ಕಾಫಿ ತೋಟದ ಮಧ್ಯೆ ಇದ್ದ ಬೆಲೆ ಬಾಳುವ ಮರಗಳನ್ನು ಕಡಿದ ವ್ಯಕ್ತಿಗೆ ಹೈಕೋರ್ಟ್‌ ಜಡ್ಜ್‌ ತರಾಟೆಗೆ ತೆಗೆದುಕೊಂಡಿದ್ದು ಹೀಗೆ-crime news high court judge taught lesson about environment and coffee plants to accused rsm ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಫಿ ತೋಟದ ಮಧ್ಯೆ ಇದ್ದ ಬೆಲೆ ಬಾಳುವ ಮರಗಳನ್ನು ಕಡಿದ ವ್ಯಕ್ತಿಗೆ ಹೈಕೋರ್ಟ್‌ ಜಡ್ಜ್‌ ತರಾಟೆಗೆ ತೆಗೆದುಕೊಂಡಿದ್ದು ಹೀಗೆ

ಕಾಫಿ ತೋಟದ ಮಧ್ಯೆ ಇದ್ದ ಬೆಲೆ ಬಾಳುವ ಮರಗಳನ್ನು ಕಡಿದ ವ್ಯಕ್ತಿಗೆ ಹೈಕೋರ್ಟ್‌ ಜಡ್ಜ್‌ ತರಾಟೆಗೆ ತೆಗೆದುಕೊಂಡಿದ್ದು ಹೀಗೆ

Sep 19, 2024 01:18 PM IST Rakshitha Sowmya
twitter
Sep 19, 2024 01:18 PM IST

ಅಮೂಲ್ಯ ಮರಗಳ ರಕ್ಷಣೆಗೆ ನಾನಾ ಕಾನೂನುಗಳು ಬಂದಿವೆ. ಆದರೂ ಕೆಲವರು ಹಣಕ್ಕಾಗಿ ಆ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ. ಕಾಫಿ ತೋಟದಲ್ಲಿ ಬೆಲೆ ಬಾಳುವ ಮರಗಳನ್ನು ಕಡಿದ ವ್ಯಕ್ತಿಯನ್ನು ಹೈ ಕೋರ್ಟ್‌ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಫಿ ತೋಟದ ನಡುವೆ ಬೆಳೆದಿದ್ದ ಬೆಲೆ ಬಾಳುವ ಸುಮಾರು 90 ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ವ್ಯಕ್ತಿಯೊಬ್ಬರಿಗೆ 15 ನಿಮಿಷದಲ್ಲಿ 10 ಲಕ್ಷ ದಂಡ ಕಟ್ಟುವಂತೆ ತಾಕೀತು ಮಾಡಿದ್ದಾರೆ. ಒಂದು ವೇಲೆ ದಂಡ ಕಟ್ಟದಿದ್ದರೆ ಜೈಲು ಶಿಕ್ಷೆ ಅನುಭವಿಸಲು ಸಿದ್ಧವಾಗುವಂತೆ ಎಚ್ಚರಿಕೆ ನೀಡಿದ್ದಾರೆ. ವಿಚಾರಣೆ ವೇಳೆ ನ್ಯಾಯಾಧೀಶರು ಪರಿಸರ ಹಾಗೂ ಮರಗಳ ಬಗ್ಗೆ ತಿಳಿ ಹೇಳಿದ್ದಾರೆ.

More