ಸಿವಿಲ್ ಪ್ರಕರಣಗಳಲ್ಲಿ ರಾಜಿ ಸಂಧಾನ ಕಡ್ಡಾಯ ಮಾಡಲಾಗಿದ್ದು, ಕೇಂದ್ರ ಕಾನೂನು ಸಿಪಿಸಿಗೆ ರಾಜ್ಯ ತಿದ್ದುಪಡಿಗೆ ರಾಷ್ಟ್ರಪತಿಯವರ ಅಂಕಿತ ಬಿದ್ದಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಕರಣ ದಾಖಲಾದ ದಿನ ಅಂತಿಮ ತೀರ್ಪಿನ ದಿನಾಂಕ ನಿರ್ಣಯ ಮಾಡುವ ರೀತಿಯಲ್ಲಿ ಸಿಪಿಸಿಗೆ ಚರಿತ್ರಾರ್ಹ ತಿದ್ದುಪಡಿ ಮಾಡಿರುವುದು ಗಮನಾರ್ಹ ಎಂದರು.