world-test-championship News, world-test-championship News in kannada, world-test-championship ಕನ್ನಡದಲ್ಲಿ ಸುದ್ದಿ, world-test-championship Kannada News – HT Kannada
ಕನ್ನಡ ಸುದ್ದಿ  /  ವಿಷಯ  /  world test championship

Latest world test championship Photos

ಈ ಸೋಲಿನೊಂದಿಗೆ ಭಾರತದ ಗೆಲುವಿನ ಶೇಕಡವಾರು 62.82ರಿಂದ 58.33ಕ್ಕೆ ಕುಸಿದಿದೆ. ಭಾರತ ಈವರೆಗೂ ಆಡಿರುವ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು, 1 ಡ್ರಾ ಸಾಧಿಸಿದ್ದು 98 ಅಂಕ ಗಳಿಸಿದೆ. ಸೋಲಿನ ಹೊರತಾಗಿಯೂ ಭಾರತಕ್ಕೆ ಡಬ್ಲ್ಯುಟಿಸಿ ಫೈನಲ್ ತಲುಪುವ ಸಾಧ್ಯತೆ ಇನ್ನೂ ಇದೆ. ಲೀಗ್ ಅಂಕಪಟ್ಟಿಯಲ್ಲಿ ಅಗ್ರ 2 ತಂಡಗಳು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಲಿವೆ.

WTC Points Table: ನ್ಯೂಜಿಲೆಂಡ್ ವಿರುದ್ಧ ಸೋತು ಆಸ್ಟ್ರೇಲಿಯಾಗೆ ಸಿಂಹಾಸನ ಬಿಟ್ಟುಕೊಟ್ಟು 2ನೇ ಸ್ಥಾನಕ್ಕೆ ಕುಸಿದ ಭಾರತ

Sunday, November 3, 2024

ಭಾರತ ತಂಡವು ನ್ಯೂಜಿಲೆಂಡ್ ಅನ್ನು ಸೋಲಿಸಿ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು 2-2 ರಿಂದ ಡ್ರಾ ಮಾಡಿಕೊಂಡರೂ ಫೈನಲ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆಸೀಸ್ ವಿರುದ್ಧ ಸರಣಿಯನ್ನು ಗೆಲ್ಲಲೇಬೇಕು. ಇಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ. ಪ್ರಸ್ತುತ ತವರಿನಲ್ಲಿ ನ್ಯೂಜಿಲೆಂಡ್​ ವಿರುದ್ದ ಸರಣಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

WTC Final Scenario: ಬಾಂಗ್ಲಾದೇಶ ಸೋಲಿಸಿ ಅಂಕಪಟ್ಟಿಯಲ್ಲಿ ಮೇಲೇರಿದ ದಕ್ಷಿಣ ಆಫ್ರಿಕಾ; ಇಂಡೋ-ಆಸೀಸ್​ಗೆ ಹೆಚ್ಚಿದ ಒತ್ತಡ

Thursday, October 31, 2024

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ 13 ಪಂದ್ಯಗಳಿಂದ 98 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ಆಡಿರುವ 13 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು, ನಾಲ್ಕರಲ್ಲಿ ಸೋಲು ಕಂಡಿದೆ, ಆದರೆ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ.

WTC Points Table: ನ್ಯೂಜಿಲೆಂಡ್ ವಿರುದ್ಧ ಸೋತರೂ ಭಾರತಕ್ಕೆ ಅಗ್ರಸ್ಥಾನ, ಆದರೆ ಫೈನಲ್ ಹಾದಿ ಮತ್ತಷ್ಟು ದುರ್ಗಮ

Saturday, October 26, 2024

WTC Points Table: ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​​​ ಪಾಯಿಂಟ್ಸ್ ಟೇಬಲ್​​ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ ತಂಡವು 3ನೇ ಆವೃತ್ತಿಯಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 2ರಲ್ಲಿ ಗೆದ್ದಿದ್ದು, ಆರರಲ್ಲಿ ಸೋತಿದೆ. 16 ಅಂಕ ಮತ್ತು 16.67ರಷ್ಟು ಶೇಕಡವಾರು ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದೆ.

WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲು, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ

Saturday, October 12, 2024

ಮೊಹಮ್ಮದ್ ರಿಜ್ವಾನ್: ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌, ಎರಡು ಡಬ್ಲ್ಯುಟಿಸಿ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಅವರು ಕೂಡ ಎಲ್ಲಾ ಪಂದ್ಯಗಳಲ್ಲಿ ಸೋತಿದ್ದಾರೆ.

ಟೆಸ್ಟ್ ಚಾಂಪಿಯನ್ ಇತಿಹಾಸದಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ನಾಯಕರಿವರು; ಒಬ್ಬ ಭಾರತೀಯ ಕೂಡಾ ಇದ್ದಾರೆ

Thursday, October 10, 2024

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ತಂಡಗಳ ಶ್ರೇಯಾಂಕವನ್ನು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಪ್ರತಿ ತಂಡಗಳು ಸಂಗ್ರಹಿಸಿದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಅಂಕಪಟ್ಟಿಯ ಅಗ್ರ ಎರಡು ಸ್ಥಾನಿಗಳು ಫೈನಲ್‌ಗೆ ಆಯ್ಕೆಯಾಗುತ್ತವೆ.

WTC Point Table: ಬಾಂಗ್ಲಾದೇಶ ಮಣಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮತ್ತಷ್ಟು ಹತ್ತಿರವಾದ ಭಾರತ; ಹೀಗಿದೆ ಅಂಕಪಟ್ಟಿ

Tuesday, October 1, 2024

ಸರಣಿಯ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಸೋಲಿಸಿದ್ದ ಶ್ರೀಲಂಕಾ‌, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಶ್ರೀಲಂಕಾ ಲೀಗ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಮತ್ತೊಂದೆಡೆ, ಶ್ರೀಲಂಕಾ ವಿರುದ್ಧ ವೈಟ್‌ವಾಶ್‌ ಆಗಿರುವ ಕಿವೀಸ್, ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಮತ್ತಷ್ಟು ಕುಸಿದಿದೆ.

WTC Standings: ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕುಸಿದ ಕಿವೀಸ್; ಲಂಕಾಗೆ ಬಡ್ತಿ, ಭಾರತದ ಸ್ಥಾನ ಅಬಾಧಿತ

Sunday, September 29, 2024

ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಂದು ಕೇವಲ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಒದ್ದೆ ಮೈದಾನದಿಂದಾಗಿ ಪಂದ್ಯದ ಆರಂಭ ವಿಳಂಬವಾಯಿತು. ಸರಣಿ ಸಮಬಲ ಸಾಧಿಸುವ ಗುರಿ ಹೊಂದಿರುವ ಬಾಂಗ್ಲಾದೇಶ, ಮೊದಲ ಇನಿಂಗ್ಸ್‌ನಲ್ಲಿ ಈವರೆಗೆ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಶನಿವಾರವಾರದ ದಿನದಾಟವೂ ರದ್ದಾದ ಕಾರಣ ಮೊತ್ತ ಇಷ್ಟರಲ್ಲೇ ನಿಂತಿದೆ.

WTC Point Table: ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ ರದ್ದಾದರೆ ಭಾರತದ ಡಬ್ಲ್ಯುಟಿಸಿ ಫೈನಲ್ ಅವಕಾಶ ಏನಾಗುತ್ತೆ?

Saturday, September 28, 2024

ಬೇರೆಯವರೊಂದಿಗೆ ಏನೇ ತಮಾಷೆ ಮಾಡಿದರೂ, ವಿರಾಟ್ ಮತ್ತು ಗಂಭೀರ್‌ ಯಾವುತ್ತೂ ಗಂಭೀರವಾಗಿ ಕಾಣುತ್ತಿದ್ದರು. ಆದರೆ, ಈ ಫೋಟೋ ನೋಡಿ. ಗಂಭೀರ್ ಈ ರೀತಿ ಗಹಗಹಿಸಿ ನಗುತ್ತಿದ್ದಾರೆ.

ಅಂದು ವೈರಿಗಳಂತಿದ್ದ ಈ ಇಬ್ಬರು ಇಂದು ಆತ್ಮೀಯರು; ವಿರಾಟ್ ಕೊಹ್ಲಿ ಹಾಸ್ಯಕ್ಕೆ ನಕ್ಕು ಸುಸ್ತಾದ ಗೌತಮ್ ಗಂಭೀರ್ -Photos

Wednesday, September 18, 2024

ಎಲ್ಲಾ ಪಂದ್ಯಗಳ ಕೊನೆಯಲ್ಲಿ, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಪಡೆದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ; ಭಾರತದ ಯಾವ ಸ್ಥಾನದಲ್ಲಿದೆ?

Tuesday, August 13, 2024

ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 241 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದೆ. ಇದೇ ವೇಳೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಸೋಲು ಕಂಡ ವೆಸ್ಟ್ ಇಂಡೀಸ್ ಆರನೇ ಸ್ಥಾನದಿಂದ ಕೊನೆಯ ಸ್ಥಾನಕ್ಕಿಳಿದಿದೆ.

ಡಬ್ಲ್ಯುಟಿಸಿ ಅಂಕಪಟ್ಟಿ: ವೆಸ್ಟ್ ಇಂಡೀಸ್‌ ವಿರುದ್ಧ ಗೆದ್ದು 6ನೇ ಸ್ಥಾನಕ್ಕೆ ಜಿಗಿದ ಇಂಗ್ಲೆಂಡ್; ಭಾರತ ಅಗ್ರಸ್ಥಾನದಲ್ಲೇ ಭದ್ರ

Monday, July 22, 2024

ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡಿದೆ, ಇದರೊಂದಿಗೆ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು, ಗೆಲುವು ದಾಖಲಿಸಿದೆ. ಅಲ್ಲದೆ, ಈ ಸರಣಿಗೂ ಮುನ್ನ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ ದ್ವೀಪರಾಷ್ಟ್ರ ಇದೀಗ ನಾಲ್ಕನೇ ಸ್ಥಾನಕ್ಕೇರಿದೆ. ಗೆಲುವಿನ ಶೇಕಡವಾರು 50ರಷ್ಟು ಹೊಂದಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​; ಗೆದ್ದ ಶ್ರೀಲಂಕಾ ಭಾರಿ ಏರಿಕೆ, ಸೋತ ಬಾಂಗ್ಲಾದೇಶ ಭಾರಿ ಕುಸಿತ, ಭಾರತ ಎಷ್ಟು ಸುರಕ್ಷಿತ?

Wednesday, April 3, 2024

ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನಲ್ಲಿ ಕಿವೀಸ್‌ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕಾಂಗರೂಗಳು, ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿದ 12 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 62.50 ಸರಾಸರಿಯಲ್ಲಿ 90 ಅಂಕಗಳನ್ನು ಗಳಿಸಿದೆ. ಅಂಕಗಳ ವಿಷಯದಲ್ಲಿ ಆಸೀಸ್ ಇತರ ಎಲ್ಲ ತಂಡಗಳಿಗಿಂತ ಮುಂದಿದೆ. ಆದರೆ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಮತ್ತು ಅಂತಿಮ ಎರಡು ತಂಡಗಳನ್ನು ಅಂಕಗಳ ಬದಲಾಗಿ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತ

Monday, March 11, 2024

ಐದನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. 4ನೇ ಟೆಸ್ಟ್​​ನಲ್ಲಿ ಜಯಿಸಿದ ನಂತರ ಡಬ್ಲ್ಯುಪಿಎಲ್​ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದಿತ್ತು.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಮ್ ಇಂಡಿಯಾ; ಹೀನಾಯ ಸೋಲುಂಡ ಇಂಗ್ಲೆಂಡ್​ಗೆ ಎಷ್ಟನೆ ಸ್ಥಾನ?

Saturday, March 9, 2024

ನ್ಯೂಜಿಲೆಂಡ್ ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ ಅಗ್ರಸ್ಥಾನಕ್ಕೇರಿದೆ. ಈವರೆಗೂ ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಮತ್ತು 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು 64.58 ಇದೆ.

ಗೆದ್ದಿದ್ದು ಆಸ್ಟ್ರೇಲಿಯಾ, ಸೋತಿದ್ದು ನ್ಯೂಜಿಲೆಂಡ್, ಅಗ್ರಸ್ಥಾನಕ್ಕೇರಿದ್ದು ಮಾತ್ರ ಭಾರತ; ಹೀಗಿದೆ ಡಬ್ಲ್ಯುಟಿಸಿ ಅಂಕಪಟ್ಟಿ

Sunday, March 3, 2024

ಡಬ್ಲ್ಯೂಟಿಸಿ ಅಂಕಪಟ್ಟಿಯ ಪ್ರಕಾರ, ತಂಡಗಳು ಪ್ರತಿ ಗೆಲುವಿಗೆ 12 ಅಂಕಗಳನ್ನು ಪಡೆಯುತ್ತವೆ. ಪಂದ್ಯ ಡ್ರಾ ಆದರೆ 4 ಅಂಕ ಮತ್ತು ಟೈ ಆದರೆ 6 ಅಂಕಗಳನ್ನು ಪಡೆಯುತ್ತವೆ. ಶೇಕಡಾವಾರು ಅಂಕಗಳ (PCT) ಆಧಾರದಲ್ಲಿ ತಂಡಕ್ಕೆ ಶ್ರೇಯಾಂಕ ನೀಡಲಾಗುತ್ತದೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಪ್ರವೇಶಿಸುತ್ತವೆ.

WTC: ಸ್ಥಾನ ಗಟ್ಟಿಗೊಳಿಸಿದ ಭಾರತ; ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯೂಟಿಸಿ ಅಂಕಪಟ್ಟಿ ಹೀಗಿದೆ

Monday, February 26, 2024

ಸ್ಟೀವ್​ ಸ್ಮಿತ್ ಅವರು ಭಾರತದ ವಿರುದ್ಧ 37 ಇನ್ನಿಂಗ್ಸ್‌ಗಳಲ್ಲಿ 9 ಶತಕ ಗಳಿಸಿದ್ದರು. ಗ್ಯಾರಿ ಸೋಬರ್ಸ್ ಭಾರತದ ವಿರುದ್ಧ 30 ಇನ್ನಿಂಗ್ಸ್‌ಗಳಲ್ಲಿ 8 ಶತಕ, ವಿವಿಯನ್ ರಿಚರ್ಡ್ಸ್ ಮತ್ತು ರಿಕಿ ಪಾಂಟಿಂಗ್ ಕ್ರಮವಾಗಿ 41 ಮತ್ತು 51 ಇನ್ನಿಂಗ್ಸ್‌ಗಳಲ್ಲಿ ತಲಾ 8 ಶತಕ ಗಳಿಸಿದ್ದಾರೆ.

ಆಕರ್ಷಕ ಸೆಂಚುರಿಯೊಂದಿಗೆ ರಿಕಿ ಪಾಂಟಿಂಗ್ ದಾಖಲೆ ಹಿಂದಿಕ್ಕಿದ ಜೋ ರೋಟ್; ವೇಗದ 19 ಸಾವಿರ ರನ್ ಸಿಡಿಸಿದ ಇಂಗ್ಲೆಂಡ್ ಆಟಗಾರ

Friday, February 23, 2024

ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 434 ರನ್​ಗಳಿಂದ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ.

WTC Points Table: ಆಸ್ಟ್ರೇಲಿಯಾ ಹಿಂದಿಕ್ಕಿ ಮೇಲೇರಿದ ಭಾರತ; ಫೈನಲ್ ರೇಸ್​ನಿಂದ ಇಂಗ್ಲೆಂಡ್ ಬಹುತೇಕ ಹೊರಕ್ಕೆ

Sunday, February 18, 2024

ರಾಜ್‌ಕೋಟ್ ಟೆಸ್ಟ್‌ನ ಭಾರತದ 2ನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ 72 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಆದರೆ ಸರ್ಫರಾಜ್ ಶತಕ ಸಿಡಿಸಿದ ಬಳಿಕ ಡಿಕ್ಲೇರ್ ಘೋಷಿಸಿ ಎಂದು ಅಭಿಮಾನಿಗಳು ರೋಹಿತ್​ಗೆ ಮನವಿ ಮಾಡಿದರು.

ಜೈಸ್ವಾಲ್ ದ್ವಿಶತಕದ ನಡುವೆ ಸದ್ಧಿಲ್ಲದೆ ದಾಖಲೆ ಬರೆದ ಸರ್ಫರಾಜ್ ಖಾನ್; ಗವಾಸ್ಕರ್, ಅಯ್ಯರ್ ಪಟ್ಟಿಗೆ ಸೇರಿದ ಮುಂಬೈಕರ್

Sunday, February 18, 2024

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕಿವೀಸ್‌ ಅಗ್ರಸ್ಥಾನಕ್ಕೆ ಏರಿದೆ. ಕಿವೀಸ್ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 24 ಅಂಕಗಳನ್ನು ಹೊಂದಿದೆ. 1 ಪಂದ್ಯದಲ್ಲಿ ಸೋತಿರುವ ತಂಡವು 66.66 ಪ್ರತಿಶತ ಅಂಕಗಳನ್ನು ಗಳಿಸಿ ಲೀಗ್ ಅಂಕಪಟ್ಟಿಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳನ್ನು, ಆಯಾ ತಂಡಗಳ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಕಿವೀಸ್; ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಕುಸಿದ ಭಾರತ

Wednesday, February 7, 2024