Latest summer tips Photos

ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿನ ಅಂಶವಿದ್ದು, ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಹಣ್ಣುಗಳಾಗಿವೆ. ಹಾಗಿದ್ದರೆ, ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳಲ್ಲಿ ಯಾವ ಹಣ್ಣು ದೇಹವನ್ನು ಹೆಚ್ಚು ಹೈಡ್ರೇಟೆಡ್‌ ಆಗಿರಿಸುತ್ತದೆ ಎಂಬುದನ್ನು ತಿಳಿಯೋಣ

ಕಲ್ಲಂಗಡಿ ಅಥವಾ ಕರ್ಬೂಜ; ಹೆಚ್ಚು ನೀರಿನಂಶ ಇರುವ ಹಣ್ಣು ಯಾವುದು, ಬೇಸಿಗೆಗೆ ಯಾವುದು ಉತ್ತಮ?

Wednesday, May 1, 2024

ಬಿರು ಬೇಸಿಗೆಯಲ್ಲಿ ದೇಹ ತಂಪಾಗಿಸುವ ಮಾರ್ಗಗಳನ್ನು ಹುಡುಕುವುದು ಆಹಾರ. ತಂಪು ಪಾನೀಯಗಳು, ಮಜ್ಜಿಗೆ, ಕಲ್ಲಂಗಡಿ ಹಣ್ಣು, ನಿಂಬೆ ಪಾನಕ ಮುಂತಾದವುಗಳ ಸೇವನೆಯಿಂದ ದೇಹ ತಂಪಾಗುವುದು ಸಹಜ. ಇದರೊಂದಿಗೆ ಈ ಕೆಲವು ಯೋಗಾಭ್ಯಾಸಗಳನ್ನೂ ರೂಢಿಸಿಕೊಳ್ಳಿ. ಇದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತ ಭಾವ ದೊರೆಯುವ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ.

Summer Health: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡುವ 10 ಯೋಗಾಸನಗಳಿವು

Tuesday, April 23, 2024

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ದೇಹದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಕಾಡುವುದು ಸಹಜ. ಈ ಅವಧಿಯಲ್ಲಿ ನಿಮ್ಮ ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಬಳಸಬಹುದಾದ ಪ್ರಮುಖ ಆಹಾರ ವಸ್ತುಗಳಲ್ಲಿ ಈರುಳ್ಳಿ ಕೂಡ ಒಂದು. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಯ ಆರೈಕೆಗೂ ಪ್ರಯೋಜನಕಾರಿ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

Onion Benefits: ಬೇಸಿಗೆ ಉರಿಗೆ ಈರುಳ್ಳಿ ಮದ್ದು, ಪ್ರತಿದಿನ ಈರುಳ್ಳಿ ಬಳಸಿದರೆ ಆರೋಗ್ಯಕ್ಕೆ ಹಲವು ಲಾಭ

Sunday, April 21, 2024

ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುವ ಕಾರಣ ಅತಿಯಾಗಿ ಬೆವರುತ್ತೇವೆ. ಇದರೊಂದಿಗೆ ಧೂಳು, ಕೊಳೆ, ಮಾಲಿನ್ಯದಂತಹ ನಾನಾ ಕಾರಣಗಳಿಂದ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಅತಿಯಾಗಿ ಬೆವರುವುದು ಹಾಗೂ ದೇಹದಲ್ಲಿ ಧೂಳಿನಾಂಶ ಕೂರುವುದು ಶಿಲೀಂಧ್ರ ಸೋಂಕಿಗೆ ಕಾರಣವಾಗುತ್ತದೆ. ಚರ್ಮದ ಮೇಲೆ ದುಂಡಗಿನ ಆಕಾರದಲ್ಲಿ ಕಜ್ಜಿಯಾಗಿ ತುರಿಕೆ ಸಂಭವಿಸಬಹುದು. ಇದನ್ನು ರಿಂಗ್‌ವರ್ಮ್‌ ಎಂದು ಕರೆಯುತ್ತಾರೆ. ಇದು ಬೇರೆ ಸಮಯದಲ್ಲಿ ಕೂಡ ಆಗಬಹುದು. ಆದರೆ ಬೇಸಿಗೆಯಲ್ಲಿ ಇದು ಹೆಚ್ಚು ಕಾಡುತ್ತದೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ರಿಂಗ್‌ವರ್ಮ್‌ ಆಗುತ್ತದೆ.

Ringworm: ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಗೆ ಕಾರಣವಾಗುವ ರಿಂಗ್‌ವರ್ಮ್‌ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು

Thursday, April 18, 2024

ಹೀಟ್‌ವೇವ್‌ ಅಥವಾ ಬಿಸಿಗಾಳಿಯ ಆರಂಭಿಕ ಎಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ನಮ್ಮ ಸಂಪೂರ್ಣ ದಿನ ಹೇಗಿರಬೇಕು ಎಂಬುದನ್ನು ನಾವು ಮೊದಲೇ ಪ್ಲಾನ್‌ ಮಾಡಬೇಕು. ನಮ್ಮ ಯಾವುದೇ ಹೊರಾಂಗಣ ಚಟುವಟಿಕೆಯನ್ನು ಸಾಧ್ಯವಾದಷ್ಟು ಸಂಜೆಯ ನಂತರ ಮಾಡಿಕೊಳ್ಳುವುದು ಉತ್ತಮ.

Heat Wave: ಬಿಸಿಗಾಳಿಯ ಅಪಾಯ ಕಡಿಮೆ ಮಾಡುವ ತಂತ್ರಗಳಿವು, ನಿಮಗಿದು ತಿಳಿದಿರಲೇಬೇಕು

Wednesday, April 17, 2024

ಬೇಸಿಗೆ ಕಾಲಕ್ಕೆ ಅತ್ಯುತ್ತಮ ಫ್ಯಾಷನ್‌ ಉಡುಗೆ ಬಯಸುವವರಿಗೆ ಸ್ಫೂರ್ತಿಯಾಗುವಂತೆ ಅದಿತಿ ರಾವ್‌ ಹೈದಾರಿ ಅವರು ಕಿತ್ತಳೆ ಬಣ್ಣದ ಸುಂದರ ಉಡುಗೆಯಲ್ಲಿ ಮಿಂಚಿದ್ದಾರೆ. ಈಕೆ ಅನನ್ಯ ಫ್ಯಾಷನ್‌ ಅಭಿರುಚಿ ಇರುವ ನಟಿ. ಸೀರೆಯಾಗಲಿ, ಚಿಕ್‌ ಜಂಪ್‌ ಸೂಟ್‌ ಆಗಿರಲಿ, ಯಾವುದೇ ಉಡುಗೆಯಲ್ಲಿ ಸಖತ್‌ ಕಾಣಿಸ್ತಾರೆ. ಇದೀಗ ಅವರು ಮಾಡಿಕೊಂಡ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Aditi Rao Hydari: ಬೇಸಿಗೆ ಕಾಲಕ್ಕೆ ಬೆಸ್ಟ್‌ ಉಡುಗೆ ಬೇಕೆ? ಅದಿತಿ ರಾವ್‌ ಹೈದಾರಿ ಧರಿಸಿದ ಕಿತ್ತಳೆ ಬಣ್ಣದ ಉಡುಗೆ ಪರಿಶೀಲಿಸಿ

Monday, April 15, 2024

ಬೇಸಿಗೆಯಲ್ಲಿ ಬಿಸಿಲಿನ ಜೊತೆಗೆ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಕೆಲವು ಹಣ್ಣುಗಳು ಕೂಡ ಸಿಗುತ್ತವೆ. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಈ ಹಣ್ಣುಗಳು ನಮ್ಮನ್ನು ಹೈಡ್ರೇಟ್ ಮಾಡುವುದಲ್ಲದೆ ದೇಹಕ್ಕೆ ಚೈತನ್ಯ ಮರಳುವಂತೆ ಮಾಡುತ್ತದೆ. ಹಾಗಾಗಿ ಈ ಹಣ್ಣುಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಯಾವೆಲ್ಲಾ ಹಣ್ಣುಗಳನ್ನು ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಸೇವಿಸಬೇಕು ನೋಡಿ.

Summer Fruits: ಬೇಸಿಗೆಯಲ್ಲಿ ಸಿಗುವ ವಿಟಮಿನ್‌ ಸಿ ಸಮೃದ್ಧ ಹಣ್ಣುಗಳಿವು, ಈ ಹಣ್ಣುಗಳು ದೇಹಕ್ಕೆ ವರದಾನ ಸುಳ್ಳಲ್ಲ

Thursday, April 11, 2024

ಬೇಸಿಗೆಯಲ್ಲಿ ಎಳನೀರು ಕುಡಿದ್ರೆ ದೇಹ ತಂಪಗಾಗುತ್ತೆ, ಇದ್ರಿಂದ ತೂಕ ಇಳಿಯುತ್ತೆ, ಜೀರ್ಣಕ್ರಿಯೆ ವೃದ್ಧಿಯಾಗುತ್ತೆ ಅಂತೆಲ್ಲಾ ಎಲ್ಲರಿಗೂ ಗೊತ್ತು. ಆದರೆ ತ್ವಚೆಯ ಆರೈಕೆಗೂ ಎಳನೀರು ಉತ್ತಮ ಎನ್ನುವುದು ಹಲವರಿಗೆ ತಿಳಿದಿಲ್ಲ. ಇದರಲ್ಲಿನ ಜೀವಸತ್ವಗಳು ಹಾಗೂ ಪೋಷಕಾಂಶಗಳು ಚರ್ಮದ ಉರಿಯೂತ ಗುಣಪಡಿಸಲು ಸಹಕರಿಸುತ್ತವೆ. ಎಳನೀರಿನಿಂದ ತ್ವಚೆಗೆ ಪ್ರಯೋಜನ ಪಡೆಯಲು ಇದನ್ನು ಕುಡಿಯಬಹುದು ಅಥವಾ ಚರ್ಮಕ್ಕೆ ಹಚ್ಚಬಹುದು. ಹಾಗಾದ್ರೆ ಎಳನೀರಿನಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

Coconut Water: ದಾಹ ನೀಗಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತೆ ಎಳನೀರು, ಇದ್ರಿಂದ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Thursday, April 4, 2024

ಅತಿಯಾದ ಉಷ್ಣಾಂಶವು ಕೂದಲು ಉದುರಲು ಕಾರಣವಾಗಬಹುದು. ಹೀಗಾಗಿ ಬೇಸಿಗೆಯಲ್ಲಿ ನೆತ್ತಿಯ ಭಾಗವನ್ನು ತಂಪಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬೇಸಿಗೆಯಲ್ಲಿ ಕೂದಲು ಉದುರುವ ಪ್ರಮಾಣ ಹೆಚ್ಚಿತು ಎಂದು ಸಿಕ್ಕ ಸಿಕ್ಕ ಉತ್ಪನ್ನಗಳನ್ನು ಬಳಸುವ ಬದಲು ಮನೆಯಲ್ಲೇ ಈ ಸುಲಭ ಮಾರ್ಗಗಳನ್ನು ಅನುಸರಿಸಿ ನೋಡಿ.

Summer Hair Care: ಬೇಸಿಗೆಯಲ್ಲಿ ಅತಿಯಾಗಿ ಕೂದಲು ಉದುರುವುದನ್ನು ತಡೆಯಲು ಇಲ್ಲಿದೆ 6 ಮನೆಮದ್ದು

Thursday, April 4, 2024

ತಾಪಮಾನವು ಹೆಚ್ಚಾಗುತ್ತಿದ್ದಂತೆ, ಸುಡುವ ಶಾಖವನ್ನು ನಿಭಾಯಿಸಲು ಪ್ರಾಣಿಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತವೆ. ಅತಿಯಾದ ಬಿಸಿಲಿನಿಂದ ನಿಮ್ಮ ಸುತ್ತಲಿನ ಪ್ರಾಣಿಗಳು ತಂಪಾಗಿರಲು ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುವ ಹತ್ತು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ.

Summer Pet Care: ಬೇಸಿಗೆ ಬಿಸಿ ನಿಮ್ಮ ಮುದ್ದು ಪ್ರಾಣಿಗಳನ್ನು ಬಾಧಿಸದಿರಲಿ; ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಈ 10 ಕ್ರಮ ಪಾಲಿಸಿ

Monday, April 1, 2024

ಬೇಸಿಗೆಯಲ್ಲಿ ದೇಹ ತಣಿಸುವ ಪಾನೀಯಗಳನ್ನು ಮನಸ್ಸು, ನಾಲಿಗೆ ಎರಡೂ ಬಯಸುವುದು ಸಹಜ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳು ಆರೋಗ್ಯ ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಆರೋಗ್ಯ ವೃದ್ಧಿಸುವ ಪಾನೀಯಗಳ ಸೇವನೆಗೆ ಒತ್ತು ನೀಡಬೇಕು. ಅಂತಹ ಪಾನೀಯಗಳಲ್ಲಿ ಪುದಿನಾ ನೀರು ಕೂಡ ಒಂದು. ಇದು ದೇಹದಲ್ಲಿನ ವಿಷಾಂಶಗಳನ್ನು ಹೊರ ಹಾಕಿ, ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ ದೇಹ ತೂಕ ಇಳಿಕೆಗೂ ಸಹಕಾರಿ. ತೂಕ ಇಳಿಕೆಯ ವಿಚಾರದಲ್ಲಿ ಪುದಿನಾ ನೀರು ಕುಡಿಯುವುದರಿಂದಾಗುವ ಲಾಭವೇನು ತಿಳಿಯಿರಿ.

ತೂಕ ಇಳಿಸೋಕೆ ಹೇಳಿ ಮಾಡಿಸಿದ್ದು ಪುದಿನಾ ನೀರು; ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದಾಗುವ 5 ಪ್ರಯೋಜನಗಳಿವು

Monday, March 18, 2024

ಬೇಸಿಗೆ ರಜೆಯನ್ನು ಮಜವಾಗಿ ಹಾಗೂ ಅರ್ಥಪೂರ್ಣವಾಗಿ ಕಳೆಯಲು ಸಮ್ಮರ್‌ ಕ್ಯಾಂಪ್‌ಗಳಲ್ಲಿ ಭಾಗವಹಿಸುವುದು ಸಹಜ, ಆಟ-ಪಾಠಗಳ ಸಮ್ಮಿಶ್ರಣವಾಗಿರುವ ಸಮ್ಮರ್‌ ಕ್ಯಾಂಪ್‌ಗಳು ರಜಾದಿನಗಳನ್ನು ಅರ್ಥಪೂರ್ಣವಾಗಿಸುವುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಮೋಜು-ಮಸ್ತಿಯ ಜೊತೆಗೆ ಜೀವನ ಕೌಶಲವನ್ನೂ ಕಲಿಯಬಹುದು. ಆದರೆ ಇದಕ್ಕಾಗಿ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಅದರ ಬದಲು ನೀವೇ ಬೇಸಿಗೆ ಶಿಬಿರ ಆಯೋಜಿಸಬಹುದು. ನಿಮ್ಮ ಸ್ನೇಹಿತರ ಜೊತೆ ಎಂಜಾಯ ಮಾಡಬಹುದು. ಅದಕ್ಕಾಗಿ ಈ ಟಿಪ್ಸ್‌ಗಳನ್ನು ಅನುಸರಿಸಿ.

Summer Camp: ನಿಮ್ಮ ಫ್ರೆಂಡ್ಸ್ ಜೊತೆ ಸೇರಿ ಈ ಸಲ ನೀವೇ ಬೇಸಿಗೆ ಶಿಬಿರ ಆಯೋಜಿಸಿ, ಈ 7 ಟಿಪ್ಸ್ ಫಾಲೊ ಮಾಡಿ

Sunday, March 10, 2024

ಕಳೆದ ಕೆಲವು ದಿನಗಳಿಂದ ಬರೀ ಬಿಸಿಲು, ಬಿಸಿಲು, ಬಿಸಿಲು. ಎಲ್ಲಿ ನೋಡಿದರೂ ಬಿಸಿಲಿನದ್ದೇ ಸುದ್ದಿ. ಮಧಾಹ್ನದ ವೇಳೆಗೆ ತಾಪಮಾನ 41-42 ಡಿಗ್ರಿ ತಲುಪುತ್ತದೆ. ಇದರಿಂದಾಗಿ ಅನೇಕ ಸಂದರ್ಭಗಳಲ್ಲಿ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳು ಉದುರುವ ಸಮಸ್ಯೆಯೂ ಈ ಸಮಯದಲ್ಲಿ ಹೆಚ್ಚು ಎನ್ನಬಹುದು. ಎಲೆಗಳು ಉದುರಿ, ಉದುರಿ ನಂತರ ಗಿಡ ಸಾಯುತ್ತದೆ. ಬೇಸಿಗೆಯಲ್ಲಿ ಸಸ್ಯಗಳ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬಹುದು ನೋಡಿ.

Terrace Garden: ಚೆಂದದ ಮನೆಗಿರಲಿ ಅಂದದ ತಾರಸಿ ತೋಟ; ಬೇಸಿಗೆಯಲ್ಲಿ ಕಾಳಜಿ ಮಾಡೋದು ಮಾತ್ರ ಮರಿಬೇಡಿ

Friday, April 21, 2023

ಬಿಸಿಲಿನ ತಾಪ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ದೇಹವನ್ನು ತಣಿಸಲು ತಂಪು ಪಾನೀಯಗಳ ಮೊರೆ ಹೋಗುವುದು ಅವಶ್ಯವಾಗುತ್ತದೆ. ಬೇಸಿಗೆಯ ದಾಹಕ್ಕೂ, ಉತ್ತಮ ಜೀರ್ಣಕ್ರಿಯೆಗೂ ನೆರವಾಗುವ ಕೆಲವು ಪಾನೀಯಗಳು ಇಲ್ಲಿವೆ.

Summer drinks and health: ಜೀರ್ಣಕ್ರಿಯೆಯ ಸಮಸ್ಯೆಗೂ, ಬಿಸಿಲಿನ ದಾಹಕ್ಕೂ ಈ ಪಾನೀಯಗಳೇ ತಂಪು

Thursday, April 6, 2023

ನಿಂಬೆ ಹಣ್ಣನ್ನು ಹೋಳುಗಳಾಗಿ ಕತ್ತರಿಸಿ, ಅದರ ಒಳಗೆ ಕೆಲವು ಲವಂಗ ಸೇರಿಸಿ. ಲವಂಗದ ಮೇಲ್ಭಾಗ ಮಾತ್ರ ಕಾಣುವಂತೆ ಇರಿಸಬೇಕು. ಈಗ ಕೋಣೆಯ ಒಂದು ಮೂಲೆಯಲ್ಲಿ ನಿಂಬೆ ತುಂಡುಗಳನ್ನು ಇರಿಸಿ. ಇದರಿಂದ ಸೊಳ್ಳೆಗಳ ಕಾಟ ಸಾಕಷ್ಟು ಕಡಿಮೆಯಾಗಲಿದೆ. ಬೇಕಾದರೆ ಗಮನಿಸಿ ನೋಡಿ

Get Rid Of Mosquitos: ಅತಿಯಾದ ಸೊಳ್ಳೆ ಕಾಟವೇ? ʻಲಿಂಬೆʼ ಹಣ್ಣು ಅಂತ ಮೂಗು ಮುರಿಯಬೇಡಿ; ಅದು ಕೂಡಾ ಸೊಳ್ಳೆ ಓಡಿಸುವ ಕೆಲಸ ಮಾಡುತ್ತೆ ನೋಡಿ

Monday, March 20, 2023

ಇಷ್ಟ ಎಂದು ಪ್ರತಿದಿನ ಮಾವಿನ ಹಣ್ಣು ಅಥವಾ , ಮಾವಿನ ಹಣ್ಣಿನಿಂದ ತಯಾರಿಸಿದ ಪದಾರ್ಥಗಳನ್ನು ಹೆಚ್ಚು ಸೇವಿಸಿದರೆ ಮುಂದೆ ನೀವೇ ಕಷ್ಟಪಡಬೇಕಾಗುತ್ತದೆ.

ಬೇಸಿಗೆಯಲ್ಲಿ ಹೆಚ್ಚು ಮ್ಯಾಂಗೋಶೇಕ್ ಸೇವಿಸುತ್ತಿದ್ದೀರಾ...ಹಾಗಿದ್ರೆ ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ..!

Thursday, May 12, 2022

ಬೇಸಿಗೆಯು ತುಂಬಾ ಬಿಸಿಯಾಗಿರಬಹುದು. ಆದರೆ ಕೆಲ ಸಂದರ್ಭದಲ್ಲಿ ಬರುವ ಶೀತ ನಿಮ್ಮ ನೆಮ್ಮದಿಯನ್ನೇ ಹಾಳು ಮಾಡಿಬಿಡಬಹುದು. ಸ್ರವಿಸುವ ಮೂಗು, ನೋಯುತ್ತಿರುವ ಗಂಟಲು ಮತ್ತು ಹೊಟ್ಟೆಯ ಸಮಸ್ಯೆಗಳು ಬೇಸಿಗೆಯ ಶೀತದ ಲಕ್ಷಣಗಳಾಗಿರಬಹುದು. ಇದು ಸಾಮಾನ್ಯವಾಗಿ ಎಂಟರೊವೈರಸ್‌ಗಳಿಂದ ಉಂಟಾಗುತ್ತದೆ. ಬೇಸಿಗೆಯ ಶೀತದ ಉಪಶಮನಕ್ಕಾಗಿ ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಚೆಂಬೂರ್‌ನ ಕನ್ಸಲ್ಟಿಂಗ್ ಫಿಸಿಶಿಯನ್ ಡಾ.ವಿಕ್ರಾಂತ್ ಶಾ ಸೂಚಿಸಿದ ಕೆಲವು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.

ಮೂಗು ಮತ್ತು ನೋಯುತ್ತಿರುವ ಗಂಟಲಿನಿಂದ ಬೇಸತ್ತಿದ್ದೀರಾ? ಬೇಸಿಗೆಯ ಶೀತಕ್ಕೆ ಇಲ್ಲಿದೆ ಮನೆಮದ್ದು

Thursday, May 5, 2022