ranji-trophy News, ranji-trophy News in kannada, ranji-trophy ಕನ್ನಡದಲ್ಲಿ ಸುದ್ದಿ, ranji-trophy Kannada News – HT Kannada

Latest ranji trophy Photos

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 17ನೇ ಆವೃತ್ತಿಯ  ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯವನ್ನು ಸ್ಯಾಂಡಲ್‌ವುಡ್‌ನ ಶಿವರಾಜ್‌ ಕುಮಾರ್‌, ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ, ರಂಜನಿ ರಾಘವನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ವೀಕ್ಷಿಸಿದ್ದಾರೆ.

ಐಪಿಎಲ್‌ ಕ್ರಿಕೆಟ್‌ನಲ್ಲಿ ಈ ಸಲ ಕಪ್‌ ನಮ್ದೇ; ಆರ್‌ಸಿಬಿ ಗೆಲುವನ್ನು ಕಣ್ತುಂಬಿಕೊಂಡ ಶಿವಣ್ಣ, ರಿಷಬ್‌ ಶೆಟ್ಟಿ ಮತ್ತಿತರರ ಚಿತ್ರ ಲಹರಿ

Sunday, May 19, 2024

ಅಸ್ಸಾಂನ ರಿಯಾನ್ ಪರಾಗ್ ರಣಜಿ ಟ್ರೋಫಿ 2024 ರಲ್ಲಿ ಅತಿ ಹೆಚ್ಚು ಸಿಕ್ಸರ್​​ಗಳನ್ನು ಬಾರಿಸಿದ್ದಾರೆ. 4 ಪಂದ್ಯಗಳ 6 ಇನ್ನಿಂಗ್ಸ್​​ಗಳಲ್ಲಿ 20 ಸಿಕ್ಸರ್ ಬಾರಿಸಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ರಿಯಾನ್ ಹೆಸರಿನಲ್ಲಿದೆ. ರಾಯ್ಪುರದಲ್ಲಿ ಛತ್ತೀಸ್​​ಗಢ ವಿರುದ್ಧ 155 ರನ್ ಗಳಿಸಿದ ಇನ್ನಿಂಗ್ಸ್​​ನಲ್ಲಿ ಅವರು 12 ಸಿಕ್ಸರ್​ ಬಾರಿಸಿದರು.

Ranji trophy 2024: ಅತಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದವರು ಯಾರು; ಗರಿಷ್ಠ ಶತಕ, ಸಿಕ್ಸರ್ ಸಿಡಿಸಿದ್ಯಾರು?

Friday, March 15, 2024

ಈ ಐವರು ಆಟಗಾರರು ಕೂಡಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರೆಲ್ಲರೂ ದೇಶಿ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳು. ಒಂದು ಸಾಮಾನ್ಯ ಸಂಗತಿಯೆಂದರೆ, ಇವರಲ್ಲಿ ಯಾರಿಗೂ ಟೀಮ್ ಇಂಡಿಯಾ ಪರ ಆಡಲು ಸಾಕಷ್ಟು ಅವಕಾಶ ಸಿಕ್ಕಿಲ್ಲ. ಭಾರತ ತಂಡದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಐವರು ಕ್ರಿಕೆಟಿಗರು ಏಕಕಾಲದಲ್ಲಿ  ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರಣಜಿ ಟ್ರೋಫಿಯ ಕೊನೆಯ ಗ್ರೂಪ್ ಪಂದ್ಯದ ನಂತರ, ನಾಲ್ವರು ಕೆಂಪು ಚೆಂಡು ಕ್ರಿಕೆಟ್‌ಗೆ ಶಾಶ್ವತವಾಗಿ ವಿದಾಯ ಹೇಳಿದರು. ಮತ್ತೊಬ್ಬರು ಅಂತಿಮವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಮ್ಮ ರಣಜಿ ಅಭಿಯಾನದ ಕೊನೆಯವರೆಗೂ ಆಡುವುದನ್ನು ಮುಂದುವರಿಸಲು ನಿರ್ಧರಿಸಿದರು.

ರಣಜಿ ಟ್ರೋಫಿ 2024: ಭಾರತ ತಂಡದಲ್ಲಿ ಸಿಗದ ಅವಕಾಶ; ಏಕಕಾಲಕ್ಕೆ ಕ್ರಿಕೆಟ್‌ಗೆ ವಿದಾಯ ಹೇಳಿದ ಐವರು ಕ್ರಿಕೆಟಿಗರು

Tuesday, February 20, 2024

ಮನೋಜ್ ತಿವಾರಿ ನಿವೃತ್ತಿ ದಿನವಾದ ಭಾನುವಾರ ಈಡನ್‌ ಮೈದಾನವೇ ಭಾವುಕವಾಗಿತ್ತು. ಬಿಹಾರ ವಿರುದ್ಧದ ರಣಜಿ ಪಂದ್ಯದಲ್ಲಿ ಗೆಲುವಿನೊಂದಿಗೆ ತಮ್ಮ ಕ್ರಿಕೆಟ್‌ ವೃತ್ತಿಬದುಕಿಗೆ ಅಂತ್ಯ ಹಾಡಿದರು.

ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಭಾವುಕ

Monday, February 19, 2024

ದೇಶೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ರಾಜಿಂದರ್ ಗೋಯೆಲ್. ಅವರು 750 ಪ್ರಥಮ ದರ್ಜೆ ವಿಕೆಟ್‌ಗಳನ್ನು ಹೊಂದಿದ್ದಾರೆ. 18 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ಬಿಷನ್ ಬೇಡಿ, ಎರಪಳ್ಳಿ ಪ್ರಸನ್ನ, ವೆಂಕಟರಾಘವನ್, ಚಂದ್ರಶೇಖರ್ ಅವರಂತಹ ಸ್ಪಿನ್ನರ್‌ಗಳು ಟೀಂ ಇಂಡಿಯಾದಲ್ಲಿದ್ದಾಗ ರಾಜಿಂದರ್‌ಗೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ರಣಜಿಯಲ್ಲಿ ಟನ್ ಗಟ್ಟಲೆ ರನ್, ನೂರಾರು ವಿಕೆಟ್​ ಪಡೆದಿದ್ದರೂ ಭಾರತ ತಂಡಕ್ಕೆ ಆಯ್ಕೆಯಾಗದ ಕ್ರಿಕೆಟರ್ಸ್

Saturday, February 17, 2024

ಮನೋಜ್ ತಿವಾರಿ 169 ಲೀಸ್ಟ್​ ಎ ಪಂದ್ಯಗಳ 158 ಇನ್ನಿಂಗ್ಸ್‌ಗಳಲ್ಲಿ 5581 ರನ್ ಕಲೆ ಹಾಕಿದ್ದಾರೆ. 6 ಶತಕ ಮತ್ತು 40 ಅರ್ಧಶತಕಗಳು ಸಹ ಅವರ ಖಾತೆಯಲ್ಲಿವೆ. ಗರಿಷ್ಠ ಸ್ಕೋರ್​ 151 ರನ್. ಮನೋಜ್ ಲಿಸ್ಟ್-ಎ ಕ್ರಿಕೆಟ್​ನಲ್ಲಿ 63 ವಿಕೆಟ್ ಪಡೆದಿದ್ದಾರೆ.

19,000ಕ್ಕೂ ಹೆಚ್ಚು ರನ್, 36 ಶತಕ; ನಿವೃತ್ತಿಗೂ ಮುನ್ನ ಮನೋಜ್ ತಿವಾರಿ ವರ್ಣರಂಜಿತ ವೃತ್ತಿ ಜೀವನದ ಕಿರುನೋಟ ಇಲ್ಲಿದೆ

Thursday, February 15, 2024

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತದ ಬ್ಯಾಟರ್‌ಗಳ ಪ್ರದರ್ಶನ ಟೀಕೆಗೆ ಗುರಿಯಾಗುತ್ತಿರುವ ನಡುವೆ, ದೇಶೀಯ ಕ್ರಿಕೆಟ್‌ನಲ್ಲಿ ಯುವ ಆಟಗಾರ ದೇವದತ್‌ ಪಡಿಕಲ್ ಪ್ರದರ್ಶನ ಗಮನ ಸೆಳೆಯುವಂತಿದೆ. ಲಕ್ನೋ ಸೂಪರ್ ಜೈಂಟ್ಸ್ ಸ್ಟಾರ್‌ ಆಟಗಾರ ಉತ್ತಮ ಫಾರ್ಮ್‌ನಲ್ಲಿದ್ದಾರೆ.

Ranji Trophy: ತಮಿಳುನಾಡು ವಿರುದ್ಧವೂ ಶತಕ ಸಿಡಿಸಿದ ದೇವದತ್ ಪಡಿಕ್ಕಲ್; 2024ರಲ್ಲಿ ನಾಲ್ಕನೇ ಸೆಂಚುರಿ

Friday, February 9, 2024

ಪೂಜಾರ ಪ್ರಸಕ್ತ ರಣಜಿ ಟ್ರೋಫಿಯ 4 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 107ರ ಭರ್ಜರಿ ಸರಾಸರಿಯಲ್ಲಿ 535 ರನ್ ಕಲೆಹಾಕಿದ್ದಾರೆ. ಅದರಲ್ಲಿ 1 ದ್ವಿಶತಕ ಕೂಡಾ ಸೇರಿದೆ. 2 ಅರ್ಧಶತಕ ಗಳಿಸಿದ್ದಾರೆ. ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಬದಲಿ ಕ್ರಿಕೆಟಿಗರ ಹೆಸರನ್ನು ಆಯ್ಕೆಗಾರರು ಘೋಷಿಸಿದ ದಿನವೂ ಪೂಜಾರ ಸರ್ವಿಸಸ್ ವಿರುದ್ಧ 91 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು.

4 ರಣಜಿ ಪಂದ್ಯಗಳಲ್ಲಿ 535 ರನ್ ಸಿಡಿಸಿದ ಚೇತೇಶ್ವರ ಪೂಜಾರ; ಆದರೂ ಭಾರತ ಟೆಸ್ಟ್ ತಂಡದಿಂದ ಕಡೆಗಣನೆ

Monday, January 29, 2024

ತನ್ಮಯ್ ರಣಜಿ ಮಾತ್ರವಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ನ ಇತಿಹಾಸದಲ್ಲಿ ಕಡಿಮೆ ಎಸೆತಗಳನ್ನು ಎದುರಿಸಿ ತ್ರಿಶತಕ ಗಳಿಸಿದ ವಿಶ್ವದಾಖಲೆ ನಿರ್ಮಿಸಿದರು. ಆ ಮೂಲಕ ಅವರು ಮಾರ್ಕೊ ಮೊರೈಸ್ ಅವರ ಸಾರ್ವಕಾಲಿಕ ದಾಖಲೆ ಮುರಿದರು. ಮಾರ್ಕೊ ಅವರು 2017–18ರ ಋತುವಿನಲ್ಲಿ ಲಂಡನ್‌ನ ಬಫಲೋ ಪಾರ್ಕ್‌ನಲ್ಲಿ ಪೂರ್ವ ಪ್ರಾಂತ್ಯದ ವಿರುದ್ಧ ಬಾರ್ಡರ್ಸ್‌ ಪರ ಆಡುವಾಗ 191 ಎಸೆತಗಳಲ್ಲಿ ಟ್ರಿಪಲ್ ಸೆಂಚುರಿ ಗಳಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು.

Ranji Trophy: ಕೇವಲ 147 ಎಸೆತಗಳಲ್ಲಿ ತ್ರಿಶತಕ; ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ತನ್ಮಯ್ ಅಗರ್ವಾಲ್

Friday, January 26, 2024

ಅಫ್ಘಾನಿಸ್ತಾನ ಸರಣಿ ಮುಗಿದ ಬಳಿಕ ರಣಜಿಗೆ ಯಾವೆಲ್ಲಾ ಆಟಗಾರರು ಮರಳಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಅಫ್ಘನ್ ಸರಣಿ ಬಳಿಕ ರಣಜಿಯತ್ತ ಹೆಜ್ಜೆ ಹಾಕಿದ ರಿಂಕು, ಸಂಜು, ತಿಲಕ್; ಇಶಾನ್ ಕಿಶನ್ ನಾಪತ್ತೆ

Saturday, January 20, 2024

ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕನಾಗಿರುವ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ, ಜನವರಿ 19ರ ಶುಕ್ರವಾರ ತಿರುವನಂತಪುರದಲ್ಲಿ ಆರಂಭವಾಗಿರುವ ರಣಜಿ ಪಂದ್ಯದಲ್ಲಿ ಆಡುತ್ತಿದ್ದಾರೆ. ಕೇರಳ ವಿರುದ್ಧ ಎಲೈಟ್ ಗುಂಪಿನ ಬಿ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಸತತ ಎರಡು ಪಂದ್ಯಗಳಲ್ಲಿ ಗೋಲ್ಡನ್ ಡಕ್‌ ಮುಖಭಂಗ ಅನುಭವಿಸಿದ್ದಾರೆ.

ರಣಜಿ ಟ್ರೋಫಿಯ ಸತತ 2ನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಗೋಲ್ಡನ್ ಡಕ್; ಕಂಬ್ಯಾಕ್ ಹಾದಿ ಮತ್ತಷ್ಟು ಕಠಿಣ

Friday, January 19, 2024

ಮಹಿಳೆಯರ ರಣಜಿ ಪಂದ್ಯಗಳು 3 ದಿನಕ್ಕೆ ನಡೆಯಲಿವೆ. ಸಮಯದ ಮಿತಿಯಿಂದ ಆರಂಭದಲ್ಲಿ ವಲಯ ಸ್ವರೂಪದಿಂದ ಆರಂಭಿಸಲು ಚಿಂತಿಸುತ್ತಿದ್ದು, ಟೂರ್ನಿ ಮಾರ್ಚ್-ಏಪ್ರಿಲ್​​ನಲ್ಲಿ ಅಂತ್ಯಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ಮಹಿಳಾ ಕ್ರಿಕೆಟರ್ಸ್​ಗೆ ಶುಭ ಸುದ್ದಿ; ವನಿತೆಯರಿಗೂ ಶುರುವಾಗಲಿದೆ ರಣಜಿ ಟ್ರೋಫಿ ಮಾದರಿಯ ಟೂರ್ನಿ

Sunday, January 14, 2024

ಶತಕ ಸಿಡಿಸಿದ 23 ಕ್ರಿಕೆಟಿಗರು: ದೇವದತ್ ಪಡ್ಡಿಕಲ್ (193), ತಿಲಕ್ ವರ್ಮಾ (100), ಪ್ರಭಾಸಿಮ್ರಾನ್ ಸಿಂಗ್ (100), ಪ್ರಿಯಂ ಗರ್ಗ್ (106), ಮನೀಶ್ ಪಾಂಡೆ (118), ರಿಯಾನ್ ಪರಾಗ್ (155), ರಿಕಿ ಭುಯಿ (175) ಪ್ರೇರಕ್ ಮಾನ್ಕರ್ (104*) ಅಂಕಿತ್ ಬವಾನೆ (153) ಸಿದ್ಧಾರ್ಥ್ ಕೆವಿ (151*) ಆರ್ಯನ್ ಜುಯಲ್ (115).

ಅಬ್ಬಾ! ಮೊದಲ ಸುತ್ತಿನಲ್ಲೇ ರಣಜಿ ಎಷ್ಟು ರೋಚಕ; 23 ಶತಕ, 3 ದ್ವಿಶತಕ, 7 ವಿಕೆಟ್ ಗೊಂಚಲು ದಾಖಲು

Tuesday, January 9, 2024

ಜಾರ್ಖಂಡ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 162 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ತಮ್ಮ ವೈಯಕ್ತಿಕ ಶತಕ ಪೂರೈಸಿದರು. 2ನೇ ದಿನದ ಅಂತ್ಯಕ್ಕೆ ಅವರು 157 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಚೇತೇಶ್ವರ್ 239 ಎಸೆತಗಳ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಬಾರಿಸಿದ್ದರು. ಇದೀಗ ಅವರು ದ್ವಿಶತಕ ಸಿಡಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಧಿಕ ಶತಕ ಸಿಡಿಸಿದ ಭಾರತೀಯರು; ವಿಜಯ್ ಹಜಾರೆ ದಾಖಲೆ ಮುರಿದ ಪೂಜಾರ

Sunday, January 7, 2024

ಇಂದು ಮುಂಬೈ ವಿರುದ್ಧದ ಪಂದ್ಯದಲ್ಲಿ ಬಿಹಾರ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ 12 ವರ್ಷದ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕವನ್ನು ಅಚ್ಚರಿಸಿಗೊಳಿಸಿದ್ದಾರೆ.

ಕೇವಲ 12 ವರ್ಷಕ್ಕೆ ರಣಜಿ ಕ್ರಿಕೆಟ್​ಗೆ ಪದಾರ್ಪಣೆ; ಹೊಸ ಇತಿಹಾಸ ನಿರ್ಮಿಸಿದ ಬಿಹಾರದ ಯುವ ಆಟಗಾರ

Friday, January 5, 2024