್ಮಾ ಏನು ತೊಟ್ಟಿದ್ರು? ಆಸ್ಕರ್‌ ಸಮಾರಂಭದಲ್ಲಿ ಕಂಡ ಸುಂದರಿಯರು

Monday, March 11, 2024

ಪ್ರತಿವರ್ಷ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣು ಸಮಾಜದ ಕಣ್ಣು ಎಂಬ ನಾಣ್ನುಡಿ ಇದ್ದರೂ ಹೆಣ್ಣಿಗೆ ಸಲ್ಲಬೇಕಾದ ಸ್ವಾತಂತ್ರ್ಯ, ಗೌರವ ಇಂದಿಗೂ ಸಿಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿ ಬರುತ್ತವೆ. ಭಾರತದಲ್ಲಿ ಲಿಂಗ ಸಮಾನತೆ ಇಲ್ಲ, ಹೆಣ್ಣುಮಕ್ಕಳಿಗೆ ಅವಕಾಶವಿಲ್ಲ, ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲ ಎಂದೆಲ್ಲಾ ಹೇಳುವ ಮುನ್ನ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿದೇಶಗಳಲ್ಲಿನ ಕಾನೂನುಗಳ ಬಗ್ಗೆಯೂ ಅರಿಯುವುದು ಬಹಳ ಮುಖ್ಯ. ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಹೆಣ್ಣುಮಕ್ಕಳಿಗಿರುವ ಕಾನೂನು ಹಾಗೂ ಸ್ವಾತಂತ್ರ್ಯದ ಬಗ್ಗೆ ಅರಿಯಿರಿ.

Women's Day 2024: ಭಾರತದಲ್ಲಿ ಮಹಿಳೆಗೆ ಸ್ವಾತಂತ್ರ್ಯವಿಲ್ಲ ಎನ್ನುವ ಮುನ್ನ ವಿದೇಶದಲ್ಲಿನ ಈ ಕಾನೂನುಗಳ ಬಗ್ಗೆಯೂ ತಿಳಿಯಿರಿ

Wednesday, March 6, 2024

2024ರ ಗ್ರ್ಯಾಮಿ  ಅವಾರ್ಡ್‌ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವಂತಹ ಬೃಹತ್‌ ಮ್ಯೂಸಿಕ್‌ ನೈಟ್‌ ಲಾಸ್‌ ಏಂಜೆಲ್ಸ್‌ನಲ್ಲಿ ನಡೆದಿದೆ. ಈ ರೆಡ್‌ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಪ್ರಮುಖ ನಟಿಯರು, ನಟರು ಆಗಮಿಸಿದ್ದಾರೆ. ಟೇಲರ್ ಸ್ವಿಫ್ಟ್, ಮಿಲೀ ಸೈರಸ್, ದುವಾ ಲಿಪಾ ಮತ್ತು ಇತರರು ಈ ಕಾರ್ಯಕ್ರಮದ ಅಂದ ಹೆಚ್ಚಿಸಿದ್ದಾರೆ.

ಗ್ರ್ಯಾಮಿ ಅವಾರ್ಡ್‌ಗೆ ತಾರಾ ಮೆರುಗು: ಹುಟ್ಟುಡುಗೆಗೆ ಆಭರಣದ ನಿಲುವಂಗಿ, ರೆಡ್‌ಕಾರ್ಪೆಟ್‌ನಲ್ಲಿ ಉಡುಗೆಯ ಅಂದ, ನಡಿಗೆಯ ಚಂದ

Monday, February 5, 2024